ಭಾನುವಾರ, ನವೆಂಬರ್ 1, 2009

ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು

ಕನ್ನಡ ರಾಜ್ಯೋತ್ಸವಕ್ಕೆ ಅಂತೇಳಿ ಕನ್ನಡ ಭಾಷಾಭಿಮಾನದ ವಿಶೇಷ ಬರಹ ಇದು. ಹಾಗಂತ ಇದ್ರಲ್ಲಿ ಯಾವ್ದನ್ನೂ ಹೊಸ್ದಾಗಿ ಬೇಯಿಸಿ ತಂದು ನಿಂಗೆ ಬಡಿಸ್ತಿರೊದಲ್ಲಾ. ಹತ್ತನೇ ತರಗತಿವರ್ಗೆ ಕನ್ನಡ ಮಾದ್ಯಮದಲ್ಲಿಯೇ ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಓದ್ಕೊಂನ್ಡು ಬಂನ್ದೀರೊವ್ನು ನಾನು. ಹಾಗಾಗಿ ಅದ್ರ ಬಗ್ಗೆನೇ ಒಂನ್ದಿಷ್ಟು ಬರೀತಿದೀನಿ.

ಇಂಗ್ಳೀಷ್ ಮಾದ್ಯಮದಿಂದ ಬಂದಂತಹ ವಿದ್ಯಾರ್ಥಿಗಳು ಕನ್ನಡ ಮಾದ್ಯಮದಿಂದ ಬಂದಂತ ವಿದ್ಯಾರ್ಥಿಗಳು ಅಂದ್ರೆ ಅಥ್ವಾ ಗ್ರಾಮೀಣ ಮಟ್ಟದಿಂದ ಬಂದಂತಹ ಮಕ್ಳು ಅಂದ್ರೆ ಒಂದ್ರೀತಿ ಕೀಳರಿಮೆಯಿಂದ, ಸಂಕುಚಿತ ಭಾವದಿಂದ ನೋಡೊದಂತು ಸಾಮಾನ್ಯ ಸಂಗ್ತಿ. ಅದಕ್ಕೆ ವಿದ್ಯಾರ್ಥಿಗಳನ್ನ ಮಾತ್ರ ಧೂಷಿಸಿ ಏನೂ ಪ್ರಯೋಜ್ನ ಇಲ್ಲಾ. ಯಾಕಂದ್ರೆ ಬಾಲ್ಯದಿಂದ್ಲೆ ಆ ರೀತಿ ಭಾವ್ನೆಗಳನ್ನ ಅವ್ರ ಪೋಷಕರು ಮಕ್ಳ ತಲೆಗೆ ತುಂಬಿರ್ತಾರೆ. ಮೊದ್ಲು ನಮ್ಮ ಸಮಾಜದಲ್ಲಿರೋ ಇಂಗ್ಲೀಷ್ ಪ್ರಿಯರ ಮಡಿವಂತಿಗೆ ಕಡ್ಮೆ ಹಾಗ್ಬೇಕು. ಇಲ್ದೇ ಹೋದ್ರೆ ಇದೇ ಸಂಸ್ಕ್ರುತಿ ಮುಂದುವರ್ದು ಭವಿಷ್ಯದಲ್ಲಿ ಕನ್ನಡ ಭಾಷೆ ಕಂಣ್ಮರೆ ಆಗೋಕ್ಕೆ ಶತಮಾನಗಟ್ಲೆ ಕಾಯೋ ಅವಶ್ಯಕತೆ ಇಲ್ಲಾ ಅನ್ಸುತ್ತೆ.

ಇಷ್ಟಕ್ಕೂ ಇಂಗ್ಲೀಷೇ ಮಾತೃ ಭಾಷೆ ಆಗಿದ್ರೂ, ಇವತ್ತು ಅಮೇರಿಕದಲ್ಲಿ ಯಾಕೆ ಈ ರೀತಿ ನಿರುದ್ಯೋಗ ಸಮಸ್ಯೆ ಅಂತ ಪ್ರಶ್ನೆನೇ ಬರಲ್ವೇ? ಅದಕ್ಕೆ ಇತರೇ ಹಲ್ವಾರು ಕಾರಣಗಳು ಇರ್ಬೌದು. ಆದ್ರೆ ಕೇವ್ಲಾ ಇಂಗ್ಳೀಷ್ ಬರುತ್ತೆ ಅಂದ ಮಾತ್ರಕ್ಕೆ ಉದ್ಯೋಗ ಖಾತ್ರಿ ಅಂತೇನೂ ಇಲ್ವಲ್ಲಾ?

ನಮಗಿಷ್ಟ ಬಂದ ಯಾವ್ದೇ ವಿಷಯವನ್ನಾಗಲಿ ಮಾತೃ ಭಾಷೆಯಲ್ಲಿಯೇ ಕಲಿಯೋ ವ್ಯವಸ್ಥೆ ಖಂಡಿತ ಬರ್ಬೇಕು. ಕಲಿಕೆಗೆ ಮಾದ್ಯಮವಷ್ಟೇ ಮುಖ್ಯಾ ಅಲ್ಲ. ಕಲಿಯೋ ಭಾವ್ನೆ, ಛಲ, ಆಸಕ್ತಿ ಸೌಕರ್ಯ ಕೂಡ ಇರ್ಬೆಕು. ಸೌಕರ್ಯ ಅಂದಾಕ್ಷಣ ಅದು ಇಂಗ್ಳೀಷ್ ಮಾದ್ಯಮ ಅಂತಲ್ಲಾ. ಕಲಿಕೆಗೆ ಇಂಗ್ಲೀಷ್ ಮಾದ್ಯಮ ಒಂದು ಸೌಕರ್ಯ ಅಲ್ಲ. ಅದೊಂದು ನಮ್ಮನ್ನ ನಾವು ರಾತ್ರಿ ಕಂಡ ಬಾವಿಗೆ ಹಗಲಲ್ಲಿ ತಳ್ಳಿಕೊಂಡು ಬಿದ್ದ ಉದಾಹರಣೆಯಷ್ಟೇ. ಮೊದ್ಲು ಇಂಗ್ಲೀಷ್ ಬಗೆಗಿನ ಅನಗತ್ಯ ವ್ಯಾಮೋಹ ದೂರ್ವಾಗ್ಬೇಕು.

ಇತ್ತೀಚೆಗೆ ಒಂದಿನ ಯುರೋಪಿನಲ್ಲಿ ರೈಲಲ್ಲಿ ಸಂಚರಿಸ್ತಾ ಇದ್ದೆ. ಆಗ ನನ್ನ ಪಕ್ಕ ಕೂತಿದ್ದ ಹುಡ್ಗಿ ದಾರಿ ತುಂಬಾ ಓದ್ತಿದ್ದನ್ನ ಗಮನ್ಸಿ ಪರಿಚಯ ಮಾಡ್ಕಂಡೆ. ಆಕೆ ಫಾರ್ಮಸಿ ವಿದ್ಯಾರ್ಥಿನಿಯಂತೆ. ಅವ್ಳ ಕೈಲಿದ್ದಾ ಪುಸ್ತಕ ಅವ್ಳ ಮಾತೃ ಭಾಷೆಯಲ್ಲಿಯೇ ಇದ್ದದ್ದನ್ನ ಕಂಡು, ನಾನು ಇಂಗ್ಲೀಷ್ ಮಾದ್ಯಮಕ್ಕೆ ಸೇರಿದಾಗ (ಪಿ.ಯೂ.ಸಿ) ಮೊದ ಮೊದ್ಲು ಅನುಭವಿಸಿದ ಗೊಂದ್ಲದ ದಿನಗಳನ್ನ ಊಹಿಸ್ಕೊಂಡೆ. ಆದ್ರೆ ನಮ್ಮಲ್ಲಿ ವಿಪರ್ಯಾಸವೆಂಬಂತೆ ವಿಗ್ನಾನವನ್ನ ಕಲಿಯೊಕ್ಕೆ ಇಂಗ್ಲೀಷ್ ಗೊತ್ತಿರ್ಲೇ ಬೇಕು ಅನ್ನೋ ಕಡ್ಡಾಯ ಇದೆ. ಕಾಗುಣಿತ ಕಲಿಯೊಕ್ಕೆ ಮೊದ್ಲೇ ಅ, ಆ, ಇ, ಈ ... ಕಲಿಲೇ ಬೇಕು ಒಪ್ಕೋಳೋಣ. ಆದ್ರೆ ವಿಗ್ನಾನ, ಗಣಿತ ಇಂತದ್ದೆಲ್ಲಾ ಕಲಿಯೊಕ್ಕೆ ಇಂಗ್ಲೀಷ್ ಕಡ್ಡಾಯ ಏಕೆ?

ಇವತ್ತು ನಮ್ದೇಶದ ಗ್ರಾಮೀಣ ಮಟ್ಟದ ಪ್ರತಿಭೆಗಳು ಸಹ ಬೆಳಕಿಗೆ ಬರ್ಬೆಕು ಅಂದ್ರೆ ನಮ್ನಮ್ಮಾ ಮಾತೃ ಭಾಷೆಯಲ್ಲೇ ಎಲ್ಲವನ್ನೂ ಕಲಿಯೋ ವ್ಯವಸ್ಥೆ ಖಂಡಿತ ಸ್ವಾಗತಾರ್ಹ. ಹಾ!!! ಒಂದ್ಮಾತು, ಇಷ್ಟು ಮಾತ್ರಕ್ಕೆ ಇವತ್ತಿನವರ್ಗೆ ನಮ್ಮ ಸಮಾಜದಲ್ಲಿ ಆಗಿರೋ ಅಭಿವೃದ್ದಿ ಕಾರ್ಯಾಗಳೆಲ್ಲಾ ಕೆವ್ಲಾ ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳಿಂದ ಅಥ್ವಾ ನಗರ ಪ್ರದೇಶದಿಂದ ಬಂದಿರೋ ಮಕ್ಳಿಂದ ಮಾತ್ರ ಅನ್ನೋ ತೀರ್ಮಾನಕ್ಕೆ ಬಂದ್ಬಿಡ್ಬೇಡಿ. ಎಷ್ಟೇ ಅಸೌಕರ್ಯಗಳಿದ್ರೂ ಸಹ, ಗ್ರಾಮೀಣ ಮಟ್ಟದ ಹಾಗೂ ಕನ್ನಡ ಮಾದ್ಯಮದ ಮಕ್ಳು ಸಹ ಸಾಕಷ್ಟು ಸಾಧನೆಗಳನ್ನ ಮಾಡಿದ್ದಾರೆ. ಮಾಡ್ತಿದಾರೆ, ಮುಂದೆಯೂ ಮಾಡ್ತಾರೆ.

ಯಾವ್ದೇ ವಿಷ್ಯಾವನ್ನಾ ಮಾತೃ ಭಾಷೆಯಲ್ಲಿಯೇ ಕಲಿ ಬೇಕಾದ್ರೆ, ವಿದ್ಯಾರ್ಥಿಗಳಿಗೂ ಸಾಕಷ್ಟು ಸರಳ್ವಾಗಿ, ಸುಲಭ್ವಾಗಿ ಅರ್ಥ ಆಗುತ್ತೆ. ಆದ್ರೇ ಅಲ್ಲೊಮ್ಮೆ ಇಲ್ಲೊಮ್ಮೆ ಬರುವಾ
 * ಗಣಿತದ ಪ್ರಮೇಯಗಳ ನಿರೂಪಣೆಯೋ
 * ವಿಗ್ನಾನದಲ್ಲಿ ಬರೋ ನಾಮಪದಗಳೋ, ಕ್ರಿಯಾಪದಗಳೋ ಅಥ್ವಾ
 * ಇನ್ನೂ ಕೆಲ್ವು ಸಾಮಾನ್ಯ ಪದಗುಚ್ಚಗಳೋ
ಅಲ್ಪ ಸ್ವಲ್ಪ ಕಷ್ಟವಾಗ್ಬೌದು. ಅದಕ್ಕೇಂತ ಶಿಕ್ಷಣ ಮಾದ್ಯಮವನ್ನೇ ಬದಲ್ಸೋದು ಎಷ್ಟು ಸೂಕ್ತ ಹೆಜ್ಜೆ? ಕಲಿಕೆಯಲ್ಲಿ ಮೊದಮೊದ್ಲು ಎಲ್ಲವೂ ಕಷ್ಟವಾಗೋದು ಸಾಮಾನ್ಯ. ಅದಕ್ಕೇ ಅದನ್ನ ಕಲಿಕೆ, ಶಿಕ್ಷಣ ಅಂತ ಅನ್ನೋದು. ಇಲ್ದೇ ಹೊದ್ರೆ ಶಿಕ್ಶಣಿಕಿಂತ ಮೊದ್ಲೇ ಪರೀಕ್ಷೆಗಳನ್ನ ನಡೆಸ್ಬೌದಾಗಿತ್ತು.

ಇಂಗ್ಳೀಷ್ ಮಾದ್ಯಮದಲ್ಲಿ ಅಂದ್ಮಾತ್ರಕ್ಕೆ ವಿಘ್ನಾನ, ಗಣಿತ ಎಲ್ವೂ ಕಲಿಯಕ್ಕೇ ಸರಲ್ವಾಗುತ್ತೆ, ಸುಲಭ್ವಾಗುತ್ತೆ ಅಂತಾದ್ರೆ
 * ಇಂಗ್ಲೀಷ್ನಲ್ಲಿ ಈ ವಿಷ್ಯಗಳಿಗೆ ಸಂಬಂದಿಸಿದ ಕಠಿಣ ಪದಗಳೇ ಇಲ್ವೇ?
 * ಆಗಿದ್ರೆ, ಇಂಗ್ಲೀಷ್ನಲ್ಲಿ ನಿಘಂಟು ಅಂತಾನೇ ಇಲ್ವೇ? ಇದ್ರೂ ಅದನ್ಯಾರೂ ಬಳಸೊದೇ ಇಲ್ವೇ?
 * ಯಾವ್ದೇ ಇಂಗ್ಳೀಷ್ ಪುಸ್ತಕ ಓದಿದ ಕೂಡ್ಲೇ ಎಲ್ವೂ ಸರಳ್ವಾಗಿ ಅರ್ಥ ಆಗ್ಬೇಕು ತಾನೇ?
 * ಅಂಗಾದ್ರೇ, ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳೇಕೆ ಕಾಂನ್ವೆಟ್ಗೆ, ಶಾಲೆಗೆ, ಕಾಲೇಜ್ಗೆ ಹೋಗ್ತಾರೆ?
 * ವಿಶೇಷ ಮನೆಪಾಠಕ್ಕೆ (ಟ್ಯೂಷನ್) ಯಾಕೇ ಹೋಗ್ತಾರೆ?
 * ಮನೇಲೇ ಕೂತ್ಕಂಡು, ಸ್ವಂತ ಓದಿ ಎಲ್ಲಾ ಕಲ್ಕೋ ಬಹುದಲ್ವೇ?
 * ಕೊನೆಗೆ ಒಟ್ಟಿಗೇ ವರ್ಷದಲ್ಲಿ ಒಂದ್ಸಾರಿ ಪರೀಕ್ಷೆ ಬರಿಯೋಕ್ಕೆ ಮಾತ್ರ ಬಂದ್ರೆ ಸಾಕಾಗಲ್ವೇ?
 * ಇದ್ರಿಂದಾ ನಮ್ಮ ಸರ್ಕಾರಕ್ಕೂ ಹಾಗೂ ಎಲ್ಲಾ ಪೋಷಕರಿಗೂ ಸಾಕಷ್ಟು ಖರ್ಚು ಕಡ್ಮೆ ಹಾಗ್ತಿತ್ತಲ್ವೇ?
 * ಎಲ್ರೂ ತಮ್ತಮ್ಮಾ ಮನೇಲೇ ಒದ್ಕೊಂಡ್ರೆ ಸಾಕು ಅಂತಾದ್ರೆ ಕೆವ್ಲಾ ಆಸಕ್ತಿಯೊಂದಿದ್ರೆ ಸಾಕು, ಎಂತಹ ಬಡ ವಿದ್ಯಾರ್ಥಿ ಸಹ ಸಾಕಷ್ಟು ವಿದ್ಯಾಬ್ಯಾಸ ಮಾಡ್ಬೌದಾಗಿತ್ತಲ್ವೇ?
 * ಆಗ, ನಂದೇಶದ ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು ಇರ್ತಿದ್ದ್ರಲ್ವೇ?

ಆದ್ರೂ ಇವತ್ತು ಇಂಗ್ಲೇಂಡ್, ಅಮೇರಿಕ, ಆಸ್ಟ್ರೇಲಿಯಾ ಇಲ್ಲೇಲ್ಲಾ
 * ಕಾಂನ್ವೆನ್ಟ್ ಗಳು
 * ಕಾಲೇಜ್ಗಳು
 * ವಿವಿದ ವಿಶ್ವ ವಿದ್ಯಾನಿಲಯಗಳು
ಅಂತ ಯಾಕಿವೇ? ಅಲ್ಲೇಲ್ಲಾ ಜನರ ಮಾತೃ ಭಾಷೆನೇ ಇಂಗ್ಲೀಷ್ ಅಲ್ವೇ?

ಯುರೋಪ್ ರಾಷ್ಟ್ರಗಳಲ್ಲಿ, ರಷ್ಯಾದಲ್ಲಿ, ಜಪಾನ್ನಲ್ಲಿ, ಅಷ್ಟು ದೂರ ಏಕೆ? ಪಕ್ಕದ ಚೀನಾದಲ್ಲಿ, ಇಂದಿಗೂ ಇಂಗ್ಲೀಷ್ ಭಾಷೆ ಅಂದ್ರೆ ನಂಮ್ದೇಶ್ದಲ್ಲಿ ಸಿಗೋ ರೀತಿಲಿ ವಿಷೇಶ ಪ್ರತಿಷ್ಟೆ, ಘನತೆ, ಮಾರ್ಯಾದೇ ಯಾವ್ದೂ ಸಿಗಲ್ಲಾ. ಆದ್ರೂ ಈ ದೇಶಗಳು ನಂಮ್ದೇಶಕ್ಕಿಂತ ಯಾವುದ್ರಲ್ಲಿ ಹಿಂದೆ ಇದಾವೇ ಸ್ವಾಮಿ? ಆದ್ರೆ ನಮ್ಮ ಸಮಾಜ್ದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಳೀಷ್ ಭಾಷೇನ ಬಳ್ಸೋದು ಅಂದ್ರೆ ಅವ್ರ ಪ್ರತಿಷ್ಟೆ, ಘನತೆ, ಗೌರವ ಹೆಚ್ಚಾದಂತೆ ಮತ್ತೆ ಅದನ್ನ ತಮ್ಮ ಅಭಿವೃದ್ದಿ ಸಂಖ್ಯೇತವಾಗಿ ಭಾವಿಸ್ತಾರಲ್ಲಾ? ಅದು ಯಾಕೆ?

ಈ ಪ್ರಶ್ನೆಗೆ ಉತ್ತರ ಸರಳ. ಬ್ರಿಟೀಷರು ನಮ್ಮ ಮೇಲೆ ಇನ್ನೂರು ವರ್ಷ ಸತತ್ವಾಗಿ ದಬ್ಬಾಳಿಕೆ ಮತ್ತೆ ಅತ್ಯಾಚಾರ ಮಾಡಿದ್ದೇ ಇದಕ್ಕೆಲ್ಲಾ ಮೂಲ ಕಾರ್ಣ.
ಇಲ್ದೇ ಹೋಗಿದ್ರೆ?
 * ಕನ್ನಡನೂ ಇಲ್ಲಾ
 * ಇಂಗ್ಲೀಷ್ ಕೂಡ ಇಲ್ಲಾ.

ಕೆಲ್ವು ಮೂಲಗಳ ಪ್ರಕಾರ, ಪ್ರಪಂಚದಲ್ಲಿ ಸದ್ಯಕ್ಕೆ ಅತೀ ಹೆಚ್ಚು ಇಂಗ್ಲೀಷ್ ಮಾತಾಡೋವ್ರ ಜನಸಂಖ್ಯೆಯಲ್ಲಿ ನಮ್ದೇಶಕ್ಕೆ ತೃತೀಯ ಸ್ಥಾನ ಸಿಗುತ್ತಂತೆ. ತುಂಬಾ ಅದ್ಬುತ ಸಾಧನೆ ಅಲ್ವೇ? ನಮ್ದೇ ದೇಶದ ಪ್ರತಿಭೆಗಳನ್ನ ಬಲಸ್ಕೋಳ್ದೇ ಹೋದ್ರೂನೂ ಪರ್ವಾಗಿಲ್ಲಾ, ಪ್ರೋತ್ಸಾಸದೇ ಹೋದ್ರೂ ಪರ್ವಾಗಿಲ್ಲಾ, ನಮ್ಗೆ ಇಂಗ್ಲೀಷ್ ಮಾತಾಡಕ್ಕೆ ಮಾತ್ರ ಚೆನ್ನಾಗಿ ಬರುತ್ತೆ. ಶಬ್ಬಾಶ್!

ಇಂಗ್ಲೀಷ್ರು ಬಂದ್ರು ಮುಸಲ್ಮಾನ ದೊರೆಗಳು ಮಾಡ್ತಿದ್ದಾ ದಬ್ಬಾಳಿಕೆಯಿಂದ ನಮ್ಮ ಸಮಾಜನ ಬಚಾವ್ ಮಾಡಿದ್ರು, ಇಲ್ದೇ ಹೋಗಿದ್ರೆ? ಏನಾಗ್ತಿತ್ತು ಅಂತೇಳಿ ಕೊನೆಗೆ ಒಂದು ಹಾಸ್ಯ ಸಂಭಾಷಣೆಯೊಂದಿಗೆ ಈ ಬರಹನ ಮುಗಿಸ್ತೀನಿ

 "ಹೇಯ್, ನಿಂಬ್ದು ಬೇಟಾ, ಯಾವ್ದೂ ಭಾಷೇಲಿ ಓದ್ತದೆ?"

 "ಜಿ, ನಮ್ದುಗೆ ಬೇಟಾಗೆ, ಕನ್ನಡಾಗೆ ಓದ್ತದೆ."

 "ಹೇ! ನಿಂಮ್ದುಗೇ ಇನ್ನೂ ಯಾವ್ದೂಗೇ ಕಾಲ್ದಾಗೇ ಐತೆ? ಕನ್ನಡಾಗೆ ಕಲ್ತು ಏನು ಉಪ್ಯೊಗ ಆಯ್ತದೆ? ಅನ್ತ ಕಳೀಸ್ತೀರಿ?"

 "ಜಿ, ಯಾಕೇ? ಈಗ ನಂಮ್ದುಗೇ ಏನಾತು?"

 "ನಮ್ದುಗೆ ನವಾಬಂಗೆ ಹೇಳಿದ್ದು ನಿಮ್ಗೆ ಇನ್ನೂ ಗೊತ್ತಾಗಿಲ್ಲಾ? ಎಲ್ರೂ ಉರ್ದೂಗೆ ಭಾಷೇಲೀ ಕಲ್ಸಿ ಅಂತ ಹೇಳಿದಾರೆ! ಮುಂದೆ, ಮಕ್ಳಿಗೇ ಇಗ್ನಾನ, ಗಣಿತ ಕಲಿಯಕ್ಕೆ ಶಾನಾ ಸುಲ್ಬಾ ಆಯ್ತಾದಂತೆ!"

 "ಹೌದಾಜೀ, ಇದು ನಮ್ದುಗೇ ಗೊತ್ತೇ ಇರ್ಲಿಲ್ಲಾ. ಇಗೋ ಈಗ್ಲೇ ಹೋಗಿ, ನಂಮ್ದುಗೇ ಬೇಟಾಂದು, ಉರ್ದುಗೇ ಮಾದ್ಯಾಮಕ್ಕೆ  ಸೇರಿಸ್ತದೆ!, ಜೈ ನವಾಬ್"

ಜೈ ಹಿಂದ್ ,
ಜೈ ಕರ್ನಾಟಕ ಮಾತೆ.

25 ಕಾಮೆಂಟ್‌ಗಳು:

Ittigecement ಹೇಳಿದರು...

ಲೋದ್ಯಾಶಿಯವರೆ...

ಭಾಷಾಭಿಮಾನ ಇರಬೇಕು...
ನಿಮ್ಮ ವಿಡಂಬನೆ ಚೆನ್ನಾಗಿದೆ...

ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

Me, Myself & I ಹೇಳಿದರು...

ಆತ್ಮೀಯ ಪ್ರಕಾಶ್ಜಿ

ಧನ್ಯವಾದಗಳು.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

balasubramanya ಹೇಳಿದರು...

ಲೋದ್ಯಾಶಿ ರವರೆ ನಿಮ್ಮ ಅನಿಸಿಕೆ ಸ್ವಲ್ಪ ಮಿರ್ಚಿ ಇನ್ದ್ದಂಗ ಅದ ! ಭಾಷೆ ಬಗ್ಗೆ ನಿಮ್ಮ ಅನಿಸಿಕೆ ವಿಡಂಬನೆ ರಂಜಿಸಿದೆ.ಬ್ರಿಟನ್ ಪಕ್ಕದಲ್ಲೇ ಇರೋ ಫ್ರಾನ್ಸ್ ದೇಶದಲ್ಲಿ ಎಲ್ಲವೂ ಬ್ರಿಟನ್ ಗೆ ತದ್ವಿರುದ್ದ ! ಅಲ್ಲಿ ಜನ ಫ್ರೆಂಚ್ ಭಾಷೆ, ಫ್ರ್ರೆನ್ಚ್ ಹೇರ್ ಕಟ್ !,ಫ್ರೆಂಚ್ ಪಿಜ್ಜಾ,ಫ್ರೆಂಚ್ ಗಡ್ಡ ,ಎಲ್ಲವೂ ಫ್ರೆಂಚ್ ಬೇಕೆಂಬ ಹಂಬಲಿಕೆ ಹೊಂದಿದ್ದಾರೆ!ಚೀನಾ, ಅರ್ಜೆಂಟಿನ, ಚಿಲಿ,ಜರ್ಮನಿ,ಜಪಾನ್,ರಶ್ಶಿಯಾ, ಬಹಳಷ್ಟು ದೇಶಗಳು ಇಂಗ್ಲಿಷ್ ಅನ್ನು ತಂಬ ದಿನನಿತ್ಯದ ಭಾಷೆ ಎಂದು ಪರಿಗಣಿಸಿಲ್ಲ, ಆದ್ರೆ ನಾವು ಬಹಳ ಉದಾರಿಗಳು ಬಿಡ್ರಿ!ಆಯ್ತು ಬಿಡಿ ಯೇಸ್ತೆಲಿದ್ರು ಅಷ್ಟೇ ! ನಿಮಗೆ ಕನ್ನಡ ಹಬ್ಬದ ಶುಭಾಶಯಗಳು.

Me, Myself & I ಹೇಳಿದರು...

ಆತ್ಮೀಯ ಬಾಲಸುಬ್ರಮಣ್ಯರವರೆ (ನಿಮ್ಮೊಳಗೊಬ್ಬ)

ನಿಮ್ಮ ಪ್ರತಿಕ್ರಿಯೆ ಇಷ್ಟ ಆಯ್ತು. ಒಟ್ಟಲ್ಲಿ "ದೂರದ ಬೆಟ್ಟ ನುಣ್ಣಗೆ" (ಇಂಗ್ಲೀಶ್) ಮತ್ತೆ "ಹಿತ್ತಲ ಗಿಡ ಮದ್ದಲ್ಲಾ" (ಕನ್ನಡ).

ದುರ್ವಿದಿ ಏನಪಾ ಅಂದ್ರೆ, ನನ್ನ ಈ ಬರಹವನ್ನ ಇಂಗ್ಲೀಶ್ ಪ್ರಿಯರು ಓದೋದು ಅತೀ ವಿರಳ. ಅಂತವರಿಗೆ ಮಡಿವಂತಿಕೆಯ ಪ್ರಶ್ನೆ ಅಡ್ಡ ಬರುತ್ತೆ ಪಾಪ!!!

ಸವಿಗನಸು ಹೇಳಿದರು...

ಚೆನ್ನಾಗಿದೆ ವಿಡಂಬನೆ...
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು...

shivu.k ಹೇಳಿದರು...

ಲೋದ್ಯಾಶಿಯವರೆ.

ಇವತ್ತಿನ ಕನ್ನಡ ರಾಜ್ಯೋತ್ಸವದ ದಿನದಂದೂ ಒಂದು ಅರ್ಥಪೂರ್ಣ ಬರಹವನ್ನು ಬರೆದಿದ್ದೀರಿ. ಇಂಗ್ಲೀಷ್ ವ್ಯಾಮೋಹದ ಬಗ್ಗೆ ನಿಮ್ಮ ವಿಡಂಬನೆ ತುಂಬಾ ಚೆನ್ನಾಗಿ, ತೂಕಬದ್ಧವಾಗಿದೆ....
ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

ಶಿವಪ್ರಕಾಶ್ ಹೇಳಿದರು...

ಲೋದ್ಯಾಶಿಯವರೆ,
ಸರಿಯಾಗಿ ಹೇಳಿದ್ದಿರಿ.. ಆದರೆ ನಾವು ಈಗಾಗಲೇ ಇಂಗ್ಲಿಷ್ ಮೇಲೆ ಬಹಳಷ್ಟು ಅವಲಂಬಿತವಾಗಿಬಿಟ್ಟಿದ್ದೇವೆ.. ಅದೇ ಈಗ ನಮಗೆ ಮುಳ್ಳಾಗಿ ಕಾಡುತ್ತಿದೆ.
ಆದರಿಂದ ಉಪಯೋಗವು ಇದೆ, ಅಪಾಯವು ಇದೆ...
ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

Me, Myself & I ಹೇಳಿದರು...

ಆತ್ಮೀಯ ಸವಿಗನಸು

ಪ್ರತಿಕ್ರಿಯೆಗೆ ಧನ್ಯವಾದಗಳು.
ಕನ್ನಡ ರಾಜ್ಯೋತ್ಸವದ ಶುಭಾಷಯಗಳು.

Me, Myself & I ಹೇಳಿದರು...

ಆತ್ಮೀಯ ಶಿವೂ

ಬರಹವನ್ನ ತೂಕವಾಗಿ ಓದಿದ್ದಕ್ಕೆ & ಪ್ರತಿಕ್ರಿಯೆಗೆ ಧನ್ಯವಾದಗಳು.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Me, Myself & I ಹೇಳಿದರು...

ಆತ್ಮೀಯ ಶಿವಪ್ರಕಾಶ್,

ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ನಾನು ಹೇಳಬೇಕೆಂದಿದ್ದನ್ನ ಹೇಳಿ ಮುಗಿಸಿರುವೆ. ಈಗ ಓದುಗರ
ಪರ ವಿರೋದವನ್ನ ಕೇಳುತ್ತೇನೆ ಅಷ್ಟೇ. ನಿಮಗೆ ಪರ ವಿರೋದದ ಮದ್ಯೆ ಇನ್ನೂ ದ್ವಂದ್ವ ಇರೋ ಹಾಗಿದೆ.

ಗೋಪಾಲ್ ಮಾ ಕುಲಕರ್ಣಿ ಹೇಳಿದರು...

Tumba chennagide
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು...

Me, Myself & I ಹೇಳಿದರು...

ಆತ್ಮೀಯ ಗೋಪಾಲ್

ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಯಾಕ್ರೀ ಕೆಲ್ಸಾ ಜಾಸ್ತಿನ? ತುಂಬಾ ವಿರಾಮ ತಗೊಂಡಿದೀರಿ. ಇವತ್ತು "ತುಂಬಾ ಚೆನ್ನಾಗಿದೆ" ಅಂತಾನೂ ಇಂಗ್ಲೀಷ್ನಲ್ಲೇ ಬರ್ದೀರಿ. :) ಬ್ಲಾಗಲ್ಲಿ ಆಸಕ್ತಿ ಕಮ್ಮಿ ಆಯ್ತಾ?

manju ಹೇಳಿದರು...

ಲೋದ್ಯಾಶಿಯವರೆ, ನಿಮ್ಮ ವಿಡಂಬನಾತ್ಮಕ ಲೇಖನ ರಾಜ್ಯೋತ್ಸವದ ಸಮಯದಲ್ಲಿ ಬಹಳ ಅರ್ಥಪೂರ್ಣವಾಗಿದೆ. ಸುಮ್ಮನೆ ನಮ್ಮ ನೆಲ, ಜಲ, ಭಾಷೆ ಎಂದೆಲ್ಲಾ ಬಡಾಯಿ ಕೊಚ್ಚಿಕೊಳ್ಳುವ ನಮ್ಮ ಜನ, ಇಂಗ್ಲೀಷ್ ಭಾಷೆಯಿಲ್ಲದೆ ಬದುಕುವುದು ಊಹಿಸಲಸಾಧ್ಯ.

Me, Myself & I ಹೇಳಿದರು...

ಆತ್ಮೀಯಾ ಮಂಜುಜಿ

ನಿಮ್ಮ ಮೆಚ್ಚುಗೆಯ ಮಾತುಗಳಿಂದ ನಂಗೆ ಇನ್ನೊಂದಿಷ್ಟು ಸ್ಪೂರ್ತಿ ಸಿಕ್ಕಂಗಾಗಿಗೆ.

ಹೌದು ಮಂಜುಜಿ, ಇಂಗ್ಲೀಷ್ ಇಲ್ಲದ ಬದುಕನ್ನ ಊಹಿಸ್ಕೊಂಡು ಎದ್ರುಕೊಂಡು ಕೂರ್ಬಾರ್ದು, ಅದನ್ನ ಅದರ ಪಾಡಿಗೆ ಬಿಟ್ಟು, ನಮ್ಮ ಪಾಡಿಗೆ ನಾವು ನಮ್ನಮ್ಮ ಮಾತೃ ಭಾಷೆಯನ್ನ ಬಳಸ್ಬೇಕು. ಏನೂ ಅನಾಹುತ ಆಗಲ್ಲ ಅಂತೇಳಿ ದೈರ್ಯ ತಂದ್ಕೋಬೇಕು. ತುಂಬಾ ಗಾಬ್ರಿ ಆಗ್ಬಾರ್ದು. ಅಷ್ಟೇ!

ದೀಪಸ್ಮಿತಾ ಹೇಳಿದರು...

ಲೋಹಿತ್ ಅವರೆ, ನೀವು ಬರೆದಿದ್ದು ಸತ್ಯ. ಇಂಗ್ಲೀಷ್ ಪ್ರಾಪಂಚಿಕ ವ್ಯವಹಾರಕ್ಕೆ, ಉದ್ಯೋಗಕ್ಕೆ, ವಿಜ್ಞಾನಕ್ಕೆ ಬೇಕು ನಿಜ. ಆದರೆ ಇಂಗ್ಲೀಷೇ ಸರ್ವಸ್ವ, ಅದಿಲ್ಲದೆ ಬದುಕೇ ಇಲ್ಲ ಎಂಬ ಕುರುಡು ಅಭಿಮಾನ ನಮ್ಮ ಅನೇಕರಲ್ಲಿ ಇದೆ

Me, Myself & I ಹೇಳಿದರು...

ಆತ್ಮೀಯ ದೀಪಸ್ಮಿತರೆ

ಹೌದು, ಈ ಕುರುಡು ಅಭಿಮಾನದ ಅವಶ್ಯಕತೆ ಇದೇಯ? ಇಲ್ವಾ? ಅಂತ ತಿಳ್ಕೊಳೋ ಬುದ್ದಿ ಬರೋ ಮೊದ್ಲೇ, ಏನೂ ತಿಳಿಯದ ಮಕ್ಳಿಗೆ ಇಂಗ್ಲೀಷೇ ಸರ್ವಸ್ವ ಅನ್ನೋ ಭಾವನೆ ತುಮ್ಬಿಡ್ತಾರೆ. ಇದ್ರಿಂದ ಮುಂದೆ ಈ ಮಕ್ಳ ಜೀವನಾ ತುಂಬಾ ಬರೀ ಇನ್ನೊಬ್ಬರ ಅನುಕರಣೆಯಾಗ್ಬಿದುತ್ತೆ.

ಸಹಮತ ವ್ಯಕ್ತಪಡಿಸಿದ್ದಕ್ಕೆ ವಂದನೆಗಳು.

Unknown ಹೇಳಿದರು...

ಮದುವೆಯಾಗೋ ವರೆಗೆ ಹುಚ್ಚು ಬಿಡೋಲ್ಲ. ಹುಚ್ಚು ಬಿಡೋವರ್ಗೂ ಮದುವೆ ಆಗೊಲ್ಲ ಅನ್ನುವ ಹಾಗಿದೆ ಈಗ ಕನ್ನಡದ ಸ್ಥಿತಿ. ಜೊತೆಗೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರೂ ಬೇಕು! ಪೌರ್ಹಾತ್ಯ ರಾಷ್ಟ್ರಗಳಲ್ಲಿ ಅಂದರೆ ಚೀನಾ ಜಪಾನ್ ಮೊದಲಾದವುಗಳಲ್ಲಿ ಈಗ ಿಂಗ್ಲಿಷ್ ಕಲಿಕೆ ಹೆಚ್ಚಿನ ಮಹತ್ವ ಕೊಡುತ್ತಿರುವ ಮಾತ್ರ ಸುಳ್ಳಲ್ಲ. ಾದರೆ ಚೀನಾದವರ ಮನೋಸ್ಥಿತಿಯೇ ಬೇರೆ. ಅವರು ಇಂಗ್ಲಿಷ್ ಭಾಷೆ ಕಲಿಯುವುದು ತಮ್ಮ ಸಂಸ್ಕೃತಿಯನ್ನು ಕೀಳಿರಿಮೆಯಿಂದ ಕಾಣುವುದಕ್ಕಲ್ಲ, ಪ್ರಪಂಚದ ನಾನಾ ಸಂಸ್ಕೃತಿಗಳ ಮೇಲೆ ಒಡೆತನ ಸ್ಥಾಪಿಸಲು! ಇದೇ ನಮಗೂ ಚೀನಾದವರಿಗೂ ಇರುವ ವ್ಯತ್ಯಾಸ. ಪ್ರಾದೇಶಿಕ ಭಾಷೆಗಳವರು ಪಶ್ಚಿಮಕ್ಕೆ ಬದಲು ಪೂರ್ವಕ್ಕೆ ನೋಡಬೇಕು. ಸೂರ್ಯೋದಯದ ಸೊಬಗಿನ ಜೊತೆಗೆ ಮತ್ತೊಂದು ನವೋದಯ ಕಾಣಲು ಸಾಧ್ಯ.

Me, Myself & I ಹೇಳಿದರು...

ಆತ್ಮೀಯಾ ಸತ್ಯನಾರಾಯಣ್ಜಿ

ಸಹಮತದ ಅಭಿಪ್ರಾಯಕ್ಕೆ ಧನ್ಯವಾದಗಳು.
ವ್ಯಾವಹಾರಿಕ ದೃಷ್ಟಿಯಿಂದ ಯಾವ್ಬಾಷೆಯನ್ನೇ ಆಗ್ಲಿ ಎಷ್ಟು ಬೇಕೂ ಅಷ್ಟು ಕಲಿಯೋದ್ರಲ್ಲಿ ಯಾವ ಆತಂಕವೂ ಇಲ್ಲ.

AntharangadaMaathugalu ಹೇಳಿದರು...

ಲೋದ್ಯಾಶಿಯವರೆ...
ನಿಮ್ಮ ವಿಡಂಬನೆ ಚೆನ್ನಾಗಿದೆ. ವ್ಯವಹಾರಕ್ಕೆಷ್ಟು ಬೇಕೋ ಅಷ್ಟು ಯಾವ ಭಾಷೆಯನ್ನು ಬೇಕಾದರೂ ಕಲಿಯಬಹುದು... ಆದರೆ ಈ ಆಂಗ್ಲ ಮಾತ್ರ ನಮ್ಮನ್ನು ಬಿಡುವಂತೆ ಕಾಣೋಲ್ಲ. ಆಂಗ್ಲರು ಹೋದರು ಭಾಷೆ ಹೋಗಲಿಲ್ಲ. ನಮ್ಮ ಕನ್ನಡವ ನಾವು ಬೆಳೆಸೋಣ ಮತ್ತು ಉಳಿಸೋಣ. ರಾಜ್ಯೋತ್ಸವದ ಶುಭಾಶಯಗಳು.......

ಶ್ಯಾಮಲ

Me, Myself & I ಹೇಳಿದರು...

ಆತ್ಮೀಯ ಶಾಮಲಾಜಿ

ಹೌದು, ಕನ್ನಡಕ್ಕೆ ಪ್ರೋತ್ಸಾಹ ಬೇಕೇ ಬೇಕು. ಈಗ್ಲೂ ಪ್ರತಿಶತ ಎಂಬತ್ಮೂರು ಮಕ್ಳು ಕನ್ನಡದಲ್ಲೇ ಕಲಿತಿದಾರೆ ಅಂತ ಅಂದಾಜಿದೆ. ಆ ಎಲ್ಲ ಮಕ್ಳಿಗೆ ಇಂಗ್ಲೀಷನ್ನ ತಲೆಗೆ ತುರ್ಕೋ ಬದ್ಲು, ಎಲ್ರೂ ಕನ್ನಡದಲ್ಲೇ ಕಲಿಬೌದು. ಮಾತೃ ಭಾಷೆಯಾದ್ರಿಂದ ಕಡಿಮೆ ಸಮಯದಲ್ಲೇ ಕಲಿಸ್ಬೌದು ಕೂಡ. ಈಗಿನ ಮಕ್ಳಿಗೆ ಇಂಗ್ಲೀಶ್ ಕಲಿಸ್ಬೇಕು ಅಂದ್ರೆ ಪೋಷಕರು ಸಹ ಇಂಗ್ಲೀಶ್ ಕಲಿತಿರ್ಲೆ ಬೇಕು. ಇಲ್ದೆ ಹೋದ್ರೆ ಎಷ್ಟೋ ಶಾಲೆಗಳಲ್ಲಿ ಮಕ್ಳನ್ನ ಸೇರಿಸ್ಕೋಳ್ಳಲ್ಲ. ಇಲ್ಲಿ ಇವ್ರು ನೀಡೋ ಹೋಂ ವರ್ಕ್ ಮಾಡೋದು ಪೋಷಕರೇ ತಾನೇ! ಮತ್ತೆ ನಮ್ಮ ಸಮಾಜದಲ್ಲಿ ಎಷ್ಟು ಪ್ರಮಾಣದಲ್ಲಿ ಪೋಷಕ ವರ್ಗಕ್ಕೆ ಇಂಗ್ಲೀಶ್ ಬರುತ್ತೆ ನೀವೇ ಹೇಳಿ? ಹಾಗೆ ನೋಡಿದ್ರೆ ಇವ್ರು ಇಂಗ್ಲೀಶ್ ಕಲ್ಸೋದು ಮೊದ್ಲು ಪೋಷಕರಿಗೆ ಆಮೇಲೆ ಮಕ್ಳಿಗೆ ಕಳಿಸ್ತಾರೆ. ಇಷ್ಟೆಲ್ಲಾ ರಂಪಾಟ ಯಾಕೆ?

ಮಾತೃ ಭಾಷೆಯಲ್ಲಿ ಮಕ್ಳಿಗೆ ಬೇಕಾಗಿರೋದನ್ನ ಅರ್ಥ ಮಾಡ್ಕಂಡು ಕಲಿಯೊಕ್ಕೆ ಸಾಧ್ಯವಾಗುತ್ತೆ. ಆಗ ಮಕ್ಳಲ್ಲಿಯೂ ಸಮಾನ ಸ್ಪರ್ಧೆ ಇರುತ್ತೆ. ನಾನು ಇಂಗ್ಲೇಶ್ ದ್ವೇಷಿ ಅಲ್ಲಾ. ನಮ್ಮ ಮಾತೃ ಭಾಷೆಯನ್ನ ಬಿಟ್ಟು ಆಂಗ್ಲ ಮಾದ್ಯಮದಲ್ಲಿ ಎಲ್ಲವನ್ನೂ ಕಲ್ಸೋ ಅವಶ್ಯಕತೆ ಏನಿದೆ? ಅಗತ್ಯಕ್ಕೆ ತಕ್ಕಂತೆ ನಮ್ಗೆ ಎಷ್ಟು ಬೇಕೋ ಅಷ್ಟು ಆಂಗ್ಲ ಭಾಷೆಯನ್ನ ಕಲಿತ್ರೆ ಸಾಕು. ವ್ಯವಹಾರ ದೃಷ್ಟಿಯಿಂದ ಬೇಕಾಗಿರೋ ಇಂಗ್ಲೀಷನ್ನ ಒಂದಾರ್ತಿಂಗ್ಳಲ್ಲಿ ಕಲಿಬೌದು. ಇನ್ನೂ ಡಿಗ್ರೀ ಕೂಡ ಮುಗಿಸದಿರೋವ್ರು ಇಂಗ್ಲೀಷ್ನಲ್ಲಿ ಏನು ವ್ಯವಹಾರ ಮಾಡಬಲ್ಲ? ಯಾದಾದ್ರೂ ಡಿಗ್ರಿ ಸಿಕ್ಮೇಲೆ ಒಂದಾರ್ತಿಗ್ಲು ಇಂಗ್ಲೀಶ್ ಕೋರ್ಸ್ ಮಾಡಿದ್ರೆ ಮುಗೀತು. ಅಲ್ಲಿ ತನಕ ಅದನ್ನೂ ಒಂದು ತೃತೀಯ ಭಾಷೆಯಾಗಿ ಕಲಿತಾ ಬಂದ್ರೆ ಸಾಕು. ಡಿಗ್ರಿಗಿಂತ ಮೊದ್ಲೇ ಇಂಗ್ಲೀಷ್ನಲ್ಲಿ ವ್ಯವಹಾರ ಮಾಡೋವ್ರು ನೇರ್ವಾಗಿ ಇಂಗ್ಲೀಶ್ ಕಲಿಯೋ ಯಾವ್ದಾದ್ರು ಒಂದು ಖಾಸಗಿ ಕೋರ್ಸಿಗೆ ಸೇರಿ ಕಲತ್ರಾತು.

ಚುಕ್ಕಿಚಿತ್ತಾರ ಹೇಳಿದರು...

ನುಡಿವ೦ತೆ ಬರೆದಿದ್ದು ತು೦ಬಾ ಇಷ್ಟವಾಯಿತು. ನಮಗೆ ಸ್ವಾತ೦ತ್ರ್ಯ ಬ೦ದಿದ್ದರ ಬಗ್ಗೆ ನನಗಿನ್ನೂ ಅನುಮಾನವಿದೆ. ಇ೦ಗ್ಲೀಷ್ ಜನರು ಭಾರತ ಬಿಟ್ಟು ಹೋದರೂ ಇ೦ಗ್ಲೀಷ್ ಭಾಷೆಯನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ...... ನಮ್ಮನ್ನಾಳಲು.....!!!!!!!!!????????

Manju Bhat ಹೇಳಿದರು...

ಲೇಖನ ತುಂಬಾ ಚೆನ್ನಾಗಿದೆ... ನಾನು ಗಮನಿಸಿದಂತೆ ಆಂಗ್ಲ ಮಾದ್ಮದ ವಿದ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ ಕಡಿಮೆ. ಇದಕ್ಕೆ ವಿಷಯದ ಕೊರತೆಯೋ ಏನೋ ಗೊತ್ತಿಲ್ಲ. ಆದರೆ ನಮ್ಮ ಜನ ಅದರ ಬೆನ್ನು ಹತ್ತಿ ಹೋಗುವದನ್ನ ನೋಡಿದರೆ ಬೇಜಾರಾಗುತ್ತದೆ . ನಿಮಗೆ ರಾಜ್ಯೋತ್ಸವದ ಶುಭಾಶಯಗಳು.

Me, Myself & I ಹೇಳಿದರು...

ಆತ್ಮೀಯ

ಏನಪಾ ಅದು ಅಂದ್ರೆ, ಬ್ರಿಟೀಶ್ರ ರಕ್ತದಲ್ಲಿದ್ದ ಚಾಕ ಚಕ್ಯತೆಗೆ ಮರುಳಾಗಿ ನಮ್ಮ ಸಮಾಜದಲ್ಲಿ ಒಂದು ಭ್ರಮೆ ಬೆಳಸ್ಕೊಂಡಿದಾರೆ, ಅದು ಇಂಗ್ಲೀಶ್ನಲ್ಲಿ ಮಾತಾಡೋದ್ರಿಂದ ತಮಗೂ ಆ ವಸಾಹತುಶಾಹಿ ಜಾಣ್ಮೆ ಮೈಗೂಡುತ್ತೆ ಅಂತ!!! ಅದಕ್ಕೆ ಬ್ರಿಟೀಷರನ್ನ ಖಾಲಿ ಮಾಡಿ ಕಳಿಸಿದ್ರೂ ಅವ್ರ ಭಾಷೆಗೆ ಮಾತ್ರ ಪವಿತ್ರ ಮನೋಭಾವ ಇವ್ರಲ್ಲಿ ಬೆಳಸ್ಕಂಡಿದಾರೆ.

ಅಭಿಪ್ರಾಯಕ್ಕೆ ಧನ್ಯವಾದಗಳು

Me, Myself & I ಹೇಳಿದರು...

ಆತ್ಮೀಯ ಮಂಜುಭಟ್ರೇ

ನಿಮಗೂ ರಾಜ್ಯೋತ್ಸವದ ಶುಭಾಶಯಗಳು. ಮೆಚ್ಚಿಗೆಯ ಅಭಿಪ್ರಾಯಕ್ಕೆ ಧನ್ಯವಾದಗಳು.

ಕೆಲವು ಆಂಗ್ಲ ಮಾದ್ಯಮದ ಮಕ್ಳು ಒಂದು ತೀರ್ಮಾನಕ್ಕೆ ಬಂದ್ಬಿಟ್ಟಿದ್ದಾರೆ...ಏನಪಾ ಅದು ಅಂದ್ರೆ, ಕನ್ನಡ ಮಾದ್ಯಮದ ಮಕ್ಳೆಲ್ಲಾ ಪಠ್ಯವನ್ನ ಬರಿ ಉರ್ಲು ಹೊಡ್ದು ಪಾಸಾಗ್ತಾರೆ ಅಂತ. ಅದಕ್ಕೆ ಬಾರಿ ಅನುಕಂಪವನ್ನೂ ದಾರಾಳ್ವಾಗಿ ದಯಪಾಲಿಸ್ತಾರೆ.

hamsanandi ಹೇಳಿದರು...

ವಿಡಂಬನೆ ಚೆನ್ನಾಗಿದೆ :)

ಒಂದು ವಿಷಯ - ಕಾನ್ವೆಂಟ್ ಅಂದ್ರೆ ಕ್ರೈಸ್ತ ಸನ್ಯಾಸಿನಿ (ನನ್) ಗಳು ವಾಸ ಮಾಡುವ ಜಾಗ- ಅದೊಂದು ಶಾಲೆ ಅಲ್ಲ ಅನ್ನೋದನ್ನ ಹೇಳೋಣ ಅನ್ನಿಸಿತು. ಇಲ್ಲಿ ನೋಡಿ:

http://dictionary.reference.com/browse/convent

blogspot add widget