~~~~ (*) ~~~~
ಈಗ ಮತ್ತೋಂದು ಸುಲಭ ಉದಾಹಾರಣೆಯನ್ನ ತಗೋಳ್ಳಾಣ. ಸುಮಾರು ೧೯೯೮ ರಲ್ಲಿ ರಷ್ಯದ ಅರ್ಥ ವ್ಯವಸ್ಥೆಯಲ್ಲಿ ಒಂದು ಬಾರೀ ಬಿರುಗಾಳಿಯೇ ಬೀಸಿತ್ತು. ಅದ್ರ ಪರಿಣಾಮವಾಗಿ ರಷ್ಯದಲ್ಲಿ ಎಲ್ಲಾ ಉತ್ಪನ್ನಗಳ ದರ ಇದ್ದಕ್ಕಿದ್ದಂತೆ ಗಗನಕ್ಕೇರಿದ್ವು, ಇದನ್ನ ನನ್ನ ಒಬ್ಬ ಸ್ನೇಹಿತ ತನ್ನ ಮಾತಲ್ಲಿ ಹೀಗೆ ಹೇಳಿದ್ದ ಅಂತ ಇಲ್ಲಿ ಬರ್ದಿದ್ದೀನಿ.
"ನಾನು ಆಗ ಹದಿನಾರು ವರ್ಷದವನಿದ್ದೆ. ನನಗೆ ಕಂಪ್ಯುಟರ್ ಕೊಡ್ಸಿ ಅಂತ ಮನೆಯಲ್ಲಿ ತುಂಬಾ ದಿನದಿಂದ ಹಟ ಮಾಡ್ತಿದ್ದೆ. ನನ್ನ ಹುಟ್ಟುಹಬ್ಬದ ಕೊಡುಗೆಯಾಗಿ ನನಗೆ ಕಂಪ್ಯುಟರ್ ಕೊಡ್ಸಿದ್ರು. ಅದಕ್ಕೆ ಆಗ ಸುಮಾರು ಎಳ್ನೂರು ಅಮೇರಿಕನ್ ಡಾಲರ್ ಬೆಲೆ ಇತ್ತು, ಅಪ್ಪ, ಅಮ್ಮ, ಚಿಕ್ಕಪ್ಪ ಎಲ್ಲ ಸೇರಿ ಕೊಡ್ಸಿದ್ರು. ಇದಾಗಿ ಒಂದೇ ತಿಂಗ್ಳಲ್ಲಿ ನಮ್ಮ ರಬೆಲ್ಸ್ (ರಷ್ಯಾದ ದುಡ್ಡಿನ ಹೆಸರು)
ಬೆಲೆ ನೆಲ ಕಚ್ತು. ಎಳ್ಣೂರು ಅಮೇರಿಕನ್ ಡಾಲರ್ ಕೊಟ್ಟು, ಒಂದು ತಿಂಗ್ಳ ಹಿಂದೆ ಖರೀದಿಸಿದ್ದ ನನ್ನ ಕಂಪ್ಯುಟರ ಬೆಲೆ ಒಂದು ತಿಂಗ್ಳ ಅಂತರದಲ್ಲಿ ಹತ್ತು ಪಟ್ಟು ಹೆಚ್ಚಾಗಿತ್ತು. ಆ ದಿನ ನಾನು ಹಟ ಮಾಡ್ದೆ ಇದ್ದಿದ್ರೆ, ನನ್ನ ಕಂಪ್ಯುಟರ್ ತೊಗೊಳ್ಳೊಕ್ಕೆ ಮುಂದೆ ಇನ್ನೂ ಐದು ವರ್ಷನಾದ್ರೂ ಕಾಯ್ಬೇಕಿತ್ತು ಅನ್ಸುತ್ತೆ."
ಇದೊಂದು ಉದಾಹರಣೆಯಷ್ಟೇ. ಈಗ ನನ್ನ ಸ್ನೇಹಿತನ ಜಾಗ್ದಲ್ಲಿ ನೀವಿದ್ದಿದ್ರೆ? ಊಹಿಸಿಕೊಳ್ಳಿ ನಿಮಗೇನೇ ಎಲ್ಲಾ ಅರ್ಥ ಆಗುತ್ತೆ... http://en.wikipedia.org/wiki/1998_Russian_financial_crisis
ರಷ್ಯಾದ "ರಬೆಲ್ಸ್" ತರ ನಮ್ಮ "ರುಪಾಯಿ" ಮೌಲ್ಯನೂ ರಾತ್ರಿ ಕಳ್ದು ಬೆಳ್ಕಾಗೋದ್ರಲ್ಲಿ ಈ ರೀತಿ ಏನಾದ್ರೂ ಠುಸ್ಸೆಂದಿದ್ರೆ ನಮ್ಗೆ ಆಗ ಅದ್ರ (ದುಷ್)ಪರಿಣಾಮ ಏನು ಅಂತ ಸರ್ಯಾಗಿ ಮನವರ್ಕೆ ಆಗ್ತಿತ್ತು. ಅದು ಕ್ರಮೇಣವಾಗಿ ಹಂತ ಹಂತವಾಗಿ ಪಲ್ಟಿ ಹೋಡಿತಿರೋದ್ರಿಂದ ನಮ್ಗೆ ಅದಕ್ಕೆ ತಕ್ಕಂತೆ ಹೊಂದಿ ಕೊಂಡು ಹೋಗೋ ಗುಣನೂ ಬೆಳಿತಾ ಇದೆ ಅನ್ಸುತ್ತೆ. ಇಲ್ದೇ ಹೋಗಿದ್ರೆ ರುಪಾಯಿ ಮೌಲ್ಯವನ್ನ ಹೇಗೆ ಕಾಪಾಡ್ಕೋ ಬೇಕು ಅಂತ ಜ್ಞಾನನಾದ್ರೂ ಬೆಳೆಸ್ಕೋಳ್ತಿದ್ವಿ ಅಲ್ವ?.
ಹಣದುಬ್ಬರ ಅಂದ್ರೆ ಸಾಮಾನ್ಯ ಮನುಷ್ಯನಿಗೆ ಏನರ್ಥ? ಅಂತೇಳಿ ತಿಳಿಯಾಗಿ ತಿಳ್ದಿದೀವಿ. ಈಗ ಅದೇ ಜಾಗತಿಕ ಮಟ್ಟದಲ್ಲಿ ಇದರ ಅರ್ಥ ಏನು ಅಂತ ತಿಳ್ಕೋಳ್ಳೊಣ.
ಹಣದುಬ್ಬರ ಹೆಚ್ಚಾದ್ರೆ, ನಮ್ಮ ದೈನಂದಿನ ಅವಶ್ಯಕತೆಗಳಾದ ಅಕ್ಕಿ, ಬೇಳೆ, ಹಾಲು ಹೀಗೇ ಎಲ್ಲಾದರ ಬೆಲೆಯೂ ಗಗನೆಕ್ಕೇರಿ ಬಿಟ್ತಾವೆ. ಅದಕ್ಕೆ ತಕ್ಕಂತೆ ಇದ್ದಕ್ಕಿದ್ದಂತೆ ನಮ್ಮ ಆದಾಯವೇನೂ ಹೆಚ್ಚಾಗೋಲ್ಲ. ಆದ್ರೆ ಖರ್ಚು ಮಾತ್ರ ಬೆಳಿತಾನೇ ಇರ್ತದೆ. ಇಂತಹ ಪರಿಸ್ಥಿತಿ ಒಂದು ಮದ್ಯಮ ವರ್ಗದ ಕುಟುಂಬಕ್ಕೆ ಎದುರಾದ್ರೆ ಹೇಗಿರುತ್ತೆ ಅಂತ ಊಹೆ ಮಾಡ್ಕೋಬಹುದು. ಮಾಡ್ಕೋಂತೀರ ತಾನೆ?
ಇಂತಹ ಪರಿಸ್ಥಿತಿ ಒಂದು ದೇಶಕ್ಕೇನೆ ಎದುರಾದ್ರೆ ಹೇಗಿರುತ್ತೆ ಯೋಚ್ನೆ ಮಾಡಿ ಈಗ?
ಹೌದು, ನಾನು ಹಿಂದಿನ ಬರಹದಲ್ಲಿ ತಿಳ್ಸಿದಿನಲ್ಲ? ಇಂದಿರಮ್ಮನ ಹಸಿರು ಕ್ರಾಂತಿ ಬಗ್ಗೆ! ಅದರ ಹಿಂದಿನ ಕಥೆಯೇ ಹಾಗಿತ್ತು. ಸುಮ್ಮನೆ ಹಸಿರು ಕ್ರಾಂತಿಗೆ ಕೈ ಹಾಕಿದ್ದಲ್ಲ. ಜನ ಹೊಟ್ಟೆಗೆ ಹಿಟ್ಟು ಸಹ ಇಲ್ದೇ ಸಾಯ್ತಾ ಇದ್ದಂತ ಪರಿಸ್ಥಿತಿ ಇತ್ತು ಹಾಗ.
ಮೊದ್ಲೇ ನಮ್ಮನ್ನ ಕೊಳ್ಳೇ ಹೊಡ್ದಿದ್ದಾ ಬ್ರಿಟೀಷರ ಮುಷ್ಠಿಯಿಂದ ಆಗ್ತಾನೆ ಬಿಡಿಸಿ ಕೊಂಡು ಹೊರಗೆ ಬಂದಿದ್ದಾ, ಸ್ವಾತಂತ್ರ ಭಾರತಕ್ಕೆ, ಎದುರಾದ ಅತೀ ಗಂಭೀರ ಸಮಸ್ಯೆಗಳು ಅನೇಕ, ಅದ್ರಲ್ಲಿ ಅತೀ ಮುಖ್ಯವಾದವು ಅಂದ್ರೆ
* ಪಾಕಿಸ್ಥಾನದ ಜೊತೆಗೆ ಪದೆ ಪದೆ ಗಡಿ ಸಮಸ್ಯೆಯ ಯುದ್ದ,
* ಚೀನಾದ ಜೊತೆಗೆ ಯುದ್ದ,
* ಇವೆರ್ಡು ಸಾಲ್ದಕ್ಕೆ ಬುಲೆಟ್ ವೇಗದಲ್ಲಿ ಬೆಳಿತಿದ್ದಾ ಜನಸಂಖ್ಯೆ,
* ಜೊತೆಗೆ ನಮ್ಮ ಉನ್ನತ ರಾಜಕಾರಣಿಗಳ ಕೆಲ್ವು ತಪ್ಪು ತಪ್ಪು ನಿರ್ದಾರಗಳು
* ಅನಕ್ಷರತೆ, ಬಡತನ, ನಿರುದ್ಯೋಗ,
ಹೀಗೇ ಎಲ್ಲಾ ಸೇರಿ ಸಮಾಜದ ಸಮತೋಲನವೇ ತಪ್ಪಿ ಹೋಗಿತ್ತು. ನಮ್ಮ ಅರ್ಥ ವ್ಯವಸ್ಥೆಯೇ ಕೊಚ್ಚಿ ಹೋಗಿತ್ತು.
ಇಂತಿಪ್ಪ ನಮ್ಮ ಕೇಂದ್ರ ಸರ್ಕಾರದಲ್ಲಿ ಕ್ರಮೇಣ ಬಾರೀ ಬೆಳ್ವಣಿಗೆಗಳು ಶುರುವಾದ್ವು. ಕೇವ್ಲ ಸರ್ಕಾರದಿಂದ ಎಲ್ಲ ಅಗತ್ಯಗಳನ್ನೂ ಪೂರೈಸೋದು ಕಷ್ಟ ಸಾದ್ಯ ಅಂತ ಮನವರಿಕೆ ಆಯ್ತು. ಹೀಗಾಗಿ ಕೆಲ್ವು ಉದ್ಯಿಮೆಗಳಲ್ಲಿ ಸಾಕಷ್ಟು ಸೇವೆಗಳನ್ನ ಉದಾರೀಕರಣದ ಗಾಳಿ ಬೀಸ್ತು.
* ದೂರಸಂಪರ್ಕಸೇವೆಗಳಲ್ಲಿ ಉದಾರೀಕರಣ
* ದೂರದರ್ಶನ ಸೇವೆಯಲ್ಲಿ ಸಾಧನೆ
* ಬ್ಯಾಂಕ್ ಸೇವೆಗಳಲ್ಲಿ ಉದಾರೀಕರಣ
ಖಾಸಗಿಯವ್ರಿಗೂ ಸಾಮಾಜಿಕ ಜವಬ್ದಾರಿಗಳಲ್ಲಿ ಪಾಲ್ಗೋಳ್ಳೋ ಅವ್ಕಾಶ ಕೊಡೋ ವ್ಯವಸ್ಥೆಗೆ ಸಾಕಷ್ಟು ಪ್ರೋತ್ಸಾಹನೂ ಸಿಕ್ತು. ಇದೆಲ್ಲಾ ಹೆಚ್ಚಾಗಿ ನಡ್ದದ್ದು ಇಂದಿರಮ್ಮನ ಕಾಲ್ದಲ್ಲಿ.
ಇದೇ ದಿಶೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ೧೯೯೧ ರಲ್ಲಿ ನಮ್ಮ ಪ್ರಧಾನಮಂತ್ರಿಗಳಾಗಿದ್ದ ಪಿ.ವಿ ನರಸಿಂಹರಾವ್ ಹಾಗೂ ಆಗ ಇವ್ರ ಸಂಪುಟದಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಈಗಿನ ಪ್ರಧಾನಮಂತ್ರಿಗಳಾದ ಮನ ಮೋಹನ ಸಿಂಗ್ ಇವ್ರೆಲ್ಲಾ ಸೇರಿ ಮತ್ತೋಂದು ಹೊಸ ಹೆಜ್ಜೆ ಇಟ್ರು. ಏನಪ್ಪಾ ಅದು ಅಂದ್ರೆ, ನಮ್ಮ ದೇಶದ ಮಾರುಕಟ್ಟೆಯನ್ನ ಹೊರದೇಶದವ್ರಿಗೂ ಮುಕ್ತಗೊಳಿಸಿದ್ರು. ಅಂದ್ರೆ, ಇತರೇ ದೇಶದವ್ರು ಸಹ ನಮ್ಮಲ್ಲಿ ಹಣವನ್ನ ಹೂಡಿಕೆ ಮಾಡ್ಬೌದು ಅಂತೇಳಿ ಅವ್ಕಾಶ ಮಾಡಿ ಕೊಟ್ರು.
~~~(*)~~~
ಸಶೇಷ...
4 ಕಾಮೆಂಟ್ಗಳು:
ಲೋದ್ಯಾಶಿ ಸರ್
ತುಂಬಾ ಸರಳವಾಗಿ ತಿಳಿಸಿದ್ದಿರಿ
ಹೀಗೆಯೇ ಮುಂದಿನ ಸಂಚಿಕೆಗೆ ಕಾಯುತ್ತಿರುತ್ತೇವೆ
ಲೋದ್ಯಾಶಿ ಸರ್,
ನೀವು ಹಣಕಾಸಿನ ವಿಚಾರವನ್ನು ತುಂಬಾ ಚೆನ್ನಾಗಿ ಅದರಲ್ಲೂ ಸರಳವಾಗಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬರೆಯುತ್ತಿರಿ...ಇದನ್ನು ಖಂಡಿತ ಮುಂದುವರಿಸಬೇಕು.
ಮಿತ್ರ ಗುರುರವರೆ
ನಿಮ್ಮ ಕುತೂಹಲ ಹಾಗೂ ಪ್ರೊತ್ಸಾಹಕ್ಕೆ ಧನ್ಯವಾದಗಳು.
ಮಿತ್ರ ಶಿವುರವರೆ,
ನಿಮ್ಮ ಪ್ರೊತ್ರಾಹಕ್ಕೆ ನನ್ನ ವಂದನೆಗಳು. ಖಂಡಿತ ಮುಂದುವರಿಸುವೆ.
ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ