ಭಾನುವಾರ, ಫೆಬ್ರವರಿ 28, 2010

ಪ್ರತಿಕಾರ ಹೋರಾಟದಲ್ಲಿ ಹಸ್ತಕ್ಷೇಪ ಮಾಡಬೇಡಿ

ಸುಮಾರು ೮ ತಿಂಗಳ ಹಿಂದೆ ಓದಲು ಆರಂಬಿಸಿ, ನಂತರ ಹಲವಾರು ವಿವಿದ ಕಾರಣಗಳಿಂದಾಗಿ ಆ ಪುಸ್ತಕವನ್ನ ಓದುವುದನ್ನ ಅರ್ಧಕ್ಕೇ ನಿಲ್ಲಿಸಿ ಬಿಟ್ಟಿದ್ದೆ. ಆದರೆ ನಿನ್ನೆ ರಾತ್ರಿ ಅದೇಕೋ ಮತ್ತೆ ಆ ಪುಸ್ತಕವನ್ನ ಓದುವುದನ್ನ ಮುಂದುವರಿಸಿದೆ. ನಿನ್ನೆ ತಡ ರಾತ್ರಿವರೆಗೆ ಓದಿದೆ, ರಾತ್ರಿ ಕೆಲವು ವಿಡಿಯೋ ದೃಶ್ಯಗಳನ್ನ ಯೂಟ್ಯುಬಿನಲ್ಲಿ ವೀಕ್ಷಿಸಿದ್ದೆ. ಅದೇ ಗುಂಗಿನಲ್ಲಿ ಬೆಳಗ್ಗೆ ತಡವಾಗಿ ಎದ್ದರೂ, ಇಂದಿನ ದಿನಾಂಕವನ್ನ ಗಮನಿಸಿದಾಗ, ಒಂದು ಕಾಕತಾಳೀಯ ಅಂಶ ನನ್ನ ಗಮನಕ್ಕೆ ಬಂತು. ಅದೆಂದರೆ ಗುಜರಾತ್ - ಗೋಧ್ರಾ ನಗರದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ದುರ್ಘಟನೆಗೆ ಇಂದು ೯ ನೇ ವಾರ್ಷಿಕೋತ್ಸವ. 
ಇದಿಷ್ಟು ಇಂದಿನ ನನ್ನ ಬರಹಕ್ಕೆ ಬರೀ ಪೀಠಿಕೆ ಮಾತ್ರ.

ಪುಸ್ತಕದ ಹೆಸರು : "ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ".
ಲೇಖಕರು : ಪ್ರತಾಪ್ ಸಿಂಹ. http://pratapsimha.com/ , ವಿಜಯ ಕರ್ನಾಟಕ.

ಮೇಲೆ ಸೂಚಿಸಿರುವ ಘಟನೆಗೆ ಸಂಭಂದಿಸಿದಂತೆ ಈ ಪುಸ್ತಕದಲ್ಲಿ ವಿವರಣೆಗಳಿವೆ. ಇವುಗಳನ್ನ ನೇರವಾಗಿ ಪುಸ್ತಕದಿಂದ ಇಲ್ಲಿಗೆ ಇಳಿಸಿದ್ದೇನೆ.

~~~~(೦)~~~~
.....೨೦೦೨, ಪೆಬ್ರವರಿ ೨೭ ರಂದು ಪೈಜಾಬಾದ್‌ನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಪೂರ್ವನಿಯೋಜಿತ ದಾಳಿ ನಡೆಯಿತು. ಗೋಧ್ರಾ ಬಳಿ ನಡೆದ ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ ೫೮ ಜನರು ಸಜೀವ ದಹನವಾದರು,
...
...
ಮೋದಿ ಚುನಾವಣೆಯಲ್ಲಿ ಗೆದ್ದ ಮೂರೇ ದಿನಗಳಲ್ಲಿ ಗೋಧ್ರಾ ಘಟನೆ ನಡೆದಿದ್ದೇಕೆ? ಅದು ಕಾಕತಾಳೀಯವೇ? ಅಥವಾ ಪೂರ್ವನಿಯೋಜಿತವೇ?
...
ಪೆಬ್ರವರಿ ೨೭ ರ ಬೆಳಗ್ಗೆ ಏನಾಯಿತು ಎಂಬುದನ್ನು ಗಮನಿಸೋಣ.
೭.೪೨ - ಸಾಬರ ಮತಿ ಎಕ್ಸ್‌ಪ್ರೆಸ್ ರೈಲು ಗೊಧ್ರಾ ನಿಲ್ದಾಣಕ್ಕೆ ಆಗಮನ.
೭.೪೭ - ಮುಂದಕ್ಕೆ ಹೊರಡಲು ಪ್ರಾರಂಬ. ಆದರೆ ರೈಲ್ವೇ ನಿಲ್ದಾಣದಲ್ಲಿ ಹೊತ್ತು ಮಾರುವವರು ಕಲ್ಲು ತೂರಾಟ ಆರಂಭಿಸುತ್ತಾರೆ,
೭.೫೦ - ರೈಲಿನ ಚೈನು ಎಳೆಯಲಾಗುತ್ತದೆ,
೮.೦೦ - ಎರಡನೇ ಬಾರಿಗೆ ಚೈನನ್ನು ಎಳೆಯುತ್ತಾರೆ.
೮.೦೭ - ರೈಲನ್ನು ಸುತ್ತುವರಿದ ದೊಡ್ಡ ಗುಂಪೊಂದು ಎಸ್-೬ ಭೋಗಿದೆ ಬೆಂಕಿ ಹಚ್ಚಿತು.

ಈ ಘಟನೆಯ ಬಗ್ಗೆ ಸತ್ಯಶೋಧನೆ ಮಾಡುವ ಸಲುವಾಗಿ ಸಂಪಾದಕರ ತಂಡವೊಂದು ಗುಜರಾತಿಗೆ ತೆರೆಳಿತು. ಅದನ್ನು "ಸೆಕ್ಯುಲರ್‌ ಮಿಷನ್" ಎಂದು ಕರೆಯಬಹುದು. ಏಕೆಂದರೆ ಮುಂಭೈನ ಮಿಡ್ ಡೇ ಪತ್ರಿಕೆಯ ಸಂಪಾದಕ ಆಕಾರ್ ಪಟೇಲ್, ಖ್ಯಾತ ಪತ್ರಕರ್ತ ಬಿ.ಜಿ. ವರ್ಗೀಸ್ ಹಾಗೂ ದಿಲೀಫ್ ಪಡಗಾಂವ್ ಕರ್ ಆ ತಂಡದಲ್ಲಿದ್ದರು.

"ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ ವಿಳಂಬವಾಗಿ ಸಾಗುತ್ತಿತ್ತು. ಹಾಗೆ ಸಾಗುತ್ತಿದ್ದ ರೈಲಿಗೆ ಪೆಬ್ರವರಿ ೨೭ ರ್ ಬೆಳಗ್ಗೆ ೮ ಗಂಟೆಗೆ ಗೋಧ್ರಾ ಬಳಿ ಬೆಂಕಿ ಹಚ್ಚಲಾಯಿತು.
....
....
....
ಈ ಮಧ್ಯೆ ಅನಾಮಧೇಯ ಇ-ಮೇಲೊಂದು ಎಲ್ಲರಿಗೂ ಬರಲಾರಂಬಿಸಿತು. ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದ ಸ್ಥಳೀಯ ವರದಿಗಾರರಾದ ಅನಿಲ್ ಮತ್ತು ನೀಲಮ್ ಸೋನಿ ಎಂಬವರ ವೃತ್ತಿ ಮತ್ತು ದೂರವಾಣಿ ಸಂಖ್ಯೆಗಳನ್ನು ಆ ಇ-ಮೇಲ್ ನಲ್ಲಿ ಉಲ್ಲೇಖಿಸಲಾಗಿತ್ತು. ಅದರಲ್ಲಿ ಕರಸೇವಕರು ಹಾಗೂ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿತ್ತಿದ್ದ ಅಲ್ಪಸಂಖ್ಯಾತ ಸಮುದಾಯದವರ ನಡುವೆ ಘರ್ಷಣೆಯೋಂದು ನಡೆಯಿತು. ಅಲ್ಲದೇ ಮುಸ್ಲಿಂ ಸಮುದಾಯದ ಬಾಲಕಿಯೊಬ್ಬಳ ಮೇಲೆ ಕರಸೇವಕರು ಲೈಂಗಿಕ ದೌರ್ಜನ್ಯ ನಡೆಸಿದ ಕಾರಣ ಕೋಪೋದ್ರಿಕ್ತ ಅಲ್ಪಸಂಖ್ಯಾತರು ಕರಸೇವಕರಿದ್ದ ಎಸ್-೧೬ ಬೋಗಿಯ ಮೇಲೆ ಕಲ್ಲು ತೂರಾಟ ಆರಂಬಿಸಿದರು, ಕೊನೆಗೆ ಬೆಂಕಿ ಹಚ್ಚಲಾಯಿತು" ಎಂದು ವಿವರಿಸಲಾಗಿತ್ತು.
ಇದು ಸಂಪಾದಕರ ತಂಡ ನೀಡಿದ ವರದಿ. ಆದರೆ ಈ.ಮೇಲ್‌ನ್ನು ಕಳುಹಿಸಲು ಆರಂಬಿಸಿದ್ದು ಯಾರು, ಯಾವಾಗ ಎಂಬುದು ಮಾತ್ರ ಸ್ಪಷ್ಟವಾಗಲಿಲ್ಲ. ಈ ಬಗ್ಗೆ ಅನಿಲ್ ಮತ್ತು ನೀಲಮ್ ಸೋನಿಯವರನ್ನೇ ಪ್ರಶ್ನಿಸಿದಾಗ, ನಾವು ಅಂತಹ ಯಾವುದೇ ವರದಿಯನ್ನೂ ಮಾಡಿಲ್ಲ ಎಂದರು. ನಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಪ್ರತಿಮಾದಿಸಿದರು.ಹಾಗಾದರೆ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನರಿಗೆ ಕಳುಹಿಸಲಾದ ಈ.ಮೇಲ್ ಸೃಷ್ಟಿಯಾಗಿದ್ದು ಹೇಗೆ? ಅಷ್ಟೋಂದು ಶೀಘ್ರವಾಗಿ ಸುಳ್ಳಿನ ಸರಮಾಲೆಯನ್ನು ಹರಡಲು ಯತ್ನಿಸಿದ್ದು ಯಾವ ಉದ್ದೇಶಕ್ಕಾಗಿ? ಯಾರ ಹಿತಾಸಕ್ತಿಗಾಗಿ? ಅದಿರಲಿ, ಕರಸೇವಕರು ಅತ್ಯಾಚಾರವೆಸಗಿದ್ದಾರೆನ್ನಲಾದ ೧೬ ವರ್ಷದ ಮುಸ್ಲಿಂ ಯುವತಿ ಎಲ್ಲಿ ಹೋದಳು? ಈ ಬಗ್ಗೆ ಯಾವ ಉತ್ತರವೂ ಇಲ್ಲ. ಸೆಕ್ಯುಲರ್ ಮಾಧ್ಯಮಗಳಿಗೆ ಉತ್ತರವೂ ಬೇಕಿಲ್ಲ. ಮೋದಿಯವರನ್ನು ನಿಂದಿಸಲು ನೆಪವೊಂದು ಬೇಕಿತ್ತಷ್ಟೆ.

"೨೦೦೨, ಪೆಬ್ರವರಿ ೨೭ರ ರಾತ್ರಿ ಉನ್ನತ ಅಧಿಕಾರಿಗಳನ್ನು ಕರೆಸಿಕೊಂಡ ಮೋದಿ, ಹಿಂದೂಗಳ ಪ್ರತಿಕಾರ ಹೋರಾಟದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ನಿರ್ದೇಶನ ನೀಡಿದರು. ಇಂತಹ ಮಾಹಿತಿಯನ್ನು ನೀಡಿದ್ದು ಮೋದಿ ಸಂಪುಟದಲ್ಲಿದ್ದ ಸಚಿವರೊಬ್ಬರು" ಎಂದು ಔಟ್‌ಲುಕ್ ಪತ್ರಿಕೆ ಪ್ರತಿಪಾದಿಸಿತು.
ಆದರೆ ನಡೆದಿದ್ದೇನು?
೧. ....
೨. ....
೩. ....
೪. ....
೫. ...
೬....
೭....
೮....
೯...
೧೦...
೧೧...
೧೨...
೧೩...
೧೪...
ಹೀಗೆ ಎಲ್ಲ್ ರೀತಿಯ ಮುಂಜಾಗ್ರತೆಗಳನ್ನು ತೆಗೆದುಕೊಂಡ ಮೋದಿಯವರನ್ನು ಸೆಕ್ಯುಲರ್ ಮಾದ್ಯಮಗಳು, ವಾದಿಗಳು ದೂರುವುದರಲ್ಲಿ ಯಾವ ಅರ್ಥವಿದೆ? ಒಂದು ವೇಳೆ ಮೋದಿಯವರಿಗೆ ಅಲ್ಪಸಂಖ್ಯಾತರ ಬಗ್ಗೆ ಯಾವ ಕಾಳಜಿಯೂ ಇರದಿದ್ದರೆ ಅರೆಸೇನಾ ಪಡೆಗಳು, ಶೀಘ್ರ ಪ್ರಹಾರ ದಳ ಹಾಗೂ ಸೇನೆಯನ್ನು ಏಕೆ ನಿಯೋಜಿಸುತ್ತಿದ್ದರು? ಗುಜರಾತ್ ವಿಧಾನಸಭೆಯ ಅಧಿವೇಶನವನ್ನು ಅರ್ಧದಲ್ಲೇ ಬಿಟ್ಟು ಮೋದಿ ಫೆಬ್ರವರಿ ೨೭ ರಂದು ಗೋಧ್ರಾಕ್ಕೆ ಧಾವಿಸುತ್ತಿದ್ದರೆ? ಇಷ್ಟಾಗಿಯೂ ಗುಜರಾತ್ ಜನರ ಬಗ್ಗೆ ಮಾದ್ಯಮಗಳು ಮತ್ತು ಸೆಕ್ಯುಲರ್ ವಾದಿಗಳು ಟೀಕಾಪ್ರಹಾರ ಮಾಡಿದವು. ಇದು ಗುಜರಾತಿಗಳಿಗೆ ನೋವುಂಟುಮಾಡಿತು.


~~~~(೦)~~~~
ಹೆಚ್ಚಿನ ಆಸಕ್ತಿ ಇರುವವರು, ನರೇಂದ್ರ ಮೋದಿಯವರ ಬಗ್ಗೆ ಇನ್ನೂ ಹೆಚ್ಚು ತಿಳಿದು ಕೊಳ್ಳವ ಕುತೂಹಲವಿರುವವರು ಪುಸ್ತಕವನ್ನ ತಪ್ಪದೇ ಓದಿ. ಪುಸ್ತಕವು ಲೇಖಕರ ತಾಣದಲ್ಲಿ ಉಚಿತವಾಗಿ ಲಭ್ಯವಿದೆ
ನರೇಂದ್ರ ಮೋದಿಯವರ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಜೊತೆ ಜೊತೆಗೆ ಅವರ ಹೋರಾಟಕ್ಕೆ ಸಂಭಂದಿಸಿದ ಹಾಗೂ ನಾವು-ನೀವು ತಿಳಿದು ಕೊಂಡಿರುವ ಅಥವ ತಿಳಿದು ಕೊಂಡಿರದ ಅನೇಕ ವಿಚಾರಗಳು ಈ ಹೊತ್ತಗೆಯಲ್ಲಿ ಸಿಗುತ್ತವೆ. 

ಘಟನೆಯ ನಂತರ ಘಟನೆಯ ಬಗ್ಗೆ ಅನೇಕ ಸುದ್ದಿ ಮಾದ್ಯಮಗಳು ಮೋದಿಯವರನ್ನ ಸಂದರ್ಶನ ನಡೆಸಿವೆ. ಒಂದೆರಡು ಕೊಂಡಿಗಳನ್ನ ಇಲ್ಲಿ ತಿಳಿಸಿದ್ದೇನೆ.
http://www.youtube.com/watch?v=ARTh48Iam9I
http://www.youtube.com/watch?v=TP1QFcvIg9c

ಬುಧವಾರ, ಫೆಬ್ರವರಿ 24, 2010

ರನ್ - 200 , ಬಾಲ್ - 147 , 25 ಬೌಂಡರಿ, 3 ಸಿಕ್ಸರ್, ಸರಾಸರಿ - 136.05.

ಏಕದಿನ ಕ್ರಿಕೆಟ್ ನ ಮೊಟ್ಟಮೊದಲ ದ್ವಿಶತಕ ದಾಖಲಿಸಿದ ಸಚಿನೆ ತೆಂಡೂಲ್ಕರ್ ಗೆ ಹೃದಯಪೂರ್ವಕ ಅಭಿನಂದನೆಗಳು.
Congratulations Sachin ರ Tendulkar, for scoring first ever double century in ODI cricket.
* ಇಂದು , ಅಂದರೆ ದಿನಾಂಕ ೨೪-ಪೆಬ್ರವರಿ-೨೦೧೦ ರಂದು, 
* ಭಾರತದ ಗ್ವಾಲಿಯಾರ‍್ನ " ಕ್ಯಾಪ್ಟನ್ ರೂಪ್ ಸಿಂಗ್" ಕ್ರಿಡಾಂಗಣದಲ್ಲಿ ಜರುಗಿದ
* ದ.ಆಪ್ರಿಕ ವಿರುದ್ದದ ಅಂತರಾಷ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ,
* ಭಾರತ ತಂಡದ ನಮ್ಮೆಲ್ಲರ ನೆಚ್ಚಿನ ಆಟಗಾರ,
* ಕ್ರಿಕೆಟ್ ಮಟ್ಟಿಗೆ ಹೇಳುವುದಾದರೆ, ಭಾರತ ಕ್ರಿಕೆಟ್ ನ ಆರಾದ್ಯ ದೈವ,
* ಸುಮಾರು ಇಪ್ಪತ್ತೊಂದು ವರ್ಸದ ಅನುಭವಿ ಕ್ರಿಕೇಟ್ಟಿಗ,


ಸಚಿನ್ ರಮೇಶ್ ತೆಂಡೂಲ್ಕರ್ 
* ತನ್ನ ಕ್ರಿಕೆಟ್ ಬ್ಯಾಟ್ ಮೂಲಕ ಮಾಡಿದ ಸಾಧನೆಯ, ಸಂಕ್ಷಿಪ್ತ ನೋಟ ಇಂತಿದೆ.

ರನ್ - 200 , ಬಾಲ್ - 147 , 25 ಬೌಂಡರಿ, 3 ಸಿಕ್ಸರ್, ಸರಾಸರಿ - 136.05.



ಚಿತ್ರ ಕೃಪೆ : http://static.cricinfo.com/db/PICTURES/CMS/114600/114673.2.jpg

ಸಚಿನ್ ನಿನಗೊಂದು ಸರಣು. ನಿನ್ನಿಂದ ಇನ್ನೂ ಹೆಚ್ಚಿನ ಸಾಧನೆ ಆಗಲಿ. ಅದನ್ನು ನೋಡಿ  ಸಂಭ್ರಮಿಸುವ  ಭಾಗ್ಯ ನಮ್ಮೆಲರಿಗೆ ಸಿಗಲಿ.

-
ಇಂತಿ
ನಿನ್ನ ಕೋಟಿ, ಕೋಟಿ ಅಭಿಮಾನಿಗಳಲ್ಲೊಬ್ಬ!!

ಶನಿವಾರ, ಫೆಬ್ರವರಿ 20, 2010

ಲೇ ಹನುಮಂತನ ದೇವಸ್ಥಾನದ ಹಿಂದೆ ನಿಂಬೆ ಗಿಡ ನೋಡಿದ್ದೇ ಕಣ್ ಲೇ!


ಚಿಕ್ಕವರಿದ್ದಾಗ ನಮ್ಗೆ ವಾರಾಂತ್ಯ ಹೇಗಿರ್ತಿತ್ತು?  ಈ ಬರಹವನ್ನ ಬರೆದಿಟ್ಟು ತಿಂಗಳುಗಳೇ ಕಳೆದು ಹೋಗಿವೆ. ಇಂದು ಇದಕ್ಕೆ ಮುಕ್ತಿ ದೊರಕಿದೆ. ಓದಿ ನೋಡಿ.

~~~~( * ) ~~~~

ಶನಿವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಶಾಲೆ ಬೆಲ್ ಹೊಡಿತು ಅಂದ್ರೆ ಮುಗೀತು. ಮುಂದಿನ ಒಂದೂವರೆ ದಿನ ಹೇಗೆ ಕಳೆಯುತ್ತೆ ಅನ್ನೋದೇ ಗೊತ್ತಾಗ್ತಿರ್ಲಿಲ್ಲ. ಮದ್ಯಾಹ್ನ ಮನೆಗೆ ಹೋದ್ಮೇಲೆ ಅಲ್ಪ ಸ್ವಲ್ಪ ತಿಂದು, ಸ್ನೇಹಿತರನ್ನ ಒಂದು ಕಡೆ ಸೇರ್ಸೋದು ನಾನ್ ಮಾಡ್ತಿದ್ದ ಮೊದ್ಲ ಕೆಲಸ. ಎಲ್ಲರೂ ಒಟ್ಟಾದ್ಮೇಲೆ ಎರಡು ಟೀಂ ಮಾಡ್ಕಂಡು ಕ್ರಿಕೆಟ್ ಆಡೋದು. ಸಂಜೆ ಸಾಕಾಗಿ ಇನ್ನು ನಿಲ್ಲೋಕೂ ಆಗಲ್ಲ ತಲೆ ಸುತ್ತಿ ಬೀಳ್ತೀನಿ ಅನ್ನೋಷ್ಟರವರೆಗೆ ಆಟ. 

ತಲೆ ಸುತ್ತೋದು ಯಾಕೇ? ಊಟ ಮಾಡ್ತಿರ್ಲಿವ್ಲಾ? 

ಊಟ ಮಾಡೋಕ್ಕೆ ನಾನು ಮನೆ ಒಳ್ಗೆ ಹೋದಾಗ ಉಳ್ದವ್ರು ಯಾರದ್ರೂ ಕೂಡ ಅವ್ರವ್ರ ಮನೆಗೆ ಊಟಕ್ಕೆ ಹೋಗ್ಬಿಟ್ರೆ? ಆಮೇಲೆ ಎಲ್ಲರ್ನೂ ಮತ್ತೆ ಒಟ್ಟು ಮಾಡೋದು ಅಂದ್ರೇನೂ ಸುಮ್ನೆ ಕೆಲ್ಸಾನ? ಆಮೇಲೆ ಅದಿಕ್ಕೆ ಅಂತಾನೆ ಒಂದರ್ಧ ಗಂಟೆ ವೇಸ್ಟ್ ಆಗ್ಬಿಡುತ್ತೆ. ಆಟದ ನಡ್ವೆ ನೀರ್ ಕುಡಿಯೋಕೆ ಮಾತ್ರ ಸ್ವಲ್ಪ ವಿಶ್ರಾಂತಿ.  

ಆದ್ರೆ ವರ್ಷ ಪೂರ್ತಿ ಬರೀ ಕ್ರಿಕೆಟ್ ಆಡೂದಾ? ಬೇರೆ ಏನೂ ಆಟನೇ ಗೊತ್ತಿರ್ಲಿಲ್ವಾ?

ಮಾವಿನಣ್ಣಿನ ಸುಗ್ಗಿ ಬಂದಾಗ ಗೊತ್ತಲ್ಲಾ? ಹಣ್ಣು ತಿಂದು ವಾಟೆನ ತಿಪ್ಪಿಗೆ ತಂದು ಹಾಕ್ತಿದ್ರಲ್ಲಾ?
ಈ ವಾಟೆಗಳೇ ಮುಂದೆ ಮೊಳ್ಕೆ ಒಡ್ದು ಗಿಡ ಆಗಿ, ಕೆಂಪು ಚಿಗುರೆಲೆ ಬರ್ತಿದ್ವಲ್ಲಾ? 
ಅಂತ ಚಿಕ್ಕ ಚಿಕ್ಕ ಗಿಡಗಳನ್ನ ಹುಡ್ಕೋದು. ಊರಲ್ಲಿದ್ದ ಅನೇಕ ತಿಪ್ಪೆಗಳ ಮೇಲೆಲ್ಲಾ ಅಡ್ಡಾಡಿ ಸಿಗ್ತಿದ್ದ ಗಿಡಗಳನ್ನ ವಾಟೆ ಸಮೇತ ಕಿತ್ಕಂಡು ಬರೋದು. ತಂದು ಅವನ್ನೆಲ್ಲಾ ಒಂದೊಂದು ಪ್ಯಾಕೆಟ್ ನಲ್ಲಿ ಬೆಳ್ಸದು. 

"ಲೇ ಹನುಮಂತನ ದೇವಸ್ಥಾನದ ಹಿಂದೆ ಕೆಲವು ನಿಂಬೆ ಹಣ್ಣಿನ ಗಿಡಗಳನ್ನ ನೋಡಿದ್ದೇ ಕಣ್ ಲೇ!...ನೋಡ್ಕೋಂಡ್ ಬರನಾ ಬರ್ರಲೇ!!!"

ಈ ರೀತಿ ನಮ್ಮ ನಮ್ಮಲ್ಲಿ ಚರ್ಚೆಗಳಾಗ್ತಿದ್ವು. 
ಎಲ್ಲಿಲ್ಲಿ ಬಿಟ್ಟಿ ಗಿಡಗಳು ಸಿಗ್ತಾವೋ ಅಲ್ಲೆಲ್ಲಾ ಅಡ್ಡಾಡ್ತಿದ್ವಿ. ಗಿಡಗಳು ಸಿಕ್ಕಾಗ ಅವುಗಳನ್ನ ಎಚ್ಚರಿಕೆಯಿಂದ ಕಿತ್ತು ತರ್ತಿದ್ವಿ.

ಬರೀ ಮಾವಿನ ಗಿಡ, ನಿಂಬೆ ಗಿಡ ಮಾತ್ರ ಅಲ್ಲಾ. ಹಲಸಿನ ಗಿಡ, ಪೇರ್ಲ ಗಿಡ, ಪಪಾಯ ಗಿಡ, ಹೀಗೇ..ಹಣ್ಣಿನ ಗಿಡಗಳು, ಹೂವಿನ ಗಿಡಗಳನ್ನೆಲ್ಲಾ ಹುಡುಕ್ತಿದ್ವಿ. ತಂದು ಪ್ಯಾಕ್ ಮಾಡಿಟ್ಟು,  ನಂತರ ಮನೆಯ ಹಿತ್ತಲಲ್ಲಿ ಬೆಳಸೋದು ಒಂದು ಹವ್ಯಾಸವಾಗಿತ್ತು.

ಅವನ್ನ ಬೇರೇ ಯಾರಾದ್ರೂ ಕದ್ದು ಬಿಟ್ರೆ? 

ಹ್ದೌದು. ಅದಿಕ್ಕೆ ಅಂತ ನಾವು ಯಾವಾಗ್ಲೂ ಒಂದು ಕಣ್ಣಿಟ್ಟಿರ್ತಿದ್ವಿ 
ನಮ್ಮ ಹಿತ್ತಲಲ್ಲಿ ಒಂದ್ ಗಿಡದ ಜಾಗ ಬದಲಾಗಿದ್ರೂ ನಮ್ಗೆ ಗೊತ್ತಾಗ್ಬಿಡ್ತಿತ್ತು. ಯಾವ್ದಾದ್ರೂ ಒಂದು ಗಿಡ ನಾಪತ್ತೆ ಆದ್ರೂ ಯಾರು ಕದ್ದಿರ್ಬೌದು? ಅಂತ ತಲೆ ಕೆಡಿಸ್ಕೊಳ್ತಿದ್ವಿ. ಊರಲ್ಲಿ ಉಳ್ದವ್ರ ಮನೆ ಇತ್ತಲಲ್ಲಿ ಮಾತ್ಯಾರ್ಯಾರು ಗಿಡ ಸಾಕ್ತಿದಾರೆ ಅಂತ ಒಂದು ಸರ್ವೇ ಮಾಡ್ತಿದ್ವಿ. ಆಮೇಲೆ ಆ ಜಾಗಗಳಿಗೆ ಹೋಗಿ ಪೂರ್ತಿ ಚೆಕ್ ಮಾಡಿ, ನಮ್ಮ ಗಿಡ ಬೇರೆ ಎಲ್ಲಾದ್ರೂ ಸಿಕ್ರೆ ಅದನ್ನ ಎತ್ಗಂಡು ಬರ್ತಿದ್ವಿ. 

~~~~( * ) ~~~~
ಸಶೇಷ...

blogspot add widget