ಶನಿವಾರ, ಆಗಸ್ಟ್ 7, 2010

ಶ್ರೀರಾಮುಲು ಪಾದಯಾತ್ರೆ ಅಂತ್ಯ

ಆಶ್ಚರ್ಯ ಪಡಬೇಡಿ. ಶ್ರೀರಾಮುಲು ಯಾವಾಗ ಪಾದಯಾತ್ರೆ ಆರಂಭಿಸಿದ್ದು? ಎಂದು ಪ್ರಶ್ನೆಯನ್ನೂ ಕೇಳಬೇಡಿ. ಇದೀಗ ಕರ್ನಾಟಕದಲ್ಲಿ ಯಾರ್ಯಾರು ಪಾದಯಾತ್ರೆ ಹೊಂಟವ್ರೆ ಅನ್ನೋದೇ ಒಂದು ಬಿಡಿಸಲಾಗದ ಒಗಟಾಗಿದೆ. ಆಡಳಿತ ಪಕ್ಷ ಹಾಗೂ ವಿರೋದ ಪಕ್ಷಗಳು ಶಕ್ತಿಪ್ರದರ್ಶನಕ್ಕೆ ನಿಂತುಬಿಟ್ಟಿವೆ.

ವಿರೋದಪಕ್ಷದವರು ಅಕ್ರಮ ಗಣಿಗಾರಿಕೆ ವಿರೋದಿಸಿ ಬೆಂಗಳೂರಿಂದ ಬಳ್ಳಾರಿಗೆ ಕಾಲ್ನಡಿಗೆ ಹೊಂಟವರೆ. ಹಗಲೆಲ್ಲಾ ಪಾದಯಾತ್ರೆ, ರಾತ್ರಿ ಹೊತ್ತು ಮಸಾಜ್. ಹೇಗೋ ಇನ್ನೆರಡು ದಿನದಲ್ಲಿ ಅವ್ರು ಬಳ್ಳಾರಿ ತಲುಪಲಿದ್ದಾರೆ.  ಆ ಮೂಲಕ ಪಾದಯಾತ್ರೆ ಇನ್ನೆರಡು ದಿನಗಳಲ್ಲಿ ಮುಗಿಯಬಹುದು.. ಆದರೆ ದಣಿದಿರೋ ಕೈಕಾಲ್‌ಗಳಿಗೆ ಮುಂದಿನ ಇನ್ನೂ ಒಂದು ತಿಂಗಳು ಮಸಾಜ್ ಮಾತ್ರ ಮುಂದುವರಿಯಬಹುದು.

ಇನ್ನೊಂದ್ಕಡೆ ಆಡಳಿತ ಪಕ್ಷದೋರು ಸಾರ್ವಜನಿಕ ಸಭೆ ಮಾಡ್ತಿದಾರೆ. ಅದನ್ನು ನೀವು ಜನಜಾಗೃತಿ ಸಮಾವೇಶ ಅಂತನಾರು ಕರೀರಿ ಅಥವಾ ಬಿಜೆಪಿ ಸಾಧನಾ ಸಮಾವೇಶ ಅಂತನಾದ್ರೂ ಕರೀರಿ. ಆದರೆ ಒಳಗೊಳಗೇ ಪರೋಕ್ಷವಾಗಿ ಇದೊಂದು ವಿರೋಧ ಪಕ್ಷದ ವಿರುದ್ದ ಶಕ್ತಿಪ್ರದರ್ಶನದ ಸಭೆ ಅಷ್ಟೇ.   

ವ್ಯಯಕ್ತಿಕವಾಗಿ ಆರೋಗ್ಯಸಚಿವರು ಕೇಷಮುಂಡನ ಮಾಡಿಸಿಕೊಂಡು, ಬಳ್ಳಾರಿ ತುಂಬಾ ಸ್ವಾಭಿಮಾನಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಆದರೆ ಅವರು ಎಲ್ಲೂ ಪಾದಯಾತ್ರೆ ಹೊರಟವರಂತೆ ಕಂಡುಬರಲಿಲ್ಲ. ಅವರೂ ಸಹ ತಾನು ಪಾದಯಾತ್ರೆ ಹೊರಟಿರುವುದಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ.
ಈ ನಡುವೆ ಗೋಹತ್ಯೆ ನಿಷೇದ ಕಾಯ್ದೆ ವಿರೋಧಿಸಿ ಮಾಜಿ ಪ್ರಧಾನಿಗಳಾದ ಜನತಾದಳ ಪಕ್ಷದ ಅದ್ಯಕ್ಷರು ದೆಲ್ಲಿಗಂಟ ಹೋಗಿ ರಾಷ್ಟ್ರಾದ್ಯಾಕ್ಷರನ್ನು ಬೇಟಿ ಮಾಡಿ ಹಿಂತಿರುಗಿದ್ದಾರೆ. ಇದಲ್ಲದೇ ಈ ಮಸೂದೆ ಜಾರಿಯಾಗಿದ್ದೇ ಆದರೆ, ಮುಖ್ಯಮಂತ್ರಿಗಳ ಮನೆ ಮುಂದೆ ಗೊಡ್ಡಸುಗಳನ್ನ ಲಾರಿಲಾರಿಗಟ್ಟಲೇ ತಂದು ನಿಲ್ಲಿಸುವುದಾಗಿ ಗುಡುಗಿದ್ದಾರೆ.

ಇರಲಿ ಒಟ್ಟಿನಲ್ಲಿ ಈ  ಬಳ್ಳಾರಿ ಚಲೋ, ಜಾಗೃತಿ ಸಮಾವೇಶ, ಸ್ವಾಭಿಮಾನಿ ಸಮಾವೇಶ, ದೆಲ್ಲಿ ಚಲೋ, .. ಇನ್ನೂ ಏನೇನೇನೋ ಕಾರ್ಯಕ್ರಮಗಳು ಈಗ ಭಾರೀ ಸುದ್ದಿಯಲ್ಲಿವೆ. ಈ ಎಲ್ಲಾ ರಾಜಕಾರಣಿಗಳು, ಜನಪ್ರತಿನಿದಿಗಳು ಜನಸಾಮಾನ್ಯರ ಮೇಲಿನ ನೈಜಕಾಳಜಿಯಿಂದ ಇಷ್ಟೆಲ್ಲಾ ಹೋರಾಟ ಪ್ರದರ್ಶಿಸಿದ್ದೇ ಆಗಿದ್ದರೆ, ನಮ್ಮ ರಾಜ್ಯದಲ್ಲಿ ಇವತ್ತಿಗೂ ಬಡತನರೇಖೆಗಿಂತ ಕೆಳಮಟ್ಟದಲ್ಲಿ ಜೀವನ ಸಾಗಿಸುತ್ತಿರುವವರು ಭೂತಗನ್ನಡಿ ಇಟ್ಟು ಹುಡುಕಿದರೂ ಸಿಗುತ್ತಿರಲಿಲ್ಲವೇನೋ.!!! ಆದರೆ ಈ ನಮ್ಮ ರಾಜಕಾರಣಿಗಳು ಸಧ್ಯಕ್ಕಂತೂ ಫುಲ್‌ಬ್ಯುಸಿ. ಜನರ ಕಷ್ಟಕೇಳುತ್ತಾರೋ ಇಲ್ಲವೋ ಅದನ್ನು ಮಹಾಜನಗಳೇ ಅರ್ಥಮಾಡಿಕೊಳ್ಳಬೇಕು.

ಈ ಮದ್ಯೆ ವಿರೋಧಪಕ್ಷದವರ ಯಾತ್ರೆಗೆ ದೊಂಬರಾಟ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ. ಈ ರಾಜಕಾರಣಿಗಳ ಯಾತ್ರೆ, ಸಮಾವೇಶ ಇತ್ಯಾದಿಗಳು ಜನರಲ್ಲಿ ಗೊಂದಲವನ್ನುಂಟು ಮಾಡಿರವುದೇನೋ ಸತ್ಯ. ಆದರೆ ವಿಪರ್ಯಾಸವೆಂದರೆ  ನಮ್ಮ ಸುವರ್ಣ ನ್ಯೂವ್ಸ್ 24x7 ಚಾನೆಲ್‌ನ ಪ್ರಸಾರಕರಿಗೂ ಒಂದು ಬಾರೀ ಗೊಂದಲಉಂಟಾದಂತಿದೆ. ಚಿತ್ರನೋಡಿ. "ಶ್ರೀರಾಮುಲು ಪಾದಯಾತ್ರೆ ಅಂತ್ಯ" ಅಂತ ಬರ್ದವ್ರೆ. ಈಗ ನೀವೇ ಹೇಳಿ ಶ್ರೀರಾಮುಲು ಪಾದಾಯಾತ್ರೆನ ಆರಂಭಿಸಿದ್ದಾದರೂ ಯಾವಾಗ? Suvrna News 24x7 ಇಂತಹ ಒಂದು 24x7 ಸುದ್ದಿಮಾದ್ಯಮಕ್ಕೇ ಈ ಪರಿಯ ಗೊಂದಲ, ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗಿರಬೇಡ?

7 ಕಾಮೆಂಟ್‌ಗಳು:

Ittigecement ಹೇಳಿದರು...

ಲೋದ್ಯಾಶಿಯವರೆ...

ಟೀವಿ..
ಪೇಪರ್ರು...
ಈ ರಾಜಕೀಯದವರ ದೊಂಬರಾಟ ನೋಡಿ..
ಬೇಸತ್ತ ನಾವು...
ಟಿವಿ ನೈನ್ ಹಾಕಿದಾಗ..
ನಮ್ಮ ಮನದಲ್ಲಿ ಮೂಡುವದು ಒಂದೇ ಪ್ರಶ್ನೆ... "ಹೀಗೂ... ಉಂಟೆ... ??"

Me, Myself & I ಹೇಳಿದರು...

ಅಲ್ವೇನ್ರೀ ಪ್ರಕಾಶಣ್ಣ,
ಯಾಕೋ ಮಂಗಳಪಾಂಡೆ ಜ್ಞಾಪಕ ಜಾಸ್ತಿ ಆಗ್ತಿದೆ. ಮತ್ತೊಮ್ಮೆ ಸ್ಟತಂತ್ರ ಸಂಗ್ರಾಮದ ಕಹಳೆ ಊದಬೇಕೇನೋ ಅನ್ನೋ ಭಾವನೆ ಬರ್ತಿದೆ. ಎಲ್ಲಾ ಪಕ್ಷದ ರಾಜಕಾರಣಿಗಳಿಂದ ನಮ್ಮ ಸಮಾಜವನ್ನು ಮುಕ್ತಿಗೊಳಿಸಿ ಎಂದು ಹೊಸದೊಂದು ಆಂದೋಲನ ಆರಂಭಿಸಬೇಕಿದೆ.

V.R.BHAT ಹೇಳಿದರು...

ಲೋದ್ಯಾಶಿಗಳೇ, ನಿಮ್ಮ ಅನಿಸಿಕೆ ನಮಗೂ ಇದೆ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬ ಸ್ಥಿತಿಯಲ್ಲಿ ನಾವೆಲ್ಲಾ ಹೀಗೇ ಇದ್ದುಬಿಡುತ್ತೇವೆ ಅಲ್ಲವೇ ?

Me, Myself & I ಹೇಳಿದರು...

ವಿ.ಆರ್‌.ಭಟ್‌ ರವರೇ, ಸ್ವಾಗತ, ಹೀಗೆಯೇ ಬರುತ್ತಿರಿ.

ಹೌದು. ಈ ನಮ್ಮ ಜನಪ್ರತಿನಿಧಿಗಳ ಅಧಿಕಾರದಾಹವನ್ನು ತಣಿಸಲು ಯಾರಿಂದಲೂ ಸಾದ್ಯವಿಲ್ಲ.

ಅನಾಮಧೇಯ ಹೇಳಿದರು...

ಶ್ರೀರಾಮು'loo' ಪಾದಯಾತ್ರೆ ಅಂತ್ಯ ನಾ? :P

ಸಾಗರದಾಚೆಯ ಇಂಚರ ಹೇಳಿದರು...

ಲೋದ್ಯಾಶಿಯವರೇ
ಅಧಿಕಾರ ಆಸೆ, ಹಣದ ದಾಹ ಇದು ರಾಜಕಾರಣಿಗಳಲ್ಲಿ ಇರೋತನಕ ಜನರ ಸುಧಾರಣೆ ಕನಸಿನ ಮಾತು

Me, Myself & I ಹೇಳಿದರು...

ಗುರುಮೂರ್ತಿಯವರೇ, ನಿಮ್ಮ ಮಾತಿನಲ್ಲಿ ಸಂಪೂರ್ಣ ಸತ್ಯವಿದೆ.

blogspot add widget