ಮೊನ್ನೆ ಊರಿಗೆ ಬಂದಾಗ, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಸಲುವಾಗಿ. ನಾವೆಲ್ಲಾ (ಮನೆಯವರೆಲ್ಲಾ) ಒಂದು ಪ್ರವಾಸ ಕೈಗೊಂಡೆವು. ಒಟ್ಟು ಮೂರು ದಿನದ ಪ್ರವಾಸ ಅದು. ಮೂರು ಹಗಲು ಮತ್ತು ಎರಡು ರಾತ್ರಿ. ಮೊದಲ ದಿನ ರಾತ್ರಿ ಧರ್ಮಸ್ಥಳದಲ್ಲಿ ನಿದ್ದೆ. ಎರಡನೇ ದಿನ ರಾತ್ರಿ ಕುಕ್ಕೆ (ಸುಬ್ರಮಣ್ಯ) ಯಲ್ಲಿ ನಿದ್ದೆ. ಏಕೆಂದರೆ ಎರಡೂ ಕ್ಷೇತ್ರಗಳಲ್ಲಿಯೂ ಪೂಜೆ ಇದ್ದದ್ದು ಬೆಳಗಿನ ಜಾವ ಹಾಗಾಗಿ ಬೇಗನೆ ಎದ್ದು ಸ್ನಾನ ಮಾಡಿ ಪೂಜೆಗೆ ಸಿದ್ದವಾಗಿಲಿಕ್ಕೆ ಸಾಕಷ್ಟು ಸಮಯ ಸಿಗುತ್ತದೆ ಅಂತ ಭಾವಿಸಿ ನಾವು ಈ ರೀತಿ ಸಿದ್ಧತೆ ಮಾಡಿ ಕೊಂಡಿದ್ದೆವು.
ಮೊದಲ ದಿನ ಊರಿಂದ ಹೊರಟು "ಹೊರನಾಡು ಅನ್ನಪೂರ್ನೆಶ್ವರಿ" ದೇವಸ್ತಾನಕ್ಕೆ ತಲುಪಿದಾಗ ಸಮಯ ಹಾಗಲೇ ಮದ್ಯಾಹ್ನ 12 ದಾಟಿತ್ತು. ಕಣ್ಣಿಗೆ ಕಟ್ಟಿ ಕೊಳ್ಳುವಷ್ಟು ಚೆಂದವಾಗಿ ಕಂಗೊಳಿಸುತ್ತಿದ್ದ ದೇವಿಯ ದರ್ಶನ/ಆಶೀರ್ವಾದ ಪಡೆದು ನಂತರ ದೇವಸ್ಥಾನದಲ್ಲಿಪ್ರಸಾದ ಸ್ವೀಕರಿಸಿದೆವು. ಆಹಾ ಅದೆಷ್ಟು ತೃಪ್ತಿಯ ಅನುಭವವಾಯಿತು ಅಂದರೆ.. ಕ್ಷಮಿಸಿ ಅದನ್ನ ಬರೆಯುವ ಪ್ರಯತ್ನವೂ ವ್ಯರ್ಥ.
ಮೊದಲ ದಿನ ಊರಿಂದ ಹೊರಟು "ಹೊರನಾಡು ಅನ್ನಪೂರ್ನೆಶ್ವರಿ" ದೇವಸ್ತಾನಕ್ಕೆ ತಲುಪಿದಾಗ ಸಮಯ ಹಾಗಲೇ ಮದ್ಯಾಹ್ನ 12 ದಾಟಿತ್ತು. ಕಣ್ಣಿಗೆ ಕಟ್ಟಿ ಕೊಳ್ಳುವಷ್ಟು ಚೆಂದವಾಗಿ ಕಂಗೊಳಿಸುತ್ತಿದ್ದ ದೇವಿಯ ದರ್ಶನ/ಆಶೀರ್ವಾದ ಪಡೆದು ನಂತರ ದೇವಸ್ಥಾನದಲ್ಲಿಪ್ರಸಾದ ಸ್ವೀಕರಿಸಿದೆವು. ಆಹಾ ಅದೆಷ್ಟು ತೃಪ್ತಿಯ ಅನುಭವವಾಯಿತು ಅಂದರೆ.. ಕ್ಷಮಿಸಿ ಅದನ್ನ ಬರೆಯುವ ಪ್ರಯತ್ನವೂ ವ್ಯರ್ಥ.
ಪ್ರಯಾಣವನ್ನು ಮುಂದುವರಿಸಿದೆವು. ಸಂಜೆ 7 ಗಂಟೆಗಾಗಲೇ ಧರ್ಮಸ್ಥಳ ಸೇರಿ, ಅಲ್ಲಿ ದೇವಸ್ಥಾನದ ವಸತಿಗೃಹಗಳಲ್ಲಿ ಎರಡು ಕೊಠಡಿ ಪಡೆದು ಕೊಂಡೆವು. ರಾತ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಬಂದು ಪ್ರಸಾದ ಸ್ವೀಕರಿಸಿ ಬೆಳಗಿನ ಜಾವ ಪೂಜೆಗೆ ಎಷ್ಟು ಹೊತ್ತಿಗೆ ಬರುವುದೆಂದು ವಿಚಾರಿಸಿ ಕೊಂಡೆವು.
ಸರಿ, ತುಂಬಾ ಪ್ರಯಾಣಿಸಿದ್ದ ಕಾರಣ ದೇಹದ ಕೆಲವು ಭಾಗಗಳು ತುಂಬಾ ವಿಶ್ರಾಂತಿ ಭಯಸುತ್ತಿದ್ದವು. ಸುಮ್ಮನೆ ಮಲಗಿದೆ.
ದಿನ 2:
ಬೆಳಗ್ಗೆ ಸ್ನಾನ ಮಾಡಿ ಕೊಂಡು ದೇವಸ್ತಾನವನ್ನ ತಲುಪಿದೆವು. ಶ್ರೀ ಮಂಜುನಾಥನ ದರ್ಶನ ಮುಗುಸಿದ ನಂತರ ತುಲಾಭಾರಕ್ಕೆ ಸಾಲಲ್ಲಿ ನಿಂತೆವು. ಸುಮಾರು 8 ಗಂಟೆಗೆ ತುಲಾಭಾರ ಆರಂಬವಾಯಿತು. ನಂತರ ಕೆಲವೇ ನಿಮಿಷಗಳಲ್ಲಿ ನಮ್ಮ ಸರದಿ ಬಂದಿತು. ತುಳಭಾರವನ್ನ ಮುಗಿಸಿ ಕೊಂಡು ಅಲ್ಲಿಯೇ ಒಂದು ಹೋಟೆಲ್ನಲ್ಲಿ ತಿಂಡಿ ತಿಂದೆವು.
ನಂತರ ಧರ್ಮಸ್ತಳದ ಗೊಮ್ಮಟೇಶ್ವರನನ್ನು ನೋಡಿಕೊಂಡು ಬರುವಷ್ಟರಲ್ಲಿ ಮಳೆಯ ಆಟ (ಕಾಟ?) ಶುರುವಿಟ್ಟಿತು. ಮಳೆಯಲ್ಲಿಯೂ ಏನೋ ಒಂದು ರೀತಿಯ ಮಜಾ ಬರುತ್ತಿತ್ತು. ಕಾರಣ ಅಲ್ಲಿ ಅಂತ ಮಳೆ ನಿಂತ ಕೆಲವೇ ಕ್ಷಣದಲ್ಲಿ ಮತ್ತೆ ಸೆಕೆ ಆರಂಬವಾಗುತ್ತಿತ್ತು. ಇದು ಒಂದ್ತರಾ ನಮಿಗೆ ವಿಶೇಷ ಅನುಭವ. ಸರಿ ಅಲ್ಲಿಂದ ಹೊರಟು ಹಳೆ ಕಾರುಗಳ ಸಂಘ್ರಹಾಲಯಕ್ಕೆ ಬಂದೆವು. ಅಲ್ಲಿದ್ದ ಕಾರುಗಳ ಸಂಗ್ರಹ ನೋಡಲು ತುಂಬಾ ಮುದ ನೀಡಿತು.
ಸರಿ ಮತ್ತೆ ನಮ್ಮ ಪ್ರಯಾಣ ನೇರ ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ಕಡೆಗೆ ಆರಂಭವಾಯಿತು. ಸಂಜೆ ಆರಕ್ಕೆಲ್ಲಾ ಸುಬ್ರಮಣ್ಯ ತಲುಪಿದೆವು. ಇಲ್ಲಿ ಒಟ್ಟು ಮೂರು ಕೊಠಡಿಗಳನ್ನು ಬಾಡಿಗೆ ಪಡೆದೆವು. ಕೈ-ಕಾಲು ತೊಳೆದು ಕೊಂಡು ಅಲ್ಲಿಯೇ ಇರುವ ಗಣಪತಿ ದೇವಸ್ತಾನಕ್ಕೆ ಹೋಗಿ ಬಂದೆವು.
ರಾತ್ರಿ ಸುಬ್ರಮಣ್ಯ ದೇವಸ್ತಾನದಲ್ಲಿ ಅನ್ನ-ಪ್ರಸಾದ ಮುಗಿಸಿ ಕೊಂಡು ಬಂದು ಮಲಗಿ ಕೊಂಡೆವು.
ದಿನ 3:
ದಿನ 3:
ನನಗೆ ಹಿಂದಿನ ದಿನ ರಾತ್ರಿ ಹೊಟ್ಟೆ ಕೆಟ್ಟು ಸರಿಯಾದ ನಿದ್ದೆಯೂ ಸಹ ಮಾಡದೆ ಬೆಳಗ್ಗೆ ಏಳುಹುದು ಸ್ವಲ್ಪ ನಿದಾನವಾಯಿತು. ಆದರೇನಂತೆ ಉತ್ಸಾಹದಿಂದ ನದಿಗೆ ಸ್ನಾನಕ್ಕೆ ಅಂತ ಹೊರಟೆವು. ಆಹಾ ! ಹಿಂದಿನ ದಿನದ ಭಾರಿ ಮಳೆಯಿಂದಾಗಿ , ಹೊಳೆ ತುಂಬಿ ಬರುತ್ತಿತ್ತು. ನೀರಿನ ಬಣ್ಣವು ಬದಲಾಗಿತ್ತು. ಅದರಲ್ಲಿಯೇ ತಲೆಗೆ ನೀರು ಚಿಮ್ಮಿಸಿ ಕೊಂಡು ಮತ್ತೆ ಕೊಠಡಿಗೆ ಹಿಂತಿರುಗಿದೆವು. ಹೊಳೆಯಲ್ಲಿ ನಾವು ಊಹಿಸಿದಂತೆ ಸ್ನಾನಕ್ಕೆ ಯಾವ ರೀತಿಯ ಅನುಕೂಲಗಳೂ ಉಳಿದಿರಲಿಲ್ಲ.
ಸರಿ, ಸ್ನಾನ ಮುಗಿಸಿ ಕೊಂಡು ದೇವಸ್ತಾನಕ್ಕೆ ಹೊರಟೆವು, ಪೂಜೆ-ಪ್ರಸಾದ ಎಲ್ಲವನ್ನು ಮುಗಿಸಿಕೊಂಡು ವಾಪಸ್ ಕೊಠಡಿಗೆ ಬರುವಷ್ಟರಲ್ಲಿ ಸಮಯ ಒಂದು ಗಂಟೆಯಾಗಿತ್ತು ಸ್ವಲ್ಪ ಹೊತ್ತು ವಿಶ್ರಮಿಸಿ ಹೊರಡಲು ಸಿದ್ದವಾದೆವು. ಸರಿ ಹೆಚ್ಚು ಕಮ್ಮಿ ಎಲ್ಲಾ ಚೀಲಗಳನ್ನೂ ವಾಹನದ ಮೇಲೆ ಕಟ್ಟಿಯಾಗಿತ್ತು. ಆದರೆ ಕೊನೆಯಲ್ಲಿ ಉಳಿದಿದ್ದ ಕೆಲವು ಸಣ್ಣ-ಪುಟ್ಟ ಚೀಲಗಳನ್ನು ಒಂದೊಂದು ಕೈಯಲ್ಲಿ ಹಿಡಿದು ಕೊಂಡು ವಾಹನದ ಬಳಿ ಬಂದೆವು, ಅಷ್ಟರಲ್ಲಿ ತುಂಬಾ ವಯಸ್ಸಾದಂತೆ ಕಾಣಿಸುತ್ತಿದ್ದ ಒಬ್ಬ ವ್ಯಕ್ತಿ ಹಾಗೆ ನಮ್ಮ ಕಡೆಗೆ ಬರುತ್ತಿದ್ದದ್ದು ಗಮನಿಸಿದೆ.
ಉಳಿದವರು ವಾಹನವನ್ನು ಹತ್ತುತ್ತಿದ್ದ ಕಾರಣ ನಾನು ಸ್ವಲ್ಪ ಹಿಂದೆ ಬಂದೆ. ಅಷ್ಟು ಹೊತ್ತಿಗೆ ಸರಿಯಾಗಿ ಆ ವಯಸ್ಸಾದ ವ್ಯಕ್ತಿ ನನಗೆ ತೀರಾ ಹತ್ತಿರಕ್ಕೆ ಬಂದು ನಿಂತಿದ್ದರು. ಅವರನ್ನ ನಾನು ಹಾಗೆ ಸ್ವಲ್ಪ ಹೊತ್ತು ಗಮನಿಸಿದೆ. ಎರಡೂ ಕಣ್ಣಲ್ಲಿ ಪಿಸುರು, ಅರಿದ ಬಟ್ಟೆ, ಉದ್ದನೆ ಗಡ್ಡ -ಮೀಸೆ , ಚೆಲ್ಲ-ಪಿಲ್ಲಿಯಾದ ತಲೆ ಕೂದಲು, ಹೂಂ. ಅರ್ಥವಾಯಿತಲ್ಲ? ಅವರು ನನ್ನ ಬಳಿ ಕೈ ಚಾಚಿ ನಿಂತರು. ನಾನು ಸ್ವಲ್ಪ ಹೊತ್ತು ಅವರನ್ನು ಹಾಗೆ ಗಮನಿಸಿದೆ. ಅಸಹ್ಯ ದೃಷ್ಟಿ ಯಿಂದ ಅಂತು ಖಂಡಿತ ಅಲ್ಲಾ.
ಇತ್ತೇಚೆಗೆ "ಮಂಕುತಿಮ್ಮನ ಕಗ್ಗ" ವನ್ನು ಪದೇ-ಪದೇ ಕೇಳುತ್ತಿರುವುದರಿಂದಲೋ ಏನೋ! ಅಥವಾ ನನ್ನ ಸುತ್ತಲ್ಲೂ ನಡೆಯುತ್ತಿದ್ದ ಸನ್ನಿವೇಶಗಳಿಂದಲೂ ಏನೋ! ಜೀವನ ನನಗೆ ಸಾಕಷ್ಟು ಸಂಯಮವನ್ನ ಕಲಿಸುತ್ತಾ ಇತ್ತು. ಅದರಲ್ಲಿ ಈ ವಯಸ್ಸಾದ ವ್ಯಕ್ತಿಯನ್ನು ಕಂಡು ನನಿಗೆ ಯಾವ ರೀತಿಯ ಕೀಳರಿಮೆಗಳೂ ಸುಳಿಯಲಿಲ್ಲ. ಬದಲಾಗಿ ಇನ್ನು ಹೆಚ್ಚು ಆಸಕ್ತಿಯಿಂದ ಅವರನ್ನ ಗಮನಿಸ ತೊಡಗಿದೆ.
ಇಷ್ಟೆಲ್ಲಾ ಕೆಲವೇ ನಿಮಿಷಗಳಲ್ಲಿ ನಡೆದು ಹೋಯಿತು, ಇಷ್ಟರಲ್ಲಿ ನನ್ನ ಜೊತೆ ಇದ್ದ ಇನ್ನೂ ಕೆಲವರು ನನ್ನೊಂದಿಗೆ ಆ ವಯಸ್ಸಾದ ವ್ಯಕ್ತಿಯ ಸುತ್ತ ನೆರೆದರು. ಮಾತು ಶುರುವಿಟ್ಟರು.
ಮೊದಲು ಒಂದೆರಡು ವಾಕ್ಯ ಕನ್ನಡದಲ್ಲಿ ಮಾತಾಡಿದರು ಅಂತ ಅನ್ನಿಸುತ್ತೆ. ಅನ್ನಿಸುತ್ತೆ ಅಷ್ಟೇ ಅಷ್ಟರಲ್ಲಿ ಅವರು ಇಂಗ್ಲೀಷ್ನಲ್ಲಿ ಮಾತಾಡಲು ಶುರುವಿಟ್ಟರು. ತುಂಬಾ ಸರಾಗವಾಗಿಯೇ ಮಾತನಾಡಿದರು.
ಎಲ್ಲರೊಂದಿಗೂ ಮಾತನಾಡಲು ಇಚ್ಚಿಸುಹುದಿಲ್ಲ ಆದರೆ ಯಾಕೋ ನಿನ್ನೊಂದಿಗೆ ಮಾತನಾಡ ಬೇಕೆನ್ನಿಸಿತು ಮಾತನಾಡಿದೆ ಅಷ್ಟೇ ಅಂತ ಹೇಳಿದ್ದು ನನಗೆ ಇನ್ನು ಸ್ವಲ್ಪ ಆನಂದ ನೀಡಿತು. ಆಗ ಮಾತಿನ ಮದ್ಯೆ ಯಾವುದೊ ವಿಷಯದ ಬಗ್ಗೆ ಅವರು ಒಂದು ಮಾತು ಹೇಳಿದರು. "ಕೇಳಲು ನಾನ್ಯಾರು ನೀಡಲು ನೀನ್ಯಾರು?" ಎಂದು. ಜೀವನದ ಅರ್ಥ ಕೆಲವು ಬಾರಿ ಎಂತ ಸಣ್ಣ-ಪುಟ್ಟ ವಾಕ್ಯಗಳಲ್ಲಿ ಅಡಗಿರುತ್ತದೆ ಅಲ್ಲಾ? ಅನ್ನಿಸಿತು.
ಸರಿ, ಉಳಿದವರು ಕೆಲವರು ತುಂಬಾ ಹೊತ್ತಿನಿಂದ ನಮಗೆ ಕಾಯುತ್ತಿದ್ದ ಕಾರಣ. ಆ ವ್ಯಕ್ತಿಗೆ ಮತ್ತೆ ಸಿಗೋಣ ವೆಂದು ಹೇಳಿ ನಮ್ಮ ಮಾತು ಮುಗಿಸಿ, ಅವರನ್ನು ಕಳುಹಿಸಿ ವಾಹನವನ್ನೆರಿದೆವು. ಅಲ್ಲಿಂದ ಸೀದಾ ಬೇಲೂರು - ಹಳೇಬೀಡು ನೋಡಿ ಕೊಂಡು ಊರಿನ ಕಡೆಗೆ ಹೊರಟೆವು. ಮನೆ ಸೇರಿದಾಗ ರಾತ್ರಿ 11 ಗಂಟೆ ಯಾಗಿತ್ತು. ಮನೆಯಲ್ಲಿ ಎಲ್ಲರು ಪ್ರಯಾಣ ಬಂದಿದ್ದ ಕಾರಣ ಊಟವನ್ನು ದೊಡ್ಡಪ್ಪನ ಮನೆಯಲ್ಲಿ ಮಾಡಿ ಕೊಂಡು ಬಂದು ಮಲಗಿದೆವು.
4 ಕಾಮೆಂಟ್ಗಳು:
ನಿಮ್ಮ ಪ್ರವಾಸ ಕಥನ ತುಂಬಾ ಚೆನ್ನಾಗಿದೆ
ಆ ಹಿರಿಯರನ್ನು ಇನ್ನಷ್ಟು ಮಾತನಾಡಿಸ ಬೇಕಿತ್ತು...
ನಿಮ್ಮ ಅನುಭವ ಕಥನ ಚೆನ್ನಾಗಿದೆ...
ಗುರುರವರೆ
ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು.
ಪ್ರಕಾಶಣ್ಣ,
ನನ್ನ ಪ್ರಯತ್ನವನ್ನು ನಾನು ಮಾಡಿದೆ. ಸುಮಾರು 20-25 ನಿಮಿಷ ಆ ವೃದ್ದರ ಮಾತು ಆಲಿಸಿದೆವು.
ಸುಮಾರು 7-8 ಭಾಷೆ ಗೊತ್ತಿತ್ತು ಅವರಿಗೆ. ಆಂಗ್ಲ ಭಾಷೆಯನ್ನು ಸೇರಿಸಿ. ಆಂಗ್ಲ ಭಾಷೆಯನ್ನು ಅವರು ಭೊದಿಸುತ್ತಿದ್ದರನ್ತೆ.
ಇನ್ನು ಅವರ ಶಿಷ್ಯರ ಬಗ್ಗೆಯೂ ನಮ್ಮೊಡನೆ ಹಂಚಿ ಕೊಂಡರು. ನಾನವರ ಮೂಲ ಸ್ಥಾನವನ್ನ ಕೇಳಿದ್ದಕ್ಕೆ ಅವರ ಉತ್ತರಿಸಿದ್ದು ಹೇಗೆಂದರೆ "ಅದರಿಂದ ಏನಾಗುತ್ತೆ ?" ಅಂತ. ಇನ್ನು ಅವರು ಏನು ಮಾಡುತ್ತಿದ್ದರು (ವೃತ್ತಿ) ಎಂದೆಲ್ಲ ಹೇಳಿಕೊಂಡರು. LIC ಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದರಂತೆ. ಹೀಗೆ ನಮ್ಮ ಬಗ್ಗೆ ಕೆಲವು ಪ್ರಶ್ನೆ ಕೇಳಿದರು. ನಾನು ಉತ್ತರಿಸಿದೆ. ತಮ್ಮ ಅನಿಸಿಕೆಗಳನ್ನೂ ತಿಳಿಸಿದರು. ಒಟ್ಟಿನಲ್ಲಿ ನಾನು/ನಾವು ಅವರನ್ನು ನಿರ್ಲಕ್ಷಿಸಲಿಲ್ಲ. ಅದಕ್ಕೆ ನನಗೂ ಒಂದು ಸಮಾಧಾನ.
ಅವರ ಚಿತ್ರವನ್ನು ತೆಗೆದು ಕೊಲ್ಲಲಿಲ್ಲ :( . ಆದರೆ ಆ ಪ್ರದೇಶದ ಮಳೆ ಬಗ್ಗೆ ನಿಮಗೂ ಅನುಭವವಿದೆ ಅಂದು ಕೊಳ್ಳುತ್ತೇನೆ.
ಇದ್ದಕ್ಕಿದ್ದಂತೆ ಮಳೆ ಆರಂಬವಾಯಿತು ನೋಡಿ ಆಗಾಗಿ ನಾವು ಅವರನ್ನು ಬೀಳ್ಕೊಡಬೇಕಾಯ್ತು. ನಮ್ಮ ಕಡೆ ಇಂದ ಒಂದು ಶಾಲ್ ಅನ್ನು ಉಡುಗೊರೆಯಾಗಿ ನೀಡಿದೆವು.
ತುಂಬಾ ಇಂಟ್ರೆಸ್ಟಿಂಗ್ ಆಗಿದೆ ನಿಮ್ಮ ಪ್ರವಾಸ ಕಥನ. "ಕೇಳಲು ನಾನ್ಯಾರು ನೀಡಲು ನೀನ್ಯಾರು?" ವಾಕ್ಯ ಸ್ವಲ್ಪ ಹೊತ್ತು ಯೊಚನೆಗೀಡು ಮಾಡಿತು. ಇನ್ನಷ್ಟು ಬರೆಯಿರಿ. ಕನ್ನಡ ಕಾಗುಣಿತದ ಕಡೆ ಸ್ವಲ್ಪ ಗಮನ ಕೊಡಿ. ಕೆಲವು ಪದಗಳ ಉಚ್ಚಾರ ಸರಿ ಇರಲಿಲ್ಲ, ಅದಕ್ಕೆ ಹೇಳಬೇಕೆನಿಸಿತು. ಅನ್ಯಥಾ ಭಾವಿಸಬೇಡಿ.
ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ,
- ಉಮೇಶ್
ಕಾಮೆಂಟ್ ಪೋಸ್ಟ್ ಮಾಡಿ