ಈ ನಡುವೆ ಕೆಳಗಿನ ಎರಡು ಬ್ಲಾಗ್ಗಳಲ್ಲಿ ಅಡ್ಡಾಡ್ತಿರ್ಬೇಕಾಂದ್ರೆ ,
"ನೀವು ನಕ್ಕರೆ ಹಾಲು ಸಕ್ಕರೆ"
"ಯಳವತ್ತಿ ಬ್ಲಾಗ್...".
ನಾನೂ ಯಾಕೆ ಒಂದೆರಡು ಹಾಸ್ಯ ಬರಹ ಬರಿ ಬಾರದು ಅಂತೇನೂ ಅನ್ನಿಸ್ಲಿಲ್ಲಾ...ಆದ್ರೆ ನನ್ನ ಅನುಭವಗಳೇ ಕೆಲವು ಭಾರಿ ಹಾಸ್ಯ ಹಾಗ್ಬಿಟ್ತಿವೆ. ಹಾಗಾಗಿ ನೆನಪಿಗೆ ಸಿಕ್ಕಂತಹ ಕೆಲವು ಘಟನೆಗಳನ್ನ ಬರೀತಿದ್ದೀನಿ. ಶೀರ್ಷಿಕೆ ಏನೂ ಅಂದ್ರೆ, "ಹಾಸ್ಯ ಸನ್ನಿವೇಶದ ಕೆಲವು ತುಂಡುಗಳು!"
ಆದ್ರೆ ಅದಕ್ಕಿಂತ ಮೊದಲೇ, ಇದನ್ನ ಓದಿ ಬಿಡಿ. ಈ ಕೆಳ ಕಂಡ ಬರಹ ಇಷ್ಟ ಹಾಗ್ದೆ ಇದ್ರೆ ಅದನ್ನೇ ದೊಡ್ದು ಮಾಡ್ಬೇಡ್ರಿ. ಪುನಃ ಬರ್ತಾ ಇರ್ರಿ.. ಹೊಸ ಪೋಸ್ಟ್ ಇರುತ್ವೆ.
--------------------------------------------------------------------------------
ಇಲ್ಲಿಂದಾ ಮುಂದುವರೆದಿದೆ...
ಭಾಷೆ ಕೇವಲ ಒಂದು ಸಂಪರ್ಕ ಸಾಧನ ಅಷ್ಟೇ. ಅದ್ರಿನ್ದಾನೇ ಎಲ್ಲಾ ಅನ್ನೋದು ಎಷ್ಟು ಸರಿ? ವಿಷಯ ಜ್ಞಾನ ಬೆಳಸಿ ಕೊಳ್ಳೋಕ್ಕೆ ಪ್ರತಿಯೊಬ್ರಿಗೂ ಅವಕಾಶ ಇರ್ಬೇಕು, ಅದು ಯಾವ ಮಾದ್ಯಮದಲ್ಲಿ ಅನ್ನೋದು ತುಂಬಾ ಸಾಧಾರಣ ಪ್ರಶ್ನೆ ಆಗ್ಬಿಡುತ್ತೆ. ನನಗೆ ಕನ್ನಡ ಚೆನ್ನಾಗಿ ಗೊತ್ತು. ಯಾಕಂದ್ರೆ ನಾನು ಶಾಲೆಯಲ್ಲಿ ಮೇಷ್ಟ್ರು ಹೇಳ್ಕೋಡೋಕ್ಕೇ ಮೊದ್ಲೇ ನಮ್ಮ ಮನೇಲೆ ಮಾತಾಡೋದು ಕಲ್ತಿದ್ದೆ.
ನಮಿಗೆ ಮೊದ್ಲು ಮೊದ್ಲು ಇಂಗ್ಲೀಶ್ ಹೇಳ್ಕೋಟ್ಟಾಗ ನಾವು ಹೇಗೆ ಕಲೀತಿದ್ವಿ? ಅದನ್ನ ಕನ್ನಡಕ್ಕೆ ಅನುವಾದ ಮಾಡ್ಕಂಡು ಅಭ್ಯಾಸ ಮಾಡ್ತಿದ್ವಿ. ಆಮೇಲೆ ನಿಧಾನಕ್ಕೆ ವಾಕ್ಯ ಮಾಡೋದು ಕಲ್ತ್ವಿ. ಆಮೇಲೆ ಪುಸ್ತಕ ಓದೋದು ಕಲ್ತಿವಿ. ಈಗ ಇಂಗ್ಲಿಷ್ನಲ್ಲೇ ಮಾತೂ ಆಡ್ತೀವಿ.
ನಮಗೆ ಸ್ಕೂಲ್ನಲ್ಲಿ ಇಂಗ್ಲಿಷ್ನ ಮೊದ್ಲು ಮೊದ್ಲು ಹೇಳ್ಕೋಟ್ಟಾಗ ನಾನು ಹೇಗೆ ಯೋಚಿಸ್ತಿದ್ದೆ ಅಂತ ಗೊತ್ತೇ? ಇಂಗ್ಲೀಷ್ನ ಮೊದ್ಲು ಮೊದ್ಲು ಕಲಿ ಬೇಕಾದರೆ, ಜಗತ್ತಲ್ಲಿ ಎಲ್ಲರೂ ಸಹ, ಇಂಗ್ಲೀಶ್ ವಾಕ್ಯಗಳ ಅರ್ಥವನ್ನ ಮೊದಲು ಕನ್ನಡಕ್ಕೇ ಅನುವಾದ ಮಾಡ್ಕಂಡು ಕಲಿತಾರೆ. ಆಮೇಲೆ ನಿಧಾನಕ್ಕೆ ಇಂಗ್ಲಿಷ್ನಲ್ಲೇ ಮಾತಾಡೋದು ಕಲಿತಾರೆ. ಮಾತಾಡೋದು ಕಲಿತಮೇಲೆ ಇಂಗ್ಲಿಷ್ ಪುಸ್ತಕ ಅರಾಮಾಗಿ ಓದ್ಬೋಹುದು ಅಂತ.
ಆಗಂತ ಭಾಷೆಗೆ ಮಹತ್ವವೇ ಇಲ್ಲ ಅನ್ನೋದು ಎಷ್ಟು ಸರಿ? ಪ್ರತಿ ಭಾಷೆಗೂ ಅದರದೇ ಆದ ಮಹತ್ವವಿರುತ್ತೆ. ಅದರ ಅಸ್ತಿತ್ವ ಅದಕ್ಕೆ ಅಷ್ಟು ಸುಲಭವಾಗಿ ದಕ್ಕಿದುದಾಗಿರುವುದಿಲ್ಲ. ಉದಾಹರಣೆಗೆ ಸಂಸ್ಕೃತ ಅನ್ನೋದು ಒಂದು ಸತ್ತ, ಮೃತ ಭಾಷೆ ಅಂತೆಲ್ಲಾ ಜನ ಹೇಳೋದು, ಬರಿಯೋದು ಕೇಳಿದ್ದೇನೆ, ನೋಡಿದ್ದೇನೆ. ನಾನೊಬ್ಬ ಭಾಷಾ ತಜ್ಞನಲ್ಲ, ಆಗಂತ ಇಂತ ಚಾಣಾಕ್ಷ್ಯ ತೀರ್ಮಾನಗಳನ್ನ ಕಂಡಾಗ ಮನಸ್ಸು ತೀರಾ ಕುಪಿತಗೊಳ್ಳುತ್ತೆ. ನಾನು ಸಂಸ್ಕೃತ ಶಿಕ್ಷಕನೂ ಅಲ್ಲ, ಸಂಸ್ಕೃತ ವಿದ್ಯಾರ್ಥಿಯೂ ಅಲ್ಲ. ಆದ್ರೆ ಇಂತಹ ಅತಿರೇಕಿಗಳನ್ನ ಗಮನಿಸಿ ಈಗೀಗ ಸ್ವಲ್ಪ ಸಂಸ್ಕೃತದ ಬಗ್ಗೆ ಓದಿ ತಿಳೀತ ಇದ್ದೇನೆ ಅಷ್ಟೇ. 2006 ರ ಸಾಲಿನ " ಜ್ಞಾನಪೀಠ" ಪ್ರಶಸ್ತಿ ಲಭಿಸಿರೋದು ಸಂಸ್ಕೃತಕ್ಕೆ. ಸಂಸ್ಕೃತದಲ್ಲಿಯೂ ಬೆಳವಣಿಗೆಗಳು ಆಗ್ತಿರೋದಕ್ಕೆ ಇದಕ್ಕಿನ್ನ ಸಾಕ್ಷಿ ಬೇಕೇ?
ನನ್ನ ಪ್ರಕಾರ, ಒಬ್ಬ ವ್ಯಕ್ತಿಯ ಜ್ಞಾನದ ವಿಶಾಲತೆಯನ್ನ ಅಳಿಯಲಿಕ್ಕೆ ಇರೋ ಒಂದು ಸುಲಭ ಸಾಧನ ಅಂದ್ರೆ ಏನು ಗೊತ್ತೇ? ಅದು ವ್ಯಕ್ತಿಯ ಪದಕೋಶದ ವಿಶಾಲತೆಯನ್ನ ತಿಳಿಯೋದು. ಪದಕೋಶದ ವಿಶಾಲತೆಗೆ ಸಮಾನ ಅನುಪಾತದಲ್ಲಿ ಇರುತ್ತೆ ವಿಷಯ ಜ್ಞಾನ. ಹೆಚ್ಚು ಹೆಚ್ಚು ಅರ್ಥ ಗರ್ಭಿತ ಪದಗಳನ್ನ, ಪದ ಗುಚ್ಚದಳನ್ನ, ನುಡಿಗಳನ್ನ ಸಂಧರ್ಬಕ್ಕೆ ಅನುಗುಣವಾಗಿ ಯಾರು ಸರಾಗವಾಗಿ ಬಳಸ್ತಾನೋ ಅವ್ನಿಗೆ ವಿಷಯ ಜ್ಞಾನ ಸಾಕಷ್ಟು ಇರುತ್ತೆ.
ನಮ್ಮ ಕನ್ನದಲ್ಲಿರೋ ಪ್ರತಿಶತ 50 ಪದಗಳು ಸಂಸ್ಕೃತದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಂದಿವೆ. ಇಂತಹ ಪದಗಳ ಬಳಕೆಯಿಂದ ನಮ್ಮ ಪದಕೊಶವನ್ನೂ ನಾವು ವಿಸ್ತರಿಸಿ ಕೊಂಡಿದ್ದೇವೆ. ಇಂಗ್ಲೀಷ ನಲ್ಲಿ ಅನೇಕ ಪದಗಳಿಗೆ ಮೂಲ ಸಂಸ್ಕೃತದಲ್ಲಿದೆ.
ಉದಾಹರಣೆಗೆ
ಮಾತೃ = ಮದರ್ (father)
ಪಿತೃ = ಫಾದರ್ (mother)
ದ್ವಾರ = ಡೋರ್ (door)
ನಾಮಃ = ನೇಮ್ (name)
ಸ್ಮಿತ್ = ಸ್ಮೈಲ್ (smile)
ಏಕ = ಈಕ್ವಲ್ (equal)
ದಂತ್ = ಡೆಂಟಲ್ (dental)
ಪಥ್ = ಪಾಥ್ (path)
ಇಲ್ಲಿ ಕ್ಲಿಕ್ಕಿಸಿ
ಒಂದು ಭಾಷೆ ಒಂದ್ಸಾರಿ ಅಸ್ತಿತ್ವಕ್ಕೆ ಬಂದ ನಂತರ, ಅದರಿಂದ ಹೆಚ್ಚಿನ ಅನುಕೂಲಗಳೂ ಸಾದ್ಯ. ಉದಾಹರಣೆಗೆ ಒಂದು ಪೀಳಿಗೆ ಇಂದ ಮುಂದಿನ ಹಲವಾರು ಪೀಳಿಗೆಗಳಿಗೆ ಜೀವನದ ಕಲೆಯನ್ನ ತಿಳಿಸಿ ಕೊಟ್ಟಂತಹ "ಭಗವದ್ಗೀತೆ" ಆಗಿರ್ಬೌದು ಅಥವ ಡಿ, ವಿ, ಜಿ, ಯವರ "ಮಂಕುತಿಮ್ಮನ ಕಗ್ಗ" ಆಗಿರ್ಬೌದು. ಒಂದು ಸಂಸ್ಕೃತ ದಲ್ಲಿದ್ರೆ, ಇನ್ನೊಂದು ಕನ್ನಡದಲ್ಲಿದೆ. ಮತ್ತೆ ಬಸವಣ್ಣನವರು ಮುಂತಾದವರ ವಚನಗಳಿರ ಬಹುದು. ಇಂತಹ ಗ್ರಂಥಗಳಿಂದ, ಸಾಹಿತ್ಯಗಳಿಂದ ಆಯಾ ಭಾಷೆಗಳ ಮಹತ್ವವೂ ಹೆಚ್ಚುತ್ತಾ ಹೋಗುತ್ತೆ.

ನಾವು ನಮ್ಮ ಭಾಷೆಗೆ ನೀಡ ಬಹುದಾದ ಒಂದು ಅಲ್ಪ ಕೊಡುಗೆ ಅಂದ್ರೆ, ನಮ್ಮ ತಿಳಿವಳಿಕೆಯನ್ನ, ಅರಿವನ್ನ, ಜ್ಞಾನವನ್ನ ಬರವಣಿಗೆ ರೂಪದಲ್ಲಿ ಹಂಚಿಕೊಳ್ಳೋದು. ಈ ರೀತಿಯಾಗಿ ಅಪಾರ ಜ್ಞಾನವನ್ನ ಪೀಳಿಗೆ ಇಂದ ಪೀಳಿಗೆಗೆ ವರ್ಗಾಯಿಸಬಹುದು. ಹಾಗಾಗಿಯೇ ಭಾಷೆಯ ಪೋಷಣೆ ನಮ್ಮಗಳ ಅಲಿಖಿತ ಕರ್ತವ್ಯ ಆಗ್ಬಿಡುತ್ತೆ. ಭಾಷಾ ಪ್ರೇಮ ತಪ್ಪಲ್ಲ. ಆದ್ರೆ ಅದು ಅತಿರೇಕಕ್ಕೆ ಹೋಗಿ, ಇನ್ನೊಂದು ಭಾಷೆನ ತುಳಿಯೋ ಮಟ್ಟಕ್ಕೆ ಹೋಗೋದು ಒಂದು ಆರೋಗ್ಯಕಾರಿ ಬೆಳವಣಿಗೆ ಅಲ್ಲವೇ ಅಲ್ಲ.
ಈಗಿನ ಸದ್ಯ ಪ್ರಪಂಚದಲ್ಲಿ ಹೆಚ್ಚು ಕಮ್ಮಿ 6000 ವಿವಿದ ಭಾಷೆಗಳು ಇವೆಯಂತೆ. ನಮ್ಮ ಕನ್ನಡನೂ ಇದ್ರಲ್ಲಿ ಒಂದು. ನಾವು ಕರ್ನಾಟಕದಲ್ಲಿ ಕನ್ನಡ ಹೊರತಾಗಿ, ಹಿಂದಿ, ಇಂಗ್ಲೀಶ್, ಕೊಂಕಣಿ. ತುಳು ಇನ್ನೂ ಅನೇಕ ಭಾಷೆಗಳನ್ನ ಮಾತಾಡ್ತೀವಿ/ಮಾತಾಡ್ತಾರೆ. ಇನ್ನ ಬಾರ್ಡರ್ ಅತ್ರ ಇರೋ ಊರ್ಗಳಿಗೆ ಹೋದ್ರೆ ಅಲ್ಲಿ ತೆಲುಗು, ತಮಿಳು, ಮರಾಠಿ, ಮಲಯಾಳಂ ಭಾಷೆ ಮಾತಾಡೋರೂ ಸಿಗ್ತಾರೆ.
ಕನ್ನಡ ಭಾಷೇನೆ ನಾಲ್ಕಾರು ವಿವಿದ ಶೈಲಿಯಲ್ಲಿ ಮಾತಡೋದು ನಮಗೆಲ್ಲ ಗೊತ್ತಿರೋದೆ.
ಕನ್ನಡ ಭಾಷೇನೆ ನಾಲ್ಕಾರು ವಿವಿದ ಶೈಲಿಯಲ್ಲಿ ಮಾತಡೋದು ನಮಗೆಲ್ಲ ಗೊತ್ತಿರೋದೆ.
- ಕುಂದಾಪುರ ಕನ್ನಡ.
- ಶಿರಸಿ ಕನ್ನಡ.
- ಹುಬ್ಬಳ್ಳಿ-ಧಾರವಾಡ ಕನ್ನಡ.
- ಬೆಂಗಳೂರು ಕನ್ನಡ.
- ಚಿತ್ರದುರ್ಗ ಕನ್ನಡ
- ಗುಲ್ಬರ್ಗ ಕನ್ನಡ
ಒಂದು ಅಂದಾಜಿನ ಪ್ರಕಾರ, ಕನ್ನಡ ಭಾಷೇನೆ, ಹೆಚ್ಚು ಕಮ್ಮಿ 20 ವಿವಿದ ರೀತಿಗಳಲ್ಲಿ ಮಾತಾಡ್ತಾರೆ. ಮಾತಾಡೋ ಶೈಲಿ ಬೇರೆ ಬೇರೆ ಇದ್ರೂ ಬರಿಯೋಕಂತ ಇರೋದು ಒಂದೇ ಒಂದು ಅದೇ ಕನ್ನಡ ಲಿಪಿ. ಅ, ಆ, ಇ, ಈ...ಕಾಗುಣಿತ
ಕನ್ನಡಕ್ಕೆ ಮೂಲ/ಮಾತೃ ಭಾಷೆ ಸಂಸ್ಕೃತ. ಇದು ಕನ್ನಡಕ್ಕಷ್ಟೇ ಅಲ್ಲ, ಭಾರತದ ಸರಾಸರಿ ಎಲ್ಲಾ ಭಾಷೆಗಳಿಗೂ ಮಾತೃ ಭಾಷೆ ಅಂತ ನಾವೆಲ್ಲಾ ಒಪ್ಕೋಳ್ಳಲೇ ಬೇಕು. ಕನ್ನಡ ಮಾತಾಡೋರು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲದೆಯೇ, ಪ್ರಪಂಚದ ಇನ್ನೂ ಅನೇಕ ರಾಷ್ಟ್ರಗಳಲ್ಲಿಯೂ ಇದ್ದಾರೆ. ಅಮೇರಿಕ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಯುರೋಪ್ ಹೀಗೆ ಎಲ್ಲಾ ಭಾಗದಲ್ಲಿಯೂ ಇದ್ದಾರೆ. ಅಷ್ಟೇ ಏಕೆ, ಭಾರತದ ಇತರೆ ರಾಜ್ಯಗಳಲ್ಲಿಯೂ ಇದ್ದಾರೆ.
ಇಡೀ ಭೂಮಿಗೆ ಹೋಲಿಸಿದರೆ, ಬೌಗೋಳಿಕವಾಗಿ ಕರ್ನಾಟಕ ಎಷ್ಟು ದೊಡ್ಡ ಪ್ರದೇಶ? ಈ ಪ್ರಪಂಚದಲ್ಲಿ ಕನ್ನಡ ಮಾತಾಡೋವ್ರು ಎಷ್ಟು ಜನ?
ಇಷ್ಟರಲ್ಲಿಯೇ ಎಷ್ಟೊಂದು ವೈವಿದ್ಯತೆ. ಅಲ್ವ? ಇದಕ್ಕೆ ಹೋಲಿಸಿದರೆ ಪ್ರಪಂಚದ 6000 ಭಾಷೆಗಳಲ್ಲಿ ಇನ್ನೂ ಅದೆಷ್ಟು ವೈವಿದ್ಯತೆ ಇರಬೇಡ? ಇಷ್ಟೆಲ್ಲಾ ಭಾಷೆಗಳಲ್ಲಿ ಒಟ್ಟು ಅದೆಷ್ಟು ಜ್ಞಾನ ಇರಬೇಡ? ಸರಾಸರಿಯಾಗಿ ಪ್ರತಿ ಒಬ್ಬ ಮನುಷ್ಯ ಮೂರ್ನಾಲ್ಕು ಭಾಷೆ ಕಲಿತರೆ ಹೆಚ್ಚು. ಸಂಸ್ಕೃತ ಕಲೀರಿ, ಇಂಗ್ಲೀಶ್ ಕಲೀರಿ, ಹಿಂದಿ ಕಲೀರಿ, ಫ್ರೆಂಚ್ ಕಲೀರಿ, ಜರ್ಮನ್ ಕಲೀರಿ ಆದ್ರೆ ಕನ್ನಡ ಗೋತ್ತಿರೋ ವ್ಯಕ್ತಿ ಹತ್ರನಾದ್ರೂ ಕನ್ನಡದಲ್ಲೇ ಮಾತಾಡಿ. ಸಾಧ್ಯವಾದ ಕಡೆಗಳಲ್ಲೆಲ್ಲ ಕನ್ನಡ ಬಳಸಿ. ನಾವು ಬೇರೆ ಬೇರೆ ಭಾಷೆನ ಉಳಿಸಿ, ಬೆಳೆಸೋ ಪ್ರಯತ್ನ ಮಾಡ್ದೆ ಇದ್ರೂ ಪರ್ವಾಗಿಲ್ಲಾ, ಆದ್ರೆ ನಮ್ಮ ನಮ್ಮ ಮಾತೃ ಭಾಷೆನ ಉಳಿಸಲೇ ಬೇಕು, ಬೆಳಸಲೇ ಬೇಕು.
ಉಳಿದ ಭಾಷೆಗಳಲ್ಲಿ ಅದಿಲ್ಲಾ, ಇದಿಲ್ಲಾ, ಅದು ಸತ್ತ ಭಾಷೆ, ಇದು ಸುಟ್ಟ ಭಾಷೆ ಅಂತ ಕೀಳಾಗಿ ಯಾವ ಭಾಷೇನೂ ನೋಡೋ ಅಗತ್ಯ ಇಲ್ಲಾ. ಅಂತಹ ಸಂಧರ್ಬ ಸೃಷ್ಟಿ ಆಗೋದೂ ಬೇಡ.

6 ಕಾಮೆಂಟ್‌ಗಳು:
ಇತ್ತೀಚೆಗೆ ಕನ್ನಡದ ಬಗ್ಗೆ ಯೋಚಿಸುವುದು ಬಿಟ್ಟು ಸಂಸ್ಕೃತದ ಬಗ್ಗೆ ದೂಷಿಣೆ ಮಾಡುತ್ತಾ ಕುಳಿತಿರುವ ಎಲ್ಲರಿಗೂ ಈ ಲೇಖನವನ್ನು ತೋರಿಸಬೇಕು. ಚೆನ್ನಾಗಿ ಬರೆದಿದ್ದೀರಿ.
ಹರೀಶರೇ ,
ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ನಮಗೆ ಭಾಷೆ ಮುಖ್ಯಾನೋ, ವಿಷಯ ಜ್ಞಾನ ಮುಖ್ಯಾನೋ ಅಂತ ನೋಡೋಕ್ಕೆ ಹೋದ್ರೆ, ಅದು ಮತ್ತೊಂದು, "ಬೀಜ ಮೊದಲಾ? ಮರ ಮೊದಲಾ?" ಅನ್ನಂಗಾಗಿ ಬಿಡುತ್ತೆ.
ತುಂಬಾ ಒಳ್ಳೆಯ ಬರಹ,
ಓದಿ ಖುಷಿಯಾಯಿತು
ಗುರುಮುರ್ತಿಗಳೇ,
ನಿಮ್ಮ ಮೆಚ್ಚುಗೆಗೆ ನನಗೂ ಖುಷಿ ಆಯ್ತು.
ಇದಕ್ಕಿಂತ ತುಂಬಾ ಬರೆದಿದ್ದೆ, ಅದ್ರಲ್ಲಿ ಘಟ್ಟಿ ಅಂತ ಸಿಕ್ಕಿದ್ದು ಇಷ್ಟು, ಉಳಿದದ್ದು ಕೈ ಬಿಟ್ಟೆ.
ಆದರೂ ಭಾಗ - ೩, ಬರೆಯಲಿಕ್ಕೆ ಶುರು ಮಾಡಿದ್ದೀನಿ.
ಆದ್ರೆ, ಅದ್ರಲ್ಲಿನ್ನು ಜೊಳ್ಳು ತೆಗೆದು, ಘಟ್ಟಿ ಹುಡ್ಕ್ತಾ ಇದ್ದೀನಿ..
ಆದ್ರೆ, ಅಷ್ಟರಲ್ಲಿ, ಇನ್ನೊಂದಿಷ್ಟು ಶ್ವಾನರ ಮಿತ್ರರನ್ನ ತರ್ತಿದ್ದೀನಿ,
ಜೊತೆಗೆ ಕೆಲವು ಹಾಸ್ಯ ಸನ್ನಿವೇಶಗಳ ಬಗ್ಗೆನಿ ಬರೀತಿದ್ದೀನಿ.
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.
ಆತ್ಮೀಯ ಲೋದ್ಯಾಶಿಯವರೇ ...
ತುಂಬಾ ಚೆನ್ನಾಗಿ ಬರೆದಿದ್ದೀರ. ನನ್ನ ಅನಿಸಿಕೆ ಕೂಡ ಇದೆ ಆಗಿದೆ. ಹಾಸ್ಯ ಲೇಖನಕ್ಕೆ ಕಾಯುತ್ತಿರುವೆ .....ಶುಭಾಶಯಗಳು ನಿಮ್ಮ ಹೊಸ ಪ್ರಯೋಗ ಚೆನ್ನಾಗಿ ಮೂಡಿ ಬರಲಿ ಎಂದು ಆಶಿಸುತ್ತೇನೆ. ಹಾಸ್ಯ ಬಳಗಕ್ಕೆ ಆದರದ ಸ್ವಾಗತ ....
ಆತ್ಮೀಯ ಗೋಪಾಲರೆ,
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು.
ಹಾಸ್ಯ ಬರಹ ಹಾಕ್ತಾ ಇದ್ದೀನಿ. ಈ ನಾಳೆ ಅಥವ ನಾಡಿದ್ದು ಬರುತ್ತೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ಕಾಮೆಂಟ್ ಪೋಸ್ಟ್ ಮಾಡಿ