ಶುಕ್ರವಾರ, ಜುಲೈ 31, 2009

ವಿಜ್ಞಾನ ಮತ್ತು ಪ್ರಾಚೀನ ಭಾರತ



ಭೂಮಿ ಗೋಳಾಕಾರದಲ್ಲಿದೆ

ನಮಗೆ ಪುಸ್ತಕಗಳಲ್ಲಿ ತಿಳಿಸಿದ ಹಾಗೆ ಭೂಮಿ ಗೋಳಾಕಾರದಲ್ಲಿದೆ ಅಂತ ನಮಗೆ ಮೊದಲು ತಿಳಿಸಿಕೊಟ್ಟದ್ದು
ಕೋಪರ್ನಿಕಸ್ (1473 – 1543) ಮತ್ತೆ
ಗೆಲಿಲಿಯೋ (1564–1642).

ನಮ್ಮ ದೇಶದವರು ಏನು ಹೇಳಿದ್ದಾರೆ ಮತ್ತೆ ಯಾವಾಗ ಹೇಳಿದ್ದಾರೆ ಈಗ ನೋಡೋಣ
ಖಘೋಳಗ್ನ-ಗಣಿತಜ್ಞರಾದ ಆರ್ಯಭಟ (476–550 CE) ಹೇಳಿದ್ದು ,
"ಭೂಗೋಳ ಸರ್ವತೋ ವ್ರಿತ್ತಃ " - ( ಅರ್ಯಭತಿಯ, ಗೊಳಪದ, ಆರನೇ ಸ್ಲೋಕ)
ಈ ಸ್ಲೋಕದ ಅರ್ಥ ಏನು ಅಂದರೆ - "ಭೂಮಿ ಎಲ್ಲ ದಿಕ್ಕುಗಳಿಂದಲೂ ದುಂಡಗಿದೆ."

ಇನ್ನೊಬ್ಬ ಖಘೋಳಗ್ನ-ಗಣಿತಜ್ಞ-ಜ್ಯೋತಿಷಿಯಾದ ವರಾಹಮಿಹಿರ (505 – 587) ಹೇಳಿದ್ದು
"ಪಂಚ ಮಹಾಭೂತಮಯಸ್ತ್ರಾರಾಗನ್ನ ಪನ್ಜರೇ ಮಹ್ಲಗೂಲಃ" (ಪಂಚ ಸಿದ್ದಾಂತಿಕ, 13 ಚಾಪ್ಟರ್, ಸ್ಲೋಕ ಒಂದು )
ಈ ಸ್ಲೋಕದ ಅರ್ಥ ಏನು ಅಂದರೆ - "ಪಂಚಭೂತಗಳಿಂದ ಸೃಸ್ಟಿಯಾಗಿರುವ ಗೋಳಾಕಾರದ ಈ ಭೂಮಿಯು ಒಂದುಕಬ್ಬಿಣದ ಬಲೆಯಲ್ಲಿ ನೇತು ಹಾಕಿರುವ ಬಾಲ್ ನಂತೆ ಹೊಳೆಯುತ್ತಿರುವ ನಕ್ಸತ್ರ ಗಳ ಜೊತೆ ನೇತಾಡುತ್ತಿದೆ."

ಈಗ ರ್ರಿಗ್ವೇದದ ಒಂದು ಮಂತ್ರದತ್ತ ಗಮನ ಹರಿಸೋಣ
"ಚಕ್ರಾನ್ನಾಸಃ ಪರ್ಲ್ನ್ನಹಂ ಪ್ರ್ರಿತ್ಹಿವ್ಯಾ" (ರ್ರಿಗ್ವೇದ 1.33.8 ) ಅಂದರೆ
"ಯಾವ ಭೂಮಿಯ ಪರಿದಿಯ ಮೇಲೆ ಜನ ವಾಸಿಸಿದ್ದಾರೋ"

ಹೀಗೆಹೇ ವೇದದ ಇನ್ನು ಅನೇಕ ಪದ್ಯಗಳು ನಮ್ಮ ಭೂಮಿ ಗೋಳಾಕಾರದಲ್ಲಿ ಇದೆ ಎನ್ನುವುದನ್ನ ಸಾರುತ್ತವೆ.

ಹೀಗೆ ಮತ್ತೊಬ್ಬ ಖಘೋಳಗ್ನ-ಗಣಿತಜ್ಞ ಭಾಸ್ಕರಾಚಾರ್ಯ (1114 – 1185) ತಮ್ಮ ಪುಸ್ತಕ "ಲೀಲಾವತಿ" ಯಲ್ಲಿ ಹೇಳಿದ್ದು
"ನಿನ್ನ ಕಣ್ಣಿಗೆ ಕಾಣುವುದೆಲ್ಲಾ ಸತ್ಯ ಅಲ್ಲ. ಭೂಮಿಯು ಕಣ್ಣಿಗೆ ಕಾಣಿಸುವಂತೆ ಚಪ್ಪಟೆಯಾಗಿಲ್ಲ.
ಅದು ಒಂದು ಗೋಳಾಕಾರದಲ್ಲಿದೆ. ಒಂದು ದೊಡ್ಡದಾದ ವೃತ್ತ್ತವನ್ನು ಬರೆದು ಅದರ ನಾಲ್ಕನೇ ಒಂದು ಭಾಗದಷ್ಟುಪರಿದಿಯನ್ನು ನೋಡಿದರೆ ಅದು ಒಂದು ಸರಳ ರೇಖೆ ಹಾಗೆ ಕಾಣಿಸುತ್ತದೆ. ಆದರೆ ನಿಜಾರ್ಥದಲ್ಲಿ ಅದು ಒಂದು ವೃತ್ತ. ಅದೇರೀತಿ ಭೂಮಿಯೂ ಗೋಳಾಕಾರದಲ್ಲಿದೆ."

ಭೂಮಿಯು ಗೋಳಾಕಾರದಲ್ಲಿದೆ ಅನ್ನುವುದಕ್ಕೆ ಇನ್ನೊಂದು ಸಾಕ್ಷಿ ಗ್ರಹಣಗಳು, ಈಗ ಇದೇ ನಮ್ಮ ಖಘೋಳಗ್ನ-ಗಣಿತಜ್ಞಆರ್ಯಭಟ ಅವರು ಗ್ರಹಣದ ಬಗ್ಗೆ ಎಷ್ಟು ತಿಳಿದಿದ್ದರೂ ಅಂತ ನೋಡೋಣ...
"ಚಾದಯತಿ ಶಶಿ ಸೂರ್ಯಂ ಶಶಿನಂ ಮಹತಿ ಚ ಭೂಛಾಯಾ" ( ಆರ್ಯಭಾತ್ತಲ್ಯಂ, ಗೊಳಪದ, ಸ್ಲೋಕ ೩೭)
ಈ ಸ್ಲೋಕದ ಅರ್ಥ ಏನು ಅಂದರೆ "ಚಂದ್ರನು ಅಡ್ಡ ಬಂದಾಗ ಸೂರ್ಯಗ್ರಹಣವೂ ಮತ್ತು ಭೂಮಿಯು ಅಡ್ಡ ಬಂದಾಗಚಂದ್ರ ಗ್ರಹಣವು ಸಂಭವಿಸುವುದು. "

ಇಷ್ಟಲ್ಲದೇ ಇವರು ಗ್ರಹಣಗಳು ಎಷ್ಟು ದಿನಗಳಿಗೊಮ್ಮೆ ಸಂಭವಿಸುತ್ತವೆ ಅಂತಲೂ ಲೆಕ್ಕ ಹಾಕಿದ್ದರು ಮತ್ತು ಭೂಮಿಯುಸೂರ್ಯನ ಸುತ್ತ ಒಂದು ಭಾರಿ ಸುತ್ತುವುದಕ್ಕೆ 365 ದಿನಗಳು 12 ನಿಮಿಷಗಳು ಮತ್ತು 30 ಸೆಕೆಂಡುಗಳು ಬೇಕೆಂದು ಸಹತಿಳಿದಿದ್ದರು ಅಷ್ಟೇ ಅಲ್ಲ ಭೂಮಿಯು ತನ್ನ ಸುತ್ತ ತಾನು ತಿರುಗಲು 23 ಗಂಟೆಗಳು 56 ನಿಮಿಷಗಳು ಮತ್ತು 4.1 ಸೆಕೆಂಡ್ಗಳು ಬೇಕು ಅಂತಲೂ ತಿಳಿದಿದ್ದರು. (ದಿನ, ಗಂಟೆ, ನಿಮಿಷ ಮತ್ತು ಸೆಕೆಂಡ್ ಇವುಗಳನ್ನು ಇಷ್ಟೊಂದು ಕಡಾ-ಖಂಡಿತವಾಗಿಹೇಗೆ ತಿಳಿದಿದ್ದರು ಅನ್ನುವುದನ್ನ ಇನ್ನೊಮ್ಮೆ ವಿವರಣೆ ನೀಡುತ್ತೇನೆ ಈ ದಿನ ಇಷ್ಟು ಸಾಕು)

ಈಗ ನಮ್ಮ ಗುಂಡಗಿನ ಭೂಮಿಯ ಕೊನೆಯ ವಾಕ್ಯಕ್ಕೆ ಬರೋಣ...
"ಭೂಗೋಳ" ಪದದ ಅರ್ಥವೇ ಗೊಳಾಕಾರದ ಭೂಮಿ ಅಂತ ಆಗುತ್ತೆ. ಇದರ ಅರ್ಥ ಶತಮಾನಗಳ ಹಿಂದೆಯೇ ನಮ್ಮಪೂರ್ವಿಕರು ಭೂಮಿಯು ದುಂಡ(ಗೋಳಾಕಾರ)ಗಿದೆ ಎಂದು ತಿಳಿದಿದ್ದರು ಅಂತ ಅನ್ನಿಸುತ್ತೆ ಅಲ್ಲವೇ?

ಆದರು ನಾವು-ನೀವು ನಮ್ಮ ಪಠ್ಯ-ಪುಸ್ತಕದಲ್ಲಿ ಓದಿದ್ದು ಗೆಲಿಲಿಯೋ, ಕೊಪೆರ್ನಿಕಸ್ ಮತ್ತೆ ಕೆಪ್ಲರ್ ಅಂತ ಅಲ್ಲವೇ? ಯಾಕೆಈಗೆ?

ವಿ. ಸೂ:
ಓದುಗರಲ್ಲಿ ನನ್ನ ವಿನಂತಿ:
ನಾನು ಸಂಸ್ಕೃತದ ವಿದ್ಯಾರ್ಥಿಯೂ ಅಲ್ಲ, ಪಂಡಿತನಂತು ಮೊದಲೇ ಅಲ್ಲ.
ಆಗಾಗಿ ಇಲ್ಲಿ ಸಂಸ್ಕೃತದ ಕೊಲೆ ಆಪಾದನೆಯನ್ನ ನನ್ನ ತಲೆ ಮೇಲೆ ಹೇರದೆ ನನ್ನನ್ನು ಮನ್ನಿಸಿ.
ಸಾಧ್ಯವಾದಲ್ಲಿ ತಪ್ಪಿದ್ದಲ್ಲಿ ತಿದ್ದಿ ನಿಮ್ಮ ಅನಿಸಿಕೆ ಬರೆಯಿರಿ.


ಕಾಮೆಂಟ್‌ಗಳಿಲ್ಲ:

blogspot add widget