ಮಂಗಳವಾರ, ಡಿಸೆಂಬರ್ 15, 2009

ಈ ಹೊಸ ತಂತ್ರಾಂಶದ ಹೆಸರು "ಲೋಹಿತಂತ್ರಾಂಶ"

ಈ ಹೊಸ ತಂತ್ರಾಂಶದ ಹೆಸರು "ಲೋಹಿತಂತ್ರಾಂಶ".

ಗಣಕದಲ್ಲಿ ಕನ್ನಡವನ್ನ ಬಳಸಲು ಈಗಾಗಲೇ ಬರಹ ಹಾಗೂ ನುಡಿ ತಂತ್ರಾಂಶಗಳು ಸಾಕಷ್ಟು ಜನಪ್ರಿಯವಾಗಿವೆ. ಇದೇ ಸಾಲಿನಲ್ಲಿ ಇನ್ನೊಂದು ಹೊಸ ಸೇರ್ಪಡೆ ಈಲೋಹಿತಂತ್ರಾಂಶ.
ಯಾಕಪ್ಪಾ ಗೌಡ ಇನ್ನೊಂದು ಹೊಸ ತಂತ್ರಾಂಶ? ಎಂದು ಪ್ರಶ್ನಿಸಿದರೆ, ನನ್ನ ಬಳಿ ಹೆಚ್ಚೇನು ಸಮಾಜಾಯಿಷಿ ಸಿದ್ದವಿಲ್ಲ.
ಇದು ಕೇವಲ ಆಸಕ್ತಿಯಿಂದ ಆರಂಭಿಸಿದ project. ಬ್ಲಾಗ್ ಸ್ನೇಹಿತರ ಸಲಹೆ ಹಾಗೂ ಪ್ರೋತ್ಸಾಹದ ಜೊತೆಗೆ ನನ್ನ ಹಲವು ರಾತ್ರಿಗಳ ನಿದ್ದೆ ಹಾಗೂ ಕೆಲವು ವಾರಾತ್ಯಗಳ ಸಂಪೂರ್ಣ ಅರ್ಪಣೆಯಿಂದ ಈ ತಂತ್ರಾಂಶ ಇಷ್ಟರ ಮಟ್ಟಿಗೆ ಸಿದ್ದವಾಗಿದೆ.
ಇದನ್ನು ಉಚಿತ ತಂತ್ರಾಂಶವನ್ನಾಗಿಸಲು ಇಚ್ಚಿಸುತ್ತಿದ್ದೇನೆ.
ಲೋಹಿತಂತ್ರಾಂಶದ ವಿಶೇಷತೆಗಳು
೧. ಒಮ್ಮೆಗೇ ಅನೇಕ ಕಡತಗಳನ್ನ ತೆರೆದು ಕೊಳ್ಳಬಹುದುಪ್ರತೀ ಕಡತವೂ ಒಂದು ಹೊಸ Tab ನಲ್ಲಿ ತೆರೆದುಕೊಳ್ಳುತ್ತದೆ.
೨. LINUX ನಲ್ಲಿಯೂ ಈ ತಂತ್ರಾಂಶವನ್ನ ಬಳಸ ಬಹುದು.
೩. ಬರಹ ಹಾಗೂ ನುಡಿ, ಎರ್ಡೂ ಮಾದರಿಯ ಕೀಲಿಮಣೆ ಯಲ್ಲಿ ಬರೆಯ ಬಹುದು.
೪. ಕಡತಗಳನ್ನ PDF ಆಗಿಯೂ ಉಳಿಸಿ ಕೊಳ್ಳ ಬಹುದು
೫. ಪದಪೂರ್ತಿ ಸಹಾಯ (auto - completion) ವಿರುತ್ತೆ.
೬.ಅಕ್ಷರಗಳನ್ನ ಅಲಂಕರಿಸ ಬಹುದು, ಹಾಗೆ ಅಲಂಕರಿಸಿದ ಕಡತಗಳನ್ನ HTML ಆಗಿ ಉಳಿಸಿಕೊಳ್ಳ ಬಹುದು
 ಎಲ್ಲಾ ಕಡೆ ಸಂಪೂರ್ಣವಾಗಿ ಕೇವಲ ಯೂನಿಕೋಡ್ (UTF-16) ಮಾತ್ರ ಬಳಸಲಾಗಿದೆ
. ANSI ಕನ್ನಡವನ್ನ ಬೆಂಬಲಿಸಲಾಗಿದೆ. (ಅಂದರೆ ಬರಹದ BRH ಕಡತಗಳನ್ನ ತೆರೆಯಬಹುದು)
. Table ಗಳನ್ನ, ಚಿತ್ರಗಳನ್ನ ಸೇರಿಸ ಬಹುದು.



ವಿಶೇಷತೆಗಳ ಸಂಕ್ಷಿಪ್ತ ವಿವರಣೆ
LINUX ಬಳಕೆದಾರರು ಸಹ ಈ ತಂತ್ರಾಂಶವನ್ನ ಬಳಸಬಹುದು. ನಿಮ್ಮ LINUX ಗೆ ತಕ್ಕ ಭಿನ್ನ package ನೀಡಲಾಗುವುದು.

ಕೆಲವರು "ಬರಹ" ದ ಮಾದರಿಯನ್ನ, ಮತ್ತೆ ಇನ್ನು ಕೆಲವರು "ನುಡಿ" ಮಾದರಿಯನ್ನ ಅನುಸರಿಸುತ್ತಾರೆ. ಎರ್ಡೂ ಮಾದರಿಯ ಕೀಲಿ ಮಣೆ ಸಾಕಷ್ಟು ಪ್ರಚಾರ ದಲ್ಲಿದೆ. ಆದ್ದರಿಂದಲೇ ಎರ್ಡೂ ಮಾದರಿಯ ಮಣೆಗಳನ್ನ ಅಳವಡಿಸಲಾಗಿದೆ.
ನೀವು ಕೀಲಿಮಣೆ ಮಾದರಿಯನ್ನ switch ಮಾಡಿಕೊಳ್ಳಲು, ಮೇಲೆ ನೀಡಿರುವ "ಕಗಪ" ಅಥವ "ಕ್" ಎಂದಿರುವ ಗುಂಡಿಯನ್ನ ಒತ್ತಿ. ನಡುವೆ ಯಾವುದೇ ಗಳಿಗೆಯಲ್ಲಿ ನಿಮಗೆ ಬೇಕೆನಿಸಿದಾಗ ಬದಲಿಸಿಕೊಳ್ಳ ಬಹುದು.
PDF ಕಡತಗಳು ತುಂಬಾ portable, ಈ ಬಗ್ಗೆ ನಿಮಗೂ ತಿಳಿದಿರುತ್ತೆ, ಈ ರೀತಿಯ PDF ಕಡತಗಳನ್ನ ರಚಿಸಲು, ನೀವು ಮೇಲೆ ನೀಡಿರುವ "PDF" ಗುಂಡಿಯನ್ನ ಒತ್ತಿ. ಅದರಲ್ಲಿ ಹೊಸ ಕಡತದ ಒಂದು ಹೆಸರನ್ನ ಆಯ್ಕೆ ಮಾಡಿ. ನಂತರ "OK" ಒತ್ತಿದರೆ ಸಾಕು ನಿಮ್ಮ PDF ಕಡತ ಸಿದ್ದ.

ಪದಪೂರ್ತಿ ಸಹಾಯ, ಏನಿದು ಅಂತೀರ? ಒಂದು ಉದಾಹರಣೆ ಕೊಡ್ತೀನಿ.
ನೀವು ಈಗ "ಪ್ರದರ್ಶನ" ಎಂದು ಬರೆಯಲು ಇಚ್ಚಿಸುವಿರಿ ಎಂದು ಇಟ್ಟು ಕೊಳ್ಳಿ. ಅದಕ್ಕೆ ನೀವು ಮೊದಲು "ಪ್ರ" ಎಂದು ("pra") ಬರೆಯುತ್ತೀರಿ, ಆಗ, ಕೂಡಲೇ "ಪ್ರ" ಅಕ್ಷರದ ಮುಂದೆ ನಿಮಗೆ ಒಂದು ಸಹಾಯ ಕಿಡಕಿ ತೆರೆಯುತ್ತೆ. ಅದರಲ್ಲಿ "ಪ್ರ" ಅಕ್ಷರದಿಂದ ಆರಂಬವಾಗುವ ಅನೇಕ ಪದಗಳನ್ನ ಪಟ್ಟಿ ಮಾಡಲಾಗಿರುತ್ತೆ. ಆ ಪಟ್ಟಿಯಲ್ಲಿ "ಪ್ರದರ್ಶನ" ಎಂಬ ನಿಮ್ಮ ಆಯ್ಕೆ ಕೂಡಲೇ ಕಂಡು ಬಂದಲ್ಲಿ ಆ ಪದವನ್ನ high light ಮಾಡಿ ಕೊಳ್ಳಿ, Up ಅಥವ Down arrow ಕೀಲಿಯನ್ನ ಒತ್ತಿ.

ನಂತರ Tab ಅಥ್ವ Enter ಕೀಲಿಯನ್ನ ಒತ್ತಿ. ಈಗ "ಪ್ರದರ್ಶನ" ಪದ ಕೂಡಲೇ ಬರುತ್ತೆ. ಪ್ರದರ್ಶನ ಅಲ್ಲದೆ, ಬೇರೆ ಪದಗಳು ಬೇಕು ಅನ್ನಿಸಿದರೆ, ಸುಮ್ಮನೆ ಬರೆಯುತ್ತ ಹೋಗಿ, ಹತ್ತಿರದ ಪದಗಳ ಪಟ್ಟಿ ತಾನಾಗೆ ತೆರೆಯುತ್ತೆ, ಬೇಕೆಂದರೆ ಆಯ್ಕೆ ಮಾಡಿ ಇಲ್ಲ ಅಂದರೆ ನಿಮ್ಮ ಪಾಡಿಗೆ ನೀವು ಬರೆಯುತ್ತಾ ಹೋಗಿ.

ಅಕ್ಷರಗಳನ್ನ ಅಲಂಕರಿಸುವುದರ ಬಗ್ಗೆ ನಿಮಗೇ ತಿಳಿದಿರುತ್ತೆ, ಅಲಂಕರಿಸಿದ ಪಠ್ಯವನ್ನ HTML ಹಾಗಿ ಉಳಿಸಿ ಕೊಳ್ಳಿ. HTML ಹಾಗೂ ಸಂಪೂರ್ಣ ಯೂನಿಕೋಡ್, ಈ ಎರ್ಡು ಗುಣಗಳ ಪ್ರಭಾವದಿಂದ ನಿಮ್ಮ ಕಡತವನ್ನ ಬೇರೆ ಯಾವುದೇ ಕಂಪ್ಯೂಟರ್ನಲ್ಲಿ FIREFOX ಅಥ್ವ INTERNET EXPLORERಅಥ್ವ google chroome ಮುಂತಾದ ಬ್ರೌಸರ್ ಗಳಲ್ಲಿ ಸುಲಭವಾಗಿ ತೆರೆಯ ಬಹುದು.
ಬರಹದಲ್ಲಿ ಬರೆದು ಉಳಿಸಿಕೊಂಡ BRH ಕಡತಗಳನ್ನ ತೆರೆದು, ಕನ್ನಡ ಯೂನಿಕೋಡ್ ಗೆ ತರ್ಜುಮೆ ಮಾಡಬಹುದು.
Table ಅಂದರೆ, ಹೇಗಿರುತ್ತೆ ನೀವೇ ನೋಡಿ

ಕುವೆಂಪು

ಡಿ ವಿ ಜಿ

17 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ನಿಮ್ಮ ಹೊಸ ತ೦ತ್ರಾ೦ಶ ಚೆನ್ನಾಗಿದೆ. ಬೇಗ ಪೂರ್ಣಗೊಳಿಸಿ ನಮ್ಮೆಲ್ಲರಿಗೆ ಬಳಸಲು ಅವಕಾಶ ಮಾಡಿಕೊಡಿ

ಸವಿಗನಸು ಹೇಳಿದರು...

ನಿಮ್ಮ ತ೦ತ್ರಾ೦ಶಕ್ಕೆ ನಮ್ಮ ಸಲಾಮ್....
ತುಂಬಾ ಚೆನ್ನಾಗಿದೆ....
ಬೇಗ ನಮ್ಗೆಲ್ಲ ತಲುಪಿಸಿ....

ಗೋಪಾಲ್ ಮಾ ಕುಲಕರ್ಣಿ ಹೇಳಿದರು...

ಆತ್ಮೀಯ ಲೋದ್ಯಶಿಯವರೇ
ಧನ್ಯವಾದಗಳು ಬೇಗನೆ ಕಾರ್ಯರೂಪಕ್ಕೆ ತನ್ನಿ.... ನಿಮ್ಮ ಯಶಸ್ಸಿಗೆ ನಮ್ಮೆಲ್ಲರ ಸಹಕಾರ ಇದೆ. ನಮ್ಮೆಲ್ಲರಿಗೆ ಬಳಸಲು ಅವಕಾಶ ಮಾಡಿಕೊಡಿ.

ಸಂದೀಪ್ ಕಾಮತ್ ಹೇಳಿದರು...

ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

ನಮಗೂ ಸಿಗುವಂತೆ ಮಾಡಿ
ನಿಮ್ಮ ಕಾರ್ಯಕ್ಕೆ ಯಶಸ್ಸು ಸಿಗಲಿ

ಶಿವಪ್ರಕಾಶ್ ಹೇಳಿದರು...

Good Work Friend.
Release it soon :)

Unknown ಹೇಳಿದರು...

ಹೊಸ ತಂತ್ರಾಂಶಕ್ಕೆ ಆತ್ಮೀಯ ಸ್ವಾಗತ. ಅವುಗಳ ಸಂಕ್ಯೆ ಹೆಚ್ಚಿದಷ್ಟೂ, ಉತ್ಸಾಹಿಗಳು ಭಾಗವಹಿಸಿದಷ್ಟೂ ಅವುಗಳ ಗುಣಮಟ್ಟ ಹೆಚ್ಚಾಗಿಯೇ ತೀರುತ್ತದೆ. ಕನ್ನಡ ತಂತ್ರಾಂಶಗಳ ಗುಣಮಟ್ಟ ಹೆಚ್ಚಿಸುವ ನಿಮ್ಮ ಪ್ರಯತ್ನ ಪ್ರಶಂಸನಾರ್ಹ. ಅಭಿನಂದನೆಗಳು

hamsanandi ಹೇಳಿದರು...

ನಮಸ್ತೆ ಲೋದ್ಯಾಶಿ ಅವರೆ.

ಸ್ವಲ್ಪ ನಿಮ್ಮ ತಂತ್ರಾಂಶವನ್ನು ನನಗೂ ಕಳಿಸ್ತೀರಾ?

Supreeth.K.S ಹೇಳಿದರು...

ಸಕತ್ ಕಣ್ರೀ.
ಬಳಸೋಕೆ ನನಗೂ ಕುತೂಹಲವಿದೆ.

ಅನಾಮಧೇಯ ಹೇಳಿದರು...

Waiting for the relase...

Me, Myself & I ಹೇಳಿದರು...

Hi,

Interested in your Kannada application "Lohitantransha". Please let me know how can I download that.

Thanks in advance.

Regards
Sreeharsha Patil

Me, Myself & I ಹೇಳಿದರು...

ಒಳ್ಳೆ ಕೆಲಸ ಮಾಡ್ತಾ ಇದ್ದೀರಿ.
ಡೌನ್ ಲೋಡ್ ಮಾಡೋದು ಎಲ್ಲಿಂದ?
ಇತೀ,
ಉಉನಾಶೆ

ಸುಪ್ತವರ್ಣ ಹೇಳಿದರು...

ನಾನು ಈ ಎಡಿಟರನ್ನು ಬಳಸುತ್ತೇನೆ. http://service.vishalon.net/pramukhtypepad.htm. ಆದರೆ ಇದರಲ್ಲೊಂದು ಬಗ್ ಇದೆ. ಕನ್ನಡದ 'ಳ್ಳ' ಟೈಪ್ ಮಾಡಲು ಹೋದರೆ 'ೞ' ಎಂಬ ವಿಚಿತ್ರ ಅಕ್ಷರ ಮೂಡುತ್ತದೆ! ಮತ್ತೆ ಇಲ್ಲಿ 'ಳ್ಳ' ವನ್ನು ಹೇಗೆ ಟೈಪ್ ಮಾಡಿದೆ ಎಂದು ಕೇಳುತ್ತೀರೇನೋ! ನನ್ನತ್ರ ಹಳೆಯ version ಒಂದು ಇದೆ. ಅದರಲ್ಲಿ ಸರಿಯಾಗೇ ಟೈಪ್ ಮಾಡಬಹುದು. ಆದರೆ ಅದರಲ್ಲಿ 'ಅರ್ಕ್' ಗಳನ್ನು ಟೈಪ್ ಮಾಡಲಾಗದು! ಈ ಬಗ್ಗೆ ಅವರಿಗೆ ಹೇಳಿದ್ದೇನೆ. ಸರಿಪಡಿಸುತ್ತೇವೆ ಎಂದಿದ್ದಾರೆ.

ಹಳೆಯದಿದ್ದಂತೆ ಹೊಸದು ಯಾಕೆ ಎಂಬ ಚಿಂತೆ ಬೇಡ. ಬರಹ ಮತ್ತು ನುಡಿಗಳಲ್ಲಿ ಮಾಡುವ ಸುತ್ತು ಬಳಸಿನ ಕೆಲಸ ಇಂಥ ಹೊಸ ಪ್ರಯತ್ನಗಳಲ್ಲಿರದು. simple and sweet! ನಮ್ಮ ಅಗತ್ಯಕ್ಕೆ ಇದು ಬೇಕಾದಷ್ಟಾಯಿತು. ಬೇಗ ಮುಗಿಸಿ ...ಬಳಸಲು ಉತ್ಸುಕರಾಗಿದ್ದೇವೆ. ನಿಜಕ್ಕೂ ನಿಮ್ಮದು ಉತ್ತಮ ಪ್ರಯತ್ನ!

ಸುಪ್ತವರ್ಣ ಹೇಳಿದರು...

ಓ ! ಅಂದಹಾಗೆ, autocomplete feature ಉಳಿದವರ ಬಳಿ ಇದ್ದಂತಿಲ್ಲ, ಅಲ್ಲವೇ? (ನಾನು ಬರಹ ಮತ್ತು ನುಡಿಗಳನ್ನು ಇತ್ತೀಚೆಗೆ ಬಳಸಿಲ್ಲ) Very innovative!

Me, Myself & I ಹೇಳಿದರು...

ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ತಮ್ಮೆಲ್ಲರಿಗೂ ನನ್ನ ನಮಸ್ಕಾರಗಳು.

ಈದಿನ "ಲೋಹಿತಂತ್ರಾಂಶ" ದ ಆವ್ರುತ್ತಿ ೦.೦.೪ ನ್ನು ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಸದರಿ ತಂತ್ರಾಂಶದ ಸದಸ್ಯರಿಗೆ ಮಾತ್ರ ದೊರಕಿಸಿ ಕೊಟ್ಟಿದ್ದೇನೆ. ಸಾದ್ಯವಾದಷ್ಟು ಸಾಮಾನ್ಯ ತಪ್ಪುಗಳನ್ನ ಕಂಡು ಹಿಡಿದು ಸರಿ ಪಡಿಸಿ, ಸದಸ್ಯರ ಪ್ರತಿಕ್ರಿಯೆಗಳನ್ನ ಗಮನಿಸಿ... ನಿಮ್ಮೆಲ್ಲರಿಗೂ ಅರ್ಪಿಸ ಬೇಕೆಂದಿರುವೆ.

ನನಗಂತೂ ಈಗ ಸಾಕಷ್ಟು ಸುಲಭವಾಗಿ ಕನ್ನಡವನ್ನ ಬರೆಯಲು ಸಾದ್ಯವಾಗುತ್ತಿದೆ. ಈ ಪ್ರತಿಕ್ರಿಯೆ ಸಹ ಲೋಹಿತಂತ್ರಾಂಶ ದ ಇನ್ನೊಂದು ಅಂಗವಾದ ಲೋಹಿಲಘು ವನ್ನ ಬಳಸಿ ಬರೆದಿದ್ದೇನೆ...ಬಹಳ ಸರಾಗವಾಗಿ ಬರೆಯ ಬಹುದು.

-

ಲೋದ್ಯಾಶಿ

AVLRAO ಹೇಳಿದರು...

ಸದಸ್ಯರಿಗೆ ಮಾತ್ರ ಯಾಕೆ ? ನಾವೂ ಸದಸ್ಯರಗಲು ಏನು ಮಾದಬೇಕು?

ಎ ವಿ ಎಲ್ ರಾವ್
avlrao13@rediffmail.com

shivu.k ಹೇಳಿದರು...

ಲೋಹಿತ್ ಸರ್,

ನಿಮ್ಮ ಬ್ಲಾಗಿಗೆ ತಡವಾಗಿ ಬರುತ್ತಿದ್ದೇನೆ.

ನೀವು ನಮ್ಮ ಕನ್ನಡ ತಂತ್ರಾಂಶವನ್ನು ಸಿದ್ಧಪಡಿಸುತ್ತಿರುವುದು ಖಂಡಿತ ಖುಷಿ ಮತ್ತು ಸಾಧನೆಯೇ ಸರಿ. ಬೇಗ ಮುಗಿಸಿ. ನೀವು ಅದನ್ನು ಉಚಿತವಾಗಿ ಕೊಡುತ್ತೇನೆ ಅಂದಿರುವುದು ನಿಜಕ್ಕೂ ಇದು ಕನ್ನಡ ಸೇವೆ.

ನಿಮಗೆ ಅಭಿನಂದನೆಗಳು.

blogspot add widget