ಗುರುವಾರ, ಮಾರ್ಚ್ 17, 2011

ಜಪಾನ್ ಸುನಾಮಿ

ಕಡಲಾಳದಿ ಭೂಮಿಯ ಕಂಪನ
ದಡದಲ್ಲಿ ಸುನಾಮಿ ಅಲೆಗಳ ರುಧ್ರನರ್ತನ
ಮನೆ-ಮಾಳಿಗೆಗಳೆಲ್ಲಾ ನೆಲ ಸಮ
ಬೀದಿಗೆ ಬಂದಿದೆ ಜಪಾನಿನ ಜನ-ಜೀವನ
 
ಫಸರುತಿದೆ ಈಗ ರೇಡಿಯೋ ವಿಕಿರಣ
ಜಾಗತಿಕ ಅರ್ಥವ್ಯವಸ್ಥೆಯೂ ಸಂಕೀರ್ಣ
ಕಡಲಾಳದ ಭೂಕಂಪನ, ಇದಕೆಲ್ಲಾ ಕಾರಣ
ದೂಷಿಸದಿರಿ ಅದಕಾಗಿ ಪೂರ್ಣ-ಚಂದ್ರನ

ಅಲ್ಲಿರುವವರೂ ನಮ್ಮವರೇ ಜನ
ಅವರಿಗಾಗಿ ಮರುಕಿತು ಮನ
ಸಾಧ್ಯವಾದರೆ ನೀಡಿ ಸಹಾಯ ಧನ
ಮೂಡಲಿ ಭರವಸೆಗಳ ಹೊಸ ಆಶಾಕಿರಣ

ಇಲ್ಲಿದೆ ನೋಡಿ ಇದೆಲ್ಲದರ ಚಿತ್ರಣ

-
ಲೋಹಿತ್

ಕಾಮೆಂಟ್‌ಗಳಿಲ್ಲ:

blogspot add widget