ಭಾಷೆಯಂದ್ರೆ ಮುಖ್ಯವಾಗಿ ಬೇಕಾಗೋದು ಎನುಕ್ಕೆ? ಅನುಭವ-ಅನಿಸಿಕೆ ಗಳನ್ನ, ವಿಚಾರಗಳನ್ನ, ಹಾಗು-ಹೋಗುಗಳನ್ನ, ವಿಷಯಗಳನ್ನ ಪರಸ್ಪರ ವಿನಿಮಯ ಮಾಡ್ಕೊಳ್ಳೋಕೆ. ಹೇಳೋಕ್ಕೆ ಒಬ್ರು-ಕೇಳೋಕ್ಕೆ ಇನ್ನೊಬ್ರು, ಟೋಟಲಿ ಇಬ್ರು ಇದ್ರೆ ಸಾಕು, ಅವರಿಬ್ಬರಿಗೆ ಮಾತ್ರಾನೇ ಅರ್ಥ ಆದ್ರುನೂ ಸಾಕು. ಇಲ್ಲಿ ಪರಸ್ಪರ ಒಂದೇ ತೀರ್ಮಾನಕ್ಕೆ ಬರ್ಲೆ ಬೇಕು ಅಂತೇನೂ ಇಲ್ಲ. ಒಟ್ಟಿನಲ್ಲಿ ಸಂಪರ್ಕ ಏರ್ಪಟ್ಟರೆ ಅಷ್ಟೇ ಸಾಕು.
ಮಾನವನ ನಾಗರೀಕತೆ ದಿನಗಳಿಂದ ಗಮನಿಸಿದರೆ, ಆಗೆಲ್ಲಾ ಇಬ್ರಿಗೆ ಅಥವ ಮೂವರಿಗೆ ಸಾಮಾನ್ಯವಾಗಿ ಅರ್ಥ ಆಗ್ತಿದ್ದಾ ಒಂದೇ ಭಾಷೆ ಅಂತಾನೇ ಇರ್ಲಿಲ್ಲ. ಎಲ್ಲಾ ಮುಖಾಭಿನಯ!!!
ಇಲ್ಲಿ ವಿಷಯ ಅಂಚಿ ಕೊಳ್ಳೋಕ್ಕೆ ಒಂದು ಮಾಧ್ಯಮ ಬೇಕಿತ್ತು, ಅದು ಯಾವ್ದಾದರೂ ಪರವಾಗಿರ್ಲಿಲ್ಲಾ. ಶೀಟಿ ಹೊಡಿಯೋದು, ಜೋರಾಗಿ ಕೂಗಿ ಕೊಳ್ಳೋದು, ಬಿದ್ದು ಒದ್ದಾಡೋದು. ಒಂದು ರೀತಿಲಿ ಮಾತು ಬರದ ಒಂದು ಮಗು ಹೇಗೆ ತನಗೆ ಬೇಕಿನಿಸಿದ್ದನ್ನ ತನ್ನ ತಾಯಿ ಅತ್ರ ಹಠ ಮಾಡಿ ಕೇಳ್ತಿರುತ್ತೋ ಹಾಗೇ. ಎಲ್ಲಾ ಬರೀ ಸಂಜ್ಞೆ.
ಕಾಲ ಕ್ರಮೇಣ ಇಂತಹ ಒಂದೊಂದು ಸಂಜ್ಞೆಗೂ ಒಂದೊಂದು ಅರ್ಥ ಬೆಳಿಸಿ ಕೊಳ್ತಾ ಬಂದ್ರು, ತಮ್ಮ ಕಷ್ಟ ಸುಖಗಳನ್ನ ಪರಸ್ಪರ ಹಂಚಿ ಕೊಳ್ಲೋಕ್ಕೆ ಅನುಕೂಲ ಆಯ್ತು. ಜೀವನ ಕ್ರಮ ಸುಧಾರಿಸ್ತಾ ಹೋಯ್ತು. ಉದಾಹರಣೆಗೆ ಈಗಲೂ ಆಸಕ್ತಿ ತರೋ ಕೆಲವು ಸಜ್ಞೆಗಳನ್ನ ನೋಡೋಣ.
ಕೆಲವು ಪ್ರಶ್ನೆಗಳಿಗೆ ನಾವು ಸರಿ, ತಪ್ಪು ಅಥವಾ ಹೌದು, ಅಲ್ಲ ಅಂತ ಸರಳವಾಗಿ ಉತ್ತರಿಸಬಹುದು, ಅದಕ್ಕೆ ನಾವು ಸಾಮಾನ್ಯವಾಗಿ ಅನುಸರಿಸೋ ಸಂಜ್ಞೆ ಅಂದ್ರೆ, ನಮ್ಮ ಕತ್ತನ್ನ (ಕುತ್ತಿಗೆ) ಮೇಲೆ-ಕೆಳಗೆ ಅಥವಾ ಎಡಕ್ಕೆ-ಬಲಕ್ಕೆ ಆಡಿಸೋದು.

ಮೇಲೆ-ಕೆಳಗೆ ಆಡಿಸಿದರೆ ಅದು ಸರಿ, ಹೌದು ಅಂತಲೂ, ಅದೇ ಎಡಕ್ಕೆ-ಬಲಕ್ಕೆ ಆಡಿಸಿದರೆ ಅದು ತಪ್ಪು ಅಥವ ಅಲ್ಲ ಅಂತಲೂ ಅರ್ಥ ಮಾಡ್ಕೊಂತೀವಿ.
ಆಗಂತ ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿಯೂ ಇದೆ ರೀತಿ ಅರ್ಥ ಮಾಡ್ಕೊಂತಾರೆ ಅಂತೇನೂ ಇಲ್ಲ. ಆಸ್ಟ್ರೇಲಿಯಾದಲ್ಲಿ ಯಾರಾದರೂ ಪ್ರಶ್ನೆಗೆ ಕತ್ತನ್ನ ಮೇಲೆ-ಕೆಳಗೆ, ಅಥವ ಎಡಕ್ಕೆ-ಬಲಕ್ಕೆ ತಿರುಗಿಸಿದರೆ ಅವ್ರು ಏನೂ ಅರ್ಥ ಮಾಡ್ಕನಲ್ಲಾ!! ಬದಲಾಗಿ ನೀನು ಎಲ್ಲೋ ಸೊಳ್ಳೆನೋ, ನೋಣನೋ ಓಡಿಸ್ತಿರ ಬೇಕು ಅಂತ ಸುಮ್ನೆ ಉತ್ತರಕ್ಕೆ ಕಾಯ್ತಾ ನಿನ್ನ ಮುಖನೇ ನೋಡ್ತಾರೆ. ಅಲ್ಲಿ "ಯಸ್" ಅಥವಾ "ನೋ" ಅಂತ ಬಾಯಿಬಿಟ್ಟು ಹೇಳಲೇ ಬೇಕು.
ಇನ್ನೂ ಇದೇ ಸಜ್ಞೆನ ಇನ್ನೂ ಕೆಲವು ಕಡೆ, (ಉದಾಹರಣೆಗೆ ಬಲ್ಗೇರಿಯ) ಉಲ್ಟಾ ಸೀದಾ ಅರ್ಥ ಮಾಡ್ಕೊಂತಾರಂತೆ. ಅಂದ್ರೆ, ಕತ್ತನ್ನ ಮೇಲೆ-ಕೆಳಗೆ ಆಡಿಸಿದರೆ ಅದಕ್ಕೆ ನಿನ್ನ ಒಪ್ಪಿಗೆ ಇಲ್ಲ, ಅದು ತಪ್ಪು ಅಂತಲೂ ಅದೇ ಎಡಕ್ಕೆ-ಬಲಕ್ಕೆ ಆಡಿಸಿದರೆ ಅದಕ್ಕೆ ನಿನ್ನ ಉತ್ತರ ಹೌದು, ಅದು ಸರಿ ಅಂತಲೂ ಅರ್ಥ ಮಾಡ್ಕೊಂತಾರಂತೆ.
ನಮ್ಮ ದೇಶದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಭೇಟಿ ಆದಾಗ ಎರಡು ಕೈ ಎತ್ತಿ, ನಮ್ಮ ಎದೆ ನಡುವೆ ನಮ್ಮ ಹಸ್ತವನ್ನ ಒಂದಕ್ಕೊಂದು ಜೋಡಿಸಿ ಮುಗಿದು, ನಂತರ "ನಮಸ್ಕಾರ" ಅಂತ ಹೇಳ್ತೀವಿ. ಇದು ಪರಸ್ಪರರಿಗೆ ಗೌರವ ಸೂಚಕವೂ ಅವ್ದು.
ಇದನ್ನೇ ಮುಸ್ಲೀಂ ರಾಷ್ಟ್ರಗಳಲ್ಲಿ ಹೋದರೆ, ಒಂದು ಕೈ ಮಾತ್ರ ಎದೆ ಮುಂದೆ ತಂದು, ತಮ್ಮ ಹಸ್ತ ತಮ್ಮ ಎದೆ ಕಡೆಗೆ ತಿರುಗಿಸಿ, ಸ್ವಲ್ಪ ನಡು ಭಾಗಿಸಿ, "ಖುದಾ ಹಫೀಜ್" ಅಂತಾರೆ.
ಇನ್ನ ಕೆಲವೊಮ್ಮೆ ಪರಸ್ಪರರು ಎದುರಾದಾಗ, ಹಸ್ತಲಾಘವ ಮಾಡ್ಕೊಂಡು ಮಾತು ಆರಂಬಿಸ್ತಾರೆ, ಅದೇ ಇನ್ನೂ ಕೆಲವರೋ (ಕ್ರಿಶ್ಚಿಯನ್ನರು?) ಪರಸ್ಪರ ಕೆನ್ನೆಯ ಮೇಲೆ ಮೆಲ್ಲಗೆ, ಲಘುವಾಗಿ ಒಂದೊಂದು ಮುತ್ತು ಹಂಚಿ ಕೊಂಡು, ಶುಭಾಷಯ ಹೇಳ್ಕೊಂತಾರೆ.

ಇದಕ್ಕೆಲ್ಲಾ ಏನು ಅರ್ಥ? ಇವರೆಲ್ಲಾ ಯಾಕಿಂಗೆ ಮಾಡ್ತಿದ್ದಾರೆ? ಅದು ಹೊರಗಿನ ವ್ಯಕ್ತಿಗೆ ಕೂಡಲೇ ಆರ್ಥ ಆಗಲಿಕ್ಕೆ ಇಲ್ಲ. ಆದ್ರೆ ಅದನ್ನ ಅನುಸರಿಸ್ತಿರೋವ್ರಿಗೆ ತಕ್ಷಣ ಅರ್ಥ ಆಗುತ್ತೆ.
ಮೊನ್ನೆ ಒಂದ್ಸಾರಿ ಸಕತ್ ಹಲ್ಲು ನೋವು ಬಂದಿತ್ತು, ಡೆನ್ಟಿಸ್ಟ್ ಹತ್ರ ಹೋಗಿದ್ದೆ, ನನ್ನ ಹೆಸರು ಕೇಳಿದ್ರು ಹೇಳ್ದೆ, ಆಮೇಲೆ ಮಾತು ಹೇಗೆ ಆರಂಬಿಸೋದು? ನಾನು ಯೋಚಿಸ್ತಾ ಇದ್ದೆ ಈಗ ಇವರು ನನ್ನ ಏನು ಕೇಳ್ತಾರೆ ಅಂತ. "ಸಾರೀ ವೀ ವೋನ್ಟ್ ಶೇಕ್ ಹ್ಯಾಂಡ್ ಎನಿ ಮೋರ್" ಅಂದ್ರು, ಹೀಗ ಎಲ್ಲ ಕಡೆ ಹಂದೀ ಜ್ವರದ ಭಯ, ಅದಕ್ಕೆ ಹೀಗೇ ಅಂತ ಗೊತ್ತಾದ್ಮೇಲೆ, ಸರಿ ಬಿಡಿ ಇಬ್ಬರಿಗೂ ಒಳ್ಳೇದು ಅಂತ ಸುಮ್ಮನೆ ಅವರು ತೋರಿಸಿದ ಕುರ್ಚಿಯ ಮೇಲೆ ಕುಳಿತೆ. ಆಮೇಲೆ ನಡೆದದ್ದು ಹೀಗ ಬೇಡ.
ಭಾಷೆ ಇಬ್ಬರ ನಡುವಿನ ಸಂಪರ್ಕಕ್ಕೆ ಉಪಯೋಗ ಆಗುತ್ತದಲ್ಲಾ, ಹಾಗೇನೇ, ಅದು ನಿಧಾನಕ್ಕೆ ವಿಷಯವನ್ನ ಒಟ್ಟು ಹಾಕಿ (ಕ್ರೂಡೀಕರಿಸಿ) ಕೊಳ್ತಾ ಹೋಗುತ್ತೆ. ಆಗಲೇ ಭಾಷೆಗೂ ಒಂದು ಭೂಷಣ. ಒಂದು ಗುಂಪಿನ ಜನ ಹೆಚ್ಚು ಹೆಚ್ಚು ವಿಚಾರ ವಿನಿಮಯ ಮಾಡ್ಕೊಳ್ತಾ ಹೋದಂತೆ ಅಲ್ಲಿ ಹೆಚ್ಚೆಚ್ಚು ಆಲೋಚನೆಗಳೂ ಸೃಷ್ಟಿ ಆಗ್ತಾ ಹೋಗ್ತವೆ, ಎಷ್ಟೇ ಆದರು ಮನುಷ್ಯ ಪ್ರಾಣಿ ಅತೀ ಬುದ್ದಿ ಜೀವಿ. ಆಲೋಚನೆಗಳು ನಂತರ ಹವ್ಯಾಸಗಳಾಗುತ್ತೆ, ಹವ್ಯಾಸಗಳು ಆಚರಣೆಗಳಾಗ್ತಾವೆ. ಹೀಗೆಯೇ ಬರ ಬರುತ್ತಾ ಒಂದು ಸಂಸ್ಕೃತಿ ಬೆಳಿತಾ ಹೋಗುತ್ತೆ. ಹೀಗಾಗಿಯೇ ಹೇಳೋದು, ಒಂದು ಭಾಷೆ ಒಂದು ಸಂಸ್ಕೃತಿಯನ್ನ ಪ್ರತಿನಿಧಿಸುತ್ತೆ.
ಮನುಷ್ಯ ತರ್ಕ ಮಾಡಿ ತೀರ್ಮಾನಗಳನ್ನ ಮಾಡೋಕ್ಕೆ ಆರಂಬಿಸಿದಾಗಿನಿಂದ ಇಲ್ಲಿಯವರಗೆ ಸರಿ ತಪ್ಪು ಗಳನ್ನ ಸಮಂಜಸವಾಗಿ ತಿಳ್ಕೊಂಡು ಬಂದಿದ್ದೇ ಹಾಗಿದ್ರೆ ಈಗಿನ ಪೀಳಿಗೆ ಒಂದೇ ಒಂದೂ ತಪ್ನ್ನೂ ಮಾಡಬಾರದಿತ್ತು. ತಪ್ಪುಗಳನ್ನ ಹುಡ್ಕೊಕ್ಕೇ ಆಗಬಾರದಾಗಿತ್ತು. ಆದ್ರೆ ಹಾಗೆ ಆಗ್ಲಿಲ್ಲ/ಆಗಿಲ್ಲ/ಆಗಲ್ಲ! ದಿನ ಬೆಳಗಾದ್ರೆ ಒಂದಲ್ಲಾ ಒಂದು ಹೊಸ ಪರೀಕ್ಷೆ/ಸಮಸ್ಯೆ ನಾವು ಎದುರಿಸ ಬೇಕಾಗುತ್ತೆ.
ಕೆಲ್ವಬ್ರಿಗೆ ಸರಿ ಅನ್ಸಿದ್ದು ಮತ್ತೆ ಕೆಲ್ವಬ್ರಿಗೆ ತಪ್ಪು ಅನ್ಸುತ್ತೆ. ಮಾನವ ಎಷ್ಟೇ ನಾಗರೀಕತೆ ಕಲ್ತ್ರುನೂ ಸರಿ ಯಾವ್ದು, ತಪ್ಪು ಯಾವ್ದು ಅಂತಾನೆ ನಮಗೆ ಇನ್ನೂ ತಿಳ್ದಿಲ್ಲಾ ಅಂತಾಗ್ತದೆ. ಅಥವಾ ಇನ್ನೇನು ಎಲ್ಲಾ ತಿಳ್ಕೋಲ್ಳೋ ದಿನ ಬಂದೇ ಬಿಡ್ತು ಅಂತಾನೂ ಯಾರೂ ಹೇಳಕಾಗಲ್ಲ. ಒಮ್ಮೆ ಸರಿ ಅನ್ನಿಸಿದ ವಿಷಯವೇ ಇನ್ನೊಮ್ಮೆ ತಪ್ಪು ಅಂತಲೂ ಅನ್ನಿಸ್ಬೌದು.
ಸಮಾಜದಲ್ಲಿ, ಸರಿ ಯಾವ್ದೂ, ತಪ್ಪು ಯಾವ್ದೂ ಅಂತ ತೀರ್ಮಾನ ಮಾಡೋದೇ ಒಂದು ಭ್ರಮೆ. ಅಥವ ಇಂತಹ ಒಂದೊಂದು ಭ್ರಮೆಯ ಸೃಷ್ಟಿ ಮಾಡೋ ಒಂದು ಕಲೆ. ಅದು ವಿಜ್ಞಾನವೇ ಆಗಿರಲಿ, ವೇದವೇ ಆಗಿರಲಿ, ಜೋತಿಷ್ಯಾಸ್ತ್ರವೇ ಅಥವಾ ಇನ್ನಾವುದೋ ಮೂಡ ನಂಬಿಕೆಯೇ ಆಗಿರಲಿ. ಆ ಕ್ಷಣಕ್ಕೆ , ಆ ಜಾಗದಲ್ಲಿ ಹೆಚ್ಚು ಜನಕ್ಕೆ ಸರಿ ಅನ್ನಿಸಿದ್ರೆ ಅದೇ ಸರಿ, ಹೆಚ್ಚು ಜನಕ್ಕೆ ಅದು ತಪ್ಪು ಅನ್ನಿಸಿದ್ರೆ ಅದು ತಪ್ಪು ಅಷ್ಟೇ. ಹಿಂದೆ ಸರಿ ಅಂತ ಒಪ್ಕಂಡವ್ನು ಇವತ್ತು ಅದೇ ವಿಷಯ ತಪ್ಪು ಅಂತ ವಾದಿಸಿರೋ ದೃಶ್ಯಗಳು ಲೆಕ್ಕಕ್ಕಿಲ್ಲದಷ್ಟು ಸಿಕ್ತಾವೆ. ಹಾಗಾಗಿ, ಯಾವ್ದೂ ಸರಿಯಲ್ಲ. ಯಾವ್ದೂ ತಪ್ಪೂ ಅಲ್ಲ!
ಇಲ್ಲಿ ವಿಷಯವನ್ನ ವಿಜ್ಞಾನದ ಮೂಲಕ ಅಳಿಯೋರು ತಪ್ಪು ತಿಳಿಬಾರದು. ಏಕೆಂದರೆ ವಿಜ್ಞಾನದಲ್ಲಿಯೂ ಅನೇಕ ತಪ್ಪು ನಿರ್ಣಯಗಳು ಆಗಿವೆ, ಇನ್ನೂ ಆಗ್ತಿವೆ. ಪ್ರಯೋಗ ಮಾಡೀನೇ ಎಲ್ಲ ತಿಳ್ಕೊಲ್ತೀವಿ ಅನ್ನೋವ್ರ ವಿರೋಧ ನನಗೆ ಬೇಕಿಲ್ಲ. ಅಂತವರ ವಿರೋಧಿಯೂ ನಾನಲ್ಲ. ವಿಜ್ಞಾನದಿಂದಲೂ ನಾವು ನಮ್ಮ ಜೀವನ ಮಾದರಿಯನ್ನ ಸಾಕಷ್ಟು ಸುಧಾರಿಸಿ ಕೊಂಡಿದ್ದೇವೆ. ಆಗಂತ ಅದರಿಂದ ಆಗ್ತಿರೋ ಮಾರಕ ಬೆಳವಣಿಗೆಗಳೇನೂ ಸಾಧಾರಣ ಅಲ್ಲ. ಭವಿಷ್ಯವನ್ನ ಸಾಕಷ್ಟು ಬೀಕರವಾಗಿಯೂ ಮಾಡ್ಕಂದಿದ್ದೀವಿ!!! ಇದರ ಚರ್ಚೆ ಅವರವರ ಪ್ರೌಡಿಮೆಗೆ ಬಿಟ್ಟ ವಿಚಾರ.
ಕಲಿಕೆ ಅನಂತ. ಆಗಂತ, ಏನು ತಿಳ್ಕೊಳ್ಳೋದು ಬಿಡು, ಎಷ್ಟು ಕಲಿತರೂ ಕಲಿಯೊಕ್ಕೆ ಇನ್ನೂ ಇರುತ್ತಂತೆ. ಅನ್ಗಿದ್ಮೇಲೆ ಏನನ್ನೂ ಕಲಿಯೋದೇ ಬೇಡ ಅನ್ನೋಕಾಗುತ್ತದೆಯೇ? ಕಲಿಕೆ ಅನ್ನೋದು ನಮ್ಮ ಮನಸ್ಸಿನ ಮೇಲೆ ನಾವೇ ಹೇರಿ ಕೊಳ್ಳೋ ಒಂದು ಒರೆ ಆಗಬಾರದು. ಅದು ಒಂದು ಸಿಹಿ ಅನುಭವ ಆಗಿರಬೇಕು. ಹೊಸತನ ಇರ್ಬೇಕು.
ಮುಂದುವರೆಯುತ್ತದೆ...
2 ಕಾಮೆಂಟ್‌ಗಳು:
ಚೆನ್ನಾಗಿದೆ ಸರ್.ಭಾಷೆಯ ಸಾಂದರ್ಭಿಕ ವಿಚಾರವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಗೋಪಾಲರೆ,
ಇನ್ನೇನ ನವೆಂಬರ್ ೧ ಬಂತಲ್ಲಾ! ಅಷ್ಟೊತ್ತಿಗೆ ಇದರ ಭಾಗ ೩ ಹಾಕೋ ಯೋಚನೆ ಇದೆ.
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.
ಕಾಮೆಂಟ್ ಪೋಸ್ಟ್ ಮಾಡಿ