ಶನಿವಾರ, ಅಕ್ಟೋಬರ್ 3, 2009

ಅತೀವೃಷ್ಟಿ-ಭವಿಷ್ಯನ ನೋಡಿ ಬಂದವರಾರು?

ರಾಯಚೂರು, ಗುಲ್ಬರ್ಗಾ, ವಿಜಾಪುರ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಕಾರವಾರ, ಅಂಕೋಲ, ಶಿವಮೊಗ್ಗ, ಹಾವೇರಿ, ಕೊಡಗು, ಹಾಸನ, ಹೀಗೇ ಕರ್ನಾಟಕದ ಬಹು ಭಾಗದ ಜನ ಜೀವನ ಅಸ್ತ-ವ್ಯಸ್ತವಾಗಿದೆ. ನೂರಾರು ಸಾವು ಸಂಬವಿಸಿವೆ. ಕೆಲವು ಭಾಗಕ್ಕೆ ಸಂಚಾರ ವ್ಯವಸ್ಥೆ ಮುರಿದಿದೆ. ಮನೇ-ಆಸ್ತಿ ಎಲ್ಲಾ ಕಲ್ಕಂದು ಜನ ಕಂಗಾಲಾಗಿದ್ದಾರೆ. ಇನ್ನು ತುರ್ತಾಗಿ ಅವ್ರಿಗೆ ಬೇಕಾಗಿರೋದು ಒಂದಿಷ್ಟು ದೈರ್ಯಾ, ಆಹಾರ, ಔಷದ, ಹೊದಿಲಿಕ್ಕೆ ಬಟ್ಟೆ, ಮಲಗಲಿಕ್ಕೆ ಒಂದು ಸೂರು.

ಪ್ರಕೃತಿ ವಿಕೋಪಕ್ಕೆ ನಮ್ಮ ಜನ ಜೀವನ ದಿಕ್ಕಾ ಪಾಲಾಗಿರೋದು ಇದೇ ಮೊದ್ಲೆನಲ್ಲಾ...ಈ ಹಿಂದೆಯೂ ಆಗಿದೆ..ಮುಂಬೈಯಲ್ಲಿ ಬಾರೀ ಮಳೆ, ಗುಜರಾತ್ನಲ್ಲಿ ಭೂಕಂಪನ, ಕರಾವಳಿಯಲ್ಲಿ ಸುನಾಮಿ, ಅನಾವೃಷ್ಟಿಯಿಂದ ಕ್ಷಾಮ, ಹೀಗೇ ಅನೇಕ ಬಾರೀ ಅನಾಹುತಗಳು ಸಂಭವಿಸಿವೆ. ಇಂತಹ ಸಮಯದಲ್ಲೆಲ್ಲಾ ನಾವು ನಮ್ಮ ಬಂದುಗಳು, ಸಂಬಂದಿಗಳು, ಮೇಲ್ಜಾತಿ, ಕೀಳ್ಜಾತಿ, ಆಡಳಿತ ಪಕ್ಷ, ವಿರೋದ ಪಕ್ಷ, ಜಾತಿ, ಧರ್ಮ, ಮಠ, ಮತ, ಆಸ್ತಿ-ಪಾಸ್ತಿ ಅಂತ ಮೀನಾ ಮೇಷ ಮಾಡ್ದೆ, ನಮ್ಮಿನ್ದಾಗೋ ಸಹಾಯ ಮಾಡೋದು ಮರೀ ಬಾರ್ದು.

ಅತೀ ವೃಷ್ಟಿಯಿಂದ ಜನ ಕಂಗಾಲಾಗಿದ್ದಾರೆ ಇಂತಹ ಸಮಯದಲ್ಲಿ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಿಗೆ "ಕ್ಷೀರ ಬಂಧು" ಪಟ್ಟ ಬೇಕಿತ್ತಾ? ಖಂಡಿತಾ ಇಲ್ಲಾ... ಆದ್ರೆ ಹಾಗಂತ ಈಗ ಮಂತ್ರಿಗಳನ್ನ ತರಾಟೆಗೆ ತೊಗೊಳ್ತಾ ಕುಂತ್ರೆ ನಷ್ಟ ಯಾರಿಗೆ ಸ್ವಾಮಿ. ಸ್ವಲ್ಪನಾದ್ರೂ ಆತ್ಮ ಸಾಕ್ಷಿ ಅನ್ನೋದಿದ್ರೆ, ಮಂತ್ರಿಗಳೇ ಬಂದು ಅಮೃತ ಹಸ್ತದಿಂದ ಈ ಸುಕಾರ್ಯಾ ಆರಂಬ ಆಗ್ಲಿ ಅಂತ ಜಗಳ ಮಾಡೋದು ಬೇಡ. ಒಳ್ಳೆ ಕೆಲ್ಸಗಳಲ್ಲಾದ್ರೂ ನಾವು ನಮ್ಮ ಒಗ್ಗಟ್ಟನ್ನ ಪ್ರದರ್ಶಿಸೋಣ.

ಪ್ರಧಾನ ಮಂತ್ರಿಗಳಿಂದ ಹಿಡ್ದು, ಸಾಫ್ಟ್ವೇರ್, ಬ್ಯಾಂಕ್, ಅದ್ಯಾಪಕರು, ವ್ಯದ್ಯರು, ದಲ್ಲಾಲರು, ರಿಯಲ್ ಎಸ್ಟೇಟ್ ಚಲನಚಿತ್ರ, ಪತ್ರಿಕೆ, ಕ್ರಿಕೆಟ್ ಆಟಗಾರರು, ವಾಣಿಜ್ಯೋದಿಮಿಗಳು ಹೀಗೇ ಎಲ್ಲಾ ಕ್ಷೇತ್ರದ ಎಲ್ಲಾ ನೌಕರರು ಸ್ವಾಯಿಚ್ಚೆಯಿಂದ ತಮ್ಮ ತಮ್ಮ ಒಂದೊಂದು ದಿನದ ಆದಾಯವನ್ನ ಇದರ ಸಲುವಾಗಿ ತೆಗೆದಿಡ್ಬೇಕು. ಈ ರೀತಿ ಸಂಗ್ರಹಿಸಿದ ಮೊತ್ತವನ್ನ ಯಾವ್ದಾದ್ರೂ ಒಂದು ಅನಾಮಿಕ ಪರಿಹಾರ ನಿಧಿ ಸಂಗ್ರಹಣೆ ಅನ್ನೋ ಇನ್ನೊಬ್ಬ ದಲ್ಲಾಳಿ ಕೈಗೆ ಕೊಟ್ಟು ಬಂದು ಕೈ ತೊಳ್ಕೋಲ್ಳೋ ಕೆಲ್ಸಾ ಮಾಡ್ಬೇಡಿ.

ಒಟ್ಟು ಮೊತ್ತಾನ, ನೀವೇ ಒಂದಿಬ್ರು ಸ್ನೇಹಿತರು ತೆಗೆದು ಕೊಂಡು, ಸಂಬಂದಿಸಿದ ಕ್ಷೇತ್ರಕ್ಕೆ ಖುದ್ದು ಹೋಗಿ, ಅಲ್ಲಿನ ಜನ ಒಮ್ಮೆ ನೋಡಿ. ಅವ್ರಿಗೆ ಬೇಕಾಗಿರೋದು ಕೇವಲ ಒಂದು ತುತ್ತು ಅನ್ನ ಅಷ್ಟೇ ಅಲ್ಲಾ, ಬದಲಾಗಿ, ಭವಿಷ್ಯದ ಬಗ್ಗೆ, ಜೀವನದ ಬಗ್ಗೆ ಒಂದೆರಡು ಧೈರ್ಯಾ ತುಂಬೋ ಮಾತುಗಳು. ಅದನ್ನ ನೀವೇ ಮಾಡಿ, ಒಂದೆರಡು ಧೈರ್ಯದ ಮಾತಾಡಿ. ಆಮೇಲೆ ಅವ್ರ ತುರ್ತು ಅವಶ್ಯಕತೆಗಳನ್ನ ಅರ್ಥ ಮಾಡ್ಕೊಂಡು, ನೀವು ತೆಗೆದು ಕೊಂಡು ಹೋಗಿರೋ ಹಣದಲ್ಲಿ ಎಷ್ಟು ಸಾದ್ಯವೋ ಅಷ್ಟು ಸಹಾಯ ಮಾಡಿ.

ನಿಮಗೆ ಅಂತಹ ಒಂದು ನಿಸ್ವಾರ್ಥ ಮನಸ್ಸು ಖಂಡಿತ ಇದೇ, ಅದಕ್ಕೆ ನೀವು ಈ ಬರಹನ ಓದುತ್ತಾ ಇರೋದೇ ಸಾಕ್ಷಿ. ಇದಾದ ಮೇಲೆ ನೋಡಿ, ಸರ್ಕಾರಕ್ಕೆ ತನ್ನ ಕರ್ತವ್ಯದ ಅರಿವು ಮೂಡದೆ ಇದ್ರೆ ಅದಕ್ಕೆ ತಕ್ಕ ಶಾಸ್ತೀನ ಪ್ರಕ್ರುತಿನೇ ಮಾಡುತ್ತೆ. ಆ ಕೆಲಸದ ಜವಾಬ್ದಾರಿನ ಆ ಸರ್ವಶಕ್ತನ ಮೇಲೆ ಬಿಡಿ. ಬನ್ನೀ ಇನ್ನೂ ತಡವೇನೂ ಆಗಿಲ್ಲಾ. ಕಾರ್ಯೋನ್ಮುಖರಾಗೋಣ.

ಮಹಾತ್ಮಾ ಗಾಂಧೀಜಿ ಯವರ ಜಯಂತಿ ದಿನ ಪ್ರತೀ ವರ್ಷ ಅವ್ರ ಫೋಟೋಕ್ಕೆ ಹೂವಿನ ಹಾರ ಹಾಕಿ, ಕೈ ಮುಗ್ದು, ಶಾಲಾ ಕಾಲೇಜ್ಗೆ, ಕಚೇರಿಗಳಿಗೆ ಒಂದೊಂದು ದಿನ ರಜೆ ತಗೊಂನ್ದರೆ ಸಾಕೆ?

"ಬದಲಾಗುಹುದು ಈ ಲೋಕ ನೀ ಬದಲಾದರೆ,
ಬದಲಾಗುಹುದು ಈ ಸಮಾಜ ನೀ ಮೊದಲಾದರೆ" - ಮಹಾತ್ಮಾ ಗಾಂಧೀಜಿ


12 ಕಾಮೆಂಟ್‌ಗಳು:

Chamaraj Savadi ಹೇಳಿದರು...

ಬರ ಅಥವಾ ಪ್ರವಾಹ- ಏನೇ ಬಂದರೂ ಕೆಲವರಿಗೆ ಭರ್ಜರಿ ವ್ಯಾಪಾರ. ನೈಸರ್ಗಿಕ ಪ್ರಕೋಪಗಳು ಹಣ ಗಳಿಸುವ ಸಾಧನವಾಗಿದ್ದು ಆಧುನಿಕ ಜಗತ್ತಿನ ವ್ಯಂಗ್ಯ.
ನಿಮ್ಮ ಅನಿಸಿಕೆ ಸರಿ. ಪ್ರವಾಹಪೀಡಿತರಿಗೆ ನೇರವಾಗಿ ನೆರವು ಕೊಡುವುದು ಎಲ್ಲಕ್ಕಿಂತ ಉತ್ತಮ. ಅದು ದುರಂತದೆಡೆಗೆ ನಮ್ಮ ಕಣ್ಣು ತೆರೆಸುತ್ತದೆ. ಹಾನಿಯ ನೇರ ದರ್ಶನ ಮಾಡಿಸುತ್ತದೆ. ಬಹುಶಃ ನಮ್ಮಲ್ಲಿ ಕೊಂಚ ವಿವೇಕವನ್ನೂ ಮೂಡಿಸಬಹುದು.

Me, Myself & I ಹೇಳಿದರು...

ಸವಡಿ ಸಾರ್,

ನಿಮ್ಮಂತಹ ಹಿರಿಯರು ಕಾಮೆಂಟ್ ಹಾಕಿದ್ದು ನನಗೆ ಪ್ರೋತ್ಸಾಹ ಹೆಚ್ಚಾಯ್ತು.
ಹಾಗಾಗ ಬರುತ್ತಿರಿ. ನಿಮಗೆ ಸದಾ ಸ್ವಾಗತ.

ಹೌದು ಸಾರ್, ಅಲ್ಲಿಯ ಜನರು ಈಗ ಅದೆಷ್ಟು ಗೋಳಾಡ್ತಿರ್ಬೇಡ? ಅದಕ್ಕೆ ಸಾಕಷ್ಟು ಹಣ ಸಂಗ್ರಹ ಆಗುತ್ತೆ, ಆದ್ರೆ ಅದು ನೂರಕ್ಕೆ ನೂರು ಸಂತ್ರಸ್ತರ ಕೈ ಸೇರೋದು ಸುಳ್ಳು. ನಾವೇ ಹತ್ತಿಪ್ಪತ್ತು ಸ್ನೇಹಿತರು ಹಣ ಸಂಗ್ರಹಿಸಿ, ಒಂದು ದಿನ ಹೋಗಿ ಅಲ್ಲಿ ಸಂಕಷ್ಟದಲ್ಲಿ ಇರೋ ಪ್ರತಿಯೊಬ್ಬರ ಕಷ್ಟ ನಷ್ಟವನ್ನೂ ಸರಿ ಪಡಿಸದೇ ಹೋದ್ರೂ ಕೆವ್ಲಾ ಕೆಲವು ಕುಟುಂಬಗಳಿಗೆ ಸಹಾಯ ಮಾಡಿದ್ರೆ. ಅಲ್ಲಿ ಉಳಿದ ಪಕ್ಕದವರಿಗೂ ಜೀವನದಲ್ಲಿ ಆಶಾ ಕಿರಣ ಮೂಡುತ್ತೆ. ಇವತ್ತಲ್ಲಾ ನಾಳೆ ಮತ್ತೆ ಬೇರೆ ಯಾರದ್ರೂ ಬಂದು ಸಹಾಯ ಮಾಡ್ತಾರೆ ಅಂತ.

ನಾನು ಈ ಬರಹ ಬರಿಲಿಕ್ಕೆ ಗುಳಿಗೆ ಶಾಸ್ತ್ರಿಗಳೇ (http://gulige.blogspot.com/2009/10/blog-post_03.html) ಕಾರಣ. ಇಲ್ಲದಿದ್ದರೆ ಪತ್ರಿಕೇಲಿ, ಟಿ.ವಿ ಯಲ್ಲಿ ನೋಡಿ ನಾನು ಮರೆತು ಬಿಡ್ತಿದ್ದೆ. ಆದ್ರೆ ಈಗ ನನ್ನಿಂದ ಹಾಗೋ ಸಹಾಯ ಮಾಡಲೇ ಬೇಕು ಅಂತ ತೀರ್ಮಾನ ತಗೊಂಡಿದೀನಿ.

shivu.k ಹೇಳಿದರು...

ನಾವು ದಿನಪತ್ರಿಕೆ ವಿತರಕರು ಈ ನಿಟ್ಟಿನಲ್ಲಿ ಆಗಲೇ ತೊಡಗಿಸಿಕೊಂಡಿದ್ದೇನೆ. ಎಲ್ಲಾ ಏಜೆಂಟುಗಳು ತಮ್ಮಾ ಕೈಲಾದ ಸಹಾಯವನ್ನು ನೀಡುತ್ತಿದ್ದಾರೆ. ಕೆಲವೊಂದು ಹುಡುಗರು[ಬೀಟ್ ಬಾಯ್ಸ್] ತಮ್ಮ ಕೈಲಾದ ಹತ್ತು ಇಪ್ಪತ್ತು ರೂಪಾಯಿಗಳನ್ನು ಕೊಡುತ್ತಿದ್ದಾರೆ. ಈಗ ನಮ್ಮ ಸೆಂಟರಿನಲ್ಲಿ ಪ್ರಾರಂಭಿಸಿದ್ದರಿಂದ ಇತರ ಸೆಂಟರಿನ ಏಜೆಂಟರು ಈ ವಿಚಾರದ ಜಾಗ್ರುತರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂಥ ಐವತ್ತಕ್ಕೂ ಹೆಚ್ಚು ದಿನಪತ್ರಿಕೆ ವಿತರಣೆಯ ಸೆಂಟರುಗಳಿವೆ. ಎಲ್ಲರಿಗೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ ಅನ್ನುವ ನಂಬಿಕೆ ನನ್ನದು..
ನಾವು ದಿನಪತ್ರಿಕೆ ವಿತರಕರು ಮಾತಿಗಿಂತ ಕೃತಿ ಮೇಲು ಅನ್ನುವುದನ್ನು ನಂಬಿದ್ದೇವೆ.

Me, Myself & I ಹೇಳಿದರು...

ಶಿವೂ ಸಾರ್,

ಪ್ರಸ್ತುತ ಅನಾಹುತ, ಹವಾಮಾನ ಇಲಾಖೆಯಿಂದ ಪಡೆದ ಮುನ್ನೆಚ್ಚರಿಕೆಗಿಂತ ತುಂಬಾ ತೀವ್ರ ಆಗಿದೆ ಅಲ್ವೇ? ನಾನೂ ಅಂತ ಮುನ್ಸೂಚನೆಯಲ್ಲಿ ಏನು ತಿಳಿಸಿದ್ರು ಅಂತ ತಿಳಿದಿಲ್ಲ.

ಈಗ್ಲಾದ್ರೂ ಜಾಗೃತರಾಗ್ಬೇಕು, ಸಂತ್ರಸ್ತರ ಕಷ್ಟಕ್ಕೆ ಖಂಡಿತ ಸಹಾಯ ಆಗ್ಬೇಕು. ನಿಮ್ಮ ಕಾಳಜಿಗೆ ವಂದನೆಗಳು. ಹಣ ದುರುಪಯೋಗ ಆಗದೆ ಇರ್ಲಿ ಅನ್ನೋದಕ್ಕೆ ನನ್ನ ಸಹ ಮತ ಅಷ್ಟೇ. ವ್ಯಯಕ್ತಿವಾಗಿ ಯಾರನ್ನೂ ದೂಷಿಸುವ ಉದ್ದೇಶ ನನ್ನದಲ್ಲ.

ನೋಡ್ತಾ ಇರಿ,ಸಂತ್ರಸ್ತರಿಗೆ ಪರಿಹಾರ ಕಾರ್ಯಕ್ಕೆ ಈಗ ಹಣ ಅರಿದು ಬರುತ್ತೆ, ಆದ್ರೆ ಎಷ್ಟು ಪರಿಹಾರ ಕೆಳ್ಸಗಲಾಗ್ತವೆ ಅನ್ನೋದು ಕಾದು ನೋಡೋಣ. ಇದು ಯಾವ ಸರ್ಕಾರದ ಮೇಲೂ ದೂಷಣೆ ಮಾಡೋ ಪ್ರಶ್ನೆ ಅಲ್ಲ, ನಮ್ಮನ್ನ ನಾವು ಕೇಳ್ಕೋ ಬೇಕಿರೋ ಪ್ರಶ್ನೆ.

ಗೋಪಾಲ್ ಮಾ ಕುಲಕರ್ಣಿ ಹೇಳಿದರು...

ಆತ್ಮಿಯ ಲೋದ್ಯಾಶಿಯವರೇ ...

ನಿಮ್ಮ ಸಮಾಜದ ಕಾಳಜಿ, ಕಳಕಳಿಗೆ ನನ್ನ ಸ್ಪಂದನೆ. ಎಲ್ಲರು ಸೇರಿ ನಮ್ಮ ಜನಗಳಿಗೆ ಸಹಾಯ ಹಸ್ತ ಚಾಚೋಣ.

Me, Myself & I ಹೇಳಿದರು...

ಗೋಪಾಲಾರೆ,

ನಿಮ್ಮ ಸ್ಪಂದನೆಗೆ ನನ್ನ ವಂದನೆಗಳು. ನಾವು ಯಾವ್ರೀತಿ ಸಹಾಯ ಹಸ್ತ ನೀಡೋಣ ಅಂತೇಳಿ ಯೋಚಿಸಿ ನೀವೂ ತಿಳಿಸಿ.

ಪವ್ವಿ ಹೇಳಿದರು...

ಲೋದ್ಯಾಶಿ,
ಮೂರ್ತಿ ವಿಷಯಕ್ಕೆ ಬಂದಾಗ ಎಲ್ಲ ಪತ್ರಿಕೆಗಳು,ಮಾಧ್ಯಮಗಳು ಇದಕ್ಕೆ ಮುಂದಾಗಿದ್ದವು, ಆಗ ಸರಕಾರ ತೋರಿದ ಕಳಕಳಿ ಮತ್ತು ಮುನ್ಸೂಚನೆ ಇಂದ ಮಾಡಿದ ಬಂಧನ ಇದೇ ಹವಾಮಾನ ಮುನ್ಸೂಚನೆ ಪಡೆದು ಮಾಡಿದ್ದರೆ ಸ್ವಲ್ಪ ಮಟ್ಟಿಗೆ ಹಾನಿ ತಪ್ಪುತ್ತ ಇತ್ತು. ಅದರ ಬದಲು ಯೋಗಾಸನ ಮಾಡಿಕೊಂಡು, ಊರು ಕೊಳ್ಳೆ ಹೋಡೆಸಿಕೊಂಡ ಮೇಲೆ ಬಾಗಿಲು ಹಾಕುವ ಕ್ರಮ, ಬೇಟಿ ಇದು ಆಡಳಿತದ ಪರಿಯನ್ನು ತೋರಿಸುತ್ತದೆ.

ಈಗ ಆಗಬೇಕಾಗಿರುವುದು ಮತ್ತು ಮಾಡಬೇಕಾಗಿರುವುದು ಬರಿ ಆಡಳಿತ ಯಂತ್ರ ಅಷ್ಟೆ. ಜನ ಚಂದಾ ಎತ್ತಿ ಒಂದಿಬ್ಬರಿಗೆ ಕೊಟ್ಟು ತಾವು ಎನಾದರೂ ಮಾಡಿದೆವು ಅಂತ ಬೀಗಬಹುದೆ ವಿನಹ ಅದು ನಿಜವಾದ ಪರಿಹಾರವಲ್ಲ.
ಕೇಂದ್ರ ಇಲ್ಲ ವಿದೇಶದಿಂದ ಹಣವನ್ನು ತಂದು ಅದನ್ನು ಸಮರ್ಪಕವಾಗಿ ಬಳಸಿ , ಹಣ ಪೋಲಾದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲೆ ಇದೆ. ೨ ಜಿಲ್ಲೆಗೆ ಹಾನಿಯಾದ ಆಂದ್ರಕ್ಕೆ ಆ ಮಟ್ಟಿಗೆ ದುಡ್ಡು ಕೊಟ್ಟಿದ್ದನ್ನು ಪ್ರಶ್ನಿಸಿ ಇದನ್ನು ವಿರೋಧಿಸುವ ಕೆಲಸಕ್ಕೆ ನಮ್ಮ ಎಂ.ಪಿಗಳು ಮುಂದಾಗಬೇಕು, ಆಯ್ಕೆ ಆಗಿರುವ ಜನ ತಮ್ಮ ಕೆಲ್ಸ ನಿಬಾಯಿಸಿದರೆ ಸಾಕು.

ಸರಕಾರ ಖಾಸಗಿಯವರನ್ನು ಆಗತ್ಯ ಬಿದ್ದರೆ ಬಳಸಿಕೊಂಡು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಗಲ್ಲಿ,ಗಲ್ಲಿಯಲ್ಲಿ ಚಂದಾ ಎತ್ತಿ ಇಲ್ಲಿಂದ ಚಿತ್ರಾನ್ನವನ್ನು ಕಟ್ಟಿಸಿಕೊಂಡು ಹೋಗಿ ಅಲ್ಲಿ ಹಂಚೋ ಒಳಗೆ ಅದು ಹಳಸಿಹೋಗಿರುತ್ತದೆ.

ಸರಕಾರವೇ ಕೆಲ ಸಂಘಟನೆಗಳು ಆಗಿರುವಾಗ,ಚಂದಾ ಎತ್ತದೆ ಬರುವ ಹಣವನ್ನು ಯಾವ ರೀತಿ ಬಳಕೆ ಮಾಡಬೇಕು ಎಂದು ಕರಡು ಪ್ರತಿ ಮಾಡಿಕೊಟ್ಟರೆ ಸಾಕು ಆ ಸಂಘಟನೆಗಳು "ಸಾರ್ವಜನಿಕ ಜೀವನದಲ್ಲಿ ನಾಯಕರು ಎನು ಮಾಡಬೇಕೆಂದು ಭೋದಿನೆ ಮಾಡಿದಕ್ಕೆ ಸಾರ್ಥಕ ಆಗುತ್ತದೆ.
ಈ ಭೋಧನೆ ಪಡೆದಿರುವ ನಾಯಕರಿಗೆ ಇದು ಸತ್ವ ಪರೀಕ್ಷೇ. ಬೆಳ್ಳಿ ಕಿರಟ ಹಾಕಿಸುಕೊಳ್ಳುವ ಸಮಯವಲ್ಲ ಅಲ್ವೇ ?

ಮುಂದೇನು ..
http://chum-banavaasi.blogspot.com/2009/10/blog-post.html

ಸಾಗರದಾಚೆಯ ಇಂಚರ ಹೇಳಿದರು...

ಲೋದ್ಯಾಶಿ ಸರ್,
ಸರಕಾರ ನಮ್ಮಿಂದನೆ ನಡೆಯತ್ತೆ ಅನ್ನೋದು ಹೇಗೆ, ನಮಗೆ ಬೇಕಾಗಿದ್ದು ಏನು ಮಾಡೋಲ್ಲ,
ನಿಮ್ಮ ಲೇಖನ ಸ್ಫೂರ್ತಿದಾಯಕವಾಗಿದೆ, ಆ ಭಗವಂತ ಅಲ್ಲಿನ ಜನರಿಗೆ ಇದನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ

Me, Myself & I ಹೇಳಿದರು...

ಪವ್ವಿ ಸಾರ್,

ಕೇಂದ್ರದ ಕಣ್ಣಾಮುಚ್ಚಾಲೆ ಈಗತಾನೆ ಓದಿದೆ. ವಿಧಾನ ಸೌದ ಮುತ್ತಿಗೆ ಮಾಡಿದ್ರಲ್ಲಾ ಆ ನಾಯಕರು ಈಗ ನ್ಯಾಯವನ್ನ ಅಳಿಲಿಕ್ಕೆ ಅದ್ಯಾವ ತಕ್ಕಡಿ ಉಪಯೋಗಿಸ್ತಾರೆ ಕಾದು ನೋಡೋಣ.

ನೀವೇಳಿದ್ದು ನಿಜ, ನಿಮ್ಮ ಸಮಯ ಪ್ರಜ್ಞೆಗೆ ನಾನೂ ಒಪ್ಪುತ್ತೇನೆ. ಲಕ್ಷಗಟ್ಟಲೆ ಆಸ್ತಿ ಕಣ್ಣು ಎದುರಿಗೆ ಕೊಚ್ಚಿ ಹೋಗಿರುವಾಗ, ನಾವು-ನೀವು ಸಾಮಾನ್ಯರು ನೀಡೋ ಸಾವಿರವೋ - ಎರಡು ಸಾವಿರವೋ ಯಾವ ಲೆಕ್ಕ?

ಉಳ್ದಂತೆ, ಬೆಕ್ಕಿಗೆ ಗಂಟೆ ಕಟ್ಟೋರು ಯಾರು? ಅದನ್ನೇ ಜಪಿಸ್ತಾ ಕುಂತ್ರೆ ಫಲ ಏನು? ಸಾರ್, ನೀವು ಏನಾದ್ರೂ ಕ್ರಮ ತಗೊಂಡ್ರೆ ತಿಳಿಸಿ. ನಿಸ್ವಾರ್ಥದಿಂದ ನಮ್ಮಿನ್ದೆನಾಗುತ್ತೆ ಅದನ್ನ ಮಾಡಣ. ಏನಂತೀರಾ?

Me, Myself & I ಹೇಳಿದರು...

ಗುರುಮೂರ್ತಿ ಸಾರ್,

ನಮಗೆ ಸರ್ಕಾರ, ಸರ್ಕಾರಕ್ಕೆ ನಾವಲ್ಲ. ಇದನ್ನ ಜನ ಪ್ರತಿನಿಧಿಗಳು ಸಹ ತಿಳ್ಕೋ ಬೇಕು. ಜನಗಳು ಸಹ ಸಹಕರಿಸ್ಬೇಕು. ಪರಸ್ಪರ ಹೊಂದಾಣಿಕೆ ಇರ್ಬೇಕು.

ಜನಗಳ ಕಷ್ಟಕ್ಕೆ ಅದು ಬಿ.ಜೆ.ಪಿ. ನೆ ಆಗ್ಲಿ, ಕಾಂಗ್ರೆಸ್ಸ್ ಆಗ್ಲಿ, ರಾಜ್ಯನೆ ಆಗ್ಲಿ, ಕೇಂದ್ರನೆ ಆಗ್ಲಿ, ಸಂಪೂರ್ಣ ಸಹಾಯ ನೀಡಬೇಕು.

ಜನ ಸಾಮಾನ್ಯನಿಗೆ ಸಂಪೂರ್ಣ ರಕ್ಷಣೆ ಇರ್ಬೇಕು ಅಂತಹ ನಂಬಿಕೆನ ಸರ್ಕಾರಗಳು ಮೂಡಿಸ್ಬೇಕು. ಅಲ್ವೇ?

ಗೋಪಾಲ್ ಮಾ ಕುಲಕರ್ಣಿ ಹೇಳಿದರು...

ಆತ್ಮೀಯ ಲೋದ್ಯಾಶಿಯವರೇ ..
ಬೇರೆ ಚಾನೆಲ್ ನಿಂದ relief ಫಂಡ್ Collect ಮಾಡ್ತಾ ಇದ್ದಾರೆ. ನಾವು ಅದಕ್ಕೆ ನಮ್ಮ ಕೈಲಾದ ಸಹಾಯ ಮಾಡೋಣ.. ಏನಂತಿರ ಸರ್ ...ನಿಮ್ಮ ಅನಿಸಿಕೆ ಏನು?

Me, Myself & I ಹೇಳಿದರು...

ಆತ್ಮೀಯ ಗೋಪಾಲಾರೆ,

ನಿಮ್ಮ ಸ್ಪಂದನೆಗೆ ಮತ್ತೊಮ್ಮೆ ವಂದನೆಗಳು.
ನನ್ನ ಅಭಿಪ್ರಾಯ ಈ ಬಹರದಲ್ಲಿ ಏನಿದೆಯೋ ಈಗ್ಲೂ ಅದೇ ಆಗಿದೆ. ಒಮ್ಮೆ ನಾವು ಸ್ನೇಹಿತರೆಲ್ಲಾ ಸೇರಿ ನೇರವಾಗಿ ಭೇಟಿ ನೀಡೋಣ. ನನ್ಗೆ ಜನವರಿ ಅಥವ ಫೆಬ್ರುವರಿ ಹೆಚ್ಚು ಸೂಕ್ತ. ನಮಗೂ ಸಾಕಷ್ಟು ಕಾಲಾವಕಾಶ ಇದೆ. ತಯಾರಿ ಮಾಡ್ಕೊಳ್ಳೋಣ. ಒಂದು ವೀಕೆಂಡ್ ಹೋಗ್ಬರೋಣ.
ದಿನ ಬೆಳಗಾದ್ರೆ, ನನ್ಗೆ ಅದಿಲ್ಲಾ-ಇದಿಲ್ಲಾ ಅಂತ ಪರಿತಪಿಸೋ ನಮ್ನಮ್ಮಾ ಮನಸ್ಸಿಗೂ ಸಹ ಆ ದುರ್ಭಾಗ್ಯರ ಕೂಗನ್ನೂ ಸ್ವಲ್ಪ ಕೇಳಿಸೋಣ. ಏನಂತೀರಾ?

blogspot add widget