ಭಾನುವಾರ, ಫೆಬ್ರವರಿ 28, 2010

ಪ್ರತಿಕಾರ ಹೋರಾಟದಲ್ಲಿ ಹಸ್ತಕ್ಷೇಪ ಮಾಡಬೇಡಿ

ಸುಮಾರು ೮ ತಿಂಗಳ ಹಿಂದೆ ಓದಲು ಆರಂಬಿಸಿ, ನಂತರ ಹಲವಾರು ವಿವಿದ ಕಾರಣಗಳಿಂದಾಗಿ ಆ ಪುಸ್ತಕವನ್ನ ಓದುವುದನ್ನ ಅರ್ಧಕ್ಕೇ ನಿಲ್ಲಿಸಿ ಬಿಟ್ಟಿದ್ದೆ. ಆದರೆ ನಿನ್ನೆ ರಾತ್ರಿ ಅದೇಕೋ ಮತ್ತೆ ಆ ಪುಸ್ತಕವನ್ನ ಓದುವುದನ್ನ ಮುಂದುವರಿಸಿದೆ. ನಿನ್ನೆ ತಡ ರಾತ್ರಿವರೆಗೆ ಓದಿದೆ, ರಾತ್ರಿ ಕೆಲವು ವಿಡಿಯೋ ದೃಶ್ಯಗಳನ್ನ ಯೂಟ್ಯುಬಿನಲ್ಲಿ ವೀಕ್ಷಿಸಿದ್ದೆ. ಅದೇ ಗುಂಗಿನಲ್ಲಿ ಬೆಳಗ್ಗೆ ತಡವಾಗಿ ಎದ್ದರೂ, ಇಂದಿನ ದಿನಾಂಕವನ್ನ ಗಮನಿಸಿದಾಗ, ಒಂದು ಕಾಕತಾಳೀಯ ಅಂಶ ನನ್ನ ಗಮನಕ್ಕೆ ಬಂತು. ಅದೆಂದರೆ ಗುಜರಾತ್ - ಗೋಧ್ರಾ ನಗರದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ದುರ್ಘಟನೆಗೆ ಇಂದು ೯ ನೇ ವಾರ್ಷಿಕೋತ್ಸವ. 
ಇದಿಷ್ಟು ಇಂದಿನ ನನ್ನ ಬರಹಕ್ಕೆ ಬರೀ ಪೀಠಿಕೆ ಮಾತ್ರ.

ಪುಸ್ತಕದ ಹೆಸರು : "ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ".
ಲೇಖಕರು : ಪ್ರತಾಪ್ ಸಿಂಹ. http://pratapsimha.com/ , ವಿಜಯ ಕರ್ನಾಟಕ.

ಮೇಲೆ ಸೂಚಿಸಿರುವ ಘಟನೆಗೆ ಸಂಭಂದಿಸಿದಂತೆ ಈ ಪುಸ್ತಕದಲ್ಲಿ ವಿವರಣೆಗಳಿವೆ. ಇವುಗಳನ್ನ ನೇರವಾಗಿ ಪುಸ್ತಕದಿಂದ ಇಲ್ಲಿಗೆ ಇಳಿಸಿದ್ದೇನೆ.

~~~~(೦)~~~~
.....೨೦೦೨, ಪೆಬ್ರವರಿ ೨೭ ರಂದು ಪೈಜಾಬಾದ್‌ನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಪೂರ್ವನಿಯೋಜಿತ ದಾಳಿ ನಡೆಯಿತು. ಗೋಧ್ರಾ ಬಳಿ ನಡೆದ ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ ೫೮ ಜನರು ಸಜೀವ ದಹನವಾದರು,
...
...
ಮೋದಿ ಚುನಾವಣೆಯಲ್ಲಿ ಗೆದ್ದ ಮೂರೇ ದಿನಗಳಲ್ಲಿ ಗೋಧ್ರಾ ಘಟನೆ ನಡೆದಿದ್ದೇಕೆ? ಅದು ಕಾಕತಾಳೀಯವೇ? ಅಥವಾ ಪೂರ್ವನಿಯೋಜಿತವೇ?
...
ಪೆಬ್ರವರಿ ೨೭ ರ ಬೆಳಗ್ಗೆ ಏನಾಯಿತು ಎಂಬುದನ್ನು ಗಮನಿಸೋಣ.
೭.೪೨ - ಸಾಬರ ಮತಿ ಎಕ್ಸ್‌ಪ್ರೆಸ್ ರೈಲು ಗೊಧ್ರಾ ನಿಲ್ದಾಣಕ್ಕೆ ಆಗಮನ.
೭.೪೭ - ಮುಂದಕ್ಕೆ ಹೊರಡಲು ಪ್ರಾರಂಬ. ಆದರೆ ರೈಲ್ವೇ ನಿಲ್ದಾಣದಲ್ಲಿ ಹೊತ್ತು ಮಾರುವವರು ಕಲ್ಲು ತೂರಾಟ ಆರಂಭಿಸುತ್ತಾರೆ,
೭.೫೦ - ರೈಲಿನ ಚೈನು ಎಳೆಯಲಾಗುತ್ತದೆ,
೮.೦೦ - ಎರಡನೇ ಬಾರಿಗೆ ಚೈನನ್ನು ಎಳೆಯುತ್ತಾರೆ.
೮.೦೭ - ರೈಲನ್ನು ಸುತ್ತುವರಿದ ದೊಡ್ಡ ಗುಂಪೊಂದು ಎಸ್-೬ ಭೋಗಿದೆ ಬೆಂಕಿ ಹಚ್ಚಿತು.

ಈ ಘಟನೆಯ ಬಗ್ಗೆ ಸತ್ಯಶೋಧನೆ ಮಾಡುವ ಸಲುವಾಗಿ ಸಂಪಾದಕರ ತಂಡವೊಂದು ಗುಜರಾತಿಗೆ ತೆರೆಳಿತು. ಅದನ್ನು "ಸೆಕ್ಯುಲರ್‌ ಮಿಷನ್" ಎಂದು ಕರೆಯಬಹುದು. ಏಕೆಂದರೆ ಮುಂಭೈನ ಮಿಡ್ ಡೇ ಪತ್ರಿಕೆಯ ಸಂಪಾದಕ ಆಕಾರ್ ಪಟೇಲ್, ಖ್ಯಾತ ಪತ್ರಕರ್ತ ಬಿ.ಜಿ. ವರ್ಗೀಸ್ ಹಾಗೂ ದಿಲೀಫ್ ಪಡಗಾಂವ್ ಕರ್ ಆ ತಂಡದಲ್ಲಿದ್ದರು.

"ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ ವಿಳಂಬವಾಗಿ ಸಾಗುತ್ತಿತ್ತು. ಹಾಗೆ ಸಾಗುತ್ತಿದ್ದ ರೈಲಿಗೆ ಪೆಬ್ರವರಿ ೨೭ ರ್ ಬೆಳಗ್ಗೆ ೮ ಗಂಟೆಗೆ ಗೋಧ್ರಾ ಬಳಿ ಬೆಂಕಿ ಹಚ್ಚಲಾಯಿತು.
....
....
....
ಈ ಮಧ್ಯೆ ಅನಾಮಧೇಯ ಇ-ಮೇಲೊಂದು ಎಲ್ಲರಿಗೂ ಬರಲಾರಂಬಿಸಿತು. ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದ ಸ್ಥಳೀಯ ವರದಿಗಾರರಾದ ಅನಿಲ್ ಮತ್ತು ನೀಲಮ್ ಸೋನಿ ಎಂಬವರ ವೃತ್ತಿ ಮತ್ತು ದೂರವಾಣಿ ಸಂಖ್ಯೆಗಳನ್ನು ಆ ಇ-ಮೇಲ್ ನಲ್ಲಿ ಉಲ್ಲೇಖಿಸಲಾಗಿತ್ತು. ಅದರಲ್ಲಿ ಕರಸೇವಕರು ಹಾಗೂ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿತ್ತಿದ್ದ ಅಲ್ಪಸಂಖ್ಯಾತ ಸಮುದಾಯದವರ ನಡುವೆ ಘರ್ಷಣೆಯೋಂದು ನಡೆಯಿತು. ಅಲ್ಲದೇ ಮುಸ್ಲಿಂ ಸಮುದಾಯದ ಬಾಲಕಿಯೊಬ್ಬಳ ಮೇಲೆ ಕರಸೇವಕರು ಲೈಂಗಿಕ ದೌರ್ಜನ್ಯ ನಡೆಸಿದ ಕಾರಣ ಕೋಪೋದ್ರಿಕ್ತ ಅಲ್ಪಸಂಖ್ಯಾತರು ಕರಸೇವಕರಿದ್ದ ಎಸ್-೧೬ ಬೋಗಿಯ ಮೇಲೆ ಕಲ್ಲು ತೂರಾಟ ಆರಂಬಿಸಿದರು, ಕೊನೆಗೆ ಬೆಂಕಿ ಹಚ್ಚಲಾಯಿತು" ಎಂದು ವಿವರಿಸಲಾಗಿತ್ತು.
ಇದು ಸಂಪಾದಕರ ತಂಡ ನೀಡಿದ ವರದಿ. ಆದರೆ ಈ.ಮೇಲ್‌ನ್ನು ಕಳುಹಿಸಲು ಆರಂಬಿಸಿದ್ದು ಯಾರು, ಯಾವಾಗ ಎಂಬುದು ಮಾತ್ರ ಸ್ಪಷ್ಟವಾಗಲಿಲ್ಲ. ಈ ಬಗ್ಗೆ ಅನಿಲ್ ಮತ್ತು ನೀಲಮ್ ಸೋನಿಯವರನ್ನೇ ಪ್ರಶ್ನಿಸಿದಾಗ, ನಾವು ಅಂತಹ ಯಾವುದೇ ವರದಿಯನ್ನೂ ಮಾಡಿಲ್ಲ ಎಂದರು. ನಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಪ್ರತಿಮಾದಿಸಿದರು.ಹಾಗಾದರೆ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನರಿಗೆ ಕಳುಹಿಸಲಾದ ಈ.ಮೇಲ್ ಸೃಷ್ಟಿಯಾಗಿದ್ದು ಹೇಗೆ? ಅಷ್ಟೋಂದು ಶೀಘ್ರವಾಗಿ ಸುಳ್ಳಿನ ಸರಮಾಲೆಯನ್ನು ಹರಡಲು ಯತ್ನಿಸಿದ್ದು ಯಾವ ಉದ್ದೇಶಕ್ಕಾಗಿ? ಯಾರ ಹಿತಾಸಕ್ತಿಗಾಗಿ? ಅದಿರಲಿ, ಕರಸೇವಕರು ಅತ್ಯಾಚಾರವೆಸಗಿದ್ದಾರೆನ್ನಲಾದ ೧೬ ವರ್ಷದ ಮುಸ್ಲಿಂ ಯುವತಿ ಎಲ್ಲಿ ಹೋದಳು? ಈ ಬಗ್ಗೆ ಯಾವ ಉತ್ತರವೂ ಇಲ್ಲ. ಸೆಕ್ಯುಲರ್ ಮಾಧ್ಯಮಗಳಿಗೆ ಉತ್ತರವೂ ಬೇಕಿಲ್ಲ. ಮೋದಿಯವರನ್ನು ನಿಂದಿಸಲು ನೆಪವೊಂದು ಬೇಕಿತ್ತಷ್ಟೆ.

"೨೦೦೨, ಪೆಬ್ರವರಿ ೨೭ರ ರಾತ್ರಿ ಉನ್ನತ ಅಧಿಕಾರಿಗಳನ್ನು ಕರೆಸಿಕೊಂಡ ಮೋದಿ, ಹಿಂದೂಗಳ ಪ್ರತಿಕಾರ ಹೋರಾಟದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ನಿರ್ದೇಶನ ನೀಡಿದರು. ಇಂತಹ ಮಾಹಿತಿಯನ್ನು ನೀಡಿದ್ದು ಮೋದಿ ಸಂಪುಟದಲ್ಲಿದ್ದ ಸಚಿವರೊಬ್ಬರು" ಎಂದು ಔಟ್‌ಲುಕ್ ಪತ್ರಿಕೆ ಪ್ರತಿಪಾದಿಸಿತು.
ಆದರೆ ನಡೆದಿದ್ದೇನು?
೧. ....
೨. ....
೩. ....
೪. ....
೫. ...
೬....
೭....
೮....
೯...
೧೦...
೧೧...
೧೨...
೧೩...
೧೪...
ಹೀಗೆ ಎಲ್ಲ್ ರೀತಿಯ ಮುಂಜಾಗ್ರತೆಗಳನ್ನು ತೆಗೆದುಕೊಂಡ ಮೋದಿಯವರನ್ನು ಸೆಕ್ಯುಲರ್ ಮಾದ್ಯಮಗಳು, ವಾದಿಗಳು ದೂರುವುದರಲ್ಲಿ ಯಾವ ಅರ್ಥವಿದೆ? ಒಂದು ವೇಳೆ ಮೋದಿಯವರಿಗೆ ಅಲ್ಪಸಂಖ್ಯಾತರ ಬಗ್ಗೆ ಯಾವ ಕಾಳಜಿಯೂ ಇರದಿದ್ದರೆ ಅರೆಸೇನಾ ಪಡೆಗಳು, ಶೀಘ್ರ ಪ್ರಹಾರ ದಳ ಹಾಗೂ ಸೇನೆಯನ್ನು ಏಕೆ ನಿಯೋಜಿಸುತ್ತಿದ್ದರು? ಗುಜರಾತ್ ವಿಧಾನಸಭೆಯ ಅಧಿವೇಶನವನ್ನು ಅರ್ಧದಲ್ಲೇ ಬಿಟ್ಟು ಮೋದಿ ಫೆಬ್ರವರಿ ೨೭ ರಂದು ಗೋಧ್ರಾಕ್ಕೆ ಧಾವಿಸುತ್ತಿದ್ದರೆ? ಇಷ್ಟಾಗಿಯೂ ಗುಜರಾತ್ ಜನರ ಬಗ್ಗೆ ಮಾದ್ಯಮಗಳು ಮತ್ತು ಸೆಕ್ಯುಲರ್ ವಾದಿಗಳು ಟೀಕಾಪ್ರಹಾರ ಮಾಡಿದವು. ಇದು ಗುಜರಾತಿಗಳಿಗೆ ನೋವುಂಟುಮಾಡಿತು.


~~~~(೦)~~~~
ಹೆಚ್ಚಿನ ಆಸಕ್ತಿ ಇರುವವರು, ನರೇಂದ್ರ ಮೋದಿಯವರ ಬಗ್ಗೆ ಇನ್ನೂ ಹೆಚ್ಚು ತಿಳಿದು ಕೊಳ್ಳವ ಕುತೂಹಲವಿರುವವರು ಪುಸ್ತಕವನ್ನ ತಪ್ಪದೇ ಓದಿ. ಪುಸ್ತಕವು ಲೇಖಕರ ತಾಣದಲ್ಲಿ ಉಚಿತವಾಗಿ ಲಭ್ಯವಿದೆ
ನರೇಂದ್ರ ಮೋದಿಯವರ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಜೊತೆ ಜೊತೆಗೆ ಅವರ ಹೋರಾಟಕ್ಕೆ ಸಂಭಂದಿಸಿದ ಹಾಗೂ ನಾವು-ನೀವು ತಿಳಿದು ಕೊಂಡಿರುವ ಅಥವ ತಿಳಿದು ಕೊಂಡಿರದ ಅನೇಕ ವಿಚಾರಗಳು ಈ ಹೊತ್ತಗೆಯಲ್ಲಿ ಸಿಗುತ್ತವೆ. 

ಘಟನೆಯ ನಂತರ ಘಟನೆಯ ಬಗ್ಗೆ ಅನೇಕ ಸುದ್ದಿ ಮಾದ್ಯಮಗಳು ಮೋದಿಯವರನ್ನ ಸಂದರ್ಶನ ನಡೆಸಿವೆ. ಒಂದೆರಡು ಕೊಂಡಿಗಳನ್ನ ಇಲ್ಲಿ ತಿಳಿಸಿದ್ದೇನೆ.
http://www.youtube.com/watch?v=ARTh48Iam9I
http://www.youtube.com/watch?v=TP1QFcvIg9c

5 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ಈಗಷ್ಟೇ ಪ್ರತಾಪ್ ಸಿಂಹರವರು ವಿಜಯ ಕರ್ನಾಟಕದಲ್ಲಿ ಬರೆದ "ಮೈ ನೇಮ್ ಇಸ್ ಖಾನ್" ಲೇಖನ ಓದಿದೆ.....ಮಸ್ತ್ ಆಗಿತ್ತು...ಜೊತೆಗೆ ಇನ್ನಷ್ಟು ಉಣಬಡಿಸಿದ್ದೀರ.....
ಚೆಂದದ ಬರಹ...

Me, Myself & I ಹೇಳಿದರು...

ವಂದನೆಗಳು ಮಹೇಶ್.

ಸಾಗರದಾಚೆಯ ಇಂಚರ ಹೇಳಿದರು...

ಇದೊಂದು ಓದಲೇಬೇಕಾದ ಪುಸ್ತಕ
ನಾನು ಓದಿ ಬಹಳಷ್ಟು ಪ್ರಭಾವಿತನಾಗಿದ್ದೇನೆ
ಮತ್ತೊಮ್ಮೆ ನೆನಪಿಸಿದ್ದಕ್ಕೆ ವಂದನೆಗಳು

Me, Myself & I ಹೇಳಿದರು...

ಗುರುಮೂರ್ತಿಯವರೇ?
ಭಾರತದಂತ ಉಪಖಂಡದಲ್ಲಿ, ಒಬ್ಬ ಸಾಮಾನ್ಯ ಪ್ರಜೆಗಳಾಗಿ
೧: ನಾವೆಲ್ಲಾ ಏನೆಲ್ಲಾ ಸಾಧಿಸಬಹುದು ಮತ್ತು
೨. ಸರ್ಕಾರಗಳಿಂದ ಏನೆಲ್ಲಾ ಸಹಾಯವನ್ನ ಅಪೇಕ್ಷಿಸಬಹುದು ಹಾಗೂ
೩. ಸರ್ಕಾರಗಳು ಪ್ರಜೆಗಳಿಗೆ ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನ ಮಾಡಿಕೊಡಬಹುದು
ಈ ಎಲ್ಲಾ ಅಂಶಗಳನ್ನ ನಾವು ಗುಜರಾತ ರಾಜ್ಯದ ಜನತೆಯನ್ನ ಹಾಗೂ ಅಲ್ಲಿನ ಮೋದಿ ಸರ್ಕಾರವನ್ನ ನೋಡಿ ಕಲಿಯಬಹುದು. ಅಲ್ಲವಾ ?

ಒಂದು ಆದರ್ಶ ರಾಜ್ಯವನ್ನ ಕಟ್ಟಿಕೊಟ್ಟಿರುವ ನರೇಂದ್ರಮೋದಿಯವರಿಗೆ ಸಲಾಂ..

take a look at this http://www.narendramodi.in/

ಮನಸು ಹೇಳಿದರು...

good info... pratp is a good writer.

blogspot add widget