ಬುಧವಾರ, ಜನವರಿ 13, 2010

ಭಾರತೀಯ ಭಾಷೆಗಳ ಗಣಕೀಕರಣದ ಏಳಿಗೆ ಹಾಗೂ ಅವನತಿ


ನಾನು ಬರೆದಿರುವ ಈ ಲೇಖನವು ವಿವಿಧ ಮಾರ್ಪಾಡುಗಳನ್ನ ಪಡೆದುಕೊಂಡು ಅನ್ಯರ ಉದ್ದೇಶಕ್ಕೆ ಸಿಕ್ಕಿ ಭಿನ್ನ ಅರ್ಥದೊಂದಿಗೆ ಅಂತರ್ಜಾಲದಲ್ಲಿ ತೇಲುತ್ತಿರುವ ವರದಿಗಳು ಬಂದಿವೆ.

ಅದರ ಬಗ್ಗೆ ನಾನು ಜವಾಬ್ದಾರನಲ್ಲ


ಭಾರತೀಯ ಭಾಷೆಗಳ ಗಣಕೀಕರಣದ ಏಳಿಗೆ ಹಾಗೂ ಅವನತಿ



ಭಾರತೀಯ ಭಾಷೆಗಳನ್ನ ಗಣಕೀಕರಿಸಲು ಕೆಲಸಗಳು ಆರಂಬವಾಗಿ ಸುಮಾರು ೨೭ ವರ್ಷಗಳೇ ತುಂಬಿವೆ.
* ಗಣಕದಲ್ಲಿ ಸಂಶೋದನೆಗಳು ಆರಂಬವಾದ ದಿನಗಳಿಂದಲೇ,
* ಗಣಕಗಳೆಂದರೇನು? ಎಂದು, ಜನ ಸಾಮಾನ್ಯರಿಗೆ ಇನ್ನೂ ಸರಿಯಾಗಿ ತಿಳಿಯುವ ಮೊದಲೇ,
* ಮಾಜಿ ಪ್ರದಾನಮಂತ್ರಿಗಳಾದ ಮಾನ್ಯ ಪಿ.ವಿ.ನರಸಿಂಹ ರಾವ್ ಅವರು ನಮ್ಮ ದೇಶವನ್ನ ಜಾಗತಿಕವಾಗಿ ಮುಕ್ತ ಮಾರುಕಟ್ಟೆಯಾಗಿ ಪರಿವರ್ತಿಸುವ ಮೊದಲೇ
* ವಿದೇಶಿಯರು ಬಂದು ಬಂಡವಾಳ ಹೂಡುವ ಮೊದಲೇ
* ಸರ್ಕಾರ ಬಂದು ಬಂಡವಾಳ ಹಾಕುವ ಮೊದಲೇ
೧೯೮೩ ರಿಂದಲೇ ಭಾರತೀಯ ಭಾಷೆಗಳನ್ನ ಗಣಕೀಕರಿಸುವ ಉದ್ದೇಶವಾಗಿ ವಿವಿದ ಕಂಪನಿಗಳಲ್ಲಿ ಪ್ರಜ್ಞಾವಂತ ತಂತ್ರಜ್ಞರು ಸಂಶೋದನೆಗಳನ್ನ ನಡೆಸಿದ್ದಾರೆ.
ಈ ಸಂಶೋಧನೆಯ ಫಲವಾಗಿ ಅನೇಕ ತಂತ್ರಾಂಶಗಳನ್ನ ಯಶಸ್ವಿಯಾಗಿ ಸಿದ್ದ ಪಡಿಸಲಾಗಿತ್ತು/ದೆ.

೧೯೯೩ ರಿಂದ ೨೦೦೩ ರ ಅವಧಿಯಲ್ಲಿಯೇ ಅನೇಕ ಅನ್ವಯಿಕ ತಂತ್ರಾಂಶಗಳು (Application softwares) ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲು ಸಾದ್ಯವಾಗಿತ್ತು. ಅತೀ ಪ್ರಮುಖ ಮೂರು ಕಂಪನಿಗಳನ್ನ ಇಲ್ಲಿ ತಿಳಿಸಸ್ತೀನಿ. ಇವಿಷ್ಟೇ ಅಂತ ತಿಳಿ ಬೇಡಿ. ಇನ್ನೂ ಅನೇಕರಿದ್ದಾರೆ,

ಕಂಪನಿ ಹೆಸರು
ಮುಖ್ಯಸ್ತರು
ಇಸವಿ
1
SRG Softwares Pvt.Ltd.
ಮುತ್ತುಕೃಷ್ನನ್
೧೯೮೪

CyberSpace MultiMedia Ltd,
ಆಕೃತಿ ಆನಂದ್
೧೯೮೩

AppleSoft
ಅನಬರಸನ್
-

ಈಗ ಈ ಕಂಪನಿಗಳಿಂದ ಹೊರ ಬಂದ ಕೆಲವು ಪ್ರಮುಖ ತಂತ್ರಾಂಶಗಳನ್ನ ಗಮನಿಸೋಣ.
ಈ ಕೆಳಕಂಡ ತಂತ್ರಾಂಶಗಳ ಪಟ್ಟಿಗಳ ಮೇಲೆ ಕಣ್ಣಾಯಿಸಿ. ಇವುಗಳೆಲ್ಲಾ ಭಾರತೀಯ ಭಾಷೆಗಳಿಗಾಗಿ/ಭಾರತೀಯ ಭಾಷೆಗಳಿಗೋಸ್ಕರ ಹಾಗೂ ಭಾರತೀಯರಿಂದಲೇ ಸಿದ್ದವಾದಂತದ್ದು ಅನ್ನೋದು ವಿಶೇಷವಾಗಿ ಗಮನಿಸ ಬೇಕಾದ ಅಂಶ.
ಮೊದಲಿಗೆ SRG Softwares Pvt Ltd.

ಕ್ರ.ಸಂ
ತಂತ್ರಾಂಶದ ಹೆಸರು
ತಂತ್ರಾಂಶದ ಉದ್ದೇಶ/ಉಪಯೋಗ
ಇಸವಿ

ಶಬ್ಧರತ್ನ
ಕನ್ನಡದ ಪ್ರಪ್ರಥಮ ಪದ ಸಂಸ್ಕರಣ ತಂತ್ರಾಂಶ
೧೯೮೭

ವೀನಸ್
ಕನ್ನಡ ಡಿ.ಟಿ.ಪಿ ತಂತ್ರಾಂಶ
೧೯೮೯

ಚಿತ್ರಕಲ
ಕನ್ನಡದ ದೂರ ದರ್ಶನ ಕೇಂದ್ರ ದಲ್ಲಿ ಬಳಸಲು
೧೯೯೦

ಐನೆಕ್ಸ್
ದತ್ತಾಂಶ ತಂತ್ರಾಂಶ
೧೯೯೩

ವಿಂಕಿ
ವಿಂಡೋಸ್ ನ ಇತರೆ ಅನ್ವಯಿಕ ತಂತ್ರಾಮ್ಶಗಳಲ್ಲಿ ಬರೆಯಲು
೧೯೯೪

ಕಾರ್ಯಲಯ
MS Office ಇದ್ದ ಹಾಗೆ, ಸಂಪೂರ್ಣ ಭಾರತೀಯ ಭಾಷೆಗೋಸ್ಕರ
೧೯೯೯

ಬ್ಯಾಂಕ್ ಸ್ಕ್ರಿಪ್ಟ್
ದತ್ತಾಂಶ ಸಂಸ್ಕರಣ ತಂತ್ರಾಂಶ
೨೦೦೧

SRG ಬ್ರೌಸರ್
ಅಂತರ್ಜಾಲ ಮತ್ತೆ ಆಂತರಿಕ ಜಾಲ ಬ್ರೌಸರ್ similar IE, Firefox, etc
೨೦೦೩


ಈಗ CyberSpace Multimedia Ltd.

ಕ್ರ.ಸಂ
ತಂತ್ರಾಂಶದ ಹೆಸರು
ತಂತ್ರಾಂಶದ ಉದ್ದೇಶ/ಉಪಯೋಗ
ಇಸವಿ
ಆಕೃತಿ ವೆಬ್ ಟೆಕ್ನಾಲಜಿ
www.indianlanguages.com.
ಭಾರತೀಯ ಭಾಷೆಗಳ ಮೊದಲ ಅಂತರ್ಜಾಲ ತಾಣ ಸಿದ್ದಗೊಳಿಸಿದ್ದು
www.vishwakannada.com
ಕನ್ನಡಸ ಮೊದಲ ಅಂತರ್ಜಾಲ ಪತ್ರಿಕೆ ವಿಶ್ವ ಕನ್ನಡ ಸಿದ್ದಗೊಳಿಸಿದ್ದು.
www.krantidaily.com
www.prajavani.net
www.sampuktakarnataka.com
ಕ್ರಾಂತಿ ಡೈಲಿ, ಪ್ರಜಾವಾಣಿ, ಸಂಮುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆ
ಗಳ ಅಂತರ್ಜಾಲ ಆವೃತ್ತಿಗಳ ಬೆಳವಣಿಗೆಗೆ ಸಹಾಯ.
೧೯೯೭
ಮತ್ತು
೧೯೯೮
Akruti SDK & WDK
For developing client-server and web applications in kannada
೨೦೦0
cyBANK & cyCRED
ಸಹಕಾರಿ ಬ್ಯಾಂಕ್ ಗಳ ಬಳಕೆಗೆ
೨೦೦೧
eKaryalaya, eAdministration &
eGovernance
ಕರ್ನಾಟಕ ಸರ್ಕಾರಕ್ಕೆ ಹಾಗೂ ಇತರ ಸರ್ಕಾರಿ ಇಲಾಖೆಗಳಿಗೆ ಸಿದ್ದ ಪಡಿಸಿದ ಅನ್ವಯಿಕ ತಂತ್ರಾಂಶಗಳು
೨೦೦೨
cyDOCS
document management solution
೨೦೦೩
cyTRAN
report translator in kannada
೨೦೦೩
ಆಕೃತಿ ಯೂನಿಕೋಡ್ ಪಾಂಟ್ಸ್ Embedde thin clients ಪೊರ್ ಕನ್ನಡ
೨೦೦೪


ಈಗ AppleSoft ತಂತ್ರಾಂಶಗಳು

ಕ್ರ.ಸಂ
ತಂತ್ರಾಂಶದ ಹೆಸರು
ತಂತ್ರಾಂಶದ ಉದ್ದೇಶ/ಉಪಯೋಗ
ಇಸವಿ

ಸುರಭಿ
ಕನ್ನಡದಲ್ಲಿ MS Dos ಹಾಗೂ ಅನ್ವಯಿಕ ತಂತ್ರಾಂಶಗಳು.
೧೯೯೩

ಸುರಭಿ ಜೆಮ್
MS Dos ನಲ್ಲಿ ಕನ್ನಡ ಟೈಪಿಸಲು. ಮತ್ತು ಡಿ ಟಿ ಪಿ ತಂತ್ರಾಂಶ

ಸುರಭಿ ಪ್ರೊ
MS Windows ೩.೦ ನಲ್ಲಿ ಕನ್ನಡ/ಭಾರತೀಯ ಭಾಷೆಗಳನ್ನ ನೇರವಾಗಿ ಟೈಪಿಸಲು

ಸಿಪ್
ಅನೇಕ ಕಡತಗಳನ್ನ, ಅನೇಕ ಕಡಕಿಗಳನ್ನ, ಹಾಗೂ ಅತೀ ದೊಡ್ಡ ಕಡತಗಳನ್ನ ಬೆಂಬಲಿಸಿದ
ಪ್ರಪ್ರಥಮ ಕನ್ನಡ ಪದ ಸಂಸ್ಕರಣ

ಸುಬೇಸ್
ದತ್ತಾಂಶ ಸಂಸ್ಕರಣ ತಂತ್ರಾಂಶ

Surabhi SDK
MS Windows ನಲ್ಲಿ ಭಾರತೀಯ ಭಾಷೆಗಳಲ್ಲಿ ಅನ್ವಯಿಕ ತಂತ್ರಾಂಶಗಳ ಬೆಳವಣಿಗೆಗೆ

Surabhi 2000
SURABHI 2000 is an Input enabling software for Windows 95/98/NT 4.0/NTTSE/XP through the choice of keyboard layouts. It provides direct typing facilities using various standard keyboard layouts, enables Find and Replace, keyboarding is auto-sensitive, comes with collection of fonts and enables hot keys and shortcut keys. It works with all popular MS Windows based applications like MS Office, StarOffice, OpenOffice, Lotus Smart Suite, Pagemaker, Photoshop, Hot Potatoe etc.,.

SURABHI  UV
SURABHI UV is an Unicode Input enabling software for Windows XP through the choice of keyboard layouts. It provides direct typing facilities using various standard keyboard layouts, comes with collection of fonts and enables hot keys and shortcut keys. It works with all Unicode compliant MS Windows XP based applications like MS Office XP, StarOffice 6.0, OpenOffice 1.1, CorelDraw 12, Hot Potatoe 6.0 etc.,.

SURABHI TOOLS
SURABHI TOOLS, Is a collection of tools to support Indian Languages on the Tools of MS Office running on MS Windows. This includes tools such as Sorting, Text conversion, Auto correct, Date and Time, Numerals to text etc.
೧೦
SuJeeva
An interactive Web content enabling utility exclusively developed for Indian Languages to enable typing in Indian Languages in the Text fields, Text Area and Set fonts to Text fields, Text Area, Buttons and Body Text.
೧೨
e-Type
e-Type, is a compact embedded font solution developed exclusively to support Indian Languages and to facilitate localisation of Pagers, Mobile phones, Dot Matrix Printers and any digital gadgets. The compact code size also enables multi-lingual solutions in the power crunch digital gadgets. It is easy to implement, extremely portable and contains clear and understandable source code with documentation. With appropriate peripheral support like demo code, debug tools with source code and design manual, e-type enables excellent and seamless integration with short implementation period.
೧೩
Janani
Janani is first time effort to localize MS Windows 98 and applications running on it. Janani is a boon to Indians and Indian languages. Janani localises the User Interfaces such as Menus, Dialog boxes, Status bar texts, Help tips etc., of MS Windows 98 and enables seamless integration of Language and Technology.



ಭಾರತೀಯ ಭಾಷೆಗಳ ಗಣಕೀಕರಣದಲ್ಲಿ, ಕನ್ನಡದ ಗಣಕೀಕರಣದಲ್ಲಿ ಈಗಾಗಲೇ ಹಲವು ವರ್ಷಗಳ ಹಿಂದೆಯೇ ನಮ್ಮಲ್ಲಿ ಅನೇಕ ತಂತ್ರಜ್ಞರಿದ್ದರು, ತಂತ್ರಾಂಶಗಳಿದ್ದವು, ಹಾಗೂ ಅವುಗಳಿಗೆ ಬೇಡಿಕೆ ಮತ್ತು ಪೂರೈಕೆ ಎರ್ಡೂ ಸಮತೋಲವಾಗಿ ಸಾಗಿತ್ತಿದ್ದವು.
ಆದರೆ ಇಸವಿ ೨೦೦೦ ಅಥ್ವ ಅದ್ರಿಂದ ಈಚೆಗೆ ಈ ಕಾರ್ಯಗಳಲ್ಲಿ ಹಾಗೂ ಕಾರ್ಯಾಸಕ್ತರಲ್ಲಿ ಮೊದಲಿನ ವೇಗದಲ್ಲಿ ಕಂಡು ಬಂದ ಬೆಳವಣಿಗೆ ಈಗ ಕಂಡು ಬರುತ್ತಿಲ್ಲ. ಅವರಿಗೆ ಬೆಂಬಲವೂ ಇಲ್ಲ.

ಮುಖ್ಯವಾಗಿ ತಂತ್ರಜ್ಞಾನ ಬೆಳದಂತೆ ಕನ್ನಡದ ಗಣಕೀಕರಣವೂ ಸಾಕಷ್ಟು ಪ್ರಗತಿ ಸಾಧಿಸ ಬಹುದಿತ್ತು. ಆದರೆ ತಂತ್ರಜ್ಞಾನ ಬೆಳದಷ್ಟು ಕನ್ನಡದ ಗಣಕೀಕರಣ ಮಾತ್ರ ಹಿಂದೆ ಬೀಳ್ತಿದೆ ಅನ್ನೋ ಭಾವನೆ ಕಾಡ ತೊಡಗುತ್ತೆ.
ಅತ್ವ ಇದು ಕನ್ನಡ ಭಾಷೆಯ ಅವನತಿಯ ಮುನ್ಸೂಚನೆಯೇ? ತಿಳಿಯುತ್ತಿಲ್ಲ.

ಆ ತಂತ್ರಾಂಶಗಳು ಕಣ್ಮರೆಯಾಗಲು ಏನು ಕಾರ್ಣ ತಿಳಿಯ ಬೇಕಲ್ಲವೇ?

ನಮ್ಮೆಲ್ಲರ ಬಾಯಲ್ಲಿ ನಲಿಯುತ್ತಿರ್ರುವ ಕನ್ನಡದ ಹೆಮ್ಮೆಯ ನುಡಿ ಅಥ್ವ ಬರಹ ಗಳಿಂದ ಮಾತ್ರ ಮೇಲಿನ ತಂತ್ರಾಂಶಗಳ ಸ್ಥಾನವನ್ನ ತುಂಬಲು ಸಾದ್ಯವೇ?
ಸತ್ಯವೆಂದರೆ ನುಡಿ ಹಾಗೂ ಬರಹ ತಂತ್ರಾಂಶಗಳು ಆರಂಬದ ದಿನಗಳಲ್ಲಿ ಕೇವಲ ಕನ್ನಡದ ಮತ್ತೊಂದು ಪಾಂಟ್ ಗಳಾಗಿದ್ದವು,
ಆದರೆ ಉಳಿದ ತಂತ್ರಾಂಶಗಳ ಬೆಳವಣಿಗೆ ಏಕೆ ನಿಂತಿತು? ನಿಮ್ಮತ್ರ ಉತ್ತರವಿದೆಯೇ?



-
ಲೋದ್ಯಾಶಿ

ಮಾಹಿತಿ ಸಂಗ್ರಹ: ಈಕವಿವೇದಿಕೆ.


3 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಲೋದ್ಯಾಶಿ ಸರ್,
ಅಚ್ಚು ಕಟ್ಟಾಗಿ ಪಟ್ಟಿ ಮಾಡಿದ್ದಿರಾ,
ತುಂಬಾ ರಿಸರ್ಚ್ ಮಾಡಿರಬೇಕು ಅಂತ ಅನ್ನಿಸ್ತಿದೆ
ಉತ್ತಮ ಸಂಗ್ರಹಣಾ ಯೋಗ್ಯ ಬರಹ

Me, Myself & I ಹೇಳಿದರು...

ಗುರುಮೂರ್ತಿಯವರೇ ನನ್ನಿ

shivu.k ಹೇಳಿದರು...

ಲೋದ್ಯಾಶಿ ಸರ್,
ಎಷ್ಟು ಚೆನ್ನಾಗಿ ಎಲ್ಲಾ ವಿವರಿಸಿದ್ದೀರಿ. ನಾನು ಸಾಪ್ಟ್‍ವೇರಿನಲ್ಲಿದ್ದರೇ ಇದರ ಬಗ್ಗೆ ಪ್ರಯತ್ನಿಸಬಹುದಿತ್ತು. ಆದ್ರೂ ನಾನು ಪ್ರಯತ್ನಿಸಬಹುದೇನೋ ಅನ್ನಿಸುತ್ತೆ...
ಮುಂದುವರಿಸಿ...

blogspot add widget