ಹಾಸ್ಟೆಲ್ನಲ್ಲಿ ಶಿವ ಮತ್ತೆ ಅನಿಲ್ ರೂಂ ಮೇಟ್ಸ್ ಇದ್ರು. ಶಿವುಗೆ ಚಿತ್ರ ಬರೆಯೋದು ಹವ್ಯಾಸ. ಇಬ್ರಿಗೂ ಯಾವಾಗಲು ಅವರವರದೇ ಚಿಂತೆ.
ಒಂದ್ಸಾರಿ ರಾತ್ರಿ ಟೀವಿ ನೋಡೋಕ್ಕೆ ಹೋಗೋವಾಗ ದಾರಿಲ್ಲಿ ಶಿವ ಸಿಕ್ಕ.
(ನಮ್ಮ ಹಾಸ್ಟೇಲ್ನಾಗೆ ಅವತ್ತಿದ್ದಿದ್ದು ಒಂದೇ ಟೀವಿ! ಈಗ ಅದೂ ಇದೆಯೋ ಇಲ್ವೋ ಗೊತ್ತಿಲ್ಲ!)
ಅವತ್ತು ಶಿವ ಯಾವ್ದೋ ಕಾರಣಕ್ಕೆ ಸಕತ್ ಖುಷಿಲಿ ಇದ್ದ. ಪ್ರೇಮಿಗಳೇ ಹಾಗೆ, ಯಾವಾಗ ನಕ್ತಾರೆ? ಯಾವಾಗ ಅಳ್ತಾರೆ? ಅಂತನೇ ಗೊತ್ತಾಗಲ್ಲ.
ಹಾಗೇ ಒಂದು ಹಾಡು ಹೇಳ್ದ. ಪೂರ್ತಿ ಜ್ಞಾಪಕ ಇಲ್ಲ. ಇದ್ದುದ್ದರಲ್ಲೇ ಒಂದ್ಚೂರು ಉಪ್ಪು-ಖಾರ ಹಾಕಿ ಬರ್ರ್ದಿದ್ದೀನಿ.
ಚಿತ್ರ : ಹೊಂಬಿಸಿಲು
ಸಾಹಿತ್ಯ: ಗೀತಪ್ರಿಯ
ಹಾಡಿರುವವರು: ಎಸ್ ಪಿ ಬಿ
ಗೀತಪ್ರಿಯ ಮತ್ತೆ ಎಸ್ ಪಿ ಬಿ,ಇಬ್ಬರೂ ಇದೊಂದ್ಸಾರಿ ಕ್ಷಮಿಸಿ.
ವಾಟರ್ ಬಿಟ್ಟು ನೆಲದ ಮೇಲೆ ಬೋಟು ಸಾಗದೂ
ನೆಲವ ಬಿಟ್ಟು ವಾಟರ್ ಮೇಲೆ ಕಾಟು ಓಡದೂ
ನಿನ್ನ ಬಿಟ್ಟು ನನ್ನಾ. ನನ್ನಾ ಬಿಟ್ಟು ನಿನ್ನಾ
ಜಿಂದಗೀ ಸಾಗದು, ಜಿಂದಗೀ ಸಾಗದು
ವಾಟರ್ ಬಿಟ್ಟು ನೆಲದ ಮೇಲೆ ಬೋಟು ಸಾಗದೂ
ಸನ್ನು ಬರದೆ ಲೋಟಸೆನ್ದೂ ಅರಳದೂ
ಮೂನು ಇರದೇ ಸ್ಟಾರು ಎಂದೂ ನಲಿಯದೂ
ಸನ್ನು ಬರದೆ ಲೋಟಸೆನ್ದೂ ಅರಳದೂ
ಮೂನು ಇರದೇ ಸ್ಟಾರು ಎಂದೂ ನಲಿಯದೂ
ಲವ್ವು ಮೂಡದಿರಲು ಹಾರ್ಟು ಅರಳದು
ಹಾರ್ಟು ಅರಳದಿರಲು ಸಕ್ಸೆಸ್ ಕಾಣದೂ
ಹಾರ್ಟು ಅರಳದಿರಲು ಸಕ್ಸೆಸ್ ಕಾಣದೂ || ವಾಟರ್ ಬಿಟ್ಟು ||
ಲೋಕದಲ್ಲಿ ಜೆಂಟ್ಸು ಹೆಣ್ಣಿಗಾಸರೇ
ಬಟ್ ಇಲ್ಲಿ ನಾನು ನಿನ್ನಾ ಹ್ಯಾಂಡ್ ಸೆರೇ
ಲೋಕದಲ್ಲಿ ಜೆಂಟ್ಸು ಹೆಣ್ಣಿಗಾಸರೇ
ಬಟ್ ಇಲ್ಲಿ ನಾನು ನಿನ್ನಾ ಹ್ಯಾಂಡ್ ಸೆರೇ
ಕೂಡಿ ನಲಿವ ಆಸೆ ಮನದಿ ಆಗಿದೇ
ಪೀಸು ಎಲ್ಲಿ ನಾವು ಸೆಪರೇಟ್ ಆದರೇ
ಪೀಸು ಎಲ್ಲಿ ನಾವು ಸೆಪರೇಟ್ ಆದರೇ || ವಾಟರ್ ಬಿಟ್ಟು ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ