ಕಳೆದ ವರ್ಷ, ಹೀಗೆ ಒಂದು ದಿನ, ನನಿಗೆ ಜ್ವರ ಬಂದಿದ್ದ ಕಾರಣ ಆಫೀಸ್ ಗೆ ರಜೆ ಹಾಕಿ ಮನೆಯಲ್ಲಿಯೇ ಇದ್ದೆ.
ಮತ್ತೆ ಆ ದಿನ ಸೂರ್ಯಗ್ರಹಣವು ಸಹ ಇತ್ತು. ಆಗಾಗಿ , 24/7 ನ್ಯೂಸ್ ಚಾನೆಲ್ಗಳ ಅನೇಕ ಜ್ಯೋತಿಷಿಗಳು ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದರು.
ಗ್ರಹಣದ ಸಮಯದಲ್ಲಿ ಮನೆಯಿಂದ ಯಾರೂ ಹೊರಗೆ ಬರ ಬಾರದು ಅಂತ ಸೂಚನೆ ನೀಡುತ್ತಾ ಇದ್ದರು. ಮತ್ತೆ ಗ್ರಹಣದಿಂದ ಯಾರಿಗೆಲ್ಲ ಏನೆಲ್ಲಾ ಅನುಕೂಲಗಳು ಮತ್ತು ಅನಾಹುತಗಳು ಸಂಭವಿಸಬಹುದು ಅಂತೆಲ್ಲಾ ಅವರು ವಿವರಿಸ್ತಾ ಇದ್ದರು.
ಆಗ ನನ್ನ ಅಂಕಲ್ ಟಿ ವಿ ಚಾನೆಲ್ ಬದಲಾಯಿಸಿದರು. "ಏನೇ ಆದರು ಈ ಜ್ಯೋತಿಷಿಗಳನ್ನು ನಂಬಬಾರದು" ಅಂತ ಹೇಳಿ ಸ್ವಲ್ಪ ಹೊತ್ತು ಒಳ ನಡೆದರು.
ಅದಕ್ಕೆ ನಾನು ಕಾರಣ ಕೇಳಿದೆ, ಏಕೆ ನಂಬಬಾರದು? ಅಂತ.
ಆಗ ಅವರಿಂದ ಬಂದ ಉತ್ತರ,
"ಜ್ಯೋತಿಷಿಗಳು ಹೇಳೋ ವಿಷಯ ಒಂದಕ್ಕೊಂದು ಸರಿಹೊಂದುವುದಿಲ್ಲ. ಒಬ್ಬ ಜ್ಯೋತಿಷಿ ಒಬ್ಬ ವ್ಯಕ್ತಿಯ ಜಾತಕ ನೋಡಿ ಎಲ್ಲ ಸರಿ ಇದೆ ಮತ್ತೆ ಇನ್ನು ಮುಂದೆಯೂ ಇನ್ನೂ ಚೆನ್ನಾಗಿ ನಡಿಯುತ್ತೆ ಅಂತೆಲ್ಲಾ ಹೇಳುತ್ತಾರೆ. ಅಥವಾ ಯಾವುದೊ ದೋಷ ಇದೆ ಅಂತ ಹೇಳಿ, ಒಂದೆರಡು ಪೂಜೆಗಳನ್ನು ಸೂಚಿಸಿ, ಈ ಪೂಜೆಗಳನ್ನು ಮಾಡಿಸಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತೆ ಅಂತ ಹೇಳ್ತಾರೆ.
ಒಮ್ಮೊಮ್ಮೆ ಎಷ್ಟು ಜ್ಯೋತಿಷಿಗಳ ಹತ್ತಿರ ಕೇಳಿದರೂ ಎಲ್ಲರೂ ಒಳ್ಳೆಯದಾಗುತ್ತದೆ ಅಂತ ಹೇಳುತ್ತಾರೆ ಆದರೆ ನಡೆಯುವ ದುರ್ದೈವದ ಬಗ್ಗೆ ಯಾರೂ ಒಂದೂ ಸುಳಿವೂ ನೀಡುವುದಿಲ್ಲ (ಅಥವಾ ಅದು ಅವರಿಗೂ ನಿಲುಕುವುದಿಲ್ಲವೋ ಏನೋ)".
ಇಷ್ಟೆಲ್ಲಾ ವಿವರಣೆಗಳನ್ನು ಕೇಳಿದ ಮೇಲೂ ಅವರ ಬಳಿ ಚರ್ಚೆ ಮಾಡಬೇಕು ಅಂತ ಏನೂ ಅನ್ನಿಸಲಿಲ್ಲ. ಆದರೂ ಕುತೂಹಲಕ್ಕೆ ಒಂದು ಪ್ರಶ್ನೆ ಕೇಳಿದೆ, ಜ್ಯೋತಿಶಿಗಳನ್ನ ಸಂಪೂರ್ಣವಾಗಿ ನಂಬುವುದು ತಪ್ಪು ಅಂತ ಆಯಿತು. ಮತ್ತೆ ಯಾರನ್ನ ನಂಬ ಬೇಕು? ನಂಬಿದರೆ ಏಕೆ ನಂಬ ಬೇಕು?
ಉತ್ತರ ಕೊಡುವುದಕ್ಕೆ ಶುರುವಿಟ್ಟರು,
"ನಂಬಿದರೆ ಡಾಕ್ಟರನ ನಂಬ ಬಹುದು. ಅವರು ವ್ಯಾಜ್ಞಾನಿಕವಾಗಿ ಸತ್ಯವನ್ನು ತಿಳಿದಿರುತ್ತಾರೆ. ಮತ್ತೆ ಒಬ್ಬ ರೋಗಿಯನ್ನ ಒಬ್ಬ ಡಾಕ್ಟರ್ ಪರೀಕ್ಷೆ ಮಾಡಿ ಅವನಿಗೆ ಇಂತದ್ದೆ ಭೇನೆ ಇದೆ. ಅಂತ ಸರಿಯಾಗಿ ತಿಲಿಸ್ತಾರೆ. ಅಷ್ಟಾದ ಮೇಲೆ ಡಾಕ್ಟರ್ ಹೇಳುವ ಚುಚ್ಚುಮದ್ದು ಅಥವಾ ಮಾತ್ರೆಯನ್ನು ಸರಿಯಾಗಿ ತೆಗೆದುಕೊಂಡರೆ ನಾವು ಭೇನೆಯಿಂದ ಗುಣಮುಖರಾಗಬಹುದು .
ಈ ಉತ್ತರವೂ ಸರಿ ಎನಿಸಿತು. ಆದರೂ ಒಂದು ಪ್ರಶ್ನೆ ಹೊಳೆಯಿತು. ಹೀಗೆ ವಿವರಿಸಿದೆ.
"ಒಮ್ಮೊಮ್ಮೆ ಡಾಕ್ಟರ್ ಆದವರು ರೋಗಿಯ ಭೇನೆಯನ್ನು ಸರಿಯಾಗಿ ಗುರುತಿಸಲಾಗದೆ ರೋಗಿಯು ತನ್ನ ಜೀವವನ್ನೇ ಕಳೆದು ಕೊಂಡ ಉದಾಹರಣೆಗಳು ನಮ್ಮ ಸುತ್ತ ಮುತ್ತ ಕೇಳುತ್ತಿರುತ್ತೇವೆ. ಇನ್ನೂ ಕೆಲವೊಮ್ಮೆ ಡಾಕ್ಟರ್ ಕೊಡುವ treatment ಇಂದ ಏನೋ ಒಂದು reaction ಆಗಿಯೂ ಸಹ ರೋಗಿ ತನ್ನ ಪ್ರಾಣ ಕಳೆದುಕೊಂಡ ಅಥವಾ ಏನೋ ಮತ್ತೊಂದು ಭಯಾನಕ ಭೇನೆಗೆ ತುತ್ತಾಗಿರುವ ಉದಾಹರಣೆಗಳೂ ಸಾಕಷ್ಟು ನಾವು ನೋಡಿದ್ದೇವೆ/ಕೇಳಿದ್ದೇವೆ. ಅಂದರೆ ಯಾರನ್ನು ನಂಬುವುದು?"
ಆಗ ಅಂಕಲ್ ಸುಮ್ಮನೆ ಒಮ್ಮೆ ನನ್ನ ಮುಖ ನೋಡಿ ನಕ್ಕರು.
ವಿಧಿಯಾಟ ಭಲ್ಲವರಾರು ?? ಅಲ್ಲವೇ ??
3 ಕಾಮೆಂಟ್‌ಗಳು:
ನೀವು ಅನ್ನೋದು ಸರಿ,
ನಮ್ಮ ಮನಸೀಗಿಂತ ನಂಬಿಕಸ್ಥ ವ್ಯಕ್ತಿ ಬೇರೆ ಯಾರೂ ಇಲ್ಲ ಅಂತ ನನ್ನ ಭಾವನೆ. ನಮ್ಮನ್ನೇ ನಾವು ನಂದೆ ಇದ್ರೆ ಇನ್ಯಾರನ್ನು ನಂಬೋಕೆ ಸಾದ್ಯ ಅಲ್ಲವೇ?
ಪುರಂದರ ದಾಸರು ಹೇಳಿದ ಹಾಗೆ ಭಗವಂತನನ್ನು ನಂಬಿ ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ. ಚೆನ್ನಾಗಿದೆ ನಿಮ್ಮ ದೋಸೆ ರುಚಿ(ಲೇಖನ).
ಗುರು,
ಹೌದು, ನಮ್ಮ ಮೇಲೆ ನಮಗೆ ನಂಬಿಕೆ ಬೇಕು..ಧ್ಯೆರ್ಯನೂ ಬೇಕು. :)
ಗೋಪಾಲ್ .
ದೋಸೆ ರುಚಿ ಸವಿದದ್ದಕ್ಕೆ ಧನ್ಯವಾದಗಳು :)
ಕಾಮೆಂಟ್ ಪೋಸ್ಟ್ ಮಾಡಿ