ಬುಧವಾರ, ಡಿಸೆಂಬರ್ 30, 2009

ಮುಗಿಯದು ಮುತ್ತಿನ ಹಾರದ ಕವನ

ದೇವರು ಹೋಸೆದ ಪ್ರೇಮದ ದಾರ
ದಾರದಿ ಬೆಸೆದ ರುತುಗಳ ಧಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ


ಬೇಸಿಗೆಯಲಿ ಆ ಸೂರ್ಯ ...ಭೂತಾಯಿಯ ಸುಡುತಾನೆ
ಪ್ರೇಮಕು ಅಗ್ನಿಪರೀಕ್ಶೆ.ಸುಳಿವಿಲ್ಲದೆ ಕೊಡುತಾನೆ
ಬೇಡ ಯೆಂದರೆ ನಾವು..ಸುಡದೆ ಇರುವುದೆ ನೋವು
ಸರಿಯೊ ಕಾಲದ ಜೊತೆಗೆ...ವ್ಯಸನ ನಡೆವುದು ಹೊರಗೆ


ದೇವರು ಹೋಸೆದ ಪ್ರೇಮದ ದಾರ
ದಾರದಿ ಬೆಸೆದ ರುತುಗಳ ಧಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ


ಮೇಘವೊ ಮೇಘವು...ಮುಂಗಾರಿನ ಮೇಘವು
ಮೇಘವೊ ಮೇಘವು...ಇಂಗಾರಿನ ಮೇಘವು
ಹನಿ ಹನಿ ಹನಿ ಹನಿ ಛಿಟ ಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡುಗುಡು ಗುಡುಗುಡು ಗುಡುಗೋ ಗುಡುಗಿನ
ಫಳಫಳ ಮಿನ್ಛುವ ಸಿಡಿಯುವ ಸಿಡಿಲಿನ


ಧರಣಿ ತಣಿಸುವ ಭರಣಿ ಮಳೆ ಮಳೆ
ಹಸ್ತ ಚಿತ್ತ ಸ್ವಾತಿ ಮಳೆ ಮಳೆ


ಸಿಡಿಯುವ ಭೂಮಿಗೆ ಗಂಗಾವಾಹಿನಿ
ಉರಿಯುವ ಪ್ರೇಮಕೆ ಅಮ್ರುತವರ್ಶಿನಿ


ವಸಂತ ಮಾಸದಲಿ ಪ್ರೇಮವು..ವಯ್ಯಾರಿಯಾಗಿ ಕುಣಿವೆ



ವಸಂತ ಮಾಸದಲಿ ಪ್ರೇಮವು..ವಯ್ಯಾರಿಯಾಗಿ ಕುಣಿವೆ
ನದಿಗಳು ಝರಿಗಳು ಗಿಡಗಳು ಪೊದೆಗಳು..ಗಾಯನ ಮಾಡಿದವು


ಋತುಗಳ ಚಕ್ರವು ತಿರುಗುತ ಇರಲು
ಕ್ಶಣಿಕವೆ ಕೋಗಿಲೆ ಗಾನದ ಹೊನಲು


ಬಿಸಿಲೋ ಮಳೆಯೊ...ಚಿಗುರೋ ಹಿಮವೊ
ಅಳುವೋ ನಗುವೋ..ಸೋಲೋ ಗೆಲುವೋ
ಬದುಕೆ ಪಯಣ...ನಡೆಯೆ ಮುಂದೆ
ಒಲವೆ ನಮಗೆ..ನೆರಳು ಹಿಂದೆ


ದೇವರು ಹೋಸೆದ ಪ್ರೇಮದ ದಾರ
ದಾರದಿ ಬೆಸೆದ ರುತುಗಳ ಧಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ




ಡಾ. ವಿಷ್ಣುವರ್ದನ್ ಆತ್ಮಕ್ಕೆ ಶಾಂತಿ ಸಿಗಲಿ


3 ಕಾಮೆಂಟ್‌ಗಳು:

shivu.k ಹೇಳಿದರು...

ಲೋಹಿತ್ ಸರ್,

ನೀವು ಹಾಕಿರುವ ಹಾಡು ನನಗೂ ತುಂಬಾ ಪ್ರಿಯವಾದದ್ದು. ಅದಕ್ಕೆ ಅದ್ಬುತ ನಟನೆ ವಿಷ್ಣುವರ್ಧನ್ ರವರದು.

ಅವರಿಲ್ಲದ ಈ ಸಮಯದಲ್ಲಿ ಈ ಹಾಡು ಮತ್ತಷ್ಟು ವಿಶೇಷ ಅರ್ಥಕೊಡುತ್ತದೆ...ಅವರ ಆತ್ಮಕ್ಕೆ ಶಾಂತಿ ಸಿಗಲಿ..

ಚುಕ್ಕಿಚಿತ್ತಾರ ಹೇಳಿದರು...

ಲೋಹಿತ್
ಹಾಡು ನೆನಪಿಸಿದ್ದಕ್ಕೆ ಥ್ಯಾ೦ಕ್ಸ್...
ವಿಶ್ಣು .... ಒಳ್ಳೆಯ ನಟ ಆಗಿದ್ರು..

ಸಾಗರದಾಚೆಯ ಇಂಚರ ಹೇಳಿದರು...

ಲೋಹಿತ್,
ಹಾಡು ನೆನಪಿಸಿದ್ದಕ್ಕೆ ಧನ್ಯವಾದಗಳು
ವಿಷ್ಣು ಎಅಗ ಕೆವನ ನೆನಪು ಮಾತ್ರ
ಅವರ ಹಾಡುಗಳನ್ನು ನೋಡುವಾಗ ಕಣ್ಣು ತುಂಬುತ್ತದೆ

blogspot add widget