ಗುರುವಾರ, ಡಿಸೆಂಬರ್ 16, 2010

ಮಂಜುಗಡ್ಡೆಯಲ್ಲಿ ಅರಳಿದ ಕಲೆ


ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತಷ್ಟು ಇಂತದೇ ಚಿತ್ರಗಳನ್ನು ವೀಕ್ಷಿಸಬಹುದು

ಶುಕ್ರವಾರ, ಡಿಸೆಂಬರ್ 3, 2010

ಪದ ಆವೃತ್ತಿ 2.5 ಹಾಗೂ ಕನ್ನಡ ವಿಕ್ಷನರಿ

ಪದ ಆವೃತ್ತಿ 2.5 ಈಗ ಹೊರಬಂದಿದೆ.

ಈ ಆವೃತ್ತಿಯ ಬಹು ಮುಖ್ಯ ಬೆಳವಣಿಗಳೆಂದರೆ

* ನೀವು ಬಯಸಿದ ಪದಗಳ ಅರ್ಥವನ್ನು ನೇರವಾಗಿ ಕನ್ನಡ ವಿಕ್ಷನರಿಯಿಂದ ತಿಳಿದುಕೊಳ್ಳಬಹುದಾಗಿರುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದಿಷ್ಟೇ, ನೀವು ಅರ್ಥ ತಿಳಿದುಕೊಳ್ಳಬೇಕೆಂದಿರುವ ಪದವನ್ನು ಟೈಪಿಸಿ ಅದರ ಮೇಲೆ ರೈಟ್ ಕ್ಲಿಕ್ ಮಾಡಿ* "Search In Wiktionary" ಎಂದು ಮೂಡುವ ಮೆನುವನ್ನು ಆಯ್ಕೆಮಾಡಿಕೊಳ್ಳಿ. ಅಷ್ಟೇ.
ಸೂಚನೆ : ಈ ಸೌಕರ್ಯಕ್ಕೆ ನೀವು ನಿಮ್ಮ ಗಣಕವನ್ನು ಇಂಟರ್ನೆಟ್ಗೆ ಕನೆಕ್ಟ್ ಮಾಡಿರಬೇಕಾಗಿರುತ್ತದೆ.

* ಅಕ್ಷರಗಳನ್ನು ಅವುಗಳ ಗಾತ್ರವನ್ನು ತಗ್ಗಿಸದೇಯೇ ಅಥವಾ ಹಿಗ್ಗಿಸದೇಯೇ ಜೂಮ್ ಮಾಡಿ ನೋಡಬಹುದಾಗಿದೆ.

ಈ ವಿವರಣೆಗಳನ್ನು ಕೆಳಗಿನ ಚಿತ್ರಗಳು ಮತ್ತಷ್ಟು ಸ್ಪಷ್ಟವಾಗಿ ತಿಳಿಸುತ್ತವೆ.





ಅನಾನುಕೂಲಗಳು ಅಥವಾ ಅನುಮಾನಗಳು ಎದುರಾದರೆ ದಯವಿಟ್ಟು ತಿಳಿಸಿ.ಅಥವಾ ಏನೇ ಪ್ರತಿಕ್ರಿಯೆ ಹಾಗೂ ಅನಿಸಿಕೆಗಳನ್ನು ತಿಳಿಸಬೇಕೆಂದಿದ್ದರೂ ದಾರಾಳವಾಗಿ ತಿಳಿಸಬಹುದು.

ಇಲ್ಲಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
http://lodyaashi.com

ಧನ್ಯವಾದಗಳೊಂದಿಗೆ

ಶನಿವಾರ, ಅಕ್ಟೋಬರ್ 16, 2010

ವಿಜಯದಶಮಿಯ ಹಾರ್ದಿಕ ಶುಭಾಶಯಗಳು


ಶ್ರೀಕೃಷ್ಣನಿಗೆ ಚಕ್ರವಿದ್ದಂತೆ,
ಅರ್ಜುನನಿಗೆ ಗಾಂಢೀವವಿದ್ದಂತೆ
ಕರ್ಣನಿಗೆ ವಿಜಯ ಧನಸ್ಸಿದ್ದಂತೆ

ಶರವೇಗದಲ್ಲಿ ಮುನ್ನುಗ್ಗುತ್ತಿರುವ ಐಟಿಲೋಕದಲ್ಲಿ
ಸಾಫ್ಟೇರ್‌ಎಂಬ ಈ ಕುರುಕ್ಷೇತ್ರ ಯುದ್ದದಲ್ಲಿ,
ನನಗೆ ಆಯುಧವಾಗಿರುವ
ಹೆಮ್ಮೆಯ ಓ ನನ್ನ ಲ್ಯಾಫ್‌ಟಾಪೇ,

ಅರ್ಜುನನ ಅಕ್ಷಯತೂಣಿರದಂತೆ,
ನಿನ್ನ ಬ್ಯಾಟರೀ ಸದಾ ಭರ್ತಿಯಾಗಿರಲಿ,
ಶ್ರೀಕೃಷ್ಣನ ಸಾರಥ್ಯವಿದ್ದಂತೆ,
ಇಂಟರ್ನೆಟ್ ಸದಾ ಜೊತೆಯಿರಲಿ.

ಕರ್ಣನಿಗೆ ಕವಚಕುಂಡಲಗಳ ರಕ್ಷಣೆ ಇದ್ದಂತೆ
ವೈರಸ್, ಮಾಲ್‌ವೇರ್, ಸ್ಪೈವೇರ್ಗಳಿಂದ
ನಿನಗೆ ೨೪/೭ ರಕ್ಷಣೆ ಇರಲಿ
.
ಅಶ್ವತ್ತಾಮನ ಹಣೆಯ ಮಣಿಯಂತೆ
ಅತ್ಯಾಧುನಿಕ ಸಾಫ್ಟೇರ್‌ಗಳು ಹಾಗೂ ಅವುಗಳ ಲೈಸೆನ್ಸ್ಗಳು
ಸದಾ ತುದಿಬೆರಳಿನಲ್ಲಿರಲಿ. 

ನಲ್ಮೆಯ ನನ್ನ ಎಲ್ಲಾ ಸನ್ ಮಿತ್ರರಿಗೂ
ಟೀಕಿಸುವ, ನಿಂದಿಸುವ ಹಾಗೂ ಶಪಿಸುವ
ಸಮ್ ಅದರ್‌ ಮಿತ್ರರಿಗೂ

ಸರ್ವರಿಗೂ
ಆಯುಧ ಪೂಜೆ ಹಾಗೂ
ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

/
ಲೋದ್ಯಾಶಿ

ಮಂಗಳವಾರ, ಸೆಪ್ಟೆಂಬರ್ 21, 2010

ಕಾಮನ್ ವೆಲ್ತ್ ಗೇಮ್ಸು

ಕಾಮನ್ ವೆಲ್ತ್ ಗೇಮ್ಸು
ಕಾಮನ್ ವೆಲ್ತ್ ಗೇಮ್ಸು
ಉಳಿದಿದೆ ಲೆಸ್ದ್ಯಾನ್ ಲೆವೆನ್ ಡೇಯ್ಸು
ಸಿದ್ದವಾಗಿಲ್ಲ ಎಲ್ಲಾ ಸ್ಟೇಡಿಯಮ್ಸು 
ಪೂರೈಸಿಲ್ಲ ಫ್ಲೋರಿಂಗ್ಸು
ಸರ್ಯಾಗಿಲ್ಲ ಸೀಲಿಂಗ್ಸು

ನೆಟ್ಟಗೆ ನಿಲ್ತಿಲ್ಲ ಪಿಲ್ಲರ್ಸು
ದೊಪ್ಪನೆ ಬೀಳ್ತಿವೆ ಬ್ರಿಡ್ಜಸ್ಸು
ಕೆಳಗಿದ್ದವರ ಕೈಕಾಲ್ಗಳು ಬ್ರೇಕಿಂಗ್ಸು
ಆಮೇಲೇ ಆಸ್ಪತ್ರೆ ಸೇರ್ಸಿಂಗ್ಸು
ಹಣ ಪಡೆದವರಿಗಿದೆಯ ಇದರ ಪೀಲಿಂಗ್ಸು???

ಕಾಮನ್ ವೆಲ್ತ್ ಹಳ್ಳಿ
ಸಿದ್ದವಾಗಿದೆ(/ಲ್ಲ) ಡೆಲ್ಲಿ
ಅಲ್ಲಿ ತುಂಬಿದೆ ಫಿಲ್ತು
ಸುತ್ತ ಇಲ್ಲ ಚೂರು ಹೆಲ್ತು
ಎಲ್ಲಾ ಬರೀ ಫಾಲ್ತು ಫಾಲ್ತು
ಆಯೋಜಿಸಿದವರಿಗೆ ಮಾತ್ರ ಬಂದಿದೆ ವೆಲ್ತೋ ವೆಲ್ತು

ಶುಕ್ರವಾರ, ಸೆಪ್ಟೆಂಬರ್ 3, 2010

Gmail Priority Inbox


- The Gmail Team, sent me this personal email. ;)

Priority InboxBeta
Welcome to Priority Inbox! By automatically separating out your most important messages, Priority Inbox makes it easy for you to read and respond to the messages that matter.


Get through your email faster

sections Try reading and replying to the messages in the "Important and Unread" section first. Mark anything that requires follow-up with a star, then go through the "Everything Else" section. If you leave Priority Inbox, you can return to it by clicking the link next to Inbox on the side navigation of Gmail.

How it works

Gmail's servers look at several types of information to identify the email that's important to you, including who you email and chat with most, how often you email with these people, and which keywords appear frequently in the emails you read.

Train Priority Inbox

If Priority Inbox makes a mistake, you can use the Mark important Mark not important buttons to correctly mark a conversation as important or not important, and Priority Inbox will quickly learn what you care about most.
sections

And more...

  • Customize Priority Inbox: You can change what type of email you see in each section (like switching the "Important and Unread" section to just "Important"). Just click on the section headers or visit the Priority Inbox tab under Settings to customize.
  • Use filters to guarantee importance: If you want to be absolutely sure that some messages are always marked as important (like email from your boss), you can set up a filter and choose "Always mark it as important."
  • Search by importance: If you want to see all the messages that have been marked as important, both read and unread, do a Gmail search for "is:important."
  • Switching back to your old inbox: If Priority Inbox isn't for you, you can easily switch back to your normal inbox by clicking "Inbox" on the left or hide Priority Inbox altogether from Gmail Settings.
To learn more about managing your email with Priority Inbox, check out the Gmail Help Center.

- The Gmail Team

ಭಾನುವಾರ, ಆಗಸ್ಟ್ 29, 2010

ಹಳ್ಳಿಯಾದರೇನು ಡಿಲ್ಲಿಯಾದರೇನು...

ಮೂಲ ಪದ್ಯ
ಚಿತ್ರ : ಬೆಂಕಿಯ ಬಲೆ,
ಹಾಡಿದವರು: ಎಸ್‌ಪಿಬೀ.
ಸಂಗೀತ: ರಾಜನ್‌ ಮತ್ತು ನಾಗೇಂದ್ರ,
ಸಾಹಿತ್ಯ : ಉದಯಶಂಕರ್
(ಕ್ಷಮೆಇರಲಿ)
---------------------------------------------------------------

ಟಡಿನ್‌ಟಡಿನಟಾ... ..ಇ.. ಣ.. ನಿ.. ನಾ. .ನ.....ಣ....ಣಿ....ಟಾನಡಿಟನ್‌ಡಿಟ 

ಹಳ್ಳಿಯಾದರೇನು$ ಡಿಲ್ಲಿಯಾದರೇನು$
ಹಳ್ಳಿಯಾದರೇನು$ ಡಿಲ್ಲಿಯಾದರೇನು$
ಜೊತೆಯಾಗಿ ಇಂದೂ$$$ ತ್ರೀಜೀ(3G) ಬರುತ್ತಿಲ್ಲವೇನು$$$
3G ಫೋನ್ ನನ್ನ ಜೀವಾ$$$ ಎಂದಿಗೂ$$
ಹಳ್ಳಿಯಾದರೇನು ಡಿಲ್ಲಿಯಾದರೇನೂ$$$
ಹಳ್ಳಿಯಾದರೇನು$$$$$$$$

ಟಡಿನ್‌ಟಡಿನಟಾ... ..ಇ.. ಣ.. ನಿ.. ನಾ. .ನ.....ಣ....ಣಿ....ಟಾನಡಿಟನ್‌ಡಿಟ

ಈಗಾ ಸಿಗ್ನಲ್‌ ಸಿಗುತ್ತಿಲ್ಲವೇನು$
ನೆಟ್‌ವರ್ಕ್‌ ಪ್ರಾಬ್ಲಮ್ ಇದೆಏನು$
ಈಗಾ$$ ಸಿಗ್ನಲ್‌ ಸಿಗುತ್ತಿಲ್ಲವೇನು$
ನೆಟ್‌ವರ್ಕ್‌ ಪ್ರಾಬ್ಲಮ್ ಇದೆಏನು$
ತ್ರೀಜೀ(3G) ಬಂದ ಮೇಲೆ ಎಲ್ಲಾಕಡೆಗೂ ಸ್ಪೀಡಾ(speed)ದ ಇಂಟರ್ನೆಟ್‌ ಸಿಗದೇ ಇರುವುದೇನೂ?$$$

ಟಡಿನ್‌ಟಡಿನಟಾ... ..ಇ.. ಣ.. ನಿ..

ಟೂಜೀ ಸ್ಕ್ಯಾಮ್‌(scam) ಆಗಿದ್ದರೇನು$
ಸಿಡಬ್ಲೂಜಿ ಸ್ಕ್ಯಾಮ್‌ ಆದರೇನು$
ನಿನ್ನತ್ರ ದುಡ್ಡಿದ್ರೆ, 3Gಪೋನ್‌ ಕೊಂಡು(buy)ಕೊಂಡ್ರೆ
ವಿಡಿಯೋಕಾಲ್‌(videocall) ಮಾಡಬಹುದಲ್ಲವೇನು$$$
3ಜೀ ಇದ್ದರೇ
ಇಂಟರ್ನೆಟ್‌ ಟೀವೀ
ನೋಡಬಹುದಲ್ಲವೇನು!

ನ.....ಣ....ಣಿ....ಟಾನಡಿಟನ್‌ಡಿಟ

ಹಳ್ಳಿಯಾದರೇನು ಡಿಲ್ಲಿಯಾದರೇನೂ$$$$
ಹಳ್ಳಿಯಾದರೇನು$$$

ಟಡಿನ್‌ಟಡಿನಟಾ... ..ಇ.. ಣ.. ನಿ.. ನಾ. .ನ.....ಣ....ಣಿ....ಟಾನಡಿಟನ್‌ಡಿಟ

ಬಿಎಸ್‌ಎನ್‌ಎಲ್‌(BSNL) ಸಿಗದಿದ್ದರೇನು$
ಏರ್‌ಟೆಲ್‌ ಅಥವಾ ವೋಡಾಪೋನ್ ಸಿಗುತ್ತಲ್ಲವೇನು$
ಬಿಎಸ್‌ಎನ್‌ಎಲ್‌(BSNL) ಸಿಗದಿದ್ದರೇನು$
ಏರ್‌ಟೆಲ್‌ ಅಥವಾ  ವೋಡಾಪೋನ್ ಸಿಗುತ್ತಲ್ಲವೇನು$
ಟಚ್‌ಸ್ಕ್ರೀನ್‌ಡಿವೈಸ್‌(Touchscreen Device) ಕೈನಲ್ಲಿದ್ದರೆ ಎಲ್ಲೆಂದರಲ್ಲಿ, ಈಸಿ(Easy)ಯಾಗಿ,
ಇಂಟರ್ನೆಟ್ ಬ್ರೌಸ್(browse) ಮಾಡಬಹುದು
ಬಿಡು ನೀನು ಚಿಂತೆಯನ್ನೂ$$$


ಇ.. ಣ.. ನಿ.. ನಾ. .ನ.....ಣ....ಣಿ....ಉ..ಣ...ನಿ...ಡ..ಟ..ಪ..ಮ.. ಇ.. ಣ.. ನಿ.. ನಾ.

ಯಾರೇನೇ ಅಂದರೇನು, ಯಾವೂರೇ(any village) ಆದರೇನು$
ಗ್ರಾಮೀಣಭಾಗದಲ್ಲೂ ನೆಟ್‌ವರ್ಕ್‌ ಸಿಗುತ್ತೆ ಎಂದು ಭರವಸೆಯ ನೀಡಿಲ್ಲವೇನೂ$$$
ಕೊರಗದೇ$ ಹೆದರದೇ$ 3ಜೀ ಟಚ್‌ಸ್ಕ್ರೀನ್‌ ಫೋನ್‌ ಬಯ್(Buy)ಮಾಡು ನೀನು$$$

ಹಳ್ಳಿಯಾದರೇನು ಡಿಲ್ಲಿಯಾದರೇನು
ಹಳ್ಳಿಯಾದರೇನು ಡಿಲ್ಲಿಯಾದರೇನು$$$$$$$$$$$

-----------------------------------------
ಸಿಡಬ್ಲೂಜಿ = CWG=Common Wealth Games
ಟೂಜೀ  = 2G = 2G Spectrum
ಟಚ್‌ಸ್ಕ್ರೀನ್‌ = Touch screen
ಇಂಟರ್ನೆಟ್‌ ಟೀವೀ  = Internet TV
---------------------------------------






-ಲೋದ್ಯಾಶಿ

ಮಂಗಳವಾರ, ಆಗಸ್ಟ್ 17, 2010

ಮುಗ್ಗರಿಸಿದ ಮುಂಗಾರು

ಈ ಕೃಷ್ಣಪ್ಪ ಅವರ ನಿರ್ಮಾಣದ ಮೊದಲ ಹಾಗೂ ಯೋಗರಾಜ್‌ ಭಟ್ಟರ ನಿರ್ದೇಶನದ ಮೂರನೇ ಚಿತ್ರ ಮುಂಗಾರುಮಳೆ. ಚಿತ್ರಕ್ಕೆ ಈ ಹೆಸರನ್ನು ಸೂಚಿಸಿದ್ದೇ ಈ ಕೃಷ್ಣಪ್ಪನವರು. ಯಾಕೆ ಈ ಹೆಸರು ಕೊಟ್ಟಿದ್ದು ಎಂಬುದನ್ನೂ ಈ ರೀತಿ ವಿವರಿಸುತ್ತಾರೆ. "ಮುಂಗಾರು ಮಳೆ ಸಾಮನ್ಯವಾಗಿ ನಮ್ಮ ರೈತರಿಗೆ ಯಾವತ್ತೂ ಕೈಕೊಡಲ್ಲ. ಚಿತ್ರದಲ್ಲಿಯೂ ಸಹ ಮಳೆಯ ಸನ್ನಿವೇಶಗಳು ಸಾಕಷ್ಟಿವೆ. ಆದುದರಿಂದ ಈ ಚಿತ್ರಕ್ಕೆ ಮುಂಗಾಳುಮಳೆ ಅಂತಾನೇ ಹೆಸರಿಡೋಣ. ಚಿತ್ರವೂ ಗೆಲ್ಲುತ್ತದೆ ಎಂಬ ಭರವಸೆ ಇದೆ". ಅವರ ಆಶಯದಂತೆ ಚಿತ್ರವು ಗೆದ್ದು ಕನ್ನಡಚಿತ್ರರಂಗದಲ್ಲಿಯೇ ದಾಖಲೆಯನ್ನು ಸೃಷ್ಟಿಸಿದ್ದು ನಮಗೆಲ್ಲಾ ತಿಳಿದೇ ಇದೆ.

ಈ ಕೃಷ್ಣಪ್ಪರವರ ಎರಡನೇ ಚಿತ್ರ ಮೊಗ್ಗಿನಮನಸ್ಸು. ಯುವ ನಿರ್ದೇಶಕ ಶಶಾಂಕ್‌ ನಿರ್ದೇಶನದ ಈ ಚಿತ್ರವೂ ನಿರ್ಮಾಪಕರ ಜೇಬು ತುಂಬಿಸಿತು. ಈ ಎರಡು ಯಶಸ್ವೀ ಚಿತ್ರಗಳ ನಂತರ ಈ ಕೃಷ್ಣಪ್ಪ ಅವರು ಮೂರನೇ ಕೊಡುಗೆ  "ಮತ್ತೆಮುಂಗಾರು". ಚಿತ್ರದ ಹೆಸರು ಕೇಳಿದಾಗ, ಕೃಷ್ಣಪ್ಪನವರು ತಮ್ಮ ಮೊದಲಚಿತ್ರದ ಹೆಸರಿನ ಸೆಂಟಿಮೆಂಟ್‌ನಿಂದ ಪ್ರೇರೇಪಿತರಾಗಿ ಈ ಹೆಸರು ಸೂಚಿಸಿರಬಹುದೇ ಎನ್ನುವ ಅನುಮಾನ ಮೂಡಿತ್ತು.

ಈ ಚಿತ್ರದ ಕಥೆ ಮೊದಲೆರಡು ಚಿತ್ರಗಳ ಹಾಗೇ ಕೇವಲ ಕಥೆಯಲ್ಲ. ಒಬ್ಬ ಭಾರತೀಯ ಅದರಲ್ಲೂ ನಮ್ಮ ಕನ್ನಡಿಗ, ಹೆಸರು ನಾರಾಯಣ ಮಂಡಗದ್ದೆ, ಆಕಾಸ್ಮಾತ್‌ ಆಗಿ ಭಾರತದ ಗಡಿದಾಟಿ ಪಾಕಿಸ್ತಾನವನ್ನು ಸೇರಿಬಿಡುತ್ತಾರೆ. ಆಮೇಲೆ ಅವರು ತಿಳಿಯದೇ ಮಾಡಿದ ತಪ್ಪಿಗೆ 21 ವರ್ಷ ಪಾಕಿಸ್ತಾನದ ಕತ್ತಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಾರೆ. ಅನೇಕ ವರ್ಷಗಳ ನಂತರ ಬಿಡುಗಡೆಯಾಗಿ ಮತ್ತೆ ತಮ್ಮ ತಾಯ್ನಾಡಿಗೆ ಹಿಂದಿರುಗುತ್ತಾರೆ. ಅವರು ಕಳಕೊಂಡಿದ್ದ ಸ್ವತಂತ್ರ ಜೀವನವನ್ನು ಮತ್ತೆ ಕಂಡುಕೊಳ್ಳುತ್ತಾರೆ.

ಇಂತಹ ಒಂದು ಶುಷ್ಕಕಥೆಯನ್ನು ಒಂದು ಚಿತ್ರಕಥೆಯಾಗಿ ಎಣೆದು, ಪರದೆಯ ಮೇಲೆ ತಂದು ಚಿತ್ರವನ್ನು ವೀಕ್ಷಿಸುವ ಪ್ಪ್ರೇಕ್ಷಕನಿಗೆ ಎರಡೂವರೆ ಗಂಟೆ ಎಲ್ಲೂ ಬೋರಾಗದಂತೆ ಒಂದು ಚಿತ್ರವನ್ನು ನಿರ್ಮಿಸುವುದು ಅಷ್ಟು ಸುಲಭದ ಮಾತಲ್ಲ. ಕಾರ್ಗಿಲ್‌ ಯುದ್ದವಾದ ಮೇಲೆ ಅದರ ಆಧಾರದ ಮೇಲೆ ಕಥೆಯನ್ನು ಎಣೆದು ನಾಲ್ಕಾರು ಭಾಷೆಗಳಲ್ಲಿ ನಾಲ್ಕಾರು ಚಿತ್ರಗಳು ಬಂದವು. ಹಿಂದಿಯ ಮಿಷನ್ ಕಾಶ್ಮೀರ್, ಕನ್ನಡದ ಸೈನಿಕ ಹೀಗೆ ಪ್ರಯತ್ನಗಳು ನಡೆದಿದ್ದವು. ಅದೇ ರೀತಿ ಹೆಮ್ಮೆಯ ಸ್ವತಂತ್ರ ಹೋರಾಟಗಾರ ಭರತ್‌ಸಿಂಗ್ ಅವರ ಬಗ್ಗೆಯೂ ಕೆಲವು ಚಿತ್ರಗಳು ತೆರೆಕಂಡಿದ್ದವು. ಆದರೆ ಇಂತಹ ನೈಜಘಟನೆಗಳನ್ನ ಆಧರಿಸಿ ಬಂದ ಚಿತ್ರಗಳು ಅಷ್ಟು ಯಶನ್ನುಗಳಿಸದೇ ಹೋದವು.

ಈಗ ತೆರೆಕಂಡಿರುವ ಮತ್ತೆಮುಂಗಾರು ಚಿತ್ರವೂ ನಿರಾಶಾದಾಯಕವಾಗಿ ಸಾಗಿದೆ ಎಂದು ಕೇಳಿದಾಗ ಏಕೋ ಬೇಸರವಾಯಿತು.
ಇಂತಹ ಚಿತ್ರಗಳನ್ನು ನಿರ್ಮಿಸಲು ಚಿತ್ರತಂಡದವರು ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವಂತಹ ಅಂಶಗಳನ್ನೂ ಸಹ ಸಾಕಷ್ಟು ಪ್ರಮಾಣದಲ್ಲಿ ಬೆರೆಸದೇ ಹೋದರೇ, ಚಿತ್ರ ಗೆಲ್ಲುವುದು ಕಷ್ಟಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ "ಟೈಟಾನಿಕ್‌" ಚಿತ್ರ. ಎಷ್ಟು ಶುಷ್ಕಕಥೆಯದು?  ಆದರೆ ಚಿತ್ರವನ್ನು ನೋಡುವಾಗ ಎಲ್ಲಿಯೂ ಬೋರ್ ಹೊಡೆಸದಂತೆ, ಮಸಾಲೆ ಅಂಶಗಳನ್ನೂ ಸೇರಿಸಿಕೊಂಡಿದ್ದರಿಂದ ಚಿತ್ರ ದಾಖಲೆಯ ಪ್ರಮಾಣದಲ್ಲಿ ಯಶಸ್ಸುಗಳಿಸಿತ್ತು. ಇಂತಹ ಉದಾಹರಣೆಗಳನ್ನು ಗಮನದಲ್ಲಿಟ್ಟು ಕೊಂಡಾದರೂ ನಮ್ಮ ಕನ್ನಡ ನಿರ್ದೇಶಕರು ಮುಂದಿನ ಬಾರಿ ಮತ್ತೊಂದು ಪ್ರಯತ್ನವನ್ನು ಮಾಡಿ ಯಶನ್ನು ಗಳಿಸಲಿ ಎಂದು ಆಶಿಸೋಣ.

ನಂಬಿದರೆ ನಂಬಿ ಬಿಟ್ಟರೇ ಬಿಡಿ. 

1. ನಾರಾಯಣ ಮಂಡಗದ್ದೆಯವರು ಎಷ್ಟು ವರ್ಷಗಳು ಪಾಕಿಸ್ತಾನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು?
ಮೊನ್ನೆ ಚಿತ್ರದ ಬಿಡುಗಡೆಯ ದಿನ, ಸ್ವತಃ ನಾರಾಯಣರವರೇ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತಾಡ್ತಾ ಇದ್ದರು. ಆಗ ಇವರು 21 ವರ್ಷ ಜೈಲಿನಲ್ಲಿದ್ದೆ ಎಂದು ಹೇಳಿದ್ದನ್ನು ಕೇಳಿದ ನೆನಪಿತ್ತು. ಆದರೂ ನಿನ್ನೆಯ ವಿ.ಕ ಲವಲವಿಕೆಯಲ್ಲಿ ಬಂದಿದ್ದ ಲೇಖನವನ್ನೊಮ್ಮೆ ಓದಿ ಮಾಹಿತಿಯನ್ನು ಗಟ್ಟಿಮಾಡಿಕೊಳ್ಳೋಣದೆಂದು ನೋಡಿದಾಗ ಆಶ್ಚರ್ಯೊಂದು ಕಾದಿತ್ತು.
ಮಹೇಶ್ ದೇವಶೆಟ್ಟಿ ಹಾಗೂ ಎ. ಆರ್, ರಘುರಾಮ್ ಎಂದು ಇಬ್ಬರು ಪ್ರತ್ಯೇಕವಾಗಿ ಇದೇ ವಿಷಯವಾಗಿ ಒಂದೇ ಪುಟದಲ್ಲಿ ಅದೂ ಅಕ್ಕಪಕ್ಕದಲ್ಲಿ ಪ್ರಕಟಿಸಿರುವ ಈ ಲೇಖನದ ಚಿತ್ರವನ್ನು ಗಮನಿಸಿ.

ಗಮನಿಸಿದಿರಾ? ಒಬ್ಬರು 15 ವರ್ಷ ಜೈಲು ಶಿಕ್ಷೆ ಮತ್ತೊಬ್ಬರು 21 ವರ್ಷ ಜೈಲು ಶಿಕ್ಷೆ ಅಂತ ಬರ್ದಿದ್ದಾರೆ. ಎಡಗಡೆಯ ಮಾಹಿತಿ ಮಹೇಶ್ ದೇವಶೆಟ್ಟಿಯವರದು, ಎಡಗಡೆಯದು ಎ,ಆರ್,ರಘುರಾಮ್‌ಅವರದು...ಪೂರ್ತಿ ಲೇಖನವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ. ಈಗ ಇದರಲ್ಲಿ ಯಾವುದು ಸರಿ, ನೀವೇ ಹೇಳಿ.

2. ಇನ್ನೂ ಒಂದು ವಿಷಯವಿದೆ. ನೇರಪ್ರಸಾರ ಕಾರ್ಯಕ್ರಮದಲ್ಲಿ ಸ್ವತಃ ನಾರಾಯಣ ಮಂಡಗದ್ದೆಯವರು ಮಾತಾಡುತ್ತಿರುವಾಗ, ತಾವನುಭವಿಸಿದ ಕಹಿ ಘಟನೆಗಳ ಬಗ್ಗೆ ವಿವರಿಸಿದರು. ಕಡೆಗೆ ಕಾರ್ಯಕ್ರಮದ ಸಂದರ್ಶಕರು ನೀವು ಚಿತ್ರದ ನಾಯಕ ನಟ ಕಿಟ್ಟಿಯವರನ್ನು ನೇರವಾಗಿ ಭೇಟಿಯಾಗಿದ್ದೀರ? ಎಂದು ಪ್ರಶ್ನಿಸಿದರು. ಆಗ ನಾರಾಯಣ್‌ ಅವರು, ಇಲ್ಲ ಇನ್ನೂ ನೇರವಾಗಿ ಭೇಟಿಯಾಗಿಲ್ಲ. ಆದರೆ ಇವತ್ತು ಚಿತ್ರದ ಮೊದಲ ಪ್ರದರ್ಶನವನ್ನು ವೀಕ್ಷಿಸಲು ಅವರೂ ಬರುತ್ತಿದ್ದಾರೆ. ಆಗ ಅವರನ್ನೂ ಭೇಟಿಯಾಗುತ್ತಿದ್ದೇನೆ. ಎಂದು ಉತ್ತರಿಸಿದ್ದರು. ಆದರೆ ಇದೇ ಮೇಲಿನ ಎ.ಆರ್, ರಘುರಾಮ್‌ರವರು ಲವಲವಿಕೆಯ ಆರನೇ ಪುಟದಲ್ಲಿ ಏನೆಂದು ಬರೆದಿದ್ದಾರೆ ಎಂದು ಕೆಳಗಿನ ಚಿತ್ರದಲ್ಲಿ ನೀವೇ ವೀಕ್ಷಿಸಿ.

ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ. ಇದಕ್ಕೇನೇಳ್ತೀರಿ? ಕೇವಲ 10 ದಿನಗಳ ಹಿಂದೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಸ್ವತಃ ನಾರಾಯಣ್‌ ಅವರೇ ತಿಳಿಸಿದ್ದರು, ನಾನಿನ್ನೂ ಕಿಟ್ಟಿಯವರನ್ನು ಭೇಟಿಯಾಗಿಲ್ಲ ಎಂದು, ಆದರೆ ಇಲ್ಲಿ ನೋಡಿದರೆ, ಒಂದು ವರ್ಷದ ಭಾರೀ ಆತ್ಮೀಯತೆ ಅಂತೆಲ್ಲಾ ಬರ್ದಿದ್ದಾರೆ. ಯಾವ್ದ್ ಸರಿ, ಯಾವ್ದ್ ತಪ್ಪು?

ನಿಮ್ಮ ಅನಿಸಿಕೆಯನ್ನು ಕಾಮೆಂಟ್‌ ಮೂಲಕ ತಿಳಿಸಬಹುದು.

ಮೇಲಿನ ಈ ಎರಡು ಗೊಂದಲಗಳನ್ನು ಪಕ್ಕಕ್ಕಿಡೋಣ. ಇಂತಹ ವಿಭಿನ್ನ ಪ್ರಯತ್ನದ ಚಿತ್ರಗಳಿಗೆ ನಾವು ಪ್ರೋತ್ಸಾಹಿಸಬೇಕಾಗಿದೆ. ಈಗಲೂ ಸಮಯಮೀರಿಲ್ಲ, ಹೋಗಿ, ಚಿತ್ರವನ್ನು ವೀಕ್ಷಿಸಿಬನ್ನಿ, ಚಿತ್ರತಂಡಕ್ಕೆ ಪ್ರೋತ್ಸಾಹಿಸಿ.

ಭಾನುವಾರ, ಆಗಸ್ಟ್ 15, 2010

ಹಾಲಿವುಡ್ To ಬಳ್ಳಾರಿದುಡ್

"ಪೋಗೋ ಕನ್ನಡ ಡಬ್ಬಿಂಗು ಹೋಗೋ" ಪೋಸ್ಟ್ ನ ಮುಂದುವರಿದ ಭಾಗ.

ಡಬ್ಬಿಂಗ್‌ಗೆ ಕನ್ನಡದಲ್ಲಿ ಅವಕಾಶ ಕೊಡುವುದಕ್ಕೆ ಅನಿವಾರ್ಯತೆ ಎದುರಾಗಿದೆ. ಈ ಅನಿವಾರ್ಯತೆಗೆ ಪ್ರಮುಖ ಕಾರಣಗಳೇನಿರಬಹುದು ಎಂದು ಅವಲೋಕಿಸಿದಾಗ ನಮಗೆ ಎದುರಾದ ಕೆಲವು ಆಂಶಗಳು ಈ ರೀತಿ ಇವೆ.

1. ಮನರಂಜನೆಯ ಬಹುದೊಡ್ಡ ಸೋರ್ಸ್ ಎಂದರೆ ಚಿತ್ರರಂಗ ಹಾಗೂ ಕಿರುತೆರೆ.
2. ಈ ಮಾದ್ಯಮಗಳ ಕಾರ್ಯಕ್ರಮಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ.
3. ಆದರೆ ಆ ನಿಟ್ಟಿನಲ್ಲಿ ಈಗ ನಾವು ಹಿಂದೆ ಬಿದ್ದಿದ್ದೇವೆ.
3. ಇಂದು ಹಳ್ಳಿ ಹಳ್ಳಿಗಳಲ್ಲಿ  ತೆಲುಗು, ತಮಿಳು, ಹಿಂದಿ, ಆಂಗ್ಲ ಚಿತ್ರಗಳು ಜನಪ್ರಿಯತೆ ಗಳಿಸುತ್ತಿವೆ.
4. ಕನ್ನಡದ ಕಂಪು ಹರಡ ಬೇಕಿದ್ದ ಕಡೆಗಳಲ್ಲಿ ಇಂದು ಅನ್ಯಭಾಷೆಗಳು ಆವರಿಸಿಕೊಳ್ಳುತ್ತಿವೆ. 
5. ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಕನ್ನಡ ಒಂದು ಸೀಮಿತಭಾಷೆಯಾಗಲಿದ್ದು ಬರಬರುತ್ತಾ ಅವನತಿ ಮಾರ್ಗಹಿಡಿಯುತ್ತಿದೆ.
6. ಅನ್ನಕೊಡುವ ಭಾಷೆಯಾಗದ ಹೊರತು ಕನ್ನಡಕ್ಕೆ ಉಳಿಗಾಲವಿಲ್ಲ.
7. ಮಕ್ಕಳಲ್ಲಿ ಮಾತೃ ಭಾಷೆಯ ಮೇಲಿನ ಪ್ರೀತಿ, ಗೌರವ, ಉತ್ಸಾಹವನ್ನು ಉಳಿಸಿ ಅದು ನಮ್ಮ ಮುಂದೆ ಪೀಳಿಗೆಗೆ ಪ್ರಸಾರವಾಗುವಂತೆ ನಾವು ಕ್ರಮಗಳನ್ನು ರೂಪಿಸಬೇಕಿದೆ.
8. ಹಳ್ಳಿಹಳ್ಳಿಗಳಲ್ಲಿರುವ ಪ್ರತಿ ಕನ್ನಡಿಗರಿಗೆ ಮನರಂಜನೆ, ವಿಜ್ಞಾನ ತಂತ್ರಜ್ಞಾನವನ್ನು ತಮ್ಮ ಮಾತೃಭಾಷೆಯಲ್ಲಿಯೇ ತಲುಪಿಸಬೇಕು.
9. ಕನ್ನಡಭಾಷೆಯಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ನಿರೂಪಿಸಿ ತೋರಿಸಬೇಕು.
10. ಇದೆಲ್ಲಕ್ಕೆ ಈಗ ಬಹುಮುಖ್ಯವಾಗಿ ಕೂಡಲೇ ತೆಗೆದುಕೊಳ್ಳಬೇಕಾಗಿರುವ ಕ್ರಮವೆಂದರೆ, ಅನ್ಯಭಾಷೆಯಲ್ಲಿ ಪ್ರಸಾರವಾಗುವ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳನ್ನು ಹಾಗೂ ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ಕನ್ನಡಕ್ಕೆ ಡಬ್‌ಮಾಡಲು ಅವಕಾಶ ನೀಡಬೇಕು.

ಹೌದು, ಕನ್ನಡ ಭಾಷೆಯ ವ್ಯಾಪ್ತಿಯ ಪರದಿಯನ್ನು ನಾವು ಹಿಗ್ಗಿಸಬೇಕಿದೆ. ಕಾಲಕ್ಕೆ ತಕ್ಕಂತೆ, ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ನಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೇ ಡಾರ್ವಿನ್‌ನ ವಿಕಾಸವಾದದ ಸಿದ್ದಾಂತದಂತೆ ಬಲಿಷ್ಟ ಹಾಗೂ ದುರ್ಬಲರ ಮಧ್ಯೆ ಸಂಘರ್ಷವಾಗಿ ಕಡೆಗೆ ದುರ್ಬಲವಾದದು ಕಾಲದ ವೇಗಕ್ಕೆ ಪ್ರತಿಸ್ಪರ್ದಿಸಲಾಗದೆ ಇತಿಹಾಸವನ್ನು ಸೇರಬೇಕಾಗುತ್ತದೆ.

1. ಸುಮಾರು ಹದಿನೈದು ವರ್ಷಗಳ ಹಿಂದಿನ ಪರಿಸ್ಥಿತಿ ಹೇಗಿತ್ತು ಎಂದು ಮೆಲುಕು ಹಾಕೋಣ.
ಹಳ್ಳಿಗಳಲ್ಲಿ ಜನರು ಒಂದು ಟೆಲಿಪೋನ್‌ ಕನೆಕ್ಷನ್‌ ಬೇಕೆಂದು ಆಸೆಪಟ್ಟರೆ ಆಗ ಅದಕ್ಕೊಂದು ಅಪ್ಲಿಕೇಶನ್ ಭರ್ತಿ ಮಾಡಿ ಕೊಡಬೇಕಿತ್ತು. ಅಪ್ಲಿಕೇಶನ್ ಭರ್ತಿಮಾಡಿ ಮುಂಗಡವಾಗಿ ಹಣಪಾವತಿಸಿ ಅದನ್ನು ಸೂಕ್ತ ಅಧಿಕಾರಿಯ ಕೈಗೆ ಸಲ್ಲಿಸಿದ ನಂತರ, ಅದು ಕಛೇರಿಯ ಅನೇಕ ಟೇಬಲ್‌ಗಳನ್ನು ಹತ್ತಿ ಇಳಿಯ ಬೇಕಿತ್ತು. ಈ ಹತ್ತಿ ಇಳಿಯುವ ಹಾವು ಏಣಿ ಆಟದಲ್ಲಿ ಅನೇಕ ಬಾರಿ ಅಪ್ಲಿಕೇಶನ್ ಕಳೆದೇ ಹೋಗಿರುತ್ತಿತ್ತು. ಅಧಿಕಾರಿಗಳು ಒಂದು ಭಾರ ತಪ್ಪಿತು ಎಂಬಂತೆ ಅದನ್ನು ಮರೆತು ಆಯಾಗಿರುತ್ತಿದ್ದರು. ಆಮೇಲೆ ಮೂರ್ನಾಲ್ಕು ತಿಂಗಳು ಕಾದು ಕಾದೂ ...ಏನೂ ಬೆಳವಣಿಗೆ ಕಂಡುಬರದ ಕಾರಣ ಆ ಹಳ್ಳಿಯಿಂದ ಬಂದ ವ್ಯಕ್ತಿ ತನ್ನ ಅಪ್ಲಿಕೇಶನ್ ಈಗ ಏನಾಗಿದೆ ಎಂದು ಪ್ರಶ್ನಿಸಿದನೆಂದರೆ ಆಗ ಅಧಿಕಾರಿಗಳು ನಾಲ್ಕು ನಿಮಿಷ ತಲೆಕೆಡಿಸಿಕೊಂಡು, ಕಡೆಗೆ ಸ್ವಾಮೀ, ಇನ್ನೊಂದು ಅಪ್ಲಿಕೇಶನ್ ಭರ್ತಿಮಾಡಿಕೊಡಿ, ನೀವು ಸಲ್ಲಿಸಿದ್ದ ಅಪ್ಲಿಕೇಶನ್ ಎಲ್ಲೋ ಕಳೆದುಹೋಗಿದೆ ಎಂದು ಏನೂ ತಿಳಿಯದವರಂತೆ ಹಾರಿಕೆಯ ಉತ್ತರಕೊಟ್ಟು ಪಾರಾಗುತ್ತಿದ್ದರು. ಏನೂ ಪ್ರಶ್ನಿಸದೇ ಆ ಹಳ್ಳಿಗರು ಮತ್ತೊಮ್ಮೆ ಅಪ್ಲಿಕೇಶನ್ ಕೊಟ್ಟುಬರಬೇಕಿತ್ತು.

ಈ ಪ್ರಕ್ರಿಯೆ  ಕನಿಷ್ಟ ಪಕ್ಷ ನಾಕ್ಕು ತಿಂಗಳಿಂದ ಒಂದು ವರ್ಷವಾದರೂ ಸಮಯ ತೆಗೆದುಕೊಂಡು ಕಡೆಗೊಮ್ಮೆ ಎಲ್ಲವೂ ಕೈಗೂಡಿ ಹಳ್ಳಿಗರ ಮನೆಗೆ ಟೆಲಿಪೋನ್‌ ಬರುತ್ತದೆ ಎಂದು ಇಟ್ಟುಕೊಳ್ಳಿ. ಈಗ ಮತ್ತೊಂದು ಸಮಸ್ಯೆ. ಅದೆಂದರೆ ಸ್ವಲ್ಪ ಹೆಚ್ಚುಗಾಳಿ ಬೀಸಿದರೆ ಸಾಕು ರಸ್ತೆಬದಿಯ ಯಾವುದೋ ಮರದ ಕೊಂಬೆ ಮುರಿದು ಟೆಲಿಪೋನ್‌ ತಂತಿಯ ಮೇಲೆ ಬಿದ್ದು ಎಲ್ಲವೂ ಅಸ್ತವ್ಯಸ್ತವಾಗುತ್ತದೆ. ಆಗ ಆ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಟೆಲಿಪೋನ್‌ಗಳೆಲ್ಲವೂ ಸತ್ತುಬೀಳುತ್ತವೆ. ನಂತರ ಅನೇಕ ಬಾರಿ ಟೆಲಿಪೋನ್ ಎಕ್ಸ್‌ಚೇಂಜ್ ಆಫೀಸ್‌ಗೆ ಓಡಾಡಿದ ಬಳಿಕ ಒಂದು ತಿಂಗಳೊಳಗಾಗಿ ಸರಿ ಪಡಿಸುತ್ತೇವೆ ಎನ್ನುವ ಭರವಸೆ ಸಿಕ್ಕುತ್ತದೆ. ಅದಾದ ಎರಡು ತಿಂಗಳಲ್ಲಿ ಮತ್ತೆ ಪೋನ್‌ ಚಲಾವಣೆಯಲ್ಲಿ  ಬರುತ್ತದೆ. ಅಷ್ಟರಲ್ಲಿ ಮತ್ತೆ ಗಾಳಿ ಮಳೆ ಏನಾದರೂ ತೊಂದರೆ ಕೊಟ್ಟರೆ ಮತ್ತದೆ ಸತ್ತು ಬಿದ್ದ ಪೋನ್‌, ಸರಿ ಪಡಿಸುತ್ತಿದ್ದೇವೆ ಎನ್ನುವ ಅಧಿಕಾರಿಯ ಭರವಸೆಯ ಮೇಲೆಯೇ ಜನ ಕಾಯುತ್ತಿರಬೇಕಿತ್ತು.

ಇನ್ನು ರೇಡಿಯೋ ಬೇಕೆನಿಸಿದರೆ ತಟ್ಟನೇ ತರಬಹುದಿತ್ತು. ಆದರೆ ಅದರಲ್ಲಿ ಮಾತೃಭಾಷೆಯಲ್ಲಿ ಬರುವ ಕಾರ್ಯಕ್ರಮಗಳು ಸೀಮಿತವಾಗಿದ್ದವು .

ಇನ್ನು ಟೆಲಿವಿಷನ್ ಬಗ್ಗೆ ಹೇಳಬೇಂಕೆಂದರೆ, ಸರ್ಕಾರದ ಡಿಡಿ1 ಬಿಟ್ಟರೆ ಬೇರೆ ಚಾನಲ್‌ ಇರುತ್ತಿರಲಿಲ್ಲ. ಅಂದಿನ ಕಾಲದಲ್ಲಿ ನಮ್ಮ ಹಳ್ಳಿಗರಿಗೆ ಬಾಹ್ಯಪ್ರಪಂಚದ ಆಗುಹೋಗುಗಳ ಬಗ್ಗೆ ಒಂದು ಭರವಸೆಯ ಮಾದ್ಯಮವೊಂದಿದ್ದರೆ ಅದು ಕೇವಲ ದಿನಪತ್ರಿಕೆಗಳು ಮಾತ್ರ ಆಗಿದ್ದವು.

ಇದೆಲ್ಲಾ ಯಾಕೆ ಹೇಳಬೇಕಾಗಿದೆ ಎಂದರೆ ಅಂದಿನಕಾಲದಲ್ಲಿ ಹಳ್ಳಿಜನರ ಬಗ್ಗೆ ಎಷ್ಟು ನಿರ್ಲಕ್ಷೆವಿತ್ತು ಎಂಬುದನ್ನು ನಾವು ಮನಗಾಣಬೇಕಾಗಿದೆ. ಅವರು ಕೂಲಿಕೆಲಸಕ್ಕೆ ಹಾಗೂ ಕೃಷಿಗೆ ಬಿಟ್ಟು ಬೇರೇ ಯಾವುದಕ್ಕೂ ನಾಲಾಯಕ್ಕು ಎನ್ನುವಂತೆ ಅಲಿಖಿತ ಶಾಸನಗಳು ಜಾರಿಯಲ್ಲಿದ್ದವು.
ಹಳ್ಳಿಜನಕ್ಕೆ ವಿದ್ಯುತ್‌ ಇಲ್ಲದಿದ್ದರೇನೆಂತೆ?
ಟೀವಿ, ರೇಡಿಯೋ ಇಲ್ಲದಿದ್ದರೇನಂತೆ?
ಟೆಲಿಪೋನ್‌ ಯಾವ ಕೆಲಸಕ್ಕೆ?
ಹೊಲದಲ್ಲಿ ದುಡಿಯುವ ಅವಿಧ್ಯಾವಂತರಾದ ಅವರಿಗೆ ಇಷ್ಟೆಲ್ಲಾ ಸವಲತ್ತುಗಳ ಅವಶ್ಯಕತೆ ಏನಿದೆ?
ಈ ಸವಲತ್ತುಗಳನ್ನು ಪಡೆದು ಅವರು ಏನನ್ನು ಸಾಧಿಸಬೇಕಾಗಿದೆ??
ಎನ್ನುವಂತಹ ಪರಿಸ್ತಿತಿ ದಟ್ಟವಾಗಿತ್ತು. ಆಗಿನ ಹಳ್ಳಿಜನಗಳ ಮನೋಭಾವನೆಯೂ ಈ ನಿರ್ಲಕ್ಷೆಕ್ಕೆ ತಕ್ಕಂತೆಯೇ ಇದ್ದಿತು. ನಮ್ಮದೇನಿದ್ದರೂ ಇಷ್ಟೇ! ನಾವು ಪಡೆದುಕೊಂಡು ಬಂದದ್ದು ಇಷ್ಟೇ!
ಪಾಲಿಗೆ ಬಂದದ್ದನ್ನು ಅನುಭವಿಸಬೇಕು ಎಂಬಂತೆ, ಯಾವ ಮನರಂಜನೆಗೂ ಒತ್ತುನೀಡದೇ, ತಾವಾಯಿತು ತಮ್ಮ ಹೊಲದ ಕೆಲಸಗಳಾದವು ಎಂಬಂತೆ ಈ ಎಲ್ಲಾ ಸವಲತ್ತುಗಳಿಂದ ದೂರವಾಗತೊಡಗಿದರು.


2. ಈಗ ಪರಿಸ್ತಿತಿ ಏನಾಗಿದೆ???
ಈಗ ಟೆಲಿಪೋನ್‌ ಅಪ್ಲಿಕೇಶನ್ ಕೊಟ್ಟು ಬಂದು ತಿಂಗಳುಗಟ್ಟಲೇ ಕಾಯುವುದು ಅಥವಾ ಗಾಳಿ ಮಳೆಗೆ ಟೆಲಿಪೋನ್‌ ತಂತಿ ಕಟ್ಟಾಗಬಹುದು, ಪೋನ್ ಸಾಯಬಹುದು ಎಂಬ ಆತಂಕವೂ ಇಲ್ಲ. ಕೈಯಲ್ಲಿ ಸಾವಿರ ರೂಪಾಯಿ ಇದ್ದರೆ ಅರ್ಧಗಂಟೆಯಲ್ಲಿ ಕಾರ್ಯನಿರತ ಮೋಬೈಲ್ ಪೋನ್‌ ನಿನ್ನ ಕೈಸೇರುತ್ತದೆ. ಅದಕ್ಕೆ ಇನ್ನೋಂದಿಷ್ಟು ಜಾಸ್ತಿ ಹಣ ವ್ಯಯಿಸಿದರೆ ಮತ್ತಷ್ಟು ಅನುಕೂಲಕರ ಮೋಬೈಲ್ ಫೋನ್ ತೆಗೆದುಕೊಂಡು ಅದರಲ್ಲಿಯೇ ಹಾಡು ಕೇಳಬಹುದು, ವೀಡಿಯೋ ನೋಡಬಹುದು ಅಥವ ಆಟಗಳನ್ನು ಆಡಬಹುದು.

ಈಗ ಏಎಮ್ ರೇಡಿಯೋ ಅಲ್ಲದೇ, ಎಪ್‌ಎಮ್‌ ರೇಡಿಯೋಗಳು ಸಾಕಷ್ಟು ತಲೆಎತ್ತಿವೆ. ಎಂಟತ್ತು ಕನ್ನಡ ಎಪ್ಎಮ್‌ ಚಾನೆಲ್‌ಗಳಿವೆ. ಆದರೇ ಇವಿನ್ನೂ ಸಣ್ಣಪುಟ್ಟ ನಗರಗಳನ್ನು ಹಾಗೂ ಹಳ್ಳಿಗಳನ್ನು ತಲುಪಿಲ್ಲ.

ಈಗ ಟೆಲಿವಿಷನ್‌ನಲ್ಲಿ  ಏನಾಗಿದೆ. ಕೆಲವೇ ವರ್ಷಗಳ ಹಿಂದೆ ಕೇವಲ ಮೇಲ್ವರ್ಗದ ಆಸ್ತಿ ಎಂಬಂತಿದ್ದ ಟೆಲಿವಿಷನ್ ಇಂದು ಮನೆಮನೆಗು ತಲುಪುತ್ತಿದೆ.ಅಲ್ಲದೇ ಕೇವಲ ಡಿಡಿ1, ಚಂದನ, ಉದಯ, ಉಷೆ ಎಂದು ಎರಡು ಅಥವಾ ಮೂರು ಚಾನೆಲ್ ಮಾತ್ರ ಪ್ರಸಾರವಾಗುತ್ತಿದ್ದ ಕಾಲ ಈಗ ಮಾಯವಾಗಿದೆ. ಈ ಟೀವೀ, ಟೀವೀ9, ಝೀಟೀವೀ, ಕನ್ನಡ ಕಸ್ತೂರಿ, ಸುವರ್ಣ ಹಾಗೂ ತೀರ ಇತ್ತೀಚಿನ ಸಮಯ ಹೀಗೇ ಹತ್ತಾರು ಕನ್ನಡ ಟೀವೀ ಚಾನೆಲ್‌ಗಳು ಈಗ ಪ್ರಸಾರವಾಗುತ್ತಿವೆ. ಸದ್ಯಕ್ಕೆ  ಅಡ್ವರ್ಟೈಸ್ ಪ್ರಕಟಿಸುವವರಿಗೇ ಸಮಸ್ಯೆ ಎದುರಾಗಿದೆ. ಜನ ಯಾವ ಚಾನೆಲ್ನಲ್ಲಿ ಅಡ್ವರ್ಟೈಸ್ ಬರುತ್ತೋ ಆಗ ತಕ್ಷಣ ಮತ್ತೊಂದು ಚಾನೆಲ್‌ಗೆ ಸ್ವಿಚ್ ಮಾಡುತ್ತಾರೆ. ಕೇವಲ ಎರಡು ನಿಮಿಷದ ಬಿಡುವಿಗೂ ಸಹ ನಮ್ಮ ವೀಕ್ಷಕರು ಸಿದ್ದರಿಲ್ಲ.

ಈಗ ಡಿಟಿಎಚ್ ಮೂಲಕ ನೇರಉಪಪಗ್ರಹ ಸಂಪರ್ಕ ಸಾದ್ಯವಾಗಿರುವುದರಿಂದ ಮತ್ತಷ್ಟು ಹೆಚ್ಚಿನ ಚಾನೆಲ್‌ಗಳೂ ಲಭ್ಯ. ಅದೂ ಉತ್ತಮ ಕ್ಷಾಲಿಟಿಯದ್ದು. ಇಷ್ಟಲ್ಲದೇ ಇಂಟರ್ನೆಟ್ ಇನ್ನೂ ಏನೇನು ಕ್ರಾಂತಿ ಮಾಡಲಿದೆಯೋ? ತಿಳಿಯದು.

ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಕ್ರಾಂತಿಗಳಾದ ಮೇಲೆ ನಮ್ಮ ಜನಜೀವನವೂ ಬದಲಾವಣೆಯಾಗದೇ ಉಳಿದಿರಲು ಹೇಗೆ ಸಾದ್ಯ? ನೀವೇ ಹೇಳಿ. ಮನರಂಜನೆಗೆ ಇಷ್ಟೆಲ್ಲಾ ಅವಕಾಶಗಳಿರುವಾಗ, ದುಡಿಮೆಯ ಕಡೆಗೆ ತಲೆಕೆಡಿಸಿಕೊಳ್ಳುವವರೂ ಕಡಿಮೆಯಾದರು..

ಮೊದಲೆಲ್ಲಾ ಅಂದಾಜು ಬೆಳಗ್ಗೆ 9 ರಿಂದ ಸಂಜೆ 5.30 ರ ತನಕ ಯಾವ ಬಿಡುವಿಲ್ಲದೆ ಮೈಬಗ್ಗಿಸಿ ದುಡಿಯುತ್ತಿದ್ದ ದಿನಗೂಲಿಗಳು ಇಂದು ತುಂಬಾ ಸ್ಮಾರ್ಟ್ ಆಗಿರುವವರಂತೆ ವರ್ತಿಸುತ್ತಾರೆ. ಬೆಳಗ್ಗೆ 9.30 ರಿಂದ ಮದ್ಯಾಹ್ನ 1 ಗಂಟೆ ಅಷ್ಟೇ ಅವರ ಕೆಲಸದ ವೇಳೆ. ಅಲ್ಲಿಗೆ ಆ ದಿನದ ಕೆಲಸ ಮುಗಿಯಿತು. ಇದು ಪ್ರತೀದಿನ ಅಲ್ಲ. ವಾರಕ್ಕೆ ಮೂರು ದಿನ ಮಾತ್ರ ಕೆಲಸ. ಉಳಿದ ದಿನಗಳಲ್ಲಿ ಇಷ್ಟೂ ಕೆಲಸ ಮಾಡುವುದಿಲ್ಲ.

2.1 ಮತ್ತೆ ಏನ್ಮಾಡ್ತಾರೆ?
ಮನರಂಜನೆ. ಉದಾಹರಣೆಗೆ ಟೀವೀ ನೋಡುವುದು, ಇಸ್ಪೀಟ್ ಆಡುವುದು, ಪಿಕ್ಚರ್ ನೋಡುವುದು. ಕಡೆಗೆ ಏನಿಲ್ಲವೆಂದರೆ ಗುಂಪುಕಟ್ಟಿಕೊಂಡು ಸಮಯದೂಡುತ್ತಾರೆ. ಅದೂ ದಿನಾ ತಡರಾತ್ರಿಯವರೆಗೆ. .

ಇಷ್ಟೆಲ್ಲದರ ನಡುವೆ ಇಂಟರ್ನೆಟ್ ಮಾಡಿರುವ ಕ್ರಾಂತಿ ಹೇಳತೀರದು. ಒಬ್ಬ ಕೂಲಿ ಕಾರ್ಮಿಕನೂ ಸಹ ಅಂತರ್ಜಾಲದ ಮೂಲಕ ಮುಂಬೈ ಶೇರುಮಾರುಕಟ್ಟೆಯ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಉತ್ಸಕನಾಗುತ್ತಾನೆಂದರೆ ನೀವೂ ನಂಬಲೇ ಬೇಕು.

ಈ ಅನುಕೂಲಗಳ ಮದ್ಯೆ ಮತ್ತೊಂದು ಅನುಕೂಲವೇನೆಂದರೆ ಈ ಬಡಜನರಿಗೆ ಈಗ ಬಿಪಿಓ ಕಾರ್ಡ್, ಯಶಸ್ವಿಸಿ ಕಾರ್ಡ್‌ ಮುಂತಾದ ಸರ್ಕಾರೀ ಸವಲತ್ತುಗಳು ಸಿಗುವುದರಿಂದ ಆಸ್ಪತ್ರೆಯ ಖರ್ಚೂ ಇಲ್ಲ, ಪಡಿತರ ಚೀಟಿ ಇರುವುದರಿಂದ ದಿನಬಳಕೆಯ ಅನೇಕ ವಸ್ತುಗಳು ತೀರಾ ಕಡಿಮೆಬೆಲೆಗೆ ಲಭ್ಯ. ಅಲ್ಲದೇ ದಿನಗೂಲಿಯೂ ಹೆಚ್ಚಾಗಿದೆ.

3 ತಾತ್ಪರ್ಯವೇನೆಂದರೆ, 
ವಿಜ್ಞಾನ ಹಾಗೂ ತಂತ್ರಜ್ಞಾನದ ದೂರಸಂಪರ್ಕ ವಿಭಾಗದ ಈ ಕ್ರಾಂತಿಗಳು, ಮನುಷ್ಯನ ಜೀವನಶೈಲಿಗೆ ಹಿಂದೆಂದಿಗಿಂತಲೂ ಅಧಿಕ ವೇಗವನ್ನು ಒದಗಿಸಿವೆ. ಅಂತರ್ಜಾಲದಲ್ಲಿ ಮಾಹಿತಿಯು ಕ್ಷಣಮಾತ್ರದಲ್ಲಿ ಪ್ರಪಂಚದ ಮೂಲೆಮೂಲೆಯನ್ನು ತಲುಪುತ್ತದೆ.  ಅಂತರ್ಜಾಲದ ಸೋಷಿಯಲ್‌ ನೆಟ್‌ವರ್ಕ್‌ಗಳ ಮೂಲಕ ಇಂದಿನ ಯುವಪೀಳಿಗೆ ತನ್ನ ಬಾಳಸಂಗಾತಿಯನ್ನು ಆಯ್ಕೆಮಾಡಿಕೊಳ್ಳಬಲ್ಲಂತಹ ಉದಾಹರಣೆಗಳು ನಮ್ಮ ಮುಂದಿವೆ. ದಶಕಗಳ ಹಿಂದೆ ಬೇರ್ಪಟ್ಟಿದ್ದ ತಂದೆ-ಮಕ್ಕಳು ಪೇಸ್ಬುಕ್‌ ಮೂಲಕ ಮತ್ತೆ ಒಂದಾದ ಉದಾಹರಣೆಗಳು ಸಿಗುತ್ತವೆ.  

ಈಗ ನಮ್ಮ ಹಳ್ಳಿಜನರು ಸಹ ಬದಲಾಗುತ್ತಿದ್ದಾರೆ. ಅವರು ಈ ಹಿಂದಿನಂತಿಲ್ಲ. ಮನರಂಜನೆಗೆ ಹೆಚ್ಚಿನ ಮಹತ್ವ ನೀಡಲಾರಂಬಿಸಿದ್ದಾರೆ. ಆದುದರಿಂದ ಅವರಿಗೆ ನಮ್ಮ ಮಾತೃ ಭಾಷೆಯ ಟೀವೀ ಕಾರ್ಯಕ್ರಮಗಳು,  ಚಲನಚಿತ್ರಗಳು ಸಾಲದಾಗಿದೆ. ತಮಿಳು, ತೆಲುಗು, ಹಿಂದಿ, ಇಂಗ್ಲೀಷ್ ಎಲ್ಲವೂ ಬೇಕಿದೆ. ಇಲ್ಲಿ ಮಾತೃ ಭಾಷೆ ಅವರಿಗೆ ಮತ್ತೊಂದು ನೆಪ ಮಾತ್ರ. ಅವರಿಗೆ ಮನರಂಜನೆಯೇ ಮುಖ್ಯ. ಅದು ಯಾವ ಭಾಷೆಯಾದರೇನಂತೆ. ಅದು ಅವರೀಗೂ ಬೇಕಿಲ್ಲ. ಬಿಡುವಿಲ್ಲದೇ ಟೀವೀ ವೀಕ್ಷಿಸುವವರಿಗೆ ತಮಿಳು, ತೆಲುಗು ಹಿಂದಿ, ಇಂಗ್ಲೀಷ್ ಅರ್ಥಮಾಡಿಕೊಳ್ಳುವುದೂ ಅಸಾದ್ಯವೇನಲ್ಲ ಬಿಡಿ.

ಈಗ ಅವರಿಗೆ ಮುಖ್ಯವಾಗಿ ಬೇಕಿರುವುದು ಮಾತೃ ಭಾಷೆಯ ಕಾರ್ಯಕ್ರಮಗಳಲ್ಲ. ನಿರಂತರವಾಗಿ ಮನರಂಜನೆ ಒದಗಿಸಬಲ್ಲ ಹೆಚ್ಚೆಚ್ಚು ಟೀವೀ ಚಾನೆಲ್ಗಳು. ಹಾಗಾಗಿಯೇ ಜನ ಇಂಗ್ಲೀಷ್‌ನ ಅವತಾರ್ , ಅನಕೊಂಡ, ಜುರಾಸಿಕ್ಪಾರ್ಕ್, ಇತ್ಯಾದಿ ಚಿತ್ರಗಳನ್ನೂ ವೀಕ್ಷಿಸುತ್ತಾರೆ. ಅಷ್ಟೇ ಅಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳನ್ನೂ ವೀಕ್ಷಿಸುತ್ತಾರೆ. ಇನ್ನೂ ಪೋಗೋ, ಕಾರ್ಟೂನ್‌ , ನ್ಯಾಶನಲ್ ಜಿಯೋ ಮುಂತಾದ ಚಾನಲ್‌ಗಳು ಸಿಕ್ಕರೆ ಅವನ್ನೂ ಅಲ್ಪ ಸ್ವಲ್ಪ ವೀಕ್ಷಿಸಿಯಾರು. 


ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಮಾತೃಭಾಷೆಗೆ ಕೇವಲ ಕಳೆದ ಒಂದು ಶತಮಾನದ ಆರಂಬದಿಂದೀಚೆಗೆ ಬೆಳಕಿಗೆ ಬಂದಿರುವ ಟೀವೀ ಹಾಗೂ ಚಲನಚಿತ್ರಗಳಿಗೆ ಡಬ್ಬಿಂಗ್‌ ಅವಕಾಶ ನೀಡಲಿಲ್ಲ ಎಂದ ಮಾತ್ರಕ್ಕೆ, ನಮ್ಮ ಭಾಷೆ ನಾಶವಾಗಲಿದೆ ಎನ್ನುವಂತೆ ಆತಂಕ ವ್ಯಕ್ತಪಡಿಸುವವರು ಸ್ವಲ್ಪ ಧೈರ್ಯದಿಂದ ವರ್ತಿಸಬೇಕಾಗಿದೆ. ಭಾಷೆ ಅಷ್ಟು ಕ್ಷುಲ್ಲಕವೂ ಅಲ್ಲ, ಕ್ಷಣಿಕವೂ ಅಲ್ಲ.

ಇಂದು ಅಂತರ್ಜಾಲದಲ್ಲಿಯೂ ಭಾಷೆ ಬೆಳೆಯುತ್ತಿದೆ. ಮುಂದೆ ಅಂತರ್ಜಾಲವು ತನ್ನ ಪರದಿಯನ್ನು ಮತ್ತಷ್ಟು ವಿಸ್ತರಿಸುವುದು ಅಕ್ಷರಶಹ ನಿಜ. ಆಗ ಕನ್ನಡವೂ ಮತ್ತಷ್ಟು ಹೆಚ್ಚೆಚ್ಚು ಬೆಳಕಿಗೆ ಬರುವುದೂ ಸತ್ಯ. ಇಷ್ಟಲ್ಲದೇ ಸಾಕಷ್ಟು ಸಾಹಿತಿಗಳು ನಮ್ಮೆದುರಿಗೆ ಇದ್ದಾರೆ. ಅಪಾರ ಜ್ಞಾನಸಂಪತ್ತು ನಮ್ಮ ಭಾಷೆಯಲ್ಲಿದೆ. ತಂತ್ರಜ್ಞಾನ ಬೆಳೆದಂತೆ ಭಾಷೆಗಳಿಗೂ ಸಾಕಷ್ಟು ಅನುಕೂಲಗಳು ಬರಲಿವೆ.

ಇರಲಿ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಎಂದರೆ ಇಂದು ಎದ್ದಿರುವ ಡಬ್ಬಿಂಗ್‌ ವಿವಾದಕ್ಕೆ ಇವೆಲ್ಲವೂ ಪಾಲುದಾರರು.

ಏನೇ ಆಗಲಿ ನಮ್ಮ ಮಾತೃ ಭಾಷೆ ಅನ್ನಕೊಡುವ ಭಾಷೆಆಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೌದು. ಆಗಾಗಬೇಕಾಗಿದೆ.

ನಮ್ಮ ಕೆಲವು ಸ್ನೇಹಿತರು ವಿವರಿಸುವಂತೆ ತಮಿಳು, ತೆಲುಗು ಮುಂತಾದ ರಾಜ್ಯಗಳಲ್ಲಿ ಅಥವಾ ಚೀನಾ, ಜಪಾನ್‌ ಇತ್ಯಾದಿ ದೇಶಗಳಲ್ಲಿ ಜನರು ಎಲ್ಲಾ ಕಾರ್ಯಕ್ರಮಗಳನ್ನೂ ಅವರದೇ ಮಾತೃಭಾಷೆಯಲ್ಲಿ ವೀಕ್ಷಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಏಕೆ ಸಾದ್ಯವಿಲ್ಲ? ಕನ್ನಡಕ್ಕೂ ಡಬ್ಬಿಂಗ್ ಬರಲಿ ಎಂದು ಮೊರೆಹೋಗಿದ್ದಾರೆ. ಇವರ ಕಾಳಜಿಯನ್ನು ನಾವು ಸ್ವಾಗತಿಸಲೇಬೇಕು. ಆದರೆ ಡಬ್ಬಿಂಗ್‌ಗೆ ಅವಕಾಶ ನೀಡದಿದ್ದರೆ, ನಮ್ಮ ಮಾತೃಭಾಷೆಯ ಅಸ್ಥಿತ್ವಕ್ಕೆ ದಕ್ಕೆಯುಂಟಾಗುತ್ತದೆ ಎಂದರೆ ಅದನ್ನು ಸ್ವೀಕರಿಸಲು ಸಾದ್ಯವಿಲ್ಲ. ಸ್ನೇಹಿತರೇ ನೀವೇ ಉತ್ತರಿಸಿ,

"ಅನ್ಯ ಭಾಷೆಯವರು ಪೋಗೋ, ಕಾರ್ಟೂನ್‌ ನೆಟ್‌ವರ್ಕ, ಡಿಸ್ಕವರಿ...ಇತ್ಯಾದಿ ಟೀವೀ ಕಾರ್ಯಕ್ರಮಗಳನ್ನ ಅಥವಾ ಅವತಾರ್, ಜು.ಪಾರ್ಕ್‌ನಂತಹ ಚಲನಚಿತ್ರಗಳನ್ನು ಬಾಲ್ಯದಲ್ಲಿ ತಮ್ಮ ಮಾತೃ ಭಾಷೆಯಲ್ಲಿಯೇ ವೀಕ್ಷಿಸಿದ್ದಾರೆ ಎಂಬುದನ್ನೇ ಮಾನದಂಡವಾಗಿಟ್ಟುಕೊಂಡು ಅವರಿಗೆ ಯಾರಾದರೂ  ಯಾವುದಾದರೂ ಉದ್ದೆಯನ್ನು ನೀಡಲು ಮುಂದೆ ಬಂದಿದ್ದಾರೆಯೇ? ಅಥವಾ ಬರುತ್ತಿದ್ದಾರೆಯೇ?. ಅಥವಾ ಅಂತಹವರಿಗೇನಾದರೂ ವಿದ್ಯಾಬ್ಯಾಸದಲ್ಲಿ, ಉದ್ಯೋಗದಲ್ಲಿ ರಿಸರ್ವೇಶನ್‌  ಸಿಕ್ಕುತ್ತದೆಯೇ ? ಅಥವಾ ಆದಾಯ ತೆರಿಗೆಯಲ್ಲಿ ಡಿಸ್ಕೌಂಟ್‌  ಇದೆಯಾ?"

ಮತ್ತೊಮ್ಮೆ ನಮ್ಮ ಸ್ನೇಹಿತರು ಹೀಗೆ ವಿವರಿಸುತ್ತಾರೆ. ಈ ಮೇಲಿನ ಕೆಲವು ಚಿತ್ರಗಳನ್ನು ಡಬ್‌ ಮಾಡಿಯೇ ಅನ್ಯ ಭಾಷಿಕರೂ ಸಾಕಷ್ಟು ಹಣ ಗಳಿಸಿದ್ದಾರೆ ಎಂದು. ಆದುದರಿಂದ ಆರ್ಥಿಕವಾಗಿಯೂ ಕೂಡ ಡಬ್ಬಿಂಗ್‌ನಿಂದ ಲಾಭಗಳಿಸಬಹುದು ಎನ್ನುತ್ತಾರೆ.
ಲಾಭಗಳಿಸಕ್ಕೆ ಹಾಲಿವುಡ್ಡಿನ ಚಿತ್ರಗಳನ್ನು ಡಬ್‌ ಮಾಡಲು ಅವಕಾಶ ಕೊಡುವುದೇನೋ ಸೂಕ್ತವೇ. ಮತ್ತಷ್ಟು ಸಂಸಾರಗಳ ಜೀವನಾಂಶಕ್ಕೆ ಇದು ಆದಾಯಮೂಲವಾಗಬಹುದು. ಅಲ್ಲದೇ ಇದಕ್ಕೆ ಬೇಕಾದ ತಂತ್ರಜ್ಞರಿಗೂ ಕೆಲಸ ಒದಗಿಸದಂತಾಗುಹುದು. ಆಗ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು ಎನ್ನುವ ಉದ್ದೇಶವೂ ಕೈಗೂಡುತ್ತದೆ. ಹೌದು. ತುಂಬಾ ಒಳ್ಳೆಯ ಆಲೋಚನೆ. ಇದೊಂದು ಉತ್ತಮ ಅವಕಾಶವೇ ಸರಿ.

ಆದರೆ ನನ್ನದೊಂದು ಸಣ್ಣ ಅನುಮಾನ,  ಈ ರೀತಿ ಮುಂದೆ ಅನುಕೂಲವಾಗಬಹುದು ಎಂದು ಡಬ್ಬಿಂಗ್‌ಗೆ ಅವಕಾಶಬೇಕು ಎಂದು ಒತ್ತಾಯಿಸುವರು, ಇದಾಗಲೇ ಸಾಕಷ್ಟು ಸಂಸಾರಗಳಿಗೆ ಅನ್ನ ನೀಡುತ್ತಿರುವ ಬಳ್ಳಾರಿ ಗಣಿಗಾರಿಕೆಯನ್ನು ಏಕೆ ಬೆಂಬಲಿಸಬಾರದು? ಅಥವಾ ಮುಂದೆ ಬೆಂಬಲಿಸುವರೇ? ನೋಡೀ . ಅಲ್ಲೂ ಸಹ ಬಹಳ ಜನಕ್ಕೆ ಅನ್ನ ಸಿಕ್ತಿದೆ. ಅವರಲ್ಲಿ ಕನ್ನಡಿಗರೂ ಇದ್ದಾರೆ. ಅವರ ಜೀವನಾದಾರಕ್ಕೆ ಮಾರ್ಗವಾಗಿದೆ ಈ ಗಣಿಗಾರಿಕೆ . ಈಗ ಇದ್ದಕ್ಕಿದ್ದಂತೆ ಗಣಿಗಾರಿಕೆ ನಿಲ್ಲಿಸಬೇಕು ಎಂದು ಒತ್ತಡಬರುತ್ತಿರುವ ಇದೇ ಸಂದರ್ಭದಲ್ಲಿ ಡಬ್ಬಿಂಗ್‌ ಪರವಾದಿಸುವವರು ಗಣಿಗಾರಿಕೆಗೆ ಏಕೆ ಸಪೋರ್ಟ್ ಮಾಡಬಾರದು? ಏಕೆ ಇನ್ನೂ ಸುಮ್ಮನಿದ್ದಾರೆ? ಈಗ ಅಲ್ಲಿ ಬೀದಿಗೆ ಬರಲಿರುವ ಸಂಸಾರಗಳ ಬಗ್ಗೆ ಇವರ ಅಭಿಪ್ರಾಯವೇನು? .

ನಮ್ಮ ಚಿತ್ರರಂಗ ಅಥವಾ ಟೀವೀ ಮಾದ್ಯಮದವರು ವಿದೇಶದ ಉತ್ಪನ್ನಗಳನ್ನ ಬಳಸಿಕೊಂಡು ಲಾಭಗಳಿಸಬಹುದಾದರೆ. ಇದೇ ನಮ್ಮ ಕರ್ನಾಟಕದಿಂದ ಕಚ್ಚಾವಸ್ತುವೊಂದನ್ನ ವಿದೇಶಕ್ಕೆ ರಫ್ತು ಮಾಡಲು ಸಂಪೂರ್ಣ ಸ್ವಾತಂತ್ರ ಇರಬೇಕಿತ್ತಲ್ಲವೇ? ಮತ್ಯಾಕೆ ಇಷ್ಟೆಲ್ಲಾ ವಿರೋದವಿದೆ. ನಾಳೇ ಡಬ್ಬಿಂಗ್‌ ನಿಷೇದಿಸಿ ಎಂದು ನೀವೇ ಪಾದಯಾತ್ರೆ ಹೊರಡಲ್ಲ ಅಂತ ನಿಮಗೆ ಖಾತ್ರಿ ಇದೆಯಾ?

ಈ ಹಿಂದಿನ ಪೋಸ್ಟ್‌ಗೆ ಒಬ್ಬ ಓದುಗರು ಈ ರೀತಿ ಪ್ರಶ್ನಿಸಿದ್ದರು, "ಹಾಲಿವುಡ್‌ನ ಹೀಮ್ಯಾನ್, ಸೂಪಾರ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌ ಇಂತಹ ಚಿತ್ರಗಳನ್ನು ವೀಕ್ಷಿಸಿ, ನಮ್ಮ ಮಕ್ಕಳು ಅದೇ ರೀತಿ ಹೀರೋಗಳಾಗಬೇಕೆಂದು ಬಯಸುತ್ತಾರೆ. ಆದರೆ ಈಗ ಅಂತಹ ಚಿತ್ರಗಳು ಕನ್ನಡದಲ್ಲಿ ಲಭ್ಯವಿಲ್ಲ, ಇದರಿಂದ ನಮ್ಮ ಮಕ್ಕಳು ವಂಚಿತರಾಗುತ್ತಿದ್ದಾರೆ. ನಾವೇನು ಮಾಡಬೇಕು?"
ಮಾನ್ಯರೇ ನಿಮ್ಮ ಮಕ್ಕಳು ಅಂತಹ ಹೀರೋಗಳಾದರೆ ನಮಗೂ ಸಂತೋಷವೇ. ಆದರೆ ಒಂದು ಮಾತು ತಿಳಿಸಲಿಚ್ಚಿಸುತ್ತೇನೆ. ಅಂತಹ ಸ್ಟಂಟ್‌ಗಳನ್ನು ಚಿತ್ರೀಕರಿಸುವ ಮುನ್ನ ಅವರು ಸಾಕಷ್ಟು ಪೂರ್ವಸಿದ್ದತೆಗಳನ್ನು ಮಾಡಿಕೊಂಡಿರುತ್ತಾರೆ, ಅಲ್ಲದೇ ಅದಕ್ಕೆಂದೇ ಇರುವ ವಿಶೇಷ ಸಾಹಸಿಗರ ತಂಡದಿಂದ ಟ್ರೈನಿಂಗ್‌ ತೆಗೆದುಕೊಂಡಿರುತ್ತಾರೆ. ಈ ಎಲ್ಲಾ ಸಿದ್ದತೆಗಳ ನಂತರವೂ ಅನೇಕ ಬಾರಿ ನಟರು ಪ್ರಾಣಾಂತಿಕ ಅಪಾಯಗಳನ್ನುಎದುರಿಸಿದ್ದಿದೆ. ಆದುದರಿಂದ ನಿಮ್ಮ ಮಕ್ಕಳಿಗೆ ಇಂತಹ ಚಿತ್ರಗಳನ್ನು ತೋರಿಸುವ ಮುನ್ನ ಅವರಿಗೆ ಮನವರಿಕೆ ಮಾಡಿಕೊಡಬೇಕಾದದ್ದು ನಿಮ್ಮ ಕರ್ತವ್ಯ. ನೀವೇ ಅವರಿಗೆ ಹುರಿದುಂಬಿಸುವವರಂತೆ ಕಾಣುತ್ತಿದೆ. ಸ್ವಲ್ಪ ಹುಷಾರು. ಮುಂಜಾಗೃತಕ್ರಮಗಳ ಕಡೆಗೂ ಹೆಚ್ಚರವಹಿಸಿ.

ಸಾರಾಂಶವೇನೆಂದರೆ,
1. ಡಬ್ಬಿಂಗ್‌ಗೆ ಅವಕಾಶಕೊಟ್ಟರೆ ನಮ್ಮ ಸಂಸ್ಕೃತಿಗೆ ದಕ್ಕೆ ಬರುತ್ತೆ ಹಾಗೂ
2. ಡಬ್ಬಿಂಗ್‌ ಇಲ್ಲವಾದರೆ ನಮ್ಮ ಭಾಷೆ ಅವನತಿಯಾಗುತ್ತದೆ
ಮೇಲಿನ ಎರಡೂ ಹೇಳಿಕೆಗಳು ಸಹ ಅವಾಸ್ತವ.
 
ಕಡೆಯದಾಗಿ ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಕನ್ನಡಕ್ಕೆ ಡಬ್ಬಿಂಗ್‌ ಪರವಾಗಿ ಅಥವಾ ವಿರೋದವಾಗಿ ವಾದಮಾಡಲಿಕ್ಕೆಂದು ಈ ಲೇಖನವನ್ನು ಪ್ರಕಟಿಸಿದ್ದಲ್ಲ. ಇದು ಕೇವಲ ಒಂದು ವಿಶ್ಲೇಷಣೆ. ಆದರೂ ಈ ಲೇಖನವೂ ಓದುಗರ ಕಾಮೆಂಟ್‌ಗಳನ್ನು ಸ್ವಾಗತಿಸುತ್ತದೆ.

ಚಿತ್ರಗಳು ಅಂತರ್ಜಾಲ ಕೃಪೆ.

ಬುಧವಾರ, ಆಗಸ್ಟ್ 11, 2010

ಪೋಗೋ ಕನ್ನಡ ಡಬ್ಬಿಂಗು ಹೋಗೋ

ಕನ್ನಡಕ್ಕೆ ಡಬ್ಬಿಂಗು ಬರಲಿ ಎನ್ನುವುದು ಅಂತರ್ಜಾಲದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಅಲ್ಲಿ ಇಲ್ಲಿ ಚರ್ಚೆಗಳು ನಡೆಯುತ್ತಿವೆ. ಗ್ರಾಹಕರಲ್ಲಿ ಅನೇಕರು ಡಬ್ಬಿಂಗ್ ಪರವಾಗಿದ್ದಾರೆ. ಆದರೆ ಚಿತ್ರರಂಗದಲ್ಲೆ ಅನೇಕ ತಂತ್ರಜ್ಞರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ, ಆಗುತ್ತಿದೆ.

ಈ ಕೆಳಗಿನ ಪ್ಯಾರಾದಲ್ಲಿ ಡಬ್ಬಿಂಗ್‌ ಹಾಗೂ ರೀಮೇಕ್‌ ಚಿತ್ರಗಳಿಗಿರುವ ವ್ಯತ್ಯಾಸವನ್ನು ವಿವರಿಸಲಾಗಿದೆ. ಆದುದರಿಂದ ಇದು ಈಗಾಗಲೇ ನಿಮಗೆ ತಿಳಿದಿದ್ದರೆ ಈ ಪ್ಯಾರಾವನ್ನೂ ಹಾರಿಸಿ, ಮುಂದಿನ ಪ್ಯಾರಾದಿಂದ ಮುಂದುವರಿಸಿ.
ಮೊದಲಿಗೆ ಡಬ್ಬಿಂಗ್ ಎಂದರೇ...ಅನ್ಯಭಾಷೆಯ ಒಂದು ದೃಶ್ಯಾವಳಿಗೆ ತಮ್ಮದೇ ಭಾಷೆಯನ್ನು ಅಳವಡಿಸುವುದು. ಆದರೆ ಮೂಲ ದೃಶ್ಯದ ಕಥೆಯಾಗಲಿ ಅಥವಾ ಪಾತ್ರಗಳಾಗಲಿ ಯಾವುದೂ ಬದಲಾಗುವುದಿಲ್ಲ.  ಉದಾಹರಣೆಗೆ ಒಂದು ಆಂಗ್ಲ ಭಾಷೆಯ ಚಿತ್ರದ ಪಾತ್ರಗಳು ಸಂಪೂರ್ಣ ಕನ್ನಡದಲ್ಲಿಯೇ ಮಾತಾಡುತ್ತಿರುವಂತೆ ಕೇವಲ ಧ್ವನಿಯನ್ನು ಅಳವಡಿಸಲಾಗುತ್ತದೆ. ಮೂಲ ಕಥೆಗೆ ತಕ್ಕಂತೆ ಸಂಭಾಷಣೆಯನ್ನೂ ಸಹ ನಮ್ಮ ಭಾಷೆಗೆ ಅನುವಾಧಿಸಲಾಗಿರುತ್ತದೆ. ರೀಮೇಕ್‌ ಹಾಗೂ ಡಬ್ಬಿಂಗ್‌ ನಡುವೆ ಇರುವ ವ್ಯತ್ಯಾಸ ಎಂದರೆ ರೀಮೇಕ್‌ ಚಿತ್ರದಲ್ಲಿ ಸಂಪೂರ್ಣ ಚಿತ್ರವನ್ನು ಮರುಸೃಷ್ಟಿಸಲಾಗುತ್ತದೆ. ಕೇವಲ ಕಥೆ (ಕೆಲವೊಮ್ಮೆ ಸಂಗೀತ ಹಾಗೂ ಸಾಹಿತ್ಯ)ಮಾತ್ರ ಮೂಲಚಿತ್ರದಿಂದ ಪಡೆದುಕೊಂಡು ನಂತರ, ಪಾತ್ರಗಳು, ಸಂಭಾಷಣೆ, ಚಿತ್ರೀಕರಣದ ಸ್ಥಳ, ಭಾಷೆ, ಹೀಗೇ ಎಲ್ಲವನ್ನೂ ಹೊಸದಾಗಿ ಆಯಾ ನೇಟಿವಿಟಿಗೆ ತಕ್ಕಂತೆ ಮರು ನಿರ್ಮಿಸಬೇಕಾಗುತ್ತದೆ ಅಥವಾ ಶೂಟಿಸಬೇಕಾಗುತ್ತದೆ.  ಆದರೆ ಡಬ್ಬಿಂಗ್‌ನಲ್ಲಿ ಇಷ್ಟೆಲ್ಲಾ ರಗಳೆ ಇಲ್ಲ. ಕೇವಲ ಸಂಭಾಷಣೆಯನ್ನು ಅನುವಾಧಿಸಿ ಅದನ್ನು ಮೂಲ ಚಿತ್ರಕ್ಕೆ ಅಳವಡಿಸಿದರೆ ಆಯಿತು.

ಈಗ ಕೆಲವು ಕನ್ನಡಪರ ಆಸಕ್ತಿಯುಳ್ಳವರು ಕನ್ನಡ ಡಬ್ಬಿಂಗ್‌ ಬೇಕೇ ಬೇಕು ಎಂದು ಒತ್ತಾಸೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಇವರು ಮುಂದಿಡುತ್ತಿರುವ ಕೆಲವು ಮುಖ್ಯ ಕಾರಣಗಳು ಈ ರೀತಿ ಬರುತ್ತವೆ.

<<
1. ಬೆಂಗಳೂರಿನ ಇಂಗ್ಲಿಷ್ ಮೀಡಿಯಂ ವಾತಾವರಣದಲ್ಲಿ ಬೆಳೆಯೋ ಮಕ್ಕಳಿಗೆ ಪೊಗೊ, ಕಾರ್ಟೂನ್ ನೆಟವರ್ಕ್, ಡಿಸ್ನಿ ಚಾನಲ್ ನಲ್ಲಿ ಬರುವ ಕಾರ್ಟೂನ್ ಕಾರ್ಯಕ್ರಮವನ್ನು ಇಂಗ್ಲಿಷ್ ಅಲ್ಲಿ ನೋಡಿ ಆನಂದಿಸಬಹುದು. ಆದರೆ ಅದೇ, ಕರ್ನಾಟಕದ ಚಿಕ್ಕ ಚಿಕ್ಕ ಊರಲ್ಲಿರುವ ಕನ್ನಡದ ಕಂದಮ್ಮಗಳು ಮಾತ್ರ ಅರ್ಥ ಆಗದೇ ಇದ್ರೂ ಇಂಗ್ಲಿಷ್, ಹಿಂದಿಯಲ್ಲೇ ನೋಡಬೇಕು.
.
.
.
.
2.೯೦೦ ಕೋಟಿಯ ಅವತಾರ್ ಸಿನೆಮಾ ಕನ್ನಡದಲ್ಲಿ ಮಾಡಲು ಎಂದಿಗಾದರೂ ಸಾಧ್ಯವೇ? ಹಾಗಿದ್ದಾಗ ಅದನ್ನು ನೋಡಬೇಕು ಅನ್ನುವ ಕನ್ನಡಿಗರು ಪರ ಭಾಷೆಯಲ್ಲೇ ನೋಡುತ್ತಾರೆ. ಅಲ್ಲಿಗೆ ಕನ್ನಡ ಎಲ್ಲೂ ಸಲ್ಲದ ನುಡಿಯಾಗಿ ಉಳಿಯುತ್ತಿದೆ. ನಮಗೆ ನಮ್ಮ ಉದ್ಯಮವೂ ಬೇಕು, ನಮ್ಮ ಭಾಷೆಯೂ ಬೇಕು.
.
.
.

3.ನನ್ನ ಮಕ್ಕಳು ಕನ್ನಡದಲ್ಲಿ ಕಾರ್ಟೂನ್ ಕಾರ್ಯಕ್ರಮಗಳು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಾರ್ಟೂನ್ ನೆಟ್ವರ್ಕ್,ಡಿಸ್ಕವರಿ ವಾಹಿನಿಗಳಲ್ಲಿ ನೋಡಬಯಸಿದರೆ, ಅದು ಕನ್ನಡದಲ್ಲಿಲದ ಕಾರಣ ಇಂಗ್ಲಿಷ್ ನಲ್ಲಿಯೇ ನೋಡಬೇಕಿರುವ ಅನಿವಾರ್ಯತೆ ಇವತ್ತಿನ ಮಟ್ಟಿಗೆ ಇದೆ.
>>

ಈಗ ಈ ಹೇಳಿಕೆಗಳನ್ನು ಸ್ವಲ್ಪ ವಿಮರ್ಶಿಸೊಣ.
ಇಂದು ನಮ್ಮ ಕರ್ನಾಟಕದಲ್ಲಿ ಆಂಗ್ಲಭಾಷೆಯ ಬೆಳವಣಿಗೆ ಎಷ್ಟು ವೇಗದಲ್ಲಿದೆ ಎಂದರೆ ಮೇಲೆ ತಿಳಿಸಿರುವ ಪೋಗೋ, ಕಾರ್ಟೂನ್‌ ನೆಟ್‌ವರ್ಕ್‌ ಚಾನೆಲ್‌ಗಳು ಅಥವಾ ಅವತಾರ್, ಜುರಾಸಿಕ್‌ ಪಾರ್ಕ್‌ ನಂತಹ ಚಲನಚಿತ್ರಗಳು ನಮ್ಮ ಗ್ರಾಮೀಣ ಪ್ರದೇಶದ ಚಿಕ್ಕ ಚಿಕ್ಕ ಊರುಗಳಲ್ಲಿರುವ ಮಕ್ಕಳನ್ನು ತಲುಪಲು ಇನ್ನೂ ಕೆಲವು ವರ್‍ಷಗಳು ಬೇಕಾಗಬಹುದು. ಆದರೆ ಈಗಾಗಲೇ ಎಲ್ಲಾಕಡೆ ಆಂಗ್ಲಮಾದ್ಯಮದ ಶಾಲೆಗಳು ತಲೆಯೆತ್ತಿವೆ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವಲ್ಲಿ ಈ ಮಕ್ಕಳಿಗೆ ಖಂಡಿತ ಕೇವಲ ಭಾಷೆ ಅಡ್ಡಿಪಡಿಸುವುದಿಲ್ಲ. ಬದಲಾಗಿ ಈ ಮಕ್ಕಳ ಭಾಷಾಜ್ಞಾನವನ್ನು ಮತ್ತಷ್ಟು ಉನ್ನತಗೊಳಿಸುತ್ತದೆ. ಇನ್ನು ಯುವಕರು ಅಥವಾ ಮುದುಕರ ವಿಷಯವನ್ನು ಮೇಲಿನ ಕನ್ನಡಪರ ಹೋರಾಟಗಾರರು ತಲೆಕೆಡಿಸಿಕೊಂಡಿಲ್ಲ. ಸೋ, ಅದರ ಬಗ್ಗೆ ಚರ್ಚೆ ನಮಗೂ ಬೇಡ.

ಇಷ್ಟು ಹೇಳಿ ಮುಗಿಸಿದರೆ ಸಾಕಾಗುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಮರ್ಶಿಸೋಣ. ಏನೆಂದರೆ ಈಗ ನಮ್ಮ ಮಕ್ಕಳಿಗೆ ಆಂಗ್ಲಭಾಷೆಯ ಗಂಧಗಾಳಿಯೂ ಇಲ್ಲ. ಎಂದು ಭಾವಿಸಿಕೊಳ್ಳೋಣ. ಆಗಲೂ ಹೇಗೇ ಕನ್ನಡ ಡಬ್ಬಿಂಗ್‌ ಅನಿವಾರ್ಯವಲ್ಲ ಎಂಬುದನ್ನು ಈಗ ನೋಡೋಣ.

ಪೋಗೋ ಚಾನೆಲ್‌ಅನ್ನೇ ಉದಾಹರಣೆಗೆ ತೆಗೆದು ಕೊಳ್ಳೋಣ. ಇಲ್ಲಿ ಭಿತ್ತರಿಸುವ ಒಂದು ಬಹು ಜನಪ್ರಿಯ ಕಾರ್ಯಕ್ರಮ ಮಿ. ಬೀನ್. ಈ ಕಾರ್ಯಕ್ರಮ ಹೇಗಿದೆ ಎಂದರೆ ಹಿಂದಿನ ದಶಕದಲ್ಲಿ ಬಹು ಜನಪ್ರಿಯವಾಗಿದ್ದ ಚಾರ್ಲಿಚಾಂಪ್ಲಿನ್ ಕಾರ್ಯಕ್ರಮದ ಹಾಗೇ ಇದೆ. ಎರಡರಲ್ಲೂ ಹಾಸ್ಯವೇ ಪ್ರಧಾನ. ಹಾಗೂ ಎರಡೂ ಮೂಖಚಿತ್ರಗಳು. ಇಲ್ಲಿ ಕಥಾನಾಯಕನು ಮಾತಾಡದೇ ಕೇವಲ ನಟನೆಯಿಂದಷ್ಟೇ ವೀಕ್ಷಕರನ್ನು ಮನರಂಜಿಸುತ್ತಾನೆ.
ಸೋ, ಇಲ್ಲಿ ಆಂಗ್ಲವೂ ಇಲ್ಲ, ಹಿಂದಿಯೂ ಇಲ್ಲ. ಇನ್ನು ಕನ್ನಡಮಕ್ಕಳಿಗೆ ಅನ್ಯಾಯವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇದೇ ಚಾನೆಲ್‌ನಲ್ಲಿ ಬರುವ ಮತ್ತೊಂದು ಕಾರ್ಯಕ್ರಮವನ್ನು ಗಮನಿಸೋಣ. ಅದೆಂದರೆ ಟಾಮ್‌ ಅಂಡ್‌ ಜರ್ರಿ. ಓಹ್. ಈ ಕಾರ್ಯಕ್ರಮವಂತೂ ವ್ಯಯಕ್ತಿಕವಾಗಿ ನನಗೆ ಬಲು ಅಚ್ಚುಮೆಚ್ಚು. ಇಲ್ಲಿ ಕೂಡ ಅಷ್ಟೇ, ಇಲ್ಲಿ ಬರುವ ಪ್ರಮುಖ ಪಾತ್ರಗಳೇ ಎರಡು ಮೂಖ ಪ್ರಾಣಿಗಳು. ಒಂದು ಬೆಕ್ಕು ಮತ್ತೊಂದು ಇಲಿ. ಕಾರ್ಯಕ್ರಮದಲ್ಲೂ ಸಹ ಈ ಪಾತ್ರಗಳು ಮೂಖವೇ. ಇಲ್ಲಿ ಅವುಗಳ ನಡುವಿನ ಚಿನ್ನಾಟ, ಜಗಳ, ಕಿತ್ತಾಟವೇ ಕಥಾವಸ್ತು. ಅಪರೂಪಕ್ಕೊಮ್ಮೆ ಮನೆಯೊಡತಿಯ ಅರಚಾಟ ಕೇಳಬಹುದು. ಆದರೆ ಆಕೆಯ ಮಾತು ಸ್ಪಷ್ಟವಾಗಿ ಆಂಗ್ಲದಲ್ಲಿಯೂ ಇರುವುದಿಲ್ಲ. ಹಾಗಾಗಿ, ಇಲ್ಲಿಯೂ ಕನ್ನಡ ಡಬ್ಬಿಂಗ್‌ ಮಾಡುವ ಪ್ರಶ್ನೇಯೇ ಹೇಳುವುದಿಲ್ಲ.
ವಾಸ್ತವದಲ್ಲಿ ಈ ಮೇಲೆ ತಿಳಿಸಿದ ಎರಡೂ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ಬಿಂಗ್‌ ಮಾಡುವುದಕ್ಕೆ ಅವಕಾಶವೂ ಇಲ್ಲ. ಏಕೆಂದರೆ ಭಾಷೆಯ ವಿಷಯದಲ್ಲಿ ಈ ಎರಡೂ ಕಾರ್ಯಕ್ರಮಗಳು ತಟಸ್ಥ.

ಈಗ ಪೋಗೋ ಚಾನಲ್‌ನಲ್ಲಿ ಪ್ರಸಾರವಾಗುವ ಮತ್ತೊಂದು ಜನಪ್ರಿಯ ಕಾರ್ಯಕ್ರಮವನ್ನು ವಿಮರ್ಶಿಸೋಣ. ಅಲ್ಲಿ ಬರುವ ಕೆಲವು ಮನರಂಜನಾತ್ಮಕ ಆಟಗಳು. ವ್ಹಾವ್. ಈ ಆಟಗಳನ್ನು ನೋಡಿದರೇ ನಮ್ಮ ದೇವೇಗೌಡರ ಮುಖದಲ್ಲಿಯೂ ನಗು ಚಿಮ್ಮಬಹುದು. ಏಕೆಂದರೆ ಈ ಆಟಗಳ ಪರಿಕಲ್ಪನೆಯೇ ಆ ರೀತಿ ಇದೆ. ಈ ಆಟದಲ್ಲಿಯೂ ಸಹ ಎಲ್ಲಿಯೂ ಭಾಷೆಯು ನಮಗೆ ಅಡ್ಡಿಯಾಗಲು ಸಾಧ್ಯವೇ ಇಲ್ಲ.

ಇನ್ನು ಇದೇ ಫೊಗೋ ಚಾನೆಲ್‌ನಲ್ಲಿ ಬರುವ ಮತ್ತೊಂದು ಜನಪ್ರಿಯ ಕಾರ್ಯಕ್ರಮವೆಂದರೆ ಕೆಲವು ಆಟಿಕೆಗಳನ್ನ ಅಥವಾ ಕೆಲವು ಸಣ್ಣಪುಟ್ಟ ವ್ಯೆಜ್ಞಾನಿಕ ಸಾಧನಗಳನ್ನು ಅಥವಾ ಯಂತ್ರಗಳನ್ನು ತಯಾರಿಸುವುದನ್ನು ತೋರಿಸಿಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ತಯಾರಿಕಾ ವಿಧಾನವನ್ನು ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿ ವಿವರಿಸುವುದು ಸತ್ಯ. ಹಾಗೆಂದ ಮಾತ್ರಕ್ಕೆ ಈ ಭಾಷೆಗಳೇ ಅಲ್ಲಿ ಜೀವಾಳವಲ್ಲ. ಏಕೆಂದರೆ ವಿಧಾನವನ್ನೂ ಸಹ ಟೀವೀ ಪರದೆಯ ಮೇಲೆ ಆತ ಸ್ಪಷ್ಟವಾಗಿ ವಿವರಿಸುತ್ತಾನಲ್ಲದೇ. ಮೂರ್ನಾಲ್ಕು ಬಾರಿ ರೀಪ್ಲೇ ಕೂಡ ಇರುತ್ತದೆ. ಎಲ್ಲಾ ಪರಿಕರಗಳನ್ನೂ ಆತ ಸ್ಪಷ್ಟವಾಗಿ ಪರದೆಯ ಮೇಲೆ ತೋರಿಸುತ್ತಾನೆ. ಉದಾಹರಣೆಗೆ ಬೆಂಕಿ ಪೆಟ್ಟಿಗೆಯನ್ನು ಬಳಸಿ ಏನನ್ನಾದರೂ ತಯಾರಿಸುತ್ತಿದ್ದರೆ ಆತ ಬೆಂಕಿಪೆಟ್ಟಿಗೆಯನ್ನೇ ತಂದು ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನೂ ಸಹ ಅಲ್ಲಿಯೇ ಮಾಡಿ ತೋರಿಸುತ್ತಿತ್ತಾನೆ.
ಹಾಗಾಗಿ ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಹ ಭಾಷೆಯ ಪಾತ್ರ ತೀರ ಕಡಿಮೆ ಅಥವಾ ನಗಣ್ಯವೆಂದೆ ಹೇಳಬಹುದು.


ಇನ್ನು ಡಿಸ್ಕವರಿ ಚಾನೆಲ್‌ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು. ನಿಜ ಹೇಳಬೇಕೆಂದರೆ ಇದೊಂದು ಕೇವಲ ಮಕ್ಕಳಿಗಾಗಿ ನಿರ್ಮಿಸಿರುವ ಚಾನೆಲ್‌ ಅಲ್ಲ. ಇಲ್ಲಿ ಯುವಕರು ಹಾಗೂ ವೃದ್ದರು ನೋಡಿದರೂ ಮೈನವಿರೇಳುವಂತಿರುವಂತ್ತಹ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಅನೇಕ ಭಾರಿ ಹೇಗಾಗುತ್ತದೆ ಎಂದರೆ ಮಕ್ಕಳಿರುವ ಪೋಷಕರು ತಮ್ಮ ಮಕ್ಕಳನ್ನು ಮಲಗಿಸಿ ನಂತರ ರಾತ್ರಿ ಅವರು ಮತ್ತೆ ನಿದ್ದೆಯಿಂದ ಎಚ್ಚರವಾದಾರು ಎಂಬುವ ಭಯದಿಂದ ಟೀವೀ ವಾಲ್ಯೂಮ್‌ ಮ್ಯೂಟ್‌ ಮಾಡಿಕೊಂಡಾದರೂ ಸಹ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಅಂದರೆ ಇಲ್ಲಿ ಭಾಷೆ ಅಥವಾ ಕಾರ್ಯಕ್ರಮದ ಸಂಭಾಷಣೆಗಿಂತ ಅಲ್ಲಿ ಪ್ರಸಾರವಾಗುವ ದೃಶ್ಯಗಳೇ ನಮ್ಮನ್ನ ಸೆಳೆಯುತ್ತವೆ. ಹಾಗಾಗಿ ಕನ್ನಡಮಕ್ಕಳು ಭಾಷೆಯ ಜ್ಞಾನವಿಲ್ಲ ಎನ್ನುವ ಕೊರಗು ಇಲ್ಲಿಯೂ ಕಾಣಿಸುವುದಿಲ್ಲ.

ಇನ್ನು ಮುಂದಿನ ವಿಶ್ಲೇಷಣೆ ಚಲನಚಿತ್ರಗಳತ್ತ. ಅವತಾರ್‌ ಚಿತ್ರವನ್ನೇ ತೆಗೆದುಕೊಳ್ಳೋಣ. ಈ ಚಿತ್ರದ ಶೇ.60ರಷ್ಟು ಭಾಗ ಕೇವಲ ಕಂಪ್ಯೂಟರ್ ಗ್ರಾಫಿಕ್ಸ್. ಇನ್ನು ಇದರ ಕಥೆಯೋ ಇನ್ನೂ ಶತಮಾನದ ಆಚೆಗಿನ ಭವಿಷ್ಯಕ್ಕೆ ಸಂಭಂದಿಸಿದ್ದು. ಈ ಚಿತ್ರವನ್ನು ಅರ್ಥಮಾಡಿಕೊಳ್ಳಲು ಕೇವಲ ಭಾಷೆ ಬಂದರಷ್ಟೇ ಸಾಲದು. ಜೊತೆ ಜೊತೆಗೆ ವಿಜ್ಞಾನ ಹಾಗೂ ತಂತ್ರಜ್ಞಾದ ಬೆಳವಣಿಗೆಯಲ್ಲಿಯೂ ಸಹ ತಕ್ಕಮಟ್ಟಿನ ಜ್ಞಾನ ಅತೀ ಅವಶ್ಯಕ. ಈ ಚಿತ್ರದ ಚಿತ್ರಕಥೆಯನ್ನು ಸಿದ್ದಪಡಿಸಿಟ್ಟುಕೊಂಡು ಸುಮಾರು ಹತ್ತು ಹನ್ನೆರಡು ವರ್ಷ ನಿರ್ದೇಶಕರು ಕಾಯುತ್ತಾ ಕೂತಿದ್ದರಂತೆ. ಏಕೆಂದರೆ ಚಿತ್ರದ ನಿರ್ಮಾಣಕ್ಕೆ ಅವಶ್ಯಕವಾಗಿದ್ದ ತಂತ್ರಜ್ಞಾನವೇ ಇನ್ನೂ ಲಭ್ಯವಿರಲಿಲ್ಲವಂತೆ. 900 ಕೋಟಿ ವ್ಯಯಿಸಿ ಕನ್ನಡದಲ್ಲಿ ಇದೇ ಚಿತ್ರವನ್ನು ನಿರ್ಮಿಸುವುದು ವಾಸ್ತವದಲ್ಲಿ ಸಾದ್ಯವಿಲ್ಲದಿರಬಹುದು ಒಪ್ಪಿಕೊಳ್ಳೋಣ. ಹಾಗೆಂದ ಮಾತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನಗಳು ನಡೆದೇ ಇಲ್ಲವೇ. ಇಲ್ಲ ಎಂದು ಹೇಳಿ, ದಯವಿಟ್ಟು ಕನ್ನಡದಲ್ಲಿರುವ ಕೆಲವರಾದರೂ ಕ್ರಿಯಾತ್ಮಕ ನಿರ್ದೇಶಕರನ್ನು ಅವಹೇಳನ ಮಾಡಬೇಡಿ.

2001ರಲ್ಲಿ ತೆರೆಕಂಡ ಉಪೇಂದ್ರ ಹಾಗೂ ಅನಂತನಾಗ್ ಅಭಿನಯದ ಕನ್ನಡದ ಹಾಲಿವುಡ್‌ ಚಿತ್ರ ನಿಮಗೆ ನೆನಪಿಲ್ಲವೇ? ಅದರಲ್ಲಿಯೂ ವಿಜ್ಞಾನ ಹಾಗೂ ತಂತ್ರಜ್ಞಾನ ಹೇಗೆಲ್ಲ ಅಭಿವೃದ್ದಿ ಪಡಿಸಬಹುದು ಎನ್ನುವ ಸಂದೇಶ ಇರಲಿಲ್ಲವೇ? ಆದರೂ ಆ ಚಿತ್ರ ಸೋತಿತು. ಕಾರಣ ಏನಿರ ಬಹುದು ಆಲೋಚಿಸಿದ್ದೀರ? ಅಷ್ಟೇ ಏಕೆ ಸದ್ಯಕ್ಕೆ ಭಾರೀ ಪ್ರಚಾರದಲ್ಲಿರುವ ಬಹುಕೋಟಿ ವೆಚ್ಚದ ನಮ್ಮ ರಜನಿಕಾಂತ್‌ ಅಭಿನಯದ ತಮಿಳಿನ ಎಂಡ್ರಿಯನ್ ಚಿತ್ರದ ಮೂಲ ಕಥೆಯೂ ಸಹ ಇದೇ ಹಾಲಿವುಡ್‌ ಚಿತ್ರದ್ದು ಎನ್ನುವ ಸುದ್ದಿ ಗುಲ್ಲೆದ್ದಿದೆ. ಹೌದಲ್ಲವೇ?

ಇದಕ್ಕೆ ಮತ್ತಷ್ಟು ಉದಾಹರಣೆ ನೀಡಬಹುದು, ರಮೇಶ್‌ ಅರವಿಂದ್‌ ಅಭಿನಯದ ಪ್ರತ್ಯರ್ಥ ಹಾಗೂ ಡೈನಮಿಕ್ ಹೀರೂ ದೇವರಾಜ್‌ ಅಭಿನಯದ ಮಾನವ 2020. ಚಿತ್ರಗಳನ್ನು ನೀವು ನೋಡಿಲ್ಲವೇ? ಈ ಚಿತ್ರಗಳೂ ಸಹ ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದ್ದವಲ್ಲವೇ? ಆದರೂ ಈ ಚಿತ್ರಗಳು ಯಶಸ್ಸು ಗಳಿಸಲಿಲ್ಲ. ಅಥವಾ ಜನರು ಈ ಚಿತ್ರಗಳತ್ತ ಒಲವು ತೋರಲಿಲ್ಲ.

ಇನ್ನು ಅಣ್ಣಾವ್ರು ಅಭಿನಯದ ಜೇಮ್ಸ್ ಬಾಂಡ್‌ ಶೈಲಿಯ ಆಪರೇಶನ್ ಡೈಮಂಡ್‌ ರಾಕೆಟ್, ಸಿ, ಐ, ಡಿ 999 ಈ ಸರಣಿಯ ಚಿತ್ರಗಳು ಅಂದಿನ ಕಾಲಕ್ಕೆ ನಮ್ಮ ನಿರ್ದೇಶಕರು ತೋರಿಸಿದ ಧೈರ್ಯವಲ್ಲವೇ? ಆದರೆ ಒಮ್ಮೆ ರಾಜ್‌ಕುಮಾರ್ ಅವರೇ ಒಂದು ತುಂಬಿದ ಸಭೆಯಲ್ಲಿ ತಾವು ಆ ಜೇಮ್ಸ್ ಭಾಂಡ್‌ ಶೈಲಿಯ ಚಿತ್ರಗಳನ್ನು ಒಪ್ಪಿಕೊಳ್ಳಬಾರದಿತ್ತು ಎಂದಿದ್ದರು.

ನಮ್ಮ ಚಿತ್ರಪ್ರೇಮಿಗಳು ಈ ಮಾದರಿಯ ಚಿತ್ರಗಳನ್ನು ಅದೇಕೋ ಆಲಂಗಿಸಿ ಬರಮಾಡಿಕೊಳ್ಳಲಿಲ್ಲ. ಇದು ಕೇವಲ ಕಾಲ್ಪನಿಕ ಎಂದೆನೆಸಿ ಸತ್ಯಾಂಶಕ್ಕೆ ದೂರದಾದದ್ದು ಎಂದೆನಿಸಿ ನಮ್ಮ ಜನಗಳು ಈ ಮಾದರಿಯ ಚಿತ್ರಗಳತ್ತ ಒಲವು ತೋರಿಸಲೇ ಇಲ್ಲವೆನಿಸುತ್ತದೆ.

ಇನ್ನು ನೀವು ಹೇಳುವ ಅವತಾರ್, ಜುರಾಸಿಕ್‌ ಪಾರ್ಕ್ ಈ ಚಿತ್ರಗಳನ್ನು ನಮ್ಮ ಜನ ಜೀರ್ಣಿಸಿಕೊಂಡಾರೆಯೇ? ಇಲ್ಲಿವರೆಗಿನ ಕನ್ನಡಚಿತ್ರರಂಗದ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ  ಈ ಚಿತ್ರಗಳು ಕನ್ನಡದಲ್ಲೇ ಬಿಡುಗಡೆ ಆದರೂ ನಮ್ಮವರು ಪ್ರೋತ್ಸಾಹಿಸುತ್ತಾರೆ ಎನ್ನುವುದು ಕೇವಲ ಹಾಳೆಯ ಮೇಲಿನ ವಾದವಾಗುವುದು ಅಷ್ಟೇ.

ಈಗಲೂ ತಮಗೆ ಚಿತ್ರದ ಸಂದೇಶ ಮುಖ್ಯವಲ್ಲ ಅಲ್ಲಿ ಬರುವ ದೃಶ್ಯಾವಳಿಗಳು, ಪಾತ್ರಗಳು ಹಾಗೂ ನಿರ್ದೇಶಕನ ಕೈಚಳಕವಷ್ಟೇ ಮುಖ್ಯವೆನ್ನಿಸಿರಬಹುದು. ಹಾಗಿದ್ದರೆ ಆಂಗ್ಲಭಾಷೆಯಲ್ಲಿಯೇ ಆ ಚಿತ್ರಗಳನ್ನು ವೀಕ್ಷಿಸಲು ಬೇಡ ಎಂದು ನಿಮ್ಮನ್ನು ಯಾರೂ ಕಟ್ಟಿಹಾಕುತ್ತಿಲ್ಲ. ಅಲ್ಲವೇ?.

ಈಗಲೂ ಅಲ್ಲೊಮ್ಮೆ ಇಲ್ಲೊಮ್ಮೆ ಯಾವುದೋ ಕೆಲವು ಕಾರ್ಯಕ್ರಮಗಳಿಗೆ ಡಬ್ಬಿಂಗ್‌ ಬೇಕೇ ಬೇಕು ಎಂದು ನಿಮಗನ್ನಿಸಿದರೆ, ಖಂಡಿತ ನೀವೂ ಸಹ ಇನ್ನೊಂದು ಭಾಷೆಯನ್ನು ಕಲಿತು ಕೊಳ್ಳಲು ಸಂಪೂರ್ಣ ಸ್ವತಂತ್ರರು ಎಂಬುದನ್ನು  ಜ್ಞಾಪಿಸಲಿಚ್ಚಿಸುತ್ತೇನೆ.

ಕಡೆಯದಾಗಿ ತಿಳಿಸುವುದೇನೆಂದರೆ, ಕನ್ನಡಕ್ಕೆ ಡಬ್ಬಿಂಗ್‌ ಎಷ್ಟು ಅನಿವಾರ್ಯ ಎಂಬುದನ್ನು ಮನಗಾಣಲು ನಮ್ಮ ಕೆಲವು ಸ್ನೇಹಿತರು ನೀಡುತ್ತಿರುವ ಉದಾಹರಣೆಗಳು ನನಗೇಕೋ ಬಾಲಿಶ ಎನಿಸಿದವು. ಇದಕ್ಕಿಂತಲೂ ಗಂಭೀರವಾದ ಅನಿವಾರ್ಯತೆಗಳನ್ನು ಇವರು ಮನಗಂಡಿರಬಹುದು. ಆದರೆ ಉದಾಹರಣೆಗೆಂದಷ್ಟೇ ಈ ಮೇಲಿನ ಅಂಶಗಳನ್ನು ಸೂಚಿಸುತ್ತಿರಬಹುದು. ಯಾವುದಕ್ಕೂ ಅವರು ನೀಡುವ ಕಾರಣಗಳು ಮನಮುಟ್ಟುವಂತಿಲ್ಲ ಎನ್ನಿಸಿದ್ದರಿಂದ ಈ ವಿಶ್ಲೇಷಣೆಗೆ ಮುಂದಾಗಬೇಕಾಯಿತು. ಇದು ವಿಶ್ಲೇಷಣೆ ಅಷ್ಟೇ, ನನ್ನ ತೀರ್ಮಾನವಲ್ಲ.

ಶನಿವಾರ, ಆಗಸ್ಟ್ 7, 2010

ಶ್ರೀರಾಮುಲು ಪಾದಯಾತ್ರೆ ಅಂತ್ಯ

ಆಶ್ಚರ್ಯ ಪಡಬೇಡಿ. ಶ್ರೀರಾಮುಲು ಯಾವಾಗ ಪಾದಯಾತ್ರೆ ಆರಂಭಿಸಿದ್ದು? ಎಂದು ಪ್ರಶ್ನೆಯನ್ನೂ ಕೇಳಬೇಡಿ. ಇದೀಗ ಕರ್ನಾಟಕದಲ್ಲಿ ಯಾರ್ಯಾರು ಪಾದಯಾತ್ರೆ ಹೊಂಟವ್ರೆ ಅನ್ನೋದೇ ಒಂದು ಬಿಡಿಸಲಾಗದ ಒಗಟಾಗಿದೆ. ಆಡಳಿತ ಪಕ್ಷ ಹಾಗೂ ವಿರೋದ ಪಕ್ಷಗಳು ಶಕ್ತಿಪ್ರದರ್ಶನಕ್ಕೆ ನಿಂತುಬಿಟ್ಟಿವೆ.

ವಿರೋದಪಕ್ಷದವರು ಅಕ್ರಮ ಗಣಿಗಾರಿಕೆ ವಿರೋದಿಸಿ ಬೆಂಗಳೂರಿಂದ ಬಳ್ಳಾರಿಗೆ ಕಾಲ್ನಡಿಗೆ ಹೊಂಟವರೆ. ಹಗಲೆಲ್ಲಾ ಪಾದಯಾತ್ರೆ, ರಾತ್ರಿ ಹೊತ್ತು ಮಸಾಜ್. ಹೇಗೋ ಇನ್ನೆರಡು ದಿನದಲ್ಲಿ ಅವ್ರು ಬಳ್ಳಾರಿ ತಲುಪಲಿದ್ದಾರೆ.  ಆ ಮೂಲಕ ಪಾದಯಾತ್ರೆ ಇನ್ನೆರಡು ದಿನಗಳಲ್ಲಿ ಮುಗಿಯಬಹುದು.. ಆದರೆ ದಣಿದಿರೋ ಕೈಕಾಲ್‌ಗಳಿಗೆ ಮುಂದಿನ ಇನ್ನೂ ಒಂದು ತಿಂಗಳು ಮಸಾಜ್ ಮಾತ್ರ ಮುಂದುವರಿಯಬಹುದು.

ಇನ್ನೊಂದ್ಕಡೆ ಆಡಳಿತ ಪಕ್ಷದೋರು ಸಾರ್ವಜನಿಕ ಸಭೆ ಮಾಡ್ತಿದಾರೆ. ಅದನ್ನು ನೀವು ಜನಜಾಗೃತಿ ಸಮಾವೇಶ ಅಂತನಾರು ಕರೀರಿ ಅಥವಾ ಬಿಜೆಪಿ ಸಾಧನಾ ಸಮಾವೇಶ ಅಂತನಾದ್ರೂ ಕರೀರಿ. ಆದರೆ ಒಳಗೊಳಗೇ ಪರೋಕ್ಷವಾಗಿ ಇದೊಂದು ವಿರೋಧ ಪಕ್ಷದ ವಿರುದ್ದ ಶಕ್ತಿಪ್ರದರ್ಶನದ ಸಭೆ ಅಷ್ಟೇ.   

ವ್ಯಯಕ್ತಿಕವಾಗಿ ಆರೋಗ್ಯಸಚಿವರು ಕೇಷಮುಂಡನ ಮಾಡಿಸಿಕೊಂಡು, ಬಳ್ಳಾರಿ ತುಂಬಾ ಸ್ವಾಭಿಮಾನಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಆದರೆ ಅವರು ಎಲ್ಲೂ ಪಾದಯಾತ್ರೆ ಹೊರಟವರಂತೆ ಕಂಡುಬರಲಿಲ್ಲ. ಅವರೂ ಸಹ ತಾನು ಪಾದಯಾತ್ರೆ ಹೊರಟಿರುವುದಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ.
ಈ ನಡುವೆ ಗೋಹತ್ಯೆ ನಿಷೇದ ಕಾಯ್ದೆ ವಿರೋಧಿಸಿ ಮಾಜಿ ಪ್ರಧಾನಿಗಳಾದ ಜನತಾದಳ ಪಕ್ಷದ ಅದ್ಯಕ್ಷರು ದೆಲ್ಲಿಗಂಟ ಹೋಗಿ ರಾಷ್ಟ್ರಾದ್ಯಾಕ್ಷರನ್ನು ಬೇಟಿ ಮಾಡಿ ಹಿಂತಿರುಗಿದ್ದಾರೆ. ಇದಲ್ಲದೇ ಈ ಮಸೂದೆ ಜಾರಿಯಾಗಿದ್ದೇ ಆದರೆ, ಮುಖ್ಯಮಂತ್ರಿಗಳ ಮನೆ ಮುಂದೆ ಗೊಡ್ಡಸುಗಳನ್ನ ಲಾರಿಲಾರಿಗಟ್ಟಲೇ ತಂದು ನಿಲ್ಲಿಸುವುದಾಗಿ ಗುಡುಗಿದ್ದಾರೆ.

ಇರಲಿ ಒಟ್ಟಿನಲ್ಲಿ ಈ  ಬಳ್ಳಾರಿ ಚಲೋ, ಜಾಗೃತಿ ಸಮಾವೇಶ, ಸ್ವಾಭಿಮಾನಿ ಸಮಾವೇಶ, ದೆಲ್ಲಿ ಚಲೋ, .. ಇನ್ನೂ ಏನೇನೇನೋ ಕಾರ್ಯಕ್ರಮಗಳು ಈಗ ಭಾರೀ ಸುದ್ದಿಯಲ್ಲಿವೆ. ಈ ಎಲ್ಲಾ ರಾಜಕಾರಣಿಗಳು, ಜನಪ್ರತಿನಿದಿಗಳು ಜನಸಾಮಾನ್ಯರ ಮೇಲಿನ ನೈಜಕಾಳಜಿಯಿಂದ ಇಷ್ಟೆಲ್ಲಾ ಹೋರಾಟ ಪ್ರದರ್ಶಿಸಿದ್ದೇ ಆಗಿದ್ದರೆ, ನಮ್ಮ ರಾಜ್ಯದಲ್ಲಿ ಇವತ್ತಿಗೂ ಬಡತನರೇಖೆಗಿಂತ ಕೆಳಮಟ್ಟದಲ್ಲಿ ಜೀವನ ಸಾಗಿಸುತ್ತಿರುವವರು ಭೂತಗನ್ನಡಿ ಇಟ್ಟು ಹುಡುಕಿದರೂ ಸಿಗುತ್ತಿರಲಿಲ್ಲವೇನೋ.!!! ಆದರೆ ಈ ನಮ್ಮ ರಾಜಕಾರಣಿಗಳು ಸಧ್ಯಕ್ಕಂತೂ ಫುಲ್‌ಬ್ಯುಸಿ. ಜನರ ಕಷ್ಟಕೇಳುತ್ತಾರೋ ಇಲ್ಲವೋ ಅದನ್ನು ಮಹಾಜನಗಳೇ ಅರ್ಥಮಾಡಿಕೊಳ್ಳಬೇಕು.

ಈ ಮದ್ಯೆ ವಿರೋಧಪಕ್ಷದವರ ಯಾತ್ರೆಗೆ ದೊಂಬರಾಟ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ. ಈ ರಾಜಕಾರಣಿಗಳ ಯಾತ್ರೆ, ಸಮಾವೇಶ ಇತ್ಯಾದಿಗಳು ಜನರಲ್ಲಿ ಗೊಂದಲವನ್ನುಂಟು ಮಾಡಿರವುದೇನೋ ಸತ್ಯ. ಆದರೆ ವಿಪರ್ಯಾಸವೆಂದರೆ  ನಮ್ಮ ಸುವರ್ಣ ನ್ಯೂವ್ಸ್ 24x7 ಚಾನೆಲ್‌ನ ಪ್ರಸಾರಕರಿಗೂ ಒಂದು ಬಾರೀ ಗೊಂದಲಉಂಟಾದಂತಿದೆ. ಚಿತ್ರನೋಡಿ. "ಶ್ರೀರಾಮುಲು ಪಾದಯಾತ್ರೆ ಅಂತ್ಯ" ಅಂತ ಬರ್ದವ್ರೆ. ಈಗ ನೀವೇ ಹೇಳಿ ಶ್ರೀರಾಮುಲು ಪಾದಾಯಾತ್ರೆನ ಆರಂಭಿಸಿದ್ದಾದರೂ ಯಾವಾಗ? Suvrna News 24x7 ಇಂತಹ ಒಂದು 24x7 ಸುದ್ದಿಮಾದ್ಯಮಕ್ಕೇ ಈ ಪರಿಯ ಗೊಂದಲ, ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗಿರಬೇಡ?

ಗುರುವಾರ, ಆಗಸ್ಟ್ 5, 2010

ನಮ್ಮ ಕನ್ನಡಿಗ ವೆಂಕಿಗೆ ಹುಟ್ಟುಹಬ್ಬದ ಶುಭಾಶಯಗಳು.

ಅಮೀರ್‍ ಸೋಹೇಲ್ ಹಾಗೂ ಸಯೀದ್ ಅನ್ವರ್‍ ಅಂದಿನ ಸಮಕಾಲೀನ ಕ್ರಿಕೆಟ್ನ ಅತ್ಯುತ್ತಮ ಆರಂಭಿಕ ಜೋಡಿ ಎಂದು ಕರೆಸಿಕೊಂಡಿತ್ತು. ೯೮ರ ಕ್ರಿಕೆಟ್‌ ವಿಶ್ವಕಪ್‌ನ ಈ ಪಂದ್ಯದ ಆರಂಭದ ೧೦ ಓವರ್‍ಗಳಲ್ಲಿ ಪಾಕಿಸ್ತಾನದ ಈ ಜೋಡಿ ಭಾರತದ ಬೌಲರ್‍ಗಳನ್ನು ಹಿಗ್ಗಾಮುಗ್ಗಾ ತಣಿಸಿದ್ದರು. 


http://www.youtube.com/watch?v=-d5DBdlKl5Q

ಆ ಸಂಧರ್‍ಬದಲ್ಲಿ ಭಾರತದ ಮದ್ಯಮವೇಗಿ ವೆಂಕಟೀಶ್ ಪ್ರಸಾದ ತನ್ನ ದಾಳಿ ಮುಂದುವರಿಸುವಾಗ, ಆಮೀರ್‍ ಸೋಹೇಲ್ ಆ ಓವರ್‍ನ ೫ ನೇ ಎಸೆತವನ್ನು ಬೌಂಡರಿಗಟ್ಟಿ ವೆಂಕಟೇಶ ಪ್ರಸಾದರನ್ನ ಅಣಕಿಸಿ, ಬಾಲ್ ಅಲ್ಲಿದೆ ನೋಡು ಎಂಬಂತೆ ಸನ್ನೆ ಮಾಡುತ್ತಾನೆ... ಪಂದ್ಯವನ್ನು ವೀಕ್ಷಿಸುತ್ತಿದ್ದ ನಮಗೇ ಒಂದು ರೀತಿ ಆವೇಶ ಆವರಿಸಿಕೊಂಡಿತ್ತು. ಇನ್ನು ಸ್ವತಃ ಬೌಲರಾಗಿದ್ದ ವೆಂಕಿಗೆ ಹೇಗಾಗಿರ ಬೇಡ!!!. ಅಷ್ಟು ಪ್ರೇಕ್ಷಕರ ಮದ್ಯೆ ಈ ರೀತಿ ಅಣಕಕ್ಕೆ ತುತ್ತಾದ ವೆಂಕಿಯ ಮನಸ್ಸಿನಲ್ಲಿ ಆಗ ಯಾವ ಭಾವನೆಗಳು ಬಂದಿದ್ದವೋ...?

ಮುಂದಿನ ಎಸೆತದಲ್ಲಿ ಏನಾಯ್ತು ಎನ್ನುವುದು ಈಗ ಇತಿಹಾಸ.
ಸಂಪೂರ್ಣ ತನ್ ಹಿಡಿತದಲ್ಲಿದ್ದ ಪಂದ್ಯವನ್ನು ಪಾಕಿಸ್ತಾನ ಕಯ್ಚೆಲ್ಲಿತ್ತು. ನಂತರ ಅಮೀರ್‍ ಸೋಹೇಲ್‌ಗೆ ಪಾಕಿಸ್ತಾನದ ಮಾಜಿ ಆಟಗಾರರಿಂದ ಮಂಗಳಾರತಿ ಆಗಿತ್ತು.
ಎನಿವೇ, ಇಂದು ನಮ್ಮ ವೆಂಕಿಯ 41ನೇ ಹುಟ್ಟುಹಬ್ಬ.

ಭಾರತ ಕ್ರಿಕೆಟ್ ತಂಡದಿಂದ ನಿವೃತ್ತಿ ಹೊಂದಿದ ಬಳಿಕೆ, ಉತ್ತಮ ಬೌಲಿಂಗ್ ಕೋಚ್ ಆಗಿ ಕೂಡ ತಮ್ಮ ಕ್ರಿಕೆಟ್ ಪ್ರೀತಿಯನ್ನು ಮುಂದುವರೆಸಿದ್ದರು.
ನಮ್ಮ ಕನ್ನಡಿಗ ವೆಂಕಿಗೆ ಹುಟ್ಟುಹಬ್ಬದ ಶುಭಾಶಯಗಳು.

ಬುಧವಾರ, ಆಗಸ್ಟ್ 4, 2010

ವೀರೂ ! ನಾಳೇ ನೀ ತಪ್ಪಿಸ ಬೇಡ ನೂರು.

(ವೀರೆಂದ್ರ ಸೆಹ್ವಾಗ್ ಇಂದಿನ ಮತ್ತು ನಾಳೆಯ ಆಟದ ಬಗ್ಗೆ ಕುರಿತು ಈ ಚುಟುಕ)

ವೀರೂ !
ನಾಳೇ ನೀ ತಪ್ಪಿಸ ಬೇಡ ನೂರು.
ಬೇಕಿದ್ದರೆ ಸ್ಕೋರಿಸು ಬಿರುಸಿನ ಇನ್ನೂರು.
ಬೇಕಿದ್ದರೆ ಸ್ಕೋರಿಸು ಬಿರುಸಿನ ಇನ್ನೂರು.
ವೀರೂ !
ನಾಳೇ ನೀ ತಪ್ಪಿಸ ಬೇಡ ನೂರು.


ಆವೇಷದಲ್ಲಿ ತಪ್ಪಿಸಿ ನೀ ನೂರು,
ವೀರೂ !
ಆವೇಷದಲ್ಲಿ ತಪ್ಪಿಸಿ ನೀ ನೂರು,
ಎರಚ ಬೇಡ ನಮ್ಮ ಆಸೆಗೆ ತಣ್ಣೀರು.
ವೀರೂ !
ಆವೇಷದಲ್ಲಿ ತಪ್ಪಿಸಿ ನೀ ನೂರು,
ಎರಚ ಬೇಡ ನಮ್ಮ ಆಸೆಗೆ ತಣ್ಣೀರು.

http://www.guardian.co.uk/sport/2010/aug/04/india-sri-lanka-third-test

ಭಾನುವಾರ, ಆಗಸ್ಟ್ 1, 2010

ಭೀಷ್ಮ ಹಾಗೂ ವೇದವ್ಯಾಸ

ಮಹಾಭಾರತ ಮಹಾಕಾವ್ಯವನ್ನು ಗಣೇಶನಿಗೆ ಡಿಕ್ಟೇಟ್ ಮಾಡಿದ್ದು ವೇದ ವ್ಯಾಸ ಋಷಿಗಳು ಎಂಬುದನ್ನು ಓದಿರುತ್ತೇವೆ. ಮಹಾಭಾರತದ ಪ್ರಮುಖ ಪಾತ್ರವಾದ ಭೀಷ್ಮ ಹಾಗೂ ವೇದವ್ಯಾಸ, ಈ ಇಬ್ಬರ ನಡುವಿನ ಸಂಬಂಧವೇನು ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಹಸ್ತಿನಾಪುರದ ರಾಜ ಶಂತಾನು ಹಾಗೂ ಗಂಗೆ, ರಾಜದಂಪತಿಗಳ ಪುತ್ರನೇ ದೇವವ್ರತ.
.
.
.


ಸತ್ಯವತಿಗೆ ವಿವಾಹ ಪೂರ್ವದಲ್ಲಿ ಪರಶರ ಎಂಬ ಋಷಿಯ ಆಶೀರ್ವಾದದಿಂದ ವ್ಯಾಸನು ಜನಿಸಿರುತ್ತಾನೆ.

ಒಮ್ಮೆ ರಾಜ ಶಂತಾನು, ಸತ್ಯವತಿಯನ್ನು ಭೇಟಿಯಾಗುತ್ತಾನೆ. ಸತ್ಯವತಿಯ ಸೌಂದರ್ಯಕ್ಕೆ ಆಕರ್ಷಿತನಾದ ರಾಜನು ಆಕೆಯನ್ನು ತನ್ನ ಪಟ್ಟದರಸಿಯಾಗಿ ಸ್ವೀಕರಿಸುತ್ತಾನೆ.

ತನ್ನ ತಂದೆಯ ಆಸೆಯನ್ನು ನೆರವೇರಿಸುವ ಸಲುವಾಗಿ ದೇವವ್ರತನು ಹಸ್ತಿನಾಪುರದ ಸಿಂಹಾಸನವನ್ನೇ ತ್ಯಾಗಮಾಡುತ್ತಾನೆ. ಹಾಗೂ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿಯುವುದಾಗಿ ಶಪಥಗೈಯುತ್ತಾನೆ. ಮುಂದೆ ದೇವವ್ರತನು ಭೀಷ್ಮನೆಂದು ಪ್ರಸಿದ್ದಿಯಾಗುತ್ತಾನೆ.

ರಾಜ ಶಂತಾನು ಹಾಗೂ ಗಂಗೆ ದಂಪತಿಗಳ ಪುತ್ರ ದೇವವ್ರತ ಅಂದರೆ ಭೀಷ್ಮ. ಹಾಗೂ ಶಂತಾನುವಿನ ಮತ್ತೋರ್ವ ರಾಣಿ ಸತ್ಯವತಿ(ಮತ್ಸಾಂಗದ)ಯ ವರಪುತ್ರ ವ್ಯಾಸ. ಭೀಷ್ಮರ ತಂದೆಯೂ ಹಾಗೂ ವ್ಯಾಸರ ತಂದೆಯೂ ಬೇರೇ ಬೇರೇ, ಭೀಷ್ಮರ ತಾಯಿಯೂ ಹಾಗೂ ವ್ಯಾಸರ ತಾಯಿಯೂ ಬೇರೇ ಬೇರೇ. ಆದರೂ ಭೀಷ್ಮ ಹಾಗೂ ವ್ಯಾಸ ಪರಸ್ಪರ ಸಹೋದರರು ಎನ್ನಲಡ್ಡಿ ಇಲ್ಲ. ನಿಮ್ಮದೇನಾದರೂ ಅಡ್ಡಿ ಇದೆಯೇ??

ರಾಜ ಶಂತಾನು, ಗಂಗೆ ಹಾಗೂ ಸತ್ಯವತಿ ಇವರುಗಳ ಹಿನ್ನೆಲೆ ಏನೆಂದು ವಿವರಿಸಲಾಗಿಲ್ಲ. ಇನ್ನೊಮ್ಮೆ ಯಾವಾಗಲಾದರೂ ನೋಡೋಣ.

ಬುಧವಾರ, ಜುಲೈ 28, 2010

Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$


Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$
Online ಇದ್ರೆ ಚಾಟ್ ಮಾಡಿ, ಇಲ್ದಿದ್ರೆ ಮೇಲ್ ಮಾಡಿ,
ಹಾಯಾಗಿರುವೇ ರಾಘವೇಂದ್ರ!!!
Online ಆದರೂ ಬಾರೋ, Offline ಆದರೂ ಹೋಗೋ, ರಾಘವೇಂದ್ರ ||repeat||
.
.
.
ಓರ್ಕುಟ್‌ನಲ್ಲಾದರೂ ನೂಕು, ಪೇಸ್‌ಬುಕ್‌ನಲ್ಲಾದರೂ ನೂಕು  ರಾಘವೇಂದ್ರ$$$
ಹಾ ಆ ಹಾ ಆಆ ಹಾಆಆ ಆಆಆಆಆಆ....
ಓರ್ಕುಟ್‌ನಲ್ಲಾದರೂ ನೂಕು, ಪೇಸ್‌ಬುಕ್‌ನಲ್ಲಾದರೂ ನೂಕು  ರಾಘವೇಂದ್ರ$$$
ಓರ್ಕುಟ್‌ನಲ್ಲಿ ಸ್ಕ್ರಾಪ್‌ ಮಾಡಿ, ಪೇಸಬುಕ್‌ನಲ್ಲಿ ಪೇಸ್ಟ್‌ ಮಾಡಿ,
ಪ್ರೆಂಡಾಗಿರುವೆ ರಾಘವೇಂದ್ರ!
.
.
.
ಟ್ಟಿಟ್ಟರ್‌ನಲ್ಲಾದರು ಕಾಯ್ಸು, ಭಜ್‌ನಲ್ಲಾದರೂ ನೋಯ್ಸು, ರಾಘವೇಂದ್ರ!
ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿ, ಭಜ್‌ನಲ್ಲಿ ಭಜ್‌ ಮಾಡಿ
ಟಚ್ಚ(Touch)ಲ್ಲೇ ಇರುವೇ ರಾಘವೇಂದ್ರ!
.
.
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$
.
.
ಫೋನ್‌ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ$$$
ಹಾ ಆ ಹಾ ಆಆ ಹಾಆಆ ಆಆಆಆಆಆ....
ಫೋನ್‌ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ!$
ಮೋಬಯ್ಲಿನಲ್ಲಿರುವ ಬ್ಯಾಲೆನ್ಸು ಯಾರಾ ತಾತನಾ ಗಂಟು!
ಮಿಸ್ಕಾಲಾದರೂ(missed call) ನೀಡೂ ರಾಘವೇಂದ್ರ.!
.
.
.
GTalk ಆದರೇನು, Skype ಆದರೇನು! ರಾಘವೇಂದ್ರ$$$$
ಮೂಲ ಹಾಡನ್ನು ಹಾಳು ಮಾಡಿದೆನೆಂದು ಯಾರೂ ಬಯ್ದೇ ಇದ್ದರೆ ಸಾಕು ರಾಘವೇಂದ್ರ$$$
.
.
.
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$ .


http://www.youtube.com/watch?v=c_weBk1kvUQ

ಮಂಗಳವಾರ, ಜುಲೈ 27, 2010

ಸಂಕಷ್ಟದಲ್ಲಿ ಹಾಸ್ಯನಟ ರತ್ನಾಕರ್

೮೦ ವರ್ಷದ ರತ್ನಾಕರ್ ಕಳೆದ ೬೦ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದು ೩೦೦ ಕ್ಕೂ ಹೆಚ್ಚು ತಮ್ಮ ವಿಭಿನ್ನ ಶಯ್ನಿಯ ಅಭಿನಯದಿಂದಾಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ರತ್ನಾಕರ್ ಅವರಿಗೆ ಸಹಾಯ ಮಾಡಬಯಸುವ ಸಹೃದಯರು ದೂರವಾಣಿ ಸಂಖ್ಯೆ ೯೮೪೪೮೯೫೧೮೯ (9844895189) ಗೆ ಸಂಪರ್ಕಿಸಬಹುದು,


http://www.hindu.com/2010/05/23/stories/2010052360860300.htm

ಭಾನುವಾರ, ಜುಲೈ 11, 2010

ನನ್ನ ನಿಷ್ಟೆ ನಿನಗೆ ಹಾಗೂ ಕೇವಲ ನಿನ್ನೊಬ್ಬನಿಗೇ

ಕೌರವ ಹಾಗೂ ಪಾಂಡವರು ತಮ್ಮ ಶಿಕ್ಷಣವನ್ನು ಮುಗಿಸಿದ್ದಾರೆ, ಗುರು ದ್ರೋಣಾಚಾರ್ಯರು ತಮ್ಮ ಶಿಶ್ಯರ ಯುದ್ದವಿದ್ಯೆಯನ್ನು ಪರೀಕ್ಷಿಸಲೆಂದು ರಂಗಭೂಮಿ ಸಿದ್ದವಾಗಿದೆ. ಹಸ್ತಿನಾಪುರದ ಮಹಾರಾಜ ದೃತರಾಷ್ಟ್ರ, ಗಾಂಧಾರಿ, ಕುಂತಿ, ಗುರು ದ್ರೋಣಾಚಾರ್ಯ, ಕುಲಗುರು ಕೃಪಾಚಾರ್ಯ ಹಾಗೂ ಪಿತಾಮಹ ಭೀಷ್ಮ ಮತ್ತು ಶಕುನಿ ಮುಂತಾದ ಗಣ್ಯರು ಒಂದು ಪವಿಲಿಯನ್‌ನಲ್ಲಿ ರಣರಂಗವನ್ನು ವೀಕ್ಷಿಸಲು ಸಜ್ಜಾಗಿ ಕೂತಿದ್ದಾರೆ. ಹಾಗೂ ಮತ್ತೊಂದು ಪೆವಿಲಿಯನ್‌ನಲ್ಲಿ ಕ್ರೀಡಾಪಟುಗಳು ಅಂದರೆ, ಕೌರವ ಹಾಗೂ ಪಾಂಡವ ಸಹೋದರರು ಆಸೀನರಾಗಿದ್ದಾರೆ. 

ಒಬ್ಬರಾದ ಮೇಲೊಬ್ಬರನ್ನು ಗುರುದ್ರೋಣಾಚಾರ್ಯರು ಕರೆಯುತ್ತಿದ್ದಾರೆ. ಕುಲವಂಶದ ಕುಡಿಗಳು ತಮ್ಮ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಹೋಗುತ್ತಿದ್ದಾರೆ. ಅರ್ಜುನನ ಸರದಿ ಬರುತ್ತದೆ. ಬಿಲ್ವಿದ್ಯೆಯಲ್ಲಿ ಈಗಾಗಲೇ ದ್ರೋಣಾಚಾರಾರ್ಯರ ನೆಚ್ಚಿನ ಶಿಶ್ಯನೆನಿಸಿಕೊಂಡಿದ್ದ ಅರ್ಜುನನು ಈಗ ಸಾರ್ವಜನಿಕವಾಗಿ ತನ್ನ ವಿದ್ಯೆಯನ್ನು ಪ್ರದರ್ಶಿಸಿ, ಹಸ್ತಿನಾಪುರದ ನಾಗರೀಕರ ಪ್ರಶಂಶೆಯನ್ನೂ ಗಿಟ್ಟಿಸಿಕೊಳ್ಳುತ್ತಾನೆ.


ದ್ರೋಣಾಚಾರ್ಯ  - ಹಸ್ತಿನಾಪುರದ ಮಹಾಜನಗಳೇ...ಅರ್ಜುನ ನನ್ನ ನೆಚ್ಚಿನ ಶಿಶ್ಯನೆಂಬುದು ತಿಳಿದೇ ಇದೆ. ಈಗ ತಾವೆಲ್ಲರೂ ಸಹ ಅರ್ಜುನನ ಶೌರ್ಯಕ್ಕೆ ಸಾಕ್ಷಿಯಾಗಿದ್ದೀರಿ.ಅರ್ಜುನ ಈ ಜಗತ್ತಿನ ಶ್ರೇಷ್ಟ ಧನುರ್ಧಾರಿ. ಇದರಲ್ಲಿ ನನಗೆ ಯಾವ ಸಂದೇಹವೂ ಇಲ್ಲ.

(ಈ ಕೂಟವನ್ನು ವೀಕ್ಷಿಸಲೆಂದು ನೆರೆದಿದ್ದ ಹಸ್ತಿನಾಪುರದ ನಾಗರೀಕರು ಅರ್ಜುನನಿಗೆ ಜೈಕಾರವನ್ನು ಹಾಕುತ್ತಾರೆ...ಅಷ್ಟರಲ್ಲಿ..ರಂಗಭೂಮಿಯನ್ನು ಪ್ರವೇಶಿಸಿದ ಕರ್ಣನು, ಹೆಬ್ಬಾಗಿಲ ಬಳಿ ನಿಂತು...ತನ್ನ ಧನಸ್ಸನ್ನು ಮುಂದೆ ಮಾಡುತ್ತಾ..)

ಕರ್ಣ - ಗುರು ದ್ರೋಣಾಚಾರ್ಯರೇ! ಒಬ್ಬ ವ್ಯಕ್ತಿಯ ಶೌರ್ಯವನ್ನಷ್ಟೇ ವೀಕ್ಷಿಸಿ, ಆತನೇ ಜಗತ್ತಿನ ಸರ್ವಶ್ರೇಷ್ಟ ಧನುರ್ಧಾರಿ ಎನ್ನುವ ತೀರ್ಮಾನಕ್ಕೆ ಬರುವುದು ಯಾವ ವೀರನಿಗೂ ಶೋಭೆನೀಡುವಂತಹದ್ದಲ್ಲ... ಒಮ್ಮೆ ನಿಮ್ಮ ಶಿಶ್ಯ ಅರ್ಜುನನ್ನು ನನ್ನ ವಿರುದ್ದ ಸೆಣಸಲು ಬಿಡಿ, ಆಗ ಜಗತ್ತಿನ ಶ್ರೇಷ್ಟ ಧನುರ್ಧಾರಿ ಯಾರೆಂದು ಎಲ್ಲರಿಗೂ ತಿಳಿಯುತ್ತದೆ.

ಕೃಪಾಚಾರ್ಯ  -. ಹೇ, ವೀರ. ಪೆವಿಲಿಯನ್ ಹತ್ತಿರಕ್ಕೆ ಬಂದು ನಿಲ್ಲು. ಹಾಗೂ ನಮ್ಮೆಲ್ಲರ ಮುಂದೆ ನಿನ್ನ ಪರಿಚಯವನ್ನು ನೀಡು. ನೀನು ಯಾರು? ನಿನ್ನ ತಂದೆ-ತಾಯಿ ಯಾರು? ತಿಳಿಸು.

(ಕರ್ಣನು ಪೆವಿಲಿಯನ್ ಮುಂದೆ ಬಂದು ನಿಲ್ಲುತ್ತಾನೆ...ತನ್ನ ಜನ್ಮ ರಹಸ್ಯದ ಅರಿವಿರದ ಕರ್ಣನು ಕೃಪಾಚಾರ್ಯರ ಪ್ರಶ್ಣೆಗೆ ಉತ್ತರ ನೀಡದೆ ಅಸಹಾಯಕನಾಗಿ ತಲೆ ತಗ್ಗಿಸಿ ನಿಲ್ಲುತ್ತಾನೆ.
.
.
ಕರ್ಣನ ವಸ್ತ್ರ, ಕರ್ಣಕುಂಡಲ ಹಾಗೂ ಆತನ ಮುಖದಲ್ಲಿದ್ದ ಸೂರ್ಯನ ತೇಜಸ್ಸನ್ನು ಮಾತೆ ಕುಂತಿಯು ಗಮನಿಸುತ್ತಾಳೆ. ಈತ ತನ್ನ ಪುತ್ರನೇ ಎಂದು ಕೂಡಲೇ ಕಂಡುಕೊಳ್ಳುತ್ತಾಳೆ. ಆದರೆ ಎಲ್ಲರ ಮುಂದೆ ತಿಳಿಸಲಾಗದೆ ಹಾಗೂ ತನ್ನ ಪುತ್ರನ ಅಸಾಹಯಕ ಸ್ಥಿತಿಯನ್ನು ಕಂಡು ಮತ್ತಷ್ಟು ದಿಗ್ಬ್ರಮೆಯಿಂದ ಮೂರ್ಛೆ ಹೋಗುತ್ತಾಳೆ.
.
.
ಕೃಪಾಚಾರ್ಯರು ತಮ್ಮ ಪ್ರಶ್ಣೆಯನ್ನು ಮುಂದುವರೆಸುತ್ತಾರೆ...)

ಹೇ ವೀರ, ಇದು ಯುದ್ದಭೂಮಿಯಲ್ಲ. ಇದು ಕುರುವಂಶದ ರಂಗಭೂಮಿ. ಇಲ್ಲಿ ಸೆಣಸಲು ನಿನ್ನಂತಹ ಸಾಮಾನ್ಯ ಪ್ರಜೆಗಳಿಗೆಲ್ಲಾ ಅವಕಾಶವಿಲ್ಲ. ಇದು ಕೇವಲ ಸರಿ-ಸಮಾನರಲ್ಲಿ ನಡೆಯುವ ಪರೀಕ್ಷೆ. ಅರ್ಜುನನೊಡನೆ ಸೆಣಸಲು ನಿನಗೆ ಏನು ಯೋಗ್ಯತೆ ಇದೆ?

ಕರ್ಣ - ಅರ್ಜುನನೊಡನೆ ಸೆಣಸಲು ಈ ಧನಸ್ಸು ಸಾಕು. ನನಗೆ ಮತ್ತೇನು ಬೇಡ.
(ಕರ್ಣನ ಮಾತಿನಿಂದ ಕೋಪಗೊಂಡ ಅರ್ಜುನ, ಕೃಪಾಚಾರ್ಯರನ್ನು ಉದ್ದೇಶಿಸಿ.)

ಅರ್ಜುನ - ನನಗೆ ಈ ವೀರನೊಡನೆ ಸೆಣಸಲು ಅಪ್ಪಣೆ ನೀಡಿ ಗುರು. ಈತನನ್ನು ಕೆಲವೇ ಕ್ಷಣದಲ್ಲಿ ಸೋಲಿಸಿ, ಓಡಿಸುತ್ತೇನೆ.

(ಮತ್ತೊಂದು ಪೆವಿಲಿಯನ್‌ನಲ್ಲಿ ಕೂತಿದ್ದ ಭೀಮನು, ಕರ್ಣನ ಅಹಂಕಾರದ ಮಾತಿನಿಂದ ಕುಪಿತಗೊಂಡಿರುತ್ತಾನೆ)

ಭೀಮ - ಹೇ ಅರ್ಜುನ, ಯಕಹಷ್ಛಿತ್ ಒಬ್ಬ ಸಾರತಿಯ ಮಗ (ಕರ್ಣನ ಸಾಕು ತಂದೆ,ಅಧಿರತ, ದೃತರಾಷ್ಟ್ರನ ಸೈನ್ಯದಲ್ಲಿ ಒಬ್ಬ ಸಾರತಿ)ನಿಗಾಗಿ ನಿನ್ನ ವಿದ್ಯೆಯನ್ನು ಪ್ರಸರ್ಶಿಸಬೇಕಿಲ್ಲ. ಆತನನ್ನು ನಿರ್ಲಕ್ಷಿಸು ಹಾಗೂ ಆಚಾರ್ಯರ ಅಪ್ಪಣೆ ಪಡೆದು ಇಲ್ಲಿ ಬಂದು ಆಸೀನನಾಗು.

(ಕರ್ಣನ ಆತ್ಮವಿಶ್ವಾಸವನ್ನು ಕಂಡು ಬೆರಗಾದ ಧುರ್ಯೋಧನನು, ಭವಿಷ್ಯದಲ್ಲಿ ಪಾಂಡವರ ವಿರುದ್ದ ಹೋರಾಡ ಬೇಕಾದ ಸಂದರ್ಭವು ಎದುರಾದಾಗ,  ಮದ್ಯಮ ಪಾಂಡವ ಅಂದರೆ ಅರ್ಜುನನನ್ನು ಎದುರಿಸಲು ನಮ್ಮ ಬಳಿ ಇಂತಹ ವೀರನ ಅವಶ್ಯಕತೆ ಇದೆ, ಎಂಬುದನ್ನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾನೆ)

ಧುರ್ಯೋಧನ -  ಗುರು  ಕೃಪಾಚಾರ್ಯರೇ!  ಈ ವೀರನಿಗೆ ಅರ್ಹತೆ ಇಲ್ಲ ಎಂಬುದು ನಿಮ್ಮ ಅಭಿಪ್ರಾಯವಾದರೆ, ನನ್ನ ತಂದೆಯಿಂದ ನನಗೆ ನೀಡಲಾಗಿರುವ ಆಂಗ ದೇಶದ ಪಟ್ಟವನ್ನು ಈ ವೀರನಿಗೆ ನೀಡುವ ಅಧಿಕಾರವನ್ನು ಬಳಸಿಕೊಳ್ಳುತ್ತೇನೆ. ಈತ ಇಂದಿನಿಂದ ಆಂಗ ರಾಜ್ಯದ ರಾಜ.

(ತನ್ನ ಹೊಸ ಗೆಳಯ ಕರ್ಣನನ್ನು)
ಹೇ ಮಿತ್ರ, ನೀನು ಇಲ್ಲಿ ಸೆಣಸಲು ಅರ್ಹನಾಗಿದ್ದೀಯ. ನಿನ್ನನ್ನು ತಡೆಯಲು ಇಲ್ಲಿ ಯಾರಿಗೂ ಅವಕಾಶ ನೀಡುವುದುಲ್ಲ. ಇಂದಿನಿಂದ ನೀನು ನನ್ನ ಆಂಗರಾಜ್ಯದ ರಾಜ. ಈಗಲೇ ನಿನಗೆ ಪಟ್ಟಾಭಿಷೇಕ ಮಾಡುತ್ತಿದ್ದೇನೆ.  

(ಇಲ್ಲಿಯವರೆಗೆ ತನ್ನ ಜೀವನದಲ್ಲಿ ಕೇವಲ ನಿಂದನೆಗಳನ್ನೇ ಎದುರಿಸುತ್ತಾ ಬಂದಿದ್ದಾ ಕರ್ಣನಿಗೆ, ಧುರ್ಯೋಧನನು ನೀಡಿದ ಮರ್ಯಾದೆ ಹಾಗೂ ಮಹತ್ವದ ರಾಜನ ಪಟ್ಟವನ್ನು ಸ್ವೀಕರಿಸುತ್ತಾ.)

ಕರ್ಣ - (ತನ್ನನ್ನು ನಿಂದನೆಗಳಿಂದ ಪಾರು ಮಾಡಿದ ಧುರ್ಯೋಧನನ್ನು ಉದ್ದೇಶಿಸಿ) ಮಿತ್ರ ಧುರ್ಯೋಧನ, ನಿನ್ನ ಈ ಋಣವನ್ನು ಹೇಗೆ ತೀರಿಸಲೆಂದು ನನಗೆ ತಿಳಿಯದು. ಆದರೆ ಇಂದಿನಿಂದ ನನ್ನ ನಿಷ್ಟೆ ನಿನಗೆ ಹಾಗೂ ಕೇವಲ ನಿನ್ನೊಬ್ಬನಿಗೇ. ನನ್ನ ಕೊನೆ ಉಸಿರಿರುವವರೆಗೂ ನಿನ್ನ ಶ್ರೇಯಸ್ಸಿಗೆ ಹೋರಾಡುತ್ತೇನೆ. ಇದು ನಾನು ನಿನಗೆ ನೀಡುತ್ತಿರುವ ವಚನ.

(ಆ ಮೂಲಕ ಧುರ್ಯೋಧನನು ಕರ್ಣನ ಸ್ನೇಹವನ್ನು ಗೆಲ್ಲುತ್ತಾನೆ. ಕರ್ಣ ಕುಂತಿಯ ಮಗನೆಂದು ಸ್ವತಃ ಕುಂತಿಗೆ ಬಿಟ್ಟರೆ, ಆ ಕ್ಷಣಕ್ಕೆ ಕರ್ಣನನ್ನೂ ಸೇರಿಸಿಕೊಂಡು ಬೇರೆ ಯಾರಿಗೂ ತಿಳಿದಿರಿರುವುದಿಲ್ಲ.)

(ಅಂದಿನಿಂದ ಪರಸ್ಪರ ಸ್ನೇಹಿತರಾದ ಕರ್ಣ-ಧುರ್ಯೋಧನರು ಕೊಟ್ಟ ಮಾತಿಗೆ ತಪ್ಪದೇ... ತಮ್ಮ ಕಟ್ಟಕಡೆ ಉಸಿರಿರುವವರೆಗೂ  ಪರಸ್ಪರ ಸ್ನೇಹವನ್ನು ಕಾಪಾಡಿಕೊಳ್ಳುತ್ತಾರೆ.)

ಧುರ್ಯೋಧನನು ದುರಹಂಕಾರಿ, ಮಹತ್ವಾಕಾಕ್ಷಿ, ಸ್ವಾರ್ಥಿ, ಮುಂಗೋಪಿ ಎಂದೆಲ್ಲಾ ಕರೆಸಿಕೊಂಡರೂ ಕರ್ಣನೊಂದಿಗಿನ ಸ್ನೇಹದ ವಿಷಯದಲ್ಲಿ ಮಾತ್ರ  ಒಬ್ಬ ಶ್ರೇಷ್ಟ ವ್ಯಕ್ತಿಯಾಗಿ ವಿಶಿಷ್ಟವಾದ ಪಾತ್ರವಾಗಿ ಕಾಣಬಹುದು.

ಶನಿವಾರ, ಜುಲೈ 3, 2010

ಮಹಾರಥಿ ಅರ್ಜುನ

ಮದ್ಯಮ ಪಾಂಡವ ಅರ್ಜುನನನ್ನು, ಸಂಧರ್ಬಕ್ಕೆ ಅನುಸಾರವಾಗಿ ಹತ್ತು ಹಲವು ವಿವಿದ ನಾಮಗಳಲ್ಲಿ ವರ್ಣಿಸಿರುವುದನ್ನು ನಾವೆಲ್ಲಾ ಓದಿರುತ್ತೇವೆ. ಇಲ್ಲಿ ಕೆಲವು ನಾಮಗಳನ್ನು ಪಟ್ಟಿಮಾಡಲಾಗಿದೆ.

  1. ಧನಾಂಜಯ್
  2. ವಿಜಯ್
  3. ಶ್ವೇತವಾಹನ್
  4. ಫಲ್ಗುನಿ
  5. ಕಿರಿತಿ
  6. ವಿಭತ್ಸು
  7. ಸವ್ಯಸಾಚಿ
  8. ಅರ್ಜುನ್
  9. ಜಿಷ್ಣು 
  10. ಕೃಷ್ಣ
+

ಪಾರ್ಥ, ಗಾಂಢೀವಿ.

ಇಷ್ಟಲ್ಲದೇ ಅರ್ಜುನನಿಗೆ ಇನ್ನೂ ಬೇರೆ ನಾಮಗಳಿವೆಯೇ? (ಇದ್ದರೆ, ಅವು ಯಾವುವು?) ಹಾಗೂ ಈ ಎಲ್ಲಾ ನಾಮಗಳ ಹಿನ್ನೆಲೆ ಏನು ಎಂಬುದನ್ನು ವಿವರಿಸಬಲ್ಲಿರಾ?

ಮಂಗಳವಾರ, ಜೂನ್ 22, 2010

ಡರ್ರಂ ಬುರ್ರಂ ಭಯಂ ನಾಸ್ತಿ

ಸಿನೆಮಾಗಳಿಂದ ನಾಲ್ಕು ಆಯ್ದ ಸಂಭಾಷಣೆಗಳು:

ನೋಡಮ್ಮಾ! ಯಾವ್ದನ್ನು ನೋಡಿದಾಗ ಏನು ಭಾವನೆ ಉಂಟಾಗ್ಬೇಕೋ ಅದಾಗೋದು ಪ್ರಕೃತಿ ಧರ್ಮ,
ಅದಕ್ಕೆ ವಿರುದ್ದವಾದ ಭಾವ್ನೆ ಉಂಟಾಗೋದು ಅಥ್ವಾ ಭಾವ್ನೇನೆ ಉಂಟಾಗ್ದೆ ಇರೋದು.,ಏರಡೂ ಅಸಹಜ.
ಹೆಣ್ಣನ್ನ ಯಾವ್ ಸ್ಥಿತಿಯಲ್ಲಿ ನೋಡಿದ್ರೂ ಗಂಡು ಸಮ್ಯಮವಾಗಿ ಇದ್ದು ಬಿಡ್ವಂತ ಸ್ಥಿತಿ ತಲುಪ್ಬಿಟ್ರೇ ಪ್ರಪಂಚದ ಬೆಳವಣಿಗೆನೆ ನಿಂತೊಗುತ್ತೆ.

ಚಪ್ಪಾಳೆ. ಪ್ಳಾಪ್  ಪ್ಳಾಪ್ ಪ್ಳಾಪ್ ಪ್ಳಾಪ್ ಪ್ಳಾಪ್ 
- ಗಣೇಶ ಮತ್ತೆ ಬಂದ 


ನನ್ಮನೆ ಮುಂದಿರೋ ತೋಟದ ರಕ್ಷಣೆ ಮಾಡ್ಕೊಬೇಕಂತಂದ್ರೆ 
ಅದಕ್ಕೆ ಬೇಲಿ ಹಾಕೋದು ಬುದ್ದಿವಂತಿಕೆನೇ ಹೊರ್ತು 
ಅದನ್ನ ಪ್ರದರ್ಶನಕಿಟ್ಟು ಬರೋ ದನಗಳನ್ನೆಲ್ಲ ಓಡಿಸ್ತೀನಿ ಅಂತ ದನ ಕಾಯ್ಕಂಡು ಕೂತ್ಕನದಲ್ಲ.
- ಗಣೇಶ ಮತ್ತೆ ಬಂದ 


ಒಗ್ಗಟ್ಟೋನ್ದಿದ್ರೆ  ಎಂತಹ ಮನೆ ಹಾಳ್ ಕೆಲಸ ಬೇಕಾದರೂ ಮಾಡ್ಬೌದು/
- ಅವ್ವ  


ಡರ್ರಂ ಬುರ್ರಂ ಭಯಂ ನಾಸ್ತಿ.
ಕುಯ್ಯಮ್ ಪುಯ್ಯಮ್ ಮದ್ಯಮಮ್
ಠುಸ್ಸಾಕಾಳಮ್ ಮಹಾಗೋಳಮ್
ನಿಶ್ಯಬ್ದಮ್ ಪ್ರಾಣ ಸಂಕಟಮ್
-
ಅನಾಥರು, 

ಭಾನುವಾರ, ಮೇ 9, 2010

ಜಗತ್ತಿನ ಎಲ್ಲಾ ತಾಯಂದಿರಿಗೂ ಶುಭಾಶಯಗಳು, Happy mothers day

ಜಗತ್ತಿನ ಎಲ್ಲಾ ತಾಯಂದಿರಿಗೂ ಶುಭಾಶಯಗಳು

ಗ್ರೀಸ್ ದೇವತೆ 'ರಿಯಾ'ಳ ಗೌರವಾರರ್ಥ ಜೀತದಾಳುಗಳಿಗೆ ವರ್ಷದಲ್ಲಿ ಒಂದು ದಿನ ಮನೆಗೆ ಹಿಂತಿರುಗಿ ತಾಯಂದಿರ ಜತೆ ಸಂತೋಷವಾಗಿ ಕಾಲ ಕಳೆದು ಪುನಃ ಕೆಲಸಕ್ಕೆ ಹಿಂತಿರುಗಲು ಅನುಮತಿ ನೀಡಲಾಗುತ್ತಿತ್ತು. ಹೀಗೆ ಪ್ರಾರಂಬವಾಗಿತ್ತು 'ಮದರ್ಸ್ ಡೇ'. - ಸುದ್ದಿ, ವಿ.ಕ. ಶಾಂತಾ ನಾಗರಾಜ್ ಕೆ.

ಈಗ ನಾವೂ ಸಹ ಒಂದು ರೀತಿ ಜೀತದಾಳುಗಳೇ... ಏಕೆಂದರೆ, ನಮ್ಮಲ್ಲಿ ಅನೇಕರು ಜೀವನೋಪಾಯಕ್ಕೆ ಮತ್ತೊಬ್ಬರ ಕೈ ಕೆಳಗೆ ಹಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅಲ್ಲವೇ?

Happy mothers day
ಚಿತ್ರಗಳು ಗೂಗಲ್ ನಿಂದ ಎತ್ತಿದ್ದು.

ಮಂಗಳವಾರ, ಮೇ 4, 2010

ಪದ पद పద్ പട് પદ ਪਦ ପଡ଼ পদ Pada

ಗಣಕದಲ್ಲಿ ಪ್ರಮುಖ ಭಾರತೀಯ ಭಾಷೆಗಳನ್ನ ಬಳಸಲು ಅನುವಾಗಲಿಕ್ಕೆ ನಡೆಸುತ್ತಿರುವ ಹೊಸ ಪ್ರಯತ್ನವೇ ಪದ. ಒಟ್ಟು ೮ ಭಾರತೀಯ ಭಾಷೆಗಳನ್ನು ಬೆಂಬಲಿಸಲಾಗಿದೆ.  * ಕನ್ನಡ. *ಹಿಂದಿ  *ತೆಲುಗು *ಮಲಯಾಳಂ *ಗುಜರಾತಿ *ಗುರುಮುಖಿ (ಪಂಜಾಬಿ) *ಒರಿಯಾ *ಬಂಗಾಳಿ ಹಾಗೂ ಆಂಗ್ಲ ಭಾಷೆಗಳನ್ನು ಬೆಂಬಲಿಸಲಾಗಿದೆ. ಎಲ್ಲಾ ಭಾಷೆಗಳಿಗೂ ಕೀಲಿಮಣೆ ಮಾದರಿಯ ಚಿತ್ರಗಳನ್ನ ಸೇರಿಸಲಾಗಿದೆ.
ಬನ್ನಿ ಲೋದ್ಯಾಶಿ.ಕಾಂ ಗೆ ಭೇಟಿ ನೀಡಿ. ಪದವನ್ನು ಇಳಿಸಿಕೊಳ್ಳಿ. ನೀವೂ ಸಹ ಪದ ಬಳಸಿ. ಪರಸ್ಪರರು ಹಂಚಿಕೊಳ್ಳಿ ಹಾಗೂ ಇನ್ನೂ ಹೆಚ್ಚು ಹೆಚ್ಚು ಕೈಗಳಿಗೆ ತಲುಪಿಸಿ. ಧನ್ಯವಾದಗಳು.

ವಿ ಸೂ:ಲೋಹಿತಂತ್ರಾಂಶದ ಯಾವುದೇ ಆವೃತ್ತಿಯನ್ನು ನೀವು ಬಳಸುತ್ತಿದ್ದರೆ ದಯವಿಟ್ಟು ಸಂಪೂರ್ಣವಾಗಿ ತೆಗೆದು ಹಾಕಿ. ಇನ್ನು ಮುಂದೆ ಅದನ್ನು ಇತರರಿಗೆ ದಯವಿಟ್ಟು ಹಂಚ ಬೇಡಿ.

http://www.youtube.com/watch?v=FMwx-JaX2Bc&feature=player_embedded
Pada
Pada software supports eight Indian languages.
*Kannada *Hindi *Telugu *Malayalam *Gujarati *Gurumikhi (Panjabi) *Oriya *Bengali and *English 


Key Features:
* Available for both Linux & Windows.
* Auto-completion is supported for both Unicode and ANSI kannada.
* Open and Edit documents created in Baraha or Nudi software.
* Create simple text, HTML or PDF documents.
* Idential keyboard layout for all languages
Feel free to distribute.  Please visit http://lodyaashi.com 

Thanks 


P.S: Please remove all versions of the Lohitantraamsha and Please stop distributing that software and download a fresh copy of Pada.

ಭಾನುವಾರ, ಏಪ್ರಿಲ್ 11, 2010

Kannada-Lohit-IME 3.4


1. Kannada-Lohit-IME 3.4

How to use? - First time first steps.
1. Windows START ---->
2. Control panel ----->
3. Regional and Language Options --> " Details"
4. Select "Kannada-Lohit-IME" 


Click "OK". "OK"

NOTE : These (above) steps are not required EVERY TIME. This is only for first time.

^^^^ * ^^^^
2. Kannada-Lohit-IME 3.4 


1. Open any application, For example, Wordpad, Notepad, MS Word... etc.

2. Click on Kannada-Lohit-IME on Language bar.

3. Start writing directly in kannada...



1 + 7 + 1 = ?

1. ಕನ್ನಡ    
+
2. ಹಿಂದಿ हिंदि
3. ತೆಲುಗು తెకుగు
೪. ಮಲಯಾಳಂ മലയാളം
೫. ಬೆಂಗಾಳಿ বেংগালি
೬. ಒರಿಯ ଓରିଯ
೭. ಪಂಜಾಬಿ ਪਂਜਾਬਿ
೮. ಗುಜರಾತಿ ગુજરાતિ
+
೯. ಇಂಗ್ಲೀಷ್ English


ಒಟ್ಟು ಎಂಟು ಭಾರತೀಯ ಭಾಷೆಗಳು ಹಾಗೂ ಈ ಎಲ್ಲಾ ಭಾಷೆಗಳಿಗೂ ಕರ್ನಾಟಕ ಸರ್ಕಾರದ ಅಧಿಕೃತ ಕನ್ನಡ ಕೀಲಿಮಣೆ  ವಿನ್ಯಾಸವನ್ನೇ ಅಳವಡಿಸಿರುವುದು ವಿಶೇಷ. ಜೊತೆಗೆ ಆಂಗ್ಲ ಭಾಷೆಯೂ ಇರುತ್ತದೆ. 


ಭೇಟಿ ನೀಡಿ , http://lodyaashi.com  ಆವ್ರತ್ತಿ ೨.೦

ಸೋಮವಾರ, ಮಾರ್ಚ್ 15, 2010

ಶುಭಾಶಯಗಳು



ಮಕ್ಕಳಿಲ್ಲಿಲ್ಲದವರಿಗೆ ಮಕ್ಕಳಾಗಲಿ, 

ಗಂಡು ಸಿಗದವರಿಗೆ ಗಂಡು ಸಿಗಲಿ, 

ಹೆಣ್ಣು ಸಿಕ್ಕದವರಿಗೆ ಹೆಣ್ಣು ಸಿಗಲಿ, 

ಹಣ ಇಲ್ಲದವರಿಗೆ ಹಣ ಸಿಕ್ಕಲಿ, 

ವಿದ್ಯೆಯಿಲ್ಲದವರಿಗೆ ವಿದ್ಯೆ ಸಿಗಲಿ, 

ಬುದ್ದಿ ಇಲ್ಲದವರಿಗ ಬುದ್ದಿ ಬರಲಿ, 


ನನಗೆ ಅದು ಸಿಕ್ಕಿಲ್ಲ ಇದು ಸಿಕ್ಕಲಿಲ್ಲ ಎಂದು ದಿನೇ ದಿನೇ ಪರಿತಪಿಸುವುದು ನಿಲ್ಲಲಿ 

ತಮ್ಮ ಬಳಿ ಇರುವುದ-ಇಲ್ಲದೇ ಇರುವುದ ಎರಡರಿಂದಲೂ ಸಮಾನ ಅಂತರವನ್ನ ಕಾಪಾಡಿಕೊಳ್ಲಿ

ಆಸೆಗಳಿಗೆ ಕೊನೆ-ಮೊದಲಿಲ್ಲ. ಆದರೆ ಅಗತ್ಯಕ್ಕೆ ತಕ್ಕಂತೆ ಅವಶ್ಯಕತೆ ಬೆಳೆಸಿಕೊಳ್ಲಿ, ಬೆಸೆದುಕೊಳ್ಳಿ


ಯುಗಾದಿಯ ಬೇವು-ಬೆಲ್ಲ ಸವಿದು, ಹರುಸದಿಂದ ಹೊಸ ವರುಸವನ್ನ ಆಹ್ವಾನಿಸೋಣ.

ಎಲ್ಲರಿಗೂ ಶುಭಾಶಯಗಳು.

blogspot add widget