ಭಾನುವಾರ, ಜುಲೈ 11, 2010

ನನ್ನ ನಿಷ್ಟೆ ನಿನಗೆ ಹಾಗೂ ಕೇವಲ ನಿನ್ನೊಬ್ಬನಿಗೇ

ಕೌರವ ಹಾಗೂ ಪಾಂಡವರು ತಮ್ಮ ಶಿಕ್ಷಣವನ್ನು ಮುಗಿಸಿದ್ದಾರೆ, ಗುರು ದ್ರೋಣಾಚಾರ್ಯರು ತಮ್ಮ ಶಿಶ್ಯರ ಯುದ್ದವಿದ್ಯೆಯನ್ನು ಪರೀಕ್ಷಿಸಲೆಂದು ರಂಗಭೂಮಿ ಸಿದ್ದವಾಗಿದೆ. ಹಸ್ತಿನಾಪುರದ ಮಹಾರಾಜ ದೃತರಾಷ್ಟ್ರ, ಗಾಂಧಾರಿ, ಕುಂತಿ, ಗುರು ದ್ರೋಣಾಚಾರ್ಯ, ಕುಲಗುರು ಕೃಪಾಚಾರ್ಯ ಹಾಗೂ ಪಿತಾಮಹ ಭೀಷ್ಮ ಮತ್ತು ಶಕುನಿ ಮುಂತಾದ ಗಣ್ಯರು ಒಂದು ಪವಿಲಿಯನ್‌ನಲ್ಲಿ ರಣರಂಗವನ್ನು ವೀಕ್ಷಿಸಲು ಸಜ್ಜಾಗಿ ಕೂತಿದ್ದಾರೆ. ಹಾಗೂ ಮತ್ತೊಂದು ಪೆವಿಲಿಯನ್‌ನಲ್ಲಿ ಕ್ರೀಡಾಪಟುಗಳು ಅಂದರೆ, ಕೌರವ ಹಾಗೂ ಪಾಂಡವ ಸಹೋದರರು ಆಸೀನರಾಗಿದ್ದಾರೆ. 

ಒಬ್ಬರಾದ ಮೇಲೊಬ್ಬರನ್ನು ಗುರುದ್ರೋಣಾಚಾರ್ಯರು ಕರೆಯುತ್ತಿದ್ದಾರೆ. ಕುಲವಂಶದ ಕುಡಿಗಳು ತಮ್ಮ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಹೋಗುತ್ತಿದ್ದಾರೆ. ಅರ್ಜುನನ ಸರದಿ ಬರುತ್ತದೆ. ಬಿಲ್ವಿದ್ಯೆಯಲ್ಲಿ ಈಗಾಗಲೇ ದ್ರೋಣಾಚಾರಾರ್ಯರ ನೆಚ್ಚಿನ ಶಿಶ್ಯನೆನಿಸಿಕೊಂಡಿದ್ದ ಅರ್ಜುನನು ಈಗ ಸಾರ್ವಜನಿಕವಾಗಿ ತನ್ನ ವಿದ್ಯೆಯನ್ನು ಪ್ರದರ್ಶಿಸಿ, ಹಸ್ತಿನಾಪುರದ ನಾಗರೀಕರ ಪ್ರಶಂಶೆಯನ್ನೂ ಗಿಟ್ಟಿಸಿಕೊಳ್ಳುತ್ತಾನೆ.


ದ್ರೋಣಾಚಾರ್ಯ  - ಹಸ್ತಿನಾಪುರದ ಮಹಾಜನಗಳೇ...ಅರ್ಜುನ ನನ್ನ ನೆಚ್ಚಿನ ಶಿಶ್ಯನೆಂಬುದು ತಿಳಿದೇ ಇದೆ. ಈಗ ತಾವೆಲ್ಲರೂ ಸಹ ಅರ್ಜುನನ ಶೌರ್ಯಕ್ಕೆ ಸಾಕ್ಷಿಯಾಗಿದ್ದೀರಿ.ಅರ್ಜುನ ಈ ಜಗತ್ತಿನ ಶ್ರೇಷ್ಟ ಧನುರ್ಧಾರಿ. ಇದರಲ್ಲಿ ನನಗೆ ಯಾವ ಸಂದೇಹವೂ ಇಲ್ಲ.

(ಈ ಕೂಟವನ್ನು ವೀಕ್ಷಿಸಲೆಂದು ನೆರೆದಿದ್ದ ಹಸ್ತಿನಾಪುರದ ನಾಗರೀಕರು ಅರ್ಜುನನಿಗೆ ಜೈಕಾರವನ್ನು ಹಾಕುತ್ತಾರೆ...ಅಷ್ಟರಲ್ಲಿ..ರಂಗಭೂಮಿಯನ್ನು ಪ್ರವೇಶಿಸಿದ ಕರ್ಣನು, ಹೆಬ್ಬಾಗಿಲ ಬಳಿ ನಿಂತು...ತನ್ನ ಧನಸ್ಸನ್ನು ಮುಂದೆ ಮಾಡುತ್ತಾ..)

ಕರ್ಣ - ಗುರು ದ್ರೋಣಾಚಾರ್ಯರೇ! ಒಬ್ಬ ವ್ಯಕ್ತಿಯ ಶೌರ್ಯವನ್ನಷ್ಟೇ ವೀಕ್ಷಿಸಿ, ಆತನೇ ಜಗತ್ತಿನ ಸರ್ವಶ್ರೇಷ್ಟ ಧನುರ್ಧಾರಿ ಎನ್ನುವ ತೀರ್ಮಾನಕ್ಕೆ ಬರುವುದು ಯಾವ ವೀರನಿಗೂ ಶೋಭೆನೀಡುವಂತಹದ್ದಲ್ಲ... ಒಮ್ಮೆ ನಿಮ್ಮ ಶಿಶ್ಯ ಅರ್ಜುನನ್ನು ನನ್ನ ವಿರುದ್ದ ಸೆಣಸಲು ಬಿಡಿ, ಆಗ ಜಗತ್ತಿನ ಶ್ರೇಷ್ಟ ಧನುರ್ಧಾರಿ ಯಾರೆಂದು ಎಲ್ಲರಿಗೂ ತಿಳಿಯುತ್ತದೆ.

ಕೃಪಾಚಾರ್ಯ  -. ಹೇ, ವೀರ. ಪೆವಿಲಿಯನ್ ಹತ್ತಿರಕ್ಕೆ ಬಂದು ನಿಲ್ಲು. ಹಾಗೂ ನಮ್ಮೆಲ್ಲರ ಮುಂದೆ ನಿನ್ನ ಪರಿಚಯವನ್ನು ನೀಡು. ನೀನು ಯಾರು? ನಿನ್ನ ತಂದೆ-ತಾಯಿ ಯಾರು? ತಿಳಿಸು.

(ಕರ್ಣನು ಪೆವಿಲಿಯನ್ ಮುಂದೆ ಬಂದು ನಿಲ್ಲುತ್ತಾನೆ...ತನ್ನ ಜನ್ಮ ರಹಸ್ಯದ ಅರಿವಿರದ ಕರ್ಣನು ಕೃಪಾಚಾರ್ಯರ ಪ್ರಶ್ಣೆಗೆ ಉತ್ತರ ನೀಡದೆ ಅಸಹಾಯಕನಾಗಿ ತಲೆ ತಗ್ಗಿಸಿ ನಿಲ್ಲುತ್ತಾನೆ.
.
.
ಕರ್ಣನ ವಸ್ತ್ರ, ಕರ್ಣಕುಂಡಲ ಹಾಗೂ ಆತನ ಮುಖದಲ್ಲಿದ್ದ ಸೂರ್ಯನ ತೇಜಸ್ಸನ್ನು ಮಾತೆ ಕುಂತಿಯು ಗಮನಿಸುತ್ತಾಳೆ. ಈತ ತನ್ನ ಪುತ್ರನೇ ಎಂದು ಕೂಡಲೇ ಕಂಡುಕೊಳ್ಳುತ್ತಾಳೆ. ಆದರೆ ಎಲ್ಲರ ಮುಂದೆ ತಿಳಿಸಲಾಗದೆ ಹಾಗೂ ತನ್ನ ಪುತ್ರನ ಅಸಾಹಯಕ ಸ್ಥಿತಿಯನ್ನು ಕಂಡು ಮತ್ತಷ್ಟು ದಿಗ್ಬ್ರಮೆಯಿಂದ ಮೂರ್ಛೆ ಹೋಗುತ್ತಾಳೆ.
.
.
ಕೃಪಾಚಾರ್ಯರು ತಮ್ಮ ಪ್ರಶ್ಣೆಯನ್ನು ಮುಂದುವರೆಸುತ್ತಾರೆ...)

ಹೇ ವೀರ, ಇದು ಯುದ್ದಭೂಮಿಯಲ್ಲ. ಇದು ಕುರುವಂಶದ ರಂಗಭೂಮಿ. ಇಲ್ಲಿ ಸೆಣಸಲು ನಿನ್ನಂತಹ ಸಾಮಾನ್ಯ ಪ್ರಜೆಗಳಿಗೆಲ್ಲಾ ಅವಕಾಶವಿಲ್ಲ. ಇದು ಕೇವಲ ಸರಿ-ಸಮಾನರಲ್ಲಿ ನಡೆಯುವ ಪರೀಕ್ಷೆ. ಅರ್ಜುನನೊಡನೆ ಸೆಣಸಲು ನಿನಗೆ ಏನು ಯೋಗ್ಯತೆ ಇದೆ?

ಕರ್ಣ - ಅರ್ಜುನನೊಡನೆ ಸೆಣಸಲು ಈ ಧನಸ್ಸು ಸಾಕು. ನನಗೆ ಮತ್ತೇನು ಬೇಡ.
(ಕರ್ಣನ ಮಾತಿನಿಂದ ಕೋಪಗೊಂಡ ಅರ್ಜುನ, ಕೃಪಾಚಾರ್ಯರನ್ನು ಉದ್ದೇಶಿಸಿ.)

ಅರ್ಜುನ - ನನಗೆ ಈ ವೀರನೊಡನೆ ಸೆಣಸಲು ಅಪ್ಪಣೆ ನೀಡಿ ಗುರು. ಈತನನ್ನು ಕೆಲವೇ ಕ್ಷಣದಲ್ಲಿ ಸೋಲಿಸಿ, ಓಡಿಸುತ್ತೇನೆ.

(ಮತ್ತೊಂದು ಪೆವಿಲಿಯನ್‌ನಲ್ಲಿ ಕೂತಿದ್ದ ಭೀಮನು, ಕರ್ಣನ ಅಹಂಕಾರದ ಮಾತಿನಿಂದ ಕುಪಿತಗೊಂಡಿರುತ್ತಾನೆ)

ಭೀಮ - ಹೇ ಅರ್ಜುನ, ಯಕಹಷ್ಛಿತ್ ಒಬ್ಬ ಸಾರತಿಯ ಮಗ (ಕರ್ಣನ ಸಾಕು ತಂದೆ,ಅಧಿರತ, ದೃತರಾಷ್ಟ್ರನ ಸೈನ್ಯದಲ್ಲಿ ಒಬ್ಬ ಸಾರತಿ)ನಿಗಾಗಿ ನಿನ್ನ ವಿದ್ಯೆಯನ್ನು ಪ್ರಸರ್ಶಿಸಬೇಕಿಲ್ಲ. ಆತನನ್ನು ನಿರ್ಲಕ್ಷಿಸು ಹಾಗೂ ಆಚಾರ್ಯರ ಅಪ್ಪಣೆ ಪಡೆದು ಇಲ್ಲಿ ಬಂದು ಆಸೀನನಾಗು.

(ಕರ್ಣನ ಆತ್ಮವಿಶ್ವಾಸವನ್ನು ಕಂಡು ಬೆರಗಾದ ಧುರ್ಯೋಧನನು, ಭವಿಷ್ಯದಲ್ಲಿ ಪಾಂಡವರ ವಿರುದ್ದ ಹೋರಾಡ ಬೇಕಾದ ಸಂದರ್ಭವು ಎದುರಾದಾಗ,  ಮದ್ಯಮ ಪಾಂಡವ ಅಂದರೆ ಅರ್ಜುನನನ್ನು ಎದುರಿಸಲು ನಮ್ಮ ಬಳಿ ಇಂತಹ ವೀರನ ಅವಶ್ಯಕತೆ ಇದೆ, ಎಂಬುದನ್ನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾನೆ)

ಧುರ್ಯೋಧನ -  ಗುರು  ಕೃಪಾಚಾರ್ಯರೇ!  ಈ ವೀರನಿಗೆ ಅರ್ಹತೆ ಇಲ್ಲ ಎಂಬುದು ನಿಮ್ಮ ಅಭಿಪ್ರಾಯವಾದರೆ, ನನ್ನ ತಂದೆಯಿಂದ ನನಗೆ ನೀಡಲಾಗಿರುವ ಆಂಗ ದೇಶದ ಪಟ್ಟವನ್ನು ಈ ವೀರನಿಗೆ ನೀಡುವ ಅಧಿಕಾರವನ್ನು ಬಳಸಿಕೊಳ್ಳುತ್ತೇನೆ. ಈತ ಇಂದಿನಿಂದ ಆಂಗ ರಾಜ್ಯದ ರಾಜ.

(ತನ್ನ ಹೊಸ ಗೆಳಯ ಕರ್ಣನನ್ನು)
ಹೇ ಮಿತ್ರ, ನೀನು ಇಲ್ಲಿ ಸೆಣಸಲು ಅರ್ಹನಾಗಿದ್ದೀಯ. ನಿನ್ನನ್ನು ತಡೆಯಲು ಇಲ್ಲಿ ಯಾರಿಗೂ ಅವಕಾಶ ನೀಡುವುದುಲ್ಲ. ಇಂದಿನಿಂದ ನೀನು ನನ್ನ ಆಂಗರಾಜ್ಯದ ರಾಜ. ಈಗಲೇ ನಿನಗೆ ಪಟ್ಟಾಭಿಷೇಕ ಮಾಡುತ್ತಿದ್ದೇನೆ.  

(ಇಲ್ಲಿಯವರೆಗೆ ತನ್ನ ಜೀವನದಲ್ಲಿ ಕೇವಲ ನಿಂದನೆಗಳನ್ನೇ ಎದುರಿಸುತ್ತಾ ಬಂದಿದ್ದಾ ಕರ್ಣನಿಗೆ, ಧುರ್ಯೋಧನನು ನೀಡಿದ ಮರ್ಯಾದೆ ಹಾಗೂ ಮಹತ್ವದ ರಾಜನ ಪಟ್ಟವನ್ನು ಸ್ವೀಕರಿಸುತ್ತಾ.)

ಕರ್ಣ - (ತನ್ನನ್ನು ನಿಂದನೆಗಳಿಂದ ಪಾರು ಮಾಡಿದ ಧುರ್ಯೋಧನನ್ನು ಉದ್ದೇಶಿಸಿ) ಮಿತ್ರ ಧುರ್ಯೋಧನ, ನಿನ್ನ ಈ ಋಣವನ್ನು ಹೇಗೆ ತೀರಿಸಲೆಂದು ನನಗೆ ತಿಳಿಯದು. ಆದರೆ ಇಂದಿನಿಂದ ನನ್ನ ನಿಷ್ಟೆ ನಿನಗೆ ಹಾಗೂ ಕೇವಲ ನಿನ್ನೊಬ್ಬನಿಗೇ. ನನ್ನ ಕೊನೆ ಉಸಿರಿರುವವರೆಗೂ ನಿನ್ನ ಶ್ರೇಯಸ್ಸಿಗೆ ಹೋರಾಡುತ್ತೇನೆ. ಇದು ನಾನು ನಿನಗೆ ನೀಡುತ್ತಿರುವ ವಚನ.

(ಆ ಮೂಲಕ ಧುರ್ಯೋಧನನು ಕರ್ಣನ ಸ್ನೇಹವನ್ನು ಗೆಲ್ಲುತ್ತಾನೆ. ಕರ್ಣ ಕುಂತಿಯ ಮಗನೆಂದು ಸ್ವತಃ ಕುಂತಿಗೆ ಬಿಟ್ಟರೆ, ಆ ಕ್ಷಣಕ್ಕೆ ಕರ್ಣನನ್ನೂ ಸೇರಿಸಿಕೊಂಡು ಬೇರೆ ಯಾರಿಗೂ ತಿಳಿದಿರಿರುವುದಿಲ್ಲ.)

(ಅಂದಿನಿಂದ ಪರಸ್ಪರ ಸ್ನೇಹಿತರಾದ ಕರ್ಣ-ಧುರ್ಯೋಧನರು ಕೊಟ್ಟ ಮಾತಿಗೆ ತಪ್ಪದೇ... ತಮ್ಮ ಕಟ್ಟಕಡೆ ಉಸಿರಿರುವವರೆಗೂ  ಪರಸ್ಪರ ಸ್ನೇಹವನ್ನು ಕಾಪಾಡಿಕೊಳ್ಳುತ್ತಾರೆ.)

ಧುರ್ಯೋಧನನು ದುರಹಂಕಾರಿ, ಮಹತ್ವಾಕಾಕ್ಷಿ, ಸ್ವಾರ್ಥಿ, ಮುಂಗೋಪಿ ಎಂದೆಲ್ಲಾ ಕರೆಸಿಕೊಂಡರೂ ಕರ್ಣನೊಂದಿಗಿನ ಸ್ನೇಹದ ವಿಷಯದಲ್ಲಿ ಮಾತ್ರ  ಒಬ್ಬ ಶ್ರೇಷ್ಟ ವ್ಯಕ್ತಿಯಾಗಿ ವಿಶಿಷ್ಟವಾದ ಪಾತ್ರವಾಗಿ ಕಾಣಬಹುದು.

6 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ಸಂಭಾಷಣೆ ಚುರುಕಾಗಿದೆ....

Me, Myself & I ಹೇಳಿದರು...

ಹೌದು ಮಹೇಶ್.

ಬಾಲು ಹೇಳಿದರು...

chennaagide. :)

ಸಾಗರದಾಚೆಯ ಇಂಚರ ಹೇಳಿದರು...

ಲೋದ್ಯಾಶಿ ಸರ್
ತುಂಬಾ ಚೆನ್ನಾಗಿದೆ

Me, Myself & I ಹೇಳಿದರು...

ಥ್ಯಾಂಕ್‌ಯೂ ಬಾಲು, ಥ್ಯಾಂಕ್‌ಯೂ ಗುರುಮೂರ್ತಿ

Me, Myself & I ಹೇಳಿದರು...

@ಶಿವಶಂಕರ
ಧುರ್ಯೋಧನ-ಕರ್ಣ ಸ್ನೇಹವನ್ನು ಇಂದಿಗೂ ನಾವು ಉದಾಹರಣೆಯಾಗಿ ಅಲ್ಲಿ ಇಲ್ಲಿ ಬಳಸುತ್ತಿರುತ್ತೇವೆ.
ನೀವು ಮತ್ತೊಂದು ಮಾಹಿತಿಯೊಂದಿಗೆ ಮತ್ತಷ್ಟು ಜೀವನೀಡಿದ್ದೀರಿ. ಧನ್ಯವಾದಗಳು.

(ನಿಮ್ಮ ಬ್ಲಾಗಿನಲ್ಲಿ ಒಂದೊಂದೇ ಪೋಸ್ಟ್ ಗಳು ಪ್ರಕಟಣೆಗೆ ನೀಡಿದ್ದೀರಲ್ಲಾ? ಪೇಜ್ ಹಿಟ್ ಗಳ ಸಂಖ್ಯೆ ಜಾಸ್ತಿ ಮಾಡಿಕೊಳ್ಳಲಿಕ್ಕಾ??)
ಇಲ್ಲ, ಆ ಸಂಧರ್ಬದಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿದ್ದವು ಆಗ ಇದನ್ನು ಬದಲಿಸಿದ್ದೆ. ನಂತರ ಸರಿಪಡಿಸುವುದನ್ನು ಮರೆತು ಬಿಟ್ಟಿದ್ದೇನೆ. ಇದೀಗ ಸರಿಪಡಿಸುತ್ತೇನೆ. ಧನ್ಯವಾದಗಳು.

blogspot add widget