ಗುರುವಾರ, ಜನವರಿ 21, 2010

ಚೆಲ್ಲಾಪಿಲ್ಲಿ ಆಟಕ್ಕೆ ತಮ್ಮೆಲ್ಲರಿಗೂ ಸ್ವಾಗತ ಸುಸ್ವಾಗತ

ಆಟದ ನಿಯಮಗಳು
೧. ಆಟವನ್ನ ಸಂಪೂರ್ಣವಾಗಿ ಕೇವಲ ನಿಮ್ಮ ಗಣಕದ ಇಲಿಯನ್ನ (computer mouse) ಬಳಸಿ ಆಡಬಹುದು,
೨. ಅಕ್ಷರಗಳನ್ನ ಎಳೆದು-ತನ್ನಿ, ಸೂಕ್ತ ಕೋಣೆಯಲ್ಲಿ ಹಾಕಿ (drag and drop).
೩. ಪ್ರತೀ ಬಾರಿ ಮೂರು ಪದಗಳನ್ನ ಚೆಲ್ಲಾಪಿಲ್ಲಿ ಮಾಡಲಾಗಿರುತ್ತದೆ.
೪. ಪದಗಳನ್ನ ಗುರ್ತಿಸಿ, ಸರ್ಯಾಗಿ ಜೋಡಿಸಿದರೆ ಮೂರು ಅಂಕ ನಿಮಗೆ ಬರುತ್ತೆ.
೫. ಪದಗಳನ್ನ ಗುರುತಿಸಲು ಕೆಲವು ಅಕ್ಷರಗಳನ್ನ ಈಗಾಗಲೇ ಸರ್ಯಾದ ಕೋಣೆಯಲ್ಲಿ ತೋರಿಸಿರುತ್ತೆ.
೬. ಉಳಿದ ಅಕ್ಷರಗಳನ್ನ ಅವುಗಳ ಸ್ಥಾನಕ್ಕೆ ಎಳೆದು ತಂದು ಹಾಕಿ,
೭. ಮೂರೂ ಪದಗಳನ್ನ ಸರ್ಯಾಗಿ ಗುರ್ತಿಸಿದರೇ, ಆಟವನ್ನ ನೀವು ಗೆದ್ದಂತೆ.
೮. ಆಟದ ಮದ್ಯೆದಲ್ಲಿ ಯಾವಾಗ ಬೇಕಾದರೂ ಅಕ್ಷರಗಳನ್ನ ಕೋಣೆಯಿಂದ ಕೋಣೆಗೆ ಬದಲಿಸಿ ಬಹುದು.
೯. ಒಮ್ಮೆ ಒಂದು ಕೋಣೆಯಲ್ಲಿ ಒಂದು ಅಕ್ಷರವನ್ನ ಕೂರಿಸದ ಮೇಲೆ, ಮತ್ತೆ ಅದ್ರಲ್ಲಿ ಇನ್ನೋಂದು ಅಕ್ಷರವನ್ನ ಕೂರಿಸಲು ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ಮೊದಲಿಗೆ ಇದ್ದ ಅಕ್ಷರವನ್ನ ಎತ್ತಿ, ಮೇಲಿನ ದೊಡ್ದ ಕೋಣೆಗೆ ಸ್ಥಳಾಂತರಿಸಿ ಕೊಳ್ಳಿ.


೧೦. ಪದಗಳನ್ನ ಜೋಡಿಸಲು ಅಸಾದ್ಯವೆನಿಸಿದರೆ, Show ಎಂಬ ಗುಂಡಿ ಒತ್ತಿದರೆ ಆಟವು ತಾನಾಗೆ ಮುಗಿಯುತ್ತೆ, ಆದರೆ ಅಂಕ ಸಿಗುವುದಿಲ್ಲ.
೧೧. ಸಾವಿರಾರು ಪದಗಳ ಪರಿಚಯ ಮಾಡಿಕೊಳ್ಳಿ, ಬನ್ನಿ, ಚೆಲ್ಲಾಪಿಲ್ಲಿ ಆಟಕ್ಕೆ ತಮ್ಮೆಲ್ಲರಿಗೂ ಸ್ವಾಗತ ಸುಸ್ವಾಗತ. 

4 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಸಾರ್, ಎಲ್ಲಿ ಆಟದ exe ಕೊಡಿ.

Me, Myself & I ಹೇಳಿದರು...

ಸ್ವಲ್ಪದರಲ್ಲೇ ತಿಳಿಸುತ್ತೇನೆ ವಿ.ರಾ.ಹೆ ಯವರೇ

shridhar ಹೇಳಿದರು...

ಆಟ ಮಜವಾಗಿದೆ ಅನಿಸುತ್ತಿದೆ.ಕಾತುರದಿಂದ ಕಾಯುತ್ತಿದ್ದೇನೆ. ಬೇಗ ಲಿಂಕ್ ಕೊಡಿ.
ಹಾಗೆಯೆ ತಮ್ಮ ಲೋಹಿ ತಂತ್ರಾಂಶದ ಬಗ್ಗೆಯು ಆಸಕ್ಥಿ ಇದೆ. ಸಾದ್ಯವಾದಲ್ಲಿ ಆ ಲಿಂಕ್ ಕೊಡಲು ಆಗುವುದೆ.
ಧನ್ಯವಾದಗಳು.

Me, Myself & I ಹೇಳಿದರು...

ಶ್ರೀಧರ್, ಆಸಕ್ತಿ ವ್ಯಕ್ತ ಪಡಿಸಿದ್ದಕ್ಕೆ ನನ್ನಿ.

ಲೋಹಿತಂತ್ರಾಂಶ ದ ಕೊಂಡಿ ನೀವಿನ್ನೂ ಗಮನಿಸದೇ ಇರುವುದು ನನಗೆ ನಿರಾಶೆಯುಂಟು ಮಾಡಿದೆ.
http://lodyaashi.com

ಬಲ ಪಕ್ಕದಲ್ಲಿ ಮೊದಲಿಗೆ ಇರುವುದೇ ಈ ಮಾಹಿತಿ. ಲೋದ್ಯಾಶಿ ಡಾಟ್ ಕಾಂ

blogspot add widget