ಪ್ರಕೃತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರಕೃತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಅಕ್ಟೋಬರ್ 3, 2009

ಅತೀವೃಷ್ಟಿ-ಭವಿಷ್ಯನ ನೋಡಿ ಬಂದವರಾರು?

ರಾಯಚೂರು, ಗುಲ್ಬರ್ಗಾ, ವಿಜಾಪುರ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಕಾರವಾರ, ಅಂಕೋಲ, ಶಿವಮೊಗ್ಗ, ಹಾವೇರಿ, ಕೊಡಗು, ಹಾಸನ, ಹೀಗೇ ಕರ್ನಾಟಕದ ಬಹು ಭಾಗದ ಜನ ಜೀವನ ಅಸ್ತ-ವ್ಯಸ್ತವಾಗಿದೆ. ನೂರಾರು ಸಾವು ಸಂಬವಿಸಿವೆ. ಕೆಲವು ಭಾಗಕ್ಕೆ ಸಂಚಾರ ವ್ಯವಸ್ಥೆ ಮುರಿದಿದೆ. ಮನೇ-ಆಸ್ತಿ ಎಲ್ಲಾ ಕಲ್ಕಂದು ಜನ ಕಂಗಾಲಾಗಿದ್ದಾರೆ. ಇನ್ನು ತುರ್ತಾಗಿ ಅವ್ರಿಗೆ ಬೇಕಾಗಿರೋದು ಒಂದಿಷ್ಟು ದೈರ್ಯಾ, ಆಹಾರ, ಔಷದ, ಹೊದಿಲಿಕ್ಕೆ ಬಟ್ಟೆ, ಮಲಗಲಿಕ್ಕೆ ಒಂದು ಸೂರು.

ಪ್ರಕೃತಿ ವಿಕೋಪಕ್ಕೆ ನಮ್ಮ ಜನ ಜೀವನ ದಿಕ್ಕಾ ಪಾಲಾಗಿರೋದು ಇದೇ ಮೊದ್ಲೆನಲ್ಲಾ...ಈ ಹಿಂದೆಯೂ ಆಗಿದೆ..ಮುಂಬೈಯಲ್ಲಿ ಬಾರೀ ಮಳೆ, ಗುಜರಾತ್ನಲ್ಲಿ ಭೂಕಂಪನ, ಕರಾವಳಿಯಲ್ಲಿ ಸುನಾಮಿ, ಅನಾವೃಷ್ಟಿಯಿಂದ ಕ್ಷಾಮ, ಹೀಗೇ ಅನೇಕ ಬಾರೀ ಅನಾಹುತಗಳು ಸಂಭವಿಸಿವೆ. ಇಂತಹ ಸಮಯದಲ್ಲೆಲ್ಲಾ ನಾವು ನಮ್ಮ ಬಂದುಗಳು, ಸಂಬಂದಿಗಳು, ಮೇಲ್ಜಾತಿ, ಕೀಳ್ಜಾತಿ, ಆಡಳಿತ ಪಕ್ಷ, ವಿರೋದ ಪಕ್ಷ, ಜಾತಿ, ಧರ್ಮ, ಮಠ, ಮತ, ಆಸ್ತಿ-ಪಾಸ್ತಿ ಅಂತ ಮೀನಾ ಮೇಷ ಮಾಡ್ದೆ, ನಮ್ಮಿನ್ದಾಗೋ ಸಹಾಯ ಮಾಡೋದು ಮರೀ ಬಾರ್ದು.

ಅತೀ ವೃಷ್ಟಿಯಿಂದ ಜನ ಕಂಗಾಲಾಗಿದ್ದಾರೆ ಇಂತಹ ಸಮಯದಲ್ಲಿ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಿಗೆ "ಕ್ಷೀರ ಬಂಧು" ಪಟ್ಟ ಬೇಕಿತ್ತಾ? ಖಂಡಿತಾ ಇಲ್ಲಾ... ಆದ್ರೆ ಹಾಗಂತ ಈಗ ಮಂತ್ರಿಗಳನ್ನ ತರಾಟೆಗೆ ತೊಗೊಳ್ತಾ ಕುಂತ್ರೆ ನಷ್ಟ ಯಾರಿಗೆ ಸ್ವಾಮಿ. ಸ್ವಲ್ಪನಾದ್ರೂ ಆತ್ಮ ಸಾಕ್ಷಿ ಅನ್ನೋದಿದ್ರೆ, ಮಂತ್ರಿಗಳೇ ಬಂದು ಅಮೃತ ಹಸ್ತದಿಂದ ಈ ಸುಕಾರ್ಯಾ ಆರಂಬ ಆಗ್ಲಿ ಅಂತ ಜಗಳ ಮಾಡೋದು ಬೇಡ. ಒಳ್ಳೆ ಕೆಲ್ಸಗಳಲ್ಲಾದ್ರೂ ನಾವು ನಮ್ಮ ಒಗ್ಗಟ್ಟನ್ನ ಪ್ರದರ್ಶಿಸೋಣ.

ಪ್ರಧಾನ ಮಂತ್ರಿಗಳಿಂದ ಹಿಡ್ದು, ಸಾಫ್ಟ್ವೇರ್, ಬ್ಯಾಂಕ್, ಅದ್ಯಾಪಕರು, ವ್ಯದ್ಯರು, ದಲ್ಲಾಲರು, ರಿಯಲ್ ಎಸ್ಟೇಟ್ ಚಲನಚಿತ್ರ, ಪತ್ರಿಕೆ, ಕ್ರಿಕೆಟ್ ಆಟಗಾರರು, ವಾಣಿಜ್ಯೋದಿಮಿಗಳು ಹೀಗೇ ಎಲ್ಲಾ ಕ್ಷೇತ್ರದ ಎಲ್ಲಾ ನೌಕರರು ಸ್ವಾಯಿಚ್ಚೆಯಿಂದ ತಮ್ಮ ತಮ್ಮ ಒಂದೊಂದು ದಿನದ ಆದಾಯವನ್ನ ಇದರ ಸಲುವಾಗಿ ತೆಗೆದಿಡ್ಬೇಕು. ಈ ರೀತಿ ಸಂಗ್ರಹಿಸಿದ ಮೊತ್ತವನ್ನ ಯಾವ್ದಾದ್ರೂ ಒಂದು ಅನಾಮಿಕ ಪರಿಹಾರ ನಿಧಿ ಸಂಗ್ರಹಣೆ ಅನ್ನೋ ಇನ್ನೊಬ್ಬ ದಲ್ಲಾಳಿ ಕೈಗೆ ಕೊಟ್ಟು ಬಂದು ಕೈ ತೊಳ್ಕೋಲ್ಳೋ ಕೆಲ್ಸಾ ಮಾಡ್ಬೇಡಿ.

ಒಟ್ಟು ಮೊತ್ತಾನ, ನೀವೇ ಒಂದಿಬ್ರು ಸ್ನೇಹಿತರು ತೆಗೆದು ಕೊಂಡು, ಸಂಬಂದಿಸಿದ ಕ್ಷೇತ್ರಕ್ಕೆ ಖುದ್ದು ಹೋಗಿ, ಅಲ್ಲಿನ ಜನ ಒಮ್ಮೆ ನೋಡಿ. ಅವ್ರಿಗೆ ಬೇಕಾಗಿರೋದು ಕೇವಲ ಒಂದು ತುತ್ತು ಅನ್ನ ಅಷ್ಟೇ ಅಲ್ಲಾ, ಬದಲಾಗಿ, ಭವಿಷ್ಯದ ಬಗ್ಗೆ, ಜೀವನದ ಬಗ್ಗೆ ಒಂದೆರಡು ಧೈರ್ಯಾ ತುಂಬೋ ಮಾತುಗಳು. ಅದನ್ನ ನೀವೇ ಮಾಡಿ, ಒಂದೆರಡು ಧೈರ್ಯದ ಮಾತಾಡಿ. ಆಮೇಲೆ ಅವ್ರ ತುರ್ತು ಅವಶ್ಯಕತೆಗಳನ್ನ ಅರ್ಥ ಮಾಡ್ಕೊಂಡು, ನೀವು ತೆಗೆದು ಕೊಂಡು ಹೋಗಿರೋ ಹಣದಲ್ಲಿ ಎಷ್ಟು ಸಾದ್ಯವೋ ಅಷ್ಟು ಸಹಾಯ ಮಾಡಿ.

ನಿಮಗೆ ಅಂತಹ ಒಂದು ನಿಸ್ವಾರ್ಥ ಮನಸ್ಸು ಖಂಡಿತ ಇದೇ, ಅದಕ್ಕೆ ನೀವು ಈ ಬರಹನ ಓದುತ್ತಾ ಇರೋದೇ ಸಾಕ್ಷಿ. ಇದಾದ ಮೇಲೆ ನೋಡಿ, ಸರ್ಕಾರಕ್ಕೆ ತನ್ನ ಕರ್ತವ್ಯದ ಅರಿವು ಮೂಡದೆ ಇದ್ರೆ ಅದಕ್ಕೆ ತಕ್ಕ ಶಾಸ್ತೀನ ಪ್ರಕ್ರುತಿನೇ ಮಾಡುತ್ತೆ. ಆ ಕೆಲಸದ ಜವಾಬ್ದಾರಿನ ಆ ಸರ್ವಶಕ್ತನ ಮೇಲೆ ಬಿಡಿ. ಬನ್ನೀ ಇನ್ನೂ ತಡವೇನೂ ಆಗಿಲ್ಲಾ. ಕಾರ್ಯೋನ್ಮುಖರಾಗೋಣ.

ಮಹಾತ್ಮಾ ಗಾಂಧೀಜಿ ಯವರ ಜಯಂತಿ ದಿನ ಪ್ರತೀ ವರ್ಷ ಅವ್ರ ಫೋಟೋಕ್ಕೆ ಹೂವಿನ ಹಾರ ಹಾಕಿ, ಕೈ ಮುಗ್ದು, ಶಾಲಾ ಕಾಲೇಜ್ಗೆ, ಕಚೇರಿಗಳಿಗೆ ಒಂದೊಂದು ದಿನ ರಜೆ ತಗೊಂನ್ದರೆ ಸಾಕೆ?

"ಬದಲಾಗುಹುದು ಈ ಲೋಕ ನೀ ಬದಲಾದರೆ,
ಬದಲಾಗುಹುದು ಈ ಸಮಾಜ ನೀ ಮೊದಲಾದರೆ" - ಮಹಾತ್ಮಾ ಗಾಂಧೀಜಿ


ಶುಕ್ರವಾರ, ಆಗಸ್ಟ್ 14, 2009

ಕೇಳಲು ನಾನ್ಯಾರು ನೀಡಲು ನೀನ್ಯಾರು?


ಮೊನ್ನೆ ಊರಿಗೆ ಬಂದಾಗ, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಸಲುವಾಗಿ. ನಾವೆಲ್ಲಾ (ಮನೆಯವರೆಲ್ಲಾ) ಒಂದು ಪ್ರವಾಸ ಕೈಗೊಂಡೆವು. ಒಟ್ಟು ಮೂರು ದಿನದ ಪ್ರವಾಸ ಅದು. ಮೂರು ಹಗಲು ಮತ್ತು ಎರಡು ರಾತ್ರಿ. ಮೊದಲ ದಿನ ರಾತ್ರಿ ಧರ್ಮಸ್ಥಳದಲ್ಲಿ ನಿದ್ದೆ. ಎರಡನೇ ದಿನ ರಾತ್ರಿ ಕುಕ್ಕೆ (ಸುಬ್ರಮಣ್ಯ) ಯಲ್ಲಿ ನಿದ್ದೆ. ಏಕೆಂದರೆ ಎರಡೂ ಕ್ಷೇತ್ರಗಳಲ್ಲಿಯೂ ಪೂಜೆ ಇದ್ದದ್ದು ಬೆಳಗಿನ ಜಾವ ಹಾಗಾಗಿ ಬೇಗನೆ ಎದ್ದು ಸ್ನಾನ ಮಾಡಿ ಪೂಜೆಗೆ ಸಿದ್ದವಾಗಿಲಿಕ್ಕೆ ಸಾಕಷ್ಟು ಸಮಯ ಸಿಗುತ್ತದೆ ಅಂತ ಭಾವಿಸಿ ನಾವು ಈ ರೀತಿ ಸಿದ್ಧತೆ ಮಾಡಿ ಕೊಂಡಿದ್ದೆವು.

ಮೊದಲ ದಿನ ಊರಿಂದ ಹೊರಟು "ಹೊರನಾಡು ಅನ್ನಪೂರ್ನೆಶ್ವರಿ" ದೇವಸ್ತಾನಕ್ಕೆ ತಲುಪಿದಾಗ ಸಮಯ ಹಾಗಲೇ ಮದ್ಯಾಹ್ನ 12 ದಾಟಿತ್ತು. ಕಣ್ಣಿಗೆ ಕಟ್ಟಿ ಕೊಳ್ಳುವಷ್ಟು ಚೆಂದವಾಗಿ ಕಂಗೊಳಿಸುತ್ತಿದ್ದ ದೇವಿಯ ದರ್ಶನ/ಆಶೀರ್ವಾದ ಪಡೆದು ನಂತರ ದೇವಸ್ಥಾನದಲ್ಲಿಪ್ರಸಾದ ಸ್ವೀಕರಿಸಿದೆವು. ಆಹಾ ಅದೆಷ್ಟು ತೃಪ್ತಿಯ ಅನುಭವವಾಯಿತು ಅಂದರೆ.. ಕ್ಷಮಿಸಿ ಅದನ್ನ ಬರೆಯುವ ಪ್ರಯತ್ನವೂ ವ್ಯರ್ಥ.
ಪ್ರಯಾಣವನ್ನು ಮುಂದುವರಿಸಿದೆವು. ಸಂಜೆ 7 ಗಂಟೆಗಾಗಲೇ ಧರ್ಮಸ್ಥಳ ಸೇರಿ, ಅಲ್ಲಿ ದೇವಸ್ಥಾನದ ವಸತಿಗೃಹಗಳಲ್ಲಿ ಎರಡು ಕೊಠಡಿ ಪಡೆದು ಕೊಂಡೆವು. ರಾತ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಬಂದು ಪ್ರಸಾದ ಸ್ವೀಕರಿಸಿ ಬೆಳಗಿನ ಜಾವ ಪೂಜೆಗೆ ಎಷ್ಟು ಹೊತ್ತಿಗೆ ಬರುವುದೆಂದು ವಿಚಾರಿಸಿ ಕೊಂಡೆವು. 
ಸರಿ, ತುಂಬಾ ಪ್ರಯಾಣಿಸಿದ್ದ ಕಾರಣ ದೇಹದ ಕೆಲವು ಭಾಗಗಳು ತುಂಬಾ ವಿಶ್ರಾಂತಿ ಭಯಸುತ್ತಿದ್ದವು. ಸುಮ್ಮನೆ ಮಲಗಿದೆ.



ದಿನ 2:

ಬೆಳಗ್ಗೆ ಸ್ನಾನ ಮಾಡಿ ಕೊಂಡು ದೇವಸ್ತಾನವನ್ನ ತಲುಪಿದೆವು. ಶ್ರೀ ಮಂಜುನಾಥನ ದರ್ಶನ ಮುಗುಸಿದ ನಂತರ ತುಲಾಭಾರಕ್ಕೆ ಸಾಲಲ್ಲಿ ನಿಂತೆವು. ಸುಮಾರು 8 ಗಂಟೆಗೆ ತುಲಾಭಾರ ಆರಂಬವಾಯಿತು. ನಂತರ ಕೆಲವೇ ನಿಮಿಷಗಳಲ್ಲಿ ನಮ್ಮ ಸರದಿ ಬಂದಿತು. ತುಳಭಾರವನ್ನ ಮುಗಿಸಿ ಕೊಂಡು ಅಲ್ಲಿಯೇ ಒಂದು ಹೋಟೆಲ್ನಲ್ಲಿ ತಿಂಡಿ ತಿಂದೆವು.

ನಂತರ ಧರ್ಮಸ್ತಳದ ಗೊಮ್ಮಟೇಶ್ವರನನ್ನು ನೋಡಿಕೊಂಡು ಬರುವಷ್ಟರಲ್ಲಿ ಮಳೆಯ ಆಟ (ಕಾಟ?) ಶುರುವಿಟ್ಟಿತು. ಮಳೆಯಲ್ಲಿಯೂ ಏನೋ ಒಂದು ರೀತಿಯ ಮಜಾ ಬರುತ್ತಿತ್ತು. ಕಾರಣ ಅಲ್ಲಿ ಅಂತ ಮಳೆ ನಿಂತ ಕೆಲವೇ ಕ್ಷಣದಲ್ಲಿ ಮತ್ತೆ ಸೆಕೆ ಆರಂಬವಾಗುತ್ತಿತ್ತು. ಇದು ಒಂದ್ತರಾ ನಮಿಗೆ ವಿಶೇಷ ಅನುಭವ. ಸರಿ ಅಲ್ಲಿಂದ ಹೊರಟು ಹಳೆ ಕಾರುಗಳ ಸಂಘ್ರಹಾಲಯಕ್ಕೆ ಬಂದೆವು. ಅಲ್ಲಿದ್ದ ಕಾರುಗಳ ಸಂಗ್ರಹ ನೋಡಲು ತುಂಬಾ ಮುದ ನೀಡಿತು.


ಸರಿ ಮತ್ತೆ ನಮ್ಮ ಪ್ರಯಾಣ ನೇರ ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ಕಡೆಗೆ ಆರಂಭವಾಯಿತು. ಸಂಜೆ ಆರಕ್ಕೆಲ್ಲಾ ಸುಬ್ರಮಣ್ಯ ತಲುಪಿದೆವು. ಇಲ್ಲಿ ಒಟ್ಟು ಮೂರು ಕೊಠಡಿಗಳನ್ನು ಬಾಡಿಗೆ ಪಡೆದೆವು. ಕೈ-ಕಾಲು ತೊಳೆದು ಕೊಂಡು ಅಲ್ಲಿಯೇ ಇರುವ ಗಣಪತಿ ದೇವಸ್ತಾನಕ್ಕೆ ಹೋಗಿ ಬಂದೆವು.




ರಾತ್ರಿ ಸುಬ್ರಮಣ್ಯ ದೇವಸ್ತಾನದಲ್ಲಿ ಅನ್ನ-ಪ್ರಸಾದ ಮುಗಿಸಿ ಕೊಂಡು ಬಂದು ಮಲಗಿ ಕೊಂಡೆವು.

ದಿನ 3:

ನನಗೆ ಹಿಂದಿನ ದಿನ ರಾತ್ರಿ ಹೊಟ್ಟೆ ಕೆಟ್ಟು ಸರಿಯಾದ ನಿದ್ದೆಯೂ ಸಹ ಮಾಡದೆ ಬೆಳಗ್ಗೆ ಏಳುಹುದು ಸ್ವಲ್ಪ ನಿದಾನವಾಯಿತು. ಆದರೇನಂತೆ ಉತ್ಸಾಹದಿಂದ ನದಿಗೆ ಸ್ನಾನಕ್ಕೆ ಅಂತ ಹೊರಟೆವು. ಆಹಾ ! ಹಿಂದಿನ ದಿನದ ಭಾರಿ ಮಳೆಯಿಂದಾಗಿ , ಹೊಳೆ ತುಂಬಿ ಬರುತ್ತಿತ್ತು. ನೀರಿನ ಬಣ್ಣವು ಬದಲಾಗಿತ್ತು. ಅದರಲ್ಲಿಯೇ ತಲೆಗೆ ನೀರು ಚಿಮ್ಮಿಸಿ ಕೊಂಡು ಮತ್ತೆ ಕೊಠಡಿಗೆ ಹಿಂತಿರುಗಿದೆವು. ಹೊಳೆಯಲ್ಲಿ ನಾವು ಊಹಿಸಿದಂತೆ ಸ್ನಾನಕ್ಕೆ ಯಾವ ರೀತಿಯ ಅನುಕೂಲಗಳೂ ಉಳಿದಿರಲಿಲ್ಲ.




ಸರಿ, ಸ್ನಾನ ಮುಗಿಸಿ ಕೊಂಡು ದೇವಸ್ತಾನಕ್ಕೆ ಹೊರಟೆವು, ಪೂಜೆ-ಪ್ರಸಾದ ಎಲ್ಲವನ್ನು ಮುಗಿಸಿಕೊಂಡು ವಾಪಸ್ ಕೊಠಡಿಗೆ ಬರುವಷ್ಟರಲ್ಲಿ ಸಮಯ ಒಂದು ಗಂಟೆಯಾಗಿತ್ತು ಸ್ವಲ್ಪ ಹೊತ್ತು ವಿಶ್ರಮಿಸಿ ಹೊರಡಲು ಸಿದ್ದವಾದೆವು. ಸರಿ ಹೆಚ್ಚು ಕಮ್ಮಿ ಎಲ್ಲಾ ಚೀಲಗಳನ್ನೂ ವಾಹನದ ಮೇಲೆ ಕಟ್ಟಿಯಾಗಿತ್ತು. ಆದರೆ ಕೊನೆಯಲ್ಲಿ ಉಳಿದಿದ್ದ ಕೆಲವು ಸಣ್ಣ-ಪುಟ್ಟ ಚೀಲಗಳನ್ನು ಒಂದೊಂದು ಕೈಯಲ್ಲಿ ಹಿಡಿದು ಕೊಂಡು ವಾಹನದ ಬಳಿ ಬಂದೆವು, ಅಷ್ಟರಲ್ಲಿ ತುಂಬಾ ವಯಸ್ಸಾದಂತೆ ಕಾಣಿಸುತ್ತಿದ್ದ ಒಬ್ಬ ವ್ಯಕ್ತಿ ಹಾಗೆ ನಮ್ಮ ಕಡೆಗೆ ಬರುತ್ತಿದ್ದದ್ದು ಗಮನಿಸಿದೆ.

ಉಳಿದವರು ವಾಹನವನ್ನು ಹತ್ತುತ್ತಿದ್ದ ಕಾರಣ ನಾನು ಸ್ವಲ್ಪ ಹಿಂದೆ ಬಂದೆ. ಅಷ್ಟು ಹೊತ್ತಿಗೆ ಸರಿಯಾಗಿ ಆ ವಯಸ್ಸಾದ ವ್ಯಕ್ತಿ ನನಗೆ ತೀರಾ ಹತ್ತಿರಕ್ಕೆ ಬಂದು ನಿಂತಿದ್ದರು. ಅವರನ್ನ ನಾನು ಹಾಗೆ ಸ್ವಲ್ಪ ಹೊತ್ತು ಗಮನಿಸಿದೆ. ಎರಡೂ ಕಣ್ಣಲ್ಲಿ ಪಿಸುರು, ಅರಿದ ಬಟ್ಟೆ, ಉದ್ದನೆ ಗಡ್ಡ -ಮೀಸೆ , ಚೆಲ್ಲ-ಪಿಲ್ಲಿಯಾದ ತಲೆ ಕೂದಲು, ಹೂಂ. ಅರ್ಥವಾಯಿತಲ್ಲ? ಅವರು ನನ್ನ ಬಳಿ ಕೈ ಚಾಚಿ ನಿಂತರು. ನಾನು ಸ್ವಲ್ಪ ಹೊತ್ತು ಅವರನ್ನು ಹಾಗೆ ಗಮನಿಸಿದೆ. ಅಸಹ್ಯ ದೃಷ್ಟಿ ಯಿಂದ ಅಂತು ಖಂಡಿತ ಅಲ್ಲಾ. 

ಇತ್ತೇಚೆಗೆ "ಮಂಕುತಿಮ್ಮನ ಕಗ್ಗ" ವನ್ನು ಪದೇ-ಪದೇ ಕೇಳುತ್ತಿರುವುದರಿಂದಲೋ ಏನೋ! ಅಥವಾ ನನ್ನ ಸುತ್ತಲ್ಲೂ ನಡೆಯುತ್ತಿದ್ದ ಸನ್ನಿವೇಶಗಳಿಂದಲೂ ಏನೋ! ಜೀವನ ನನಗೆ ಸಾಕಷ್ಟು ಸಂಯಮವನ್ನ ಕಲಿಸುತ್ತಾ ಇತ್ತು. ಅದರಲ್ಲಿ ಈ ವಯಸ್ಸಾದ ವ್ಯಕ್ತಿಯನ್ನು ಕಂಡು ನನಿಗೆ ಯಾವ ರೀತಿಯ ಕೀಳರಿಮೆಗಳೂ ಸುಳಿಯಲಿಲ್ಲ. ಬದಲಾಗಿ ಇನ್ನು ಹೆಚ್ಚು ಆಸಕ್ತಿಯಿಂದ ಅವರನ್ನ ಗಮನಿಸ ತೊಡಗಿದೆ.

ಇಷ್ಟೆಲ್ಲಾ ಕೆಲವೇ ನಿಮಿಷಗಳಲ್ಲಿ ನಡೆದು ಹೋಯಿತು, ಇಷ್ಟರಲ್ಲಿ ನನ್ನ ಜೊತೆ ಇದ್ದ ಇನ್ನೂ ಕೆಲವರು ನನ್ನೊಂದಿಗೆ ಆ ವಯಸ್ಸಾದ ವ್ಯಕ್ತಿಯ ಸುತ್ತ ನೆರೆದರು. ಮಾತು ಶುರುವಿಟ್ಟರು.
ಮೊದಲು ಒಂದೆರಡು ವಾಕ್ಯ ಕನ್ನಡದಲ್ಲಿ ಮಾತಾಡಿದರು ಅಂತ ಅನ್ನಿಸುತ್ತೆ. ಅನ್ನಿಸುತ್ತೆ ಅಷ್ಟೇ ಅಷ್ಟರಲ್ಲಿ ಅವರು ಇಂಗ್ಲೀಷ್ನಲ್ಲಿ ಮಾತಾಡಲು ಶುರುವಿಟ್ಟರು. ತುಂಬಾ ಸರಾಗವಾಗಿಯೇ ಮಾತನಾಡಿದರು. 

ಎಲ್ಲರೊಂದಿಗೂ ಮಾತನಾಡಲು ಇಚ್ಚಿಸುಹುದಿಲ್ಲ ಆದರೆ ಯಾಕೋ ನಿನ್ನೊಂದಿಗೆ ಮಾತನಾಡ ಬೇಕೆನ್ನಿಸಿತು ಮಾತನಾಡಿದೆ ಅಷ್ಟೇ ಅಂತ ಹೇಳಿದ್ದು ನನಗೆ ಇನ್ನು ಸ್ವಲ್ಪ ಆನಂದ ನೀಡಿತು. ಆಗ ಮಾತಿನ ಮದ್ಯೆ ಯಾವುದೊ ವಿಷಯದ ಬಗ್ಗೆ ಅವರು ಒಂದು ಮಾತು ಹೇಳಿದರು. "ಕೇಳಲು ನಾನ್ಯಾರು ನೀಡಲು ನೀನ್ಯಾರು?" ಎಂದು. ಜೀವನದ ಅರ್ಥ ಕೆಲವು ಬಾರಿ ಎಂತ ಸಣ್ಣ-ಪುಟ್ಟ ವಾಕ್ಯಗಳಲ್ಲಿ ಅಡಗಿರುತ್ತದೆ ಅಲ್ಲಾ? ಅನ್ನಿಸಿತು.



ಸರಿ, ಉಳಿದವರು ಕೆಲವರು ತುಂಬಾ ಹೊತ್ತಿನಿಂದ ನಮಗೆ ಕಾಯುತ್ತಿದ್ದ ಕಾರಣ. ಆ ವ್ಯಕ್ತಿಗೆ ಮತ್ತೆ ಸಿಗೋಣ ವೆಂದು ಹೇಳಿ ನಮ್ಮ ಮಾತು ಮುಗಿಸಿ, ಅವರನ್ನು ಕಳುಹಿಸಿ ವಾಹನವನ್ನೆರಿದೆವು. ಅಲ್ಲಿಂದ ಸೀದಾ ಬೇಲೂರು - ಹಳೇಬೀಡು ನೋಡಿ ಕೊಂಡು ಊರಿನ ಕಡೆಗೆ ಹೊರಟೆವು. ಮನೆ ಸೇರಿದಾಗ ರಾತ್ರಿ 11 ಗಂಟೆ ಯಾಗಿತ್ತು. ಮನೆಯಲ್ಲಿ ಎಲ್ಲರು ಪ್ರಯಾಣ ಬಂದಿದ್ದ ಕಾರಣ ಊಟವನ್ನು ದೊಡ್ಡಪ್ಪನ ಮನೆಯಲ್ಲಿ ಮಾಡಿ ಕೊಂಡು ಬಂದು ಮಲಗಿದೆವು.

blogspot add widget