ಬುಧವಾರ, ಜುಲೈ 28, 2010
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$
Online ಇದ್ರೆ ಚಾಟ್ ಮಾಡಿ, ಇಲ್ದಿದ್ರೆ ಮೇಲ್ ಮಾಡಿ,
ಹಾಯಾಗಿರುವೇ ರಾಘವೇಂದ್ರ!!!
Online ಆದರೂ ಬಾರೋ, Offline ಆದರೂ ಹೋಗೋ, ರಾಘವೇಂದ್ರ ||repeat||
.
.
.
ಓರ್ಕುಟ್ನಲ್ಲಾದರೂ ನೂಕು, ಪೇಸ್ಬುಕ್ನಲ್ಲಾದರೂ ನೂಕು ರಾಘವೇಂದ್ರ$$$
ಹಾ ಆ ಹಾ ಆಆ ಹಾಆಆ ಆಆಆಆಆಆ....
ಓರ್ಕುಟ್ನಲ್ಲಾದರೂ ನೂಕು, ಪೇಸ್ಬುಕ್ನಲ್ಲಾದರೂ ನೂಕು ರಾಘವೇಂದ್ರ$$$
ಓರ್ಕುಟ್ನಲ್ಲಿ ಸ್ಕ್ರಾಪ್ ಮಾಡಿ, ಪೇಸಬುಕ್ನಲ್ಲಿ ಪೇಸ್ಟ್ ಮಾಡಿ,
ಪ್ರೆಂಡಾಗಿರುವೆ ರಾಘವೇಂದ್ರ!
.
.
.
ಟ್ಟಿಟ್ಟರ್ನಲ್ಲಾದರು ಕಾಯ್ಸು, ಭಜ್ನಲ್ಲಾದರೂ ನೋಯ್ಸು, ರಾಘವೇಂದ್ರ!
ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿ, ಭಜ್ನಲ್ಲಿ ಭಜ್ ಮಾಡಿ
ಟಚ್ಚ(Touch)ಲ್ಲೇ ಇರುವೇ ರಾಘವೇಂದ್ರ!
.
.
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$
.
.
ಫೋನ್ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ$$$
ಹಾ ಆ ಹಾ ಆಆ ಹಾಆಆ ಆಆಆಆಆಆ....
ಫೋನ್ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ!$
ಮೋಬಯ್ಲಿನಲ್ಲಿರುವ ಬ್ಯಾಲೆನ್ಸು ಯಾರಾ ತಾತನಾ ಗಂಟು!
ಮಿಸ್ಕಾಲಾದರೂ(missed call) ನೀಡೂ ರಾಘವೇಂದ್ರ.!
.
.
.
GTalk ಆದರೇನು, Skype ಆದರೇನು! ರಾಘವೇಂದ್ರ$$$$
ಮೂಲ ಹಾಡನ್ನು ಹಾಳು ಮಾಡಿದೆನೆಂದು ಯಾರೂ ಬಯ್ದೇ ಇದ್ದರೆ ಸಾಕು ರಾಘವೇಂದ್ರ$$$
.
.
.
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$ .
http://www.youtube.com/watch?v=c_weBk1kvUQ
ಮಂಗಳವಾರ, ಜುಲೈ 27, 2010
ಸಂಕಷ್ಟದಲ್ಲಿ ಹಾಸ್ಯನಟ ರತ್ನಾಕರ್
೮೦ ವರ್ಷದ ರತ್ನಾಕರ್ ಕಳೆದ ೬೦ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದು ೩೦೦ ಕ್ಕೂ ಹೆಚ್ಚು ತಮ್ಮ ವಿಭಿನ್ನ ಶಯ್ನಿಯ ಅಭಿನಯದಿಂದಾಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ರತ್ನಾಕರ್ ಅವರಿಗೆ ಸಹಾಯ ಮಾಡಬಯಸುವ ಸಹೃದಯರು ದೂರವಾಣಿ ಸಂಖ್ಯೆ ೯೮೪೪೮೯೫೧೮೯ (9844895189) ಗೆ ಸಂಪರ್ಕಿಸಬಹುದು,
http://www.hindu.com/2010/05/23/stories/2010052360860300.htm
ರತ್ನಾಕರ್ ಅವರಿಗೆ ಸಹಾಯ ಮಾಡಬಯಸುವ ಸಹೃದಯರು ದೂರವಾಣಿ ಸಂಖ್ಯೆ ೯೮೪೪೮೯೫೧೮೯ (9844895189) ಗೆ ಸಂಪರ್ಕಿಸಬಹುದು,
http://www.hindu.com/2010/05/23/stories/2010052360860300.htm
ಭಾನುವಾರ, ಜುಲೈ 11, 2010
ನನ್ನ ನಿಷ್ಟೆ ನಿನಗೆ ಹಾಗೂ ಕೇವಲ ನಿನ್ನೊಬ್ಬನಿಗೇ
ಕೌರವ ಹಾಗೂ ಪಾಂಡವರು ತಮ್ಮ ಶಿಕ್ಷಣವನ್ನು ಮುಗಿಸಿದ್ದಾರೆ, ಗುರು ದ್ರೋಣಾಚಾರ್ಯರು ತಮ್ಮ ಶಿಶ್ಯರ ಯುದ್ದವಿದ್ಯೆಯನ್ನು ಪರೀಕ್ಷಿಸಲೆಂದು ರಂಗಭೂಮಿ ಸಿದ್ದವಾಗಿದೆ. ಹಸ್ತಿನಾಪುರದ ಮಹಾರಾಜ ದೃತರಾಷ್ಟ್ರ, ಗಾಂಧಾರಿ, ಕುಂತಿ, ಗುರು ದ್ರೋಣಾಚಾರ್ಯ, ಕುಲಗುರು ಕೃಪಾಚಾರ್ಯ ಹಾಗೂ ಪಿತಾಮಹ ಭೀಷ್ಮ ಮತ್ತು ಶಕುನಿ ಮುಂತಾದ ಗಣ್ಯರು ಒಂದು ಪವಿಲಿಯನ್ನಲ್ಲಿ ರಣರಂಗವನ್ನು ವೀಕ್ಷಿಸಲು ಸಜ್ಜಾಗಿ ಕೂತಿದ್ದಾರೆ. ಹಾಗೂ ಮತ್ತೊಂದು ಪೆವಿಲಿಯನ್ನಲ್ಲಿ ಕ್ರೀಡಾಪಟುಗಳು ಅಂದರೆ, ಕೌರವ ಹಾಗೂ ಪಾಂಡವ ಸಹೋದರರು ಆಸೀನರಾಗಿದ್ದಾರೆ.
ದ್ರೋಣಾಚಾರ್ಯ - ಹಸ್ತಿನಾಪುರದ ಮಹಾಜನಗಳೇ...ಅರ್ಜುನ ನನ್ನ ನೆಚ್ಚಿನ ಶಿಶ್ಯನೆಂಬುದು ತಿಳಿದೇ ಇದೆ. ಈಗ ತಾವೆಲ್ಲರೂ ಸಹ ಅರ್ಜುನನ ಶೌರ್ಯಕ್ಕೆ ಸಾಕ್ಷಿಯಾಗಿದ್ದೀರಿ.ಅರ್ಜುನ ಈ ಜಗತ್ತಿನ ಶ್ರೇಷ್ಟ ಧನುರ್ಧಾರಿ. ಇದರಲ್ಲಿ ನನಗೆ ಯಾವ ಸಂದೇಹವೂ ಇಲ್ಲ.
(ಈ ಕೂಟವನ್ನು ವೀಕ್ಷಿಸಲೆಂದು ನೆರೆದಿದ್ದ ಹಸ್ತಿನಾಪುರದ ನಾಗರೀಕರು ಅರ್ಜುನನಿಗೆ ಜೈಕಾರವನ್ನು ಹಾಕುತ್ತಾರೆ...ಅಷ್ಟರಲ್ಲಿ..ರಂಗಭೂಮಿಯನ್ನು ಪ್ರವೇಶಿಸಿದ ಕರ್ಣನು, ಹೆಬ್ಬಾಗಿಲ ಬಳಿ ನಿಂತು...ತನ್ನ ಧನಸ್ಸನ್ನು ಮುಂದೆ ಮಾಡುತ್ತಾ..)
ಕರ್ಣ - ಗುರು ದ್ರೋಣಾಚಾರ್ಯರೇ! ಒಬ್ಬ ವ್ಯಕ್ತಿಯ ಶೌರ್ಯವನ್ನಷ್ಟೇ ವೀಕ್ಷಿಸಿ, ಆತನೇ ಜಗತ್ತಿನ ಸರ್ವಶ್ರೇಷ್ಟ ಧನುರ್ಧಾರಿ ಎನ್ನುವ ತೀರ್ಮಾನಕ್ಕೆ ಬರುವುದು ಯಾವ ವೀರನಿಗೂ ಶೋಭೆನೀಡುವಂತಹದ್ದಲ್ಲ... ಒಮ್ಮೆ ನಿಮ್ಮ ಶಿಶ್ಯ ಅರ್ಜುನನ್ನು ನನ್ನ ವಿರುದ್ದ ಸೆಣಸಲು ಬಿಡಿ, ಆಗ ಜಗತ್ತಿನ ಶ್ರೇಷ್ಟ ಧನುರ್ಧಾರಿ ಯಾರೆಂದು ಎಲ್ಲರಿಗೂ ತಿಳಿಯುತ್ತದೆ.
ಕೃಪಾಚಾರ್ಯ -. ಹೇ, ವೀರ. ಪೆವಿಲಿಯನ್ ಹತ್ತಿರಕ್ಕೆ ಬಂದು ನಿಲ್ಲು. ಹಾಗೂ ನಮ್ಮೆಲ್ಲರ ಮುಂದೆ ನಿನ್ನ ಪರಿಚಯವನ್ನು ನೀಡು. ನೀನು ಯಾರು? ನಿನ್ನ ತಂದೆ-ತಾಯಿ ಯಾರು? ತಿಳಿಸು.
(ಕರ್ಣನು ಪೆವಿಲಿಯನ್ ಮುಂದೆ ಬಂದು ನಿಲ್ಲುತ್ತಾನೆ...ತನ್ನ ಜನ್ಮ ರಹಸ್ಯದ ಅರಿವಿರದ ಕರ್ಣನು ಕೃಪಾಚಾರ್ಯರ ಪ್ರಶ್ಣೆಗೆ ಉತ್ತರ ನೀಡದೆ ಅಸಹಾಯಕನಾಗಿ ತಲೆ ತಗ್ಗಿಸಿ ನಿಲ್ಲುತ್ತಾನೆ.
.
.
ಕರ್ಣನ ವಸ್ತ್ರ, ಕರ್ಣಕುಂಡಲ ಹಾಗೂ ಆತನ ಮುಖದಲ್ಲಿದ್ದ ಸೂರ್ಯನ ತೇಜಸ್ಸನ್ನು ಮಾತೆ ಕುಂತಿಯು ಗಮನಿಸುತ್ತಾಳೆ. ಈತ ತನ್ನ ಪುತ್ರನೇ ಎಂದು ಕೂಡಲೇ ಕಂಡುಕೊಳ್ಳುತ್ತಾಳೆ. ಆದರೆ ಎಲ್ಲರ ಮುಂದೆ ತಿಳಿಸಲಾಗದೆ ಹಾಗೂ ತನ್ನ ಪುತ್ರನ ಅಸಾಹಯಕ ಸ್ಥಿತಿಯನ್ನು ಕಂಡು ಮತ್ತಷ್ಟು ದಿಗ್ಬ್ರಮೆಯಿಂದ ಮೂರ್ಛೆ ಹೋಗುತ್ತಾಳೆ.
.
.
ಕೃಪಾಚಾರ್ಯರು ತಮ್ಮ ಪ್ರಶ್ಣೆಯನ್ನು ಮುಂದುವರೆಸುತ್ತಾರೆ...)
.
.
ಕರ್ಣನ ವಸ್ತ್ರ, ಕರ್ಣಕುಂಡಲ ಹಾಗೂ ಆತನ ಮುಖದಲ್ಲಿದ್ದ ಸೂರ್ಯನ ತೇಜಸ್ಸನ್ನು ಮಾತೆ ಕುಂತಿಯು ಗಮನಿಸುತ್ತಾಳೆ. ಈತ ತನ್ನ ಪುತ್ರನೇ ಎಂದು ಕೂಡಲೇ ಕಂಡುಕೊಳ್ಳುತ್ತಾಳೆ. ಆದರೆ ಎಲ್ಲರ ಮುಂದೆ ತಿಳಿಸಲಾಗದೆ ಹಾಗೂ ತನ್ನ ಪುತ್ರನ ಅಸಾಹಯಕ ಸ್ಥಿತಿಯನ್ನು ಕಂಡು ಮತ್ತಷ್ಟು ದಿಗ್ಬ್ರಮೆಯಿಂದ ಮೂರ್ಛೆ ಹೋಗುತ್ತಾಳೆ.
.
.
ಕೃಪಾಚಾರ್ಯರು ತಮ್ಮ ಪ್ರಶ್ಣೆಯನ್ನು ಮುಂದುವರೆಸುತ್ತಾರೆ...)
ಹೇ ವೀರ, ಇದು ಯುದ್ದಭೂಮಿಯಲ್ಲ. ಇದು ಕುರುವಂಶದ ರಂಗಭೂಮಿ. ಇಲ್ಲಿ ಸೆಣಸಲು ನಿನ್ನಂತಹ ಸಾಮಾನ್ಯ ಪ್ರಜೆಗಳಿಗೆಲ್ಲಾ ಅವಕಾಶವಿಲ್ಲ. ಇದು ಕೇವಲ ಸರಿ-ಸಮಾನರಲ್ಲಿ ನಡೆಯುವ ಪರೀಕ್ಷೆ. ಅರ್ಜುನನೊಡನೆ ಸೆಣಸಲು ನಿನಗೆ ಏನು ಯೋಗ್ಯತೆ ಇದೆ?
ಕರ್ಣ - ಅರ್ಜುನನೊಡನೆ ಸೆಣಸಲು ಈ ಧನಸ್ಸು ಸಾಕು. ನನಗೆ ಮತ್ತೇನು ಬೇಡ.
(ಕರ್ಣನ ಮಾತಿನಿಂದ ಕೋಪಗೊಂಡ ಅರ್ಜುನ, ಕೃಪಾಚಾರ್ಯರನ್ನು ಉದ್ದೇಶಿಸಿ.)
ಅರ್ಜುನ - ನನಗೆ ಈ ವೀರನೊಡನೆ ಸೆಣಸಲು ಅಪ್ಪಣೆ ನೀಡಿ ಗುರು. ಈತನನ್ನು ಕೆಲವೇ ಕ್ಷಣದಲ್ಲಿ ಸೋಲಿಸಿ, ಓಡಿಸುತ್ತೇನೆ.
(ಮತ್ತೊಂದು ಪೆವಿಲಿಯನ್ನಲ್ಲಿ ಕೂತಿದ್ದ ಭೀಮನು, ಕರ್ಣನ ಅಹಂಕಾರದ ಮಾತಿನಿಂದ ಕುಪಿತಗೊಂಡಿರುತ್ತಾನೆ)
ಭೀಮ - ಹೇ ಅರ್ಜುನ, ಯಕಹಷ್ಛಿತ್ ಒಬ್ಬ ಸಾರತಿಯ ಮಗ (ಕರ್ಣನ ಸಾಕು ತಂದೆ,ಅಧಿರತ, ದೃತರಾಷ್ಟ್ರನ ಸೈನ್ಯದಲ್ಲಿ ಒಬ್ಬ ಸಾರತಿ)ನಿಗಾಗಿ ನಿನ್ನ ವಿದ್ಯೆಯನ್ನು ಪ್ರಸರ್ಶಿಸಬೇಕಿಲ್ಲ. ಆತನನ್ನು ನಿರ್ಲಕ್ಷಿಸು ಹಾಗೂ ಆಚಾರ್ಯರ ಅಪ್ಪಣೆ ಪಡೆದು ಇಲ್ಲಿ ಬಂದು ಆಸೀನನಾಗು.
(ಕರ್ಣನ ಆತ್ಮವಿಶ್ವಾಸವನ್ನು ಕಂಡು ಬೆರಗಾದ ಧುರ್ಯೋಧನನು, ಭವಿಷ್ಯದಲ್ಲಿ ಪಾಂಡವರ ವಿರುದ್ದ ಹೋರಾಡ ಬೇಕಾದ ಸಂದರ್ಭವು ಎದುರಾದಾಗ, ಮದ್ಯಮ ಪಾಂಡವ ಅಂದರೆ ಅರ್ಜುನನನ್ನು ಎದುರಿಸಲು ನಮ್ಮ ಬಳಿ ಇಂತಹ ವೀರನ ಅವಶ್ಯಕತೆ ಇದೆ, ಎಂಬುದನ್ನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾನೆ)

(ತನ್ನ ಹೊಸ ಗೆಳಯ ಕರ್ಣನನ್ನು)
ಹೇ ಮಿತ್ರ, ನೀನು ಇಲ್ಲಿ ಸೆಣಸಲು ಅರ್ಹನಾಗಿದ್ದೀಯ. ನಿನ್ನನ್ನು ತಡೆಯಲು ಇಲ್ಲಿ ಯಾರಿಗೂ ಅವಕಾಶ ನೀಡುವುದುಲ್ಲ. ಇಂದಿನಿಂದ ನೀನು ನನ್ನ ಆಂಗರಾಜ್ಯದ ರಾಜ. ಈಗಲೇ ನಿನಗೆ ಪಟ್ಟಾಭಿಷೇಕ ಮಾಡುತ್ತಿದ್ದೇನೆ.
(ಇಲ್ಲಿಯವರೆಗೆ ತನ್ನ ಜೀವನದಲ್ಲಿ ಕೇವಲ ನಿಂದನೆಗಳನ್ನೇ ಎದುರಿಸುತ್ತಾ ಬಂದಿದ್ದಾ ಕರ್ಣನಿಗೆ, ಧುರ್ಯೋಧನನು ನೀಡಿದ ಮರ್ಯಾದೆ ಹಾಗೂ ಮಹತ್ವದ ರಾಜನ ಪಟ್ಟವನ್ನು ಸ್ವೀಕರಿಸುತ್ತಾ.)
ಕರ್ಣ - (ತನ್ನನ್ನು ನಿಂದನೆಗಳಿಂದ ಪಾರು ಮಾಡಿದ ಧುರ್ಯೋಧನನ್ನು ಉದ್ದೇಶಿಸಿ) ಮಿತ್ರ ಧುರ್ಯೋಧನ, ನಿನ್ನ ಈ ಋಣವನ್ನು ಹೇಗೆ ತೀರಿಸಲೆಂದು ನನಗೆ ತಿಳಿಯದು. ಆದರೆ ಇಂದಿನಿಂದ ನನ್ನ ನಿಷ್ಟೆ ನಿನಗೆ ಹಾಗೂ ಕೇವಲ ನಿನ್ನೊಬ್ಬನಿಗೇ. ನನ್ನ ಕೊನೆ ಉಸಿರಿರುವವರೆಗೂ ನಿನ್ನ ಶ್ರೇಯಸ್ಸಿಗೆ ಹೋರಾಡುತ್ತೇನೆ. ಇದು ನಾನು ನಿನಗೆ ನೀಡುತ್ತಿರುವ ವಚನ.
(ಆ ಮೂಲಕ ಧುರ್ಯೋಧನನು ಕರ್ಣನ ಸ್ನೇಹವನ್ನು ಗೆಲ್ಲುತ್ತಾನೆ. ಕರ್ಣ ಕುಂತಿಯ ಮಗನೆಂದು ಸ್ವತಃ ಕುಂತಿಗೆ ಬಿಟ್ಟರೆ, ಆ ಕ್ಷಣಕ್ಕೆ ಕರ್ಣನನ್ನೂ ಸೇರಿಸಿಕೊಂಡು ಬೇರೆ ಯಾರಿಗೂ ತಿಳಿದಿರಿರುವುದಿಲ್ಲ.)
(ಅಂದಿನಿಂದ ಪರಸ್ಪರ ಸ್ನೇಹಿತರಾದ ಕರ್ಣ-ಧುರ್ಯೋಧನರು ಕೊಟ್ಟ ಮಾತಿಗೆ ತಪ್ಪದೇ... ತಮ್ಮ ಕಟ್ಟಕಡೆ ಉಸಿರಿರುವವರೆಗೂ ಪರಸ್ಪರ ಸ್ನೇಹವನ್ನು ಕಾಪಾಡಿಕೊಳ್ಳುತ್ತಾರೆ.)
ಧುರ್ಯೋಧನನು ದುರಹಂಕಾರಿ, ಮಹತ್ವಾಕಾಕ್ಷಿ, ಸ್ವಾರ್ಥಿ, ಮುಂಗೋಪಿ ಎಂದೆಲ್ಲಾ ಕರೆಸಿಕೊಂಡರೂ ಕರ್ಣನೊಂದಿಗಿನ ಸ್ನೇಹದ ವಿಷಯದಲ್ಲಿ ಮಾತ್ರ ಒಬ್ಬ ಶ್ರೇಷ್ಟ ವ್ಯಕ್ತಿಯಾಗಿ ವಿಶಿಷ್ಟವಾದ ಪಾತ್ರವಾಗಿ ಕಾಣಬಹುದು.
ಶನಿವಾರ, ಜುಲೈ 3, 2010
ಮಹಾರಥಿ ಅರ್ಜುನ
ಮದ್ಯಮ ಪಾಂಡವ ಅರ್ಜುನನನ್ನು, ಸಂಧರ್ಬಕ್ಕೆ ಅನುಸಾರವಾಗಿ ಹತ್ತು ಹಲವು ವಿವಿದ ನಾಮಗಳಲ್ಲಿ ವರ್ಣಿಸಿರುವುದನ್ನು ನಾವೆಲ್ಲಾ ಓದಿರುತ್ತೇವೆ. ಇಲ್ಲಿ ಕೆಲವು ನಾಮಗಳನ್ನು ಪಟ್ಟಿಮಾಡಲಾಗಿದೆ.
+
ಪಾರ್ಥ, ಗಾಂಢೀವಿ.
ಇಷ್ಟಲ್ಲದೇ ಅರ್ಜುನನಿಗೆ ಇನ್ನೂ ಬೇರೆ ನಾಮಗಳಿವೆಯೇ? (ಇದ್ದರೆ, ಅವು ಯಾವುವು?) ಹಾಗೂ ಈ ಎಲ್ಲಾ ನಾಮಗಳ ಹಿನ್ನೆಲೆ ಏನು ಎಂಬುದನ್ನು ವಿವರಿಸಬಲ್ಲಿರಾ?
+
ಪಾರ್ಥ, ಗಾಂಢೀವಿ.
ಇಷ್ಟಲ್ಲದೇ ಅರ್ಜುನನಿಗೆ ಇನ್ನೂ ಬೇರೆ ನಾಮಗಳಿವೆಯೇ? (ಇದ್ದರೆ, ಅವು ಯಾವುವು?) ಹಾಗೂ ಈ ಎಲ್ಲಾ ನಾಮಗಳ ಹಿನ್ನೆಲೆ ಏನು ಎಂಬುದನ್ನು ವಿವರಿಸಬಲ್ಲಿರಾ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)