ಶನಿವಾರ, ನವೆಂಬರ್ 7, 2009

ಏನಪ್ಪಾ ಇದು? ರೂಪಾಯಿಗೇನೇ ಬೆಲೆ ಕಟ್ಟೋದಾ!

ನಮ್ಮ ದೇಶ ಪ್ರಗತಿಯನ್ನ, ಸ್ವಾವಲಂಬನೆಯನ್ನ ಹೇಗೆ ಸಾಧಿಸೋದು? ಅದಕ್ಕೂ ಹಣ ದುಬ್ಬರಕ್ಕೂ ಇರುವ ಸಂಬಂದ ಏನು? ಹೀಗೆ ಇನ್ನೂ ಕೆಲ್ವು ಆರ್ಥಿಕ ವಿಷ್ಯಗಳನ್ನ ದೀರ್ಘವಾಗಿ, ಸರಳ್ವಾದ ಭಾಷೆಯಲ್ಲಿ, ಕುತೂಹಲ ಬರಿತ್ವಾಗಿ ಬರಿಬೇಕು ಅಂತೇಳಿ ತುಂಬಾ ದಿನದಿಂದ ಮನಸ್ಸಿತ್ತು. ವಾಣಿಜ್ಯ ವಿಷಯದಲ್ಲಿ ಪದವಿ ಮಾಡಿರೋವ್ರಿಗೆ ಇಂತಹ ವಿಷ್ಯಗಳು ತುಂಬಾ ಆಳ್ವಾಗಿ ತಿಳ್ದಿರುತ್ತೆ. ನಾನು ವಾಣಿಜ್ಯ ವಿದ್ಯಾರ್ಥಿ ಅಲ್ದೇ ಹೊದ್ರೂನೂ ಆಸಕ್ತಿಯಿಂದ ಅಷ್ಟೆ ಇಲ್ಲಿ ಬರೆದದ್ದು. ತಪ್ಪು-ಒಪ್ಪುಗಳು ಇರ್ಬೌದು. ಓದಿ ಮುಗ್ಸಿ ಮೇಲೆ ಬರಹ ಇಷ್ಟನೂ ಆಗ್ಬೌದು ಅಥ್ವ ಹೊಸ ಹೊಸ ಗೊಂದಲಗಳೂ ಸಹ ಆಗ್ಬೌದು. ವಾಕ್ಯಗಳು ಹಿಂದು-ಮುಂದು ಆಗ್ಬೇಕಾಗಿತ್ತು ಅನ್ನಿಸ್ಬೌದು, ಅಥ್ವ ಅರ್ಥನೇ ಆಗ್ದೇನೇ ಇರ್ಬೌದು. ಇವೆಲ್ಲವನ್ನೂ ಗಮನದಲ್ಲಿಟ್ಟು ಕೊಂಡು ಏನಾದ್ರೂ ಮುಂಜಾಗ್ರತೆ ಕ್ರಮಗಳನ್ನ ತಗೋ ಬೇಕು ಅನ್ಸಿದ್ರೆ, ತಗೋಂಡು ನಂತರ ಓದಿ.


~~~ ( * ) ~~~

"ವ್ಯಾಪಾರ" ಮೊದಲ? "ಹಣ" ಮೊದಲ? (ಹಣ ಹುಟ್ಟಿದ್ದು ಹೇಗೆ?)
ನಮ್ಮ ದಿನ ನಿತ್ಯದ ಒಡನಾಟದಲ್ಲಿ ಮೊದಲು ಬಂದಿದ್ದು, ಹಣವೂ ಅಲ್ಲ, ವ್ಯಾಪಾರವೂ ಅಲ್ಲ. ಮೊದಲು ಹುಟ್ಟಿದ್ದು ಅವಶ್ಯಕತೆ,
 * ಅವಶ್ಯಕತೆಯಿಂದ - ಅನಿವಾರ್ಯತೆ,
 * ಅನಿವಾರ್ಯದಿಂದ - ಅವಲಂಬನೆ,
 * ಅವಲಂಬನೆಯಿಂದ - ಪರಸ್ಪರ ಸಹಬಾಳ್ವೆ,
 * ಸಹಬಾಳ್ವೆಯಲ್ಲಿಯೇ - ಒಂದು ಸ್ಪರ್ದೆ.
 * ಈ ಸ್ಪರ್ದೆಯೇ - ವ್ಯಾಪಾರ.
 * ವ್ಯಾಪಾರಕ್ಕೆ ಅನುವಾಗೋದಕ್ಕೆ ಹುಟ್ಟಿದ ಹೊಸ ಅಂಶವೇ "ಹಣ".

ಉದಾಹರಣೆಗೆ,
 * ಮೊದ್ಲು ಮನುಷ್ಯನಿಗೆ ಬೇಕಿದ್ದು ತಿನ್ನೋಕೆ ಒಂದಿಷ್ಟು ಆಹಾರ, ಇದು ಅವಶ್ಯಕತೆ. ತಿನ್ನೋಕೇ ಬೇಕಾದ ಎಲ್ಲಾ ಉತ್ಪನ್ನಗಳನ್ನೂ  ಒಬ್ಬನೇ ವ್ಯಕ್ತಿಯಿಂದ ಅಥ್ವ ಒಂದೇ ಕುಟುಂಬದಿಂದ ಪೂರೈಕೆ ಮಾಡ್ಕೊಳ್ಳೊಕ್ಕೆ ಹಾಗ್ತಿರ್ಲಿಲ್ಲ.
 * ಅಕ್ಕಿಯಿದ್ದವ್ನತ್ರ ಗೋದಿ ಇರ್ತಿರ್ಲಿಲ್ಲ. ಗೋದಿ ಇದ್ದವ್ನತ್ರ ತರ್ಕಾರಿ ಇರ್ತಿರ್ಲಿಲ್ಲ. ಈಗ ಪರಸ್ಪರ ಸಹಕಾರ ಅನಿವಾರ್ಯವಾಯ್ತು. ಅಕ್ಕಿಯಿದ್ದವ್ನು ಒಂದಿಷ್ಟು ಅಕ್ಕಿ ಕೊಟ್ಟು ಅದಕ್ಕೆ ಬದಲಾಗಿ ಸ್ವಲ್ಪ ಗೋದಿ ಇರೋವ್ನತ್ರ ಗೋದಿಯನ್ನ, ತರ್ಕಾರಿಯವ್ನತ್ರ ತರ್ಕಾರಿಯನ್ನ ತೊಗೋಂಡ.
 * ಇದೇ ತರ ಉಳ್ದವ್ರು ಸಹ ತಮ್ಮ ಉತ್ಪನ್ನಗಳನ್ನ ಇತರರ ಉತ್ಪನ್ನಗಳೊಂದಿಗೆ ಅವಶ್ಯಕತೆಗೆ ತಕ್ಕಂತೆ ಕೊಟ್ಟು ತಗೋಳ್ಳೋ ವ್ಯವಸ್ಥೆ ಸೃಷ್ಠಿ ಆಯ್ತು. ಈ ರೀತಿ ಪರಸ್ಪರ ಒಬ್ಬರಿಗೊಬ್ರು ಅವಲಂಬಿತವಾದ್ರು.
 * ಈ ರೀತಿಯ ಪರಸ್ಪರ ಸಹಕಾರದ ಅನಿವಾರ್ಯತೆಯ ಅವಲಂಬನೆಯನ್ನೇ ನಾನು ಸಹಬಾಳ್ವೆ ಅಂತ ಕರೆದದ್ದು.
 * ಈ ಸಹಬಾಳ್ವೆ ಹೀಗೇ ವ್ಯವಸ್ಥಿತವಾಗಿ ಸಾಗ್ತ ಇತ್ತು. ಜನಸಂಖ್ಯೆ ಹೆಚ್ಚಾಯ್ತು, ಉತ್ಪನ್ನಗಳ ಉತ್ಫಾದನೆ ಹಾಗೂ (ಕ)ಬಳಕೆ ಎರ್ಡರ ಪ್ರಮಾಣವೂ ಹೆಚ್ಚಾಯ್ತ ಬಂತು. ಮುಂದೆ ಇದರಲ್ಲಿ ಪರಸ್ಪರ ಸ್ಪರ್ಧೆ ಏರ್ಪಟ್ತು.
 * ಈ ಸ್ಪರ್ಧೆಯನ್ನೇ ನಾನು ವ್ಯಾಪಾರ ಅಂದಿದ್ದು. ಆದ್ರೆ ಈ ಹೊಸ ವ್ಯಾಪಾರದ ವ್ಯವಸ್ಥೆಯಲ್ಲಿ ಒಂದಿನ ಒಂದು ಗೊಂದಲ ಉಂಟಾತು. ಹೇಗೆ?
 * ಅಕ್ಕಿ, ಗೋದಿ, ತರ್ಕಾರಿ ಅಥ್ವಾ ಇನ್ನಾವುದೇ ಉತ್ಪನ್ನವಾಗಿರ್ಬೌದು, ಇವುಗಳನ್ನ ಕೊಡು-ತಗೋಳ್ಳೋವಾಗ, ಇವುಗಳ ಅಳತೆಯ ಪ್ರಮಾಣದಲ್ಲಿ, ಮೌಲ್ಯದ ವಿಷಯದಲ್ಲಿ, ಸಾಕಾಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ವು. ಈ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆಯ ಅವಶ್ಯಕತೆ ಇದೆ ಅನ್ನಿಸ್ತು. ಈ ಹೊಸ ಬೆಳವಣಿಗೆಯ ಪ್ರಕಾರ, ಪರಸ್ಪರರು ನೇರ್ವಾಗಿ ತಮ್ಮ ತಮ್ಮ ಉತ್ಪನ್ನಗಳನ್ನ ಅದಲು-ಬದಲು ಮಾಡ್ಕೊಳ್ಳೊದರ ಬದಲು, ಪ್ರತೀ ಉತ್ಪನ್ನಗಳಿಗೆ ಒಂದಿಷ್ಟು ಮೌಲ್ಯ ನಿಗದಿ ಮಾಡಿದ್ರು, ಈ ಮೌಲ್ಯವನ್ನ ಅಳತೆ ಮಾಡ್ಲಿಕ್ಕೆ ಬಂದ ಮತ್ತೊಂದು ಹೊಸ ವ್ಯವಸ್ಥೆಯೇ "ಹಣ".
 * ವ್ಯಾಪಾರದಿಂದ ಹಣ, ಹಣದಿಂದ ಮತ್ತೋಂದಿಷ್ಟು ಹಣ. ಇದೆಲ್ಲಕ್ಕೆ ಅನುಕೂಲವಾಗುವಂತೆ ಒಂದು ಮಾರುಕಟ್ಟೆ.

ಜಾಗತಿಕವಾಗಿ ಹಣವನ್ನ ವಿವಿದ ರೀತಿಯಲ್ಲಿ ಗುರ್ತಿಸ್ತಾರೆ. ಉದಾಹರಣೆಗೆ,
 * ನಮ್ಮಲ್ಲಿ "ರೂಪಾಯಿ" ( Rs; INR)
 * ಬ್ರಿಟೀಷ್ರಲ್ಲಿ "ಪೌಂಡ್" ( £; GBP)
 * ಅಮೇರಿಕದ "ಡಾಲರ್" ( $; USD)
 * ಯುರೋಪಿನ "ಯೂರೋ"( €; EUR) ,
 * ರಷ್ಯದಲ್ಲಿ "ರಬಲ್" ( руб; RUB)
 * ಜಪಾನ್ನಲ್ಲಿ "ಯನ್" ( ¥; JPY) ಇತ್ಯಾದಿ... http://www.xe.com/symbols.php


ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರಗತಿಯನ್ನ ಪ್ರತಿಬಿಂಬಿಸೋದರಲ್ಲಿ ಕೆಳಗಿನ ಈ ಎರ್ಡೂ ಅಂಶಗಳು ಪಾತ್ರವಹಿಸ್ತಾವೆ.
 * ಹಣದ ಮೌಲ್ಯ
 * ಸ್ವಾವಲಂಬನೆ

ಹಣದ ಮೌಲ್ಯ ಅಂದ್ರೆ ಏನು? ಮೊದ್ಲು ತಿಳ್ಕೋಳ್ಳೋಣ.
ಹಣದ ಮೌಲ್ಯ ಅಂದ್ರೆ, ನನ್ನತ್ರ ಇರೋ ಪ್ರತಿ ಒಂದೊಂದು ರೂಪಾಯಿಗೆ, ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ ಅಂತ ಅರ್ಥ.


ಏನಪ್ಪಾ ಇದು, ರೂಪಾಯಿಗೇನೇ ಬೆಲೆ ಕಟ್ಟೋದಾ!!! ಏನದರರ್ಥ?
ನೋಡೋಣ ಸಾದ್ಯವಾದಷ್ಟು ತಿಳ್ಕೋಳ್ಳೊ ಪ್ರಯತ್ನ ಮಾಡೋಣ. ಉದಾಹರಣೆಗೆ, ಈಗ್ಗೆ ಸುಮಾರು ಇಪ್ಪತ್ತು ವರ್ಷದ ಹಿಂದೆ, ನಮ್ಮತ್ರ ಒಂನ್ನೂರು ರೂಪಾಯಿ ಇತ್ತು ಅಂದಿದ್ರೆ, ನಾಲ್ಕಾರು ಜನ ಇರೋಂತ ಒಂದು ಕುಟುಂಬಕ್ಕೆ ಒಂದು ವಾರಕ್ಕೆ ಸಾಕಾಗೋಷ್ಟು ತರ್ಕಾರಿ, ಅಕ್ಕಿ, ಬೇಳೆ, ಎಣ್ಣೆ, ಹಾಲು ಇತ್ಯಾದಿಯನ್ನ ಕೊಂಡ್ಕೋಂಡು ಬರ್ಬೌದಿತ್ತು. ಆದ್ರೆ ಇವತ್ತು ಕೇವಲ ಒಂದು ಲೀಟರ್ ಹಾಲಿನ ಬೆಲೆ ಇಪ್ಪತ್ತು ರೂಪಾಯಿ ಮುಟ್ಟಿದೆ. ಒಂದು ಕೇ.ಜಿ ಅಕ್ಕಿ ಬೆಲೆ ನಲವತ್ತು ದಾಟಿದೆ. ತರ್ಕಾರಿಗಳಂತೂ ಮಾರ್ಕಟ್ಟೆಗೆ ಹೋಗಿ ಕೊಂಡ್ಕೋಂಡು ನಮ್ಮ ಚೀಲದಲ್ಲಿ ಹಾಕ್ಕೋಳ್ಳೊಕಿಂತ ಮುಂಚೆ ಬೆಲೆ ಎಷ್ಟು ಅಂತ ಹೇಳೊಕ್ಕೇ ಸಾದ್ಯ ಇಲ್ಲ.

ಇರ್ಬೌದು ಆದ್ರೆ ಆವತ್ತು ವಾರಕ್ಕೆ ಹತ್ತು ರೂಪಾಯಿ ಸಿಗೋ ಕೆಲ್ಸಕ್ಕೆನೇ ಈವತ್ತು ನೂರು ರೂಪಾಯಿ ಸಿಗುತ್ತಲ್ಲಾ? ಆದಾಯನೂ ಹೆಚ್ಚು ಖರ್ಚೂ ಹೆಚ್ಚು, ಅದ್ರಲ್ಲಿ ಹಣದ ಮೌಲ್ಯದ ಪ್ರಶ್ನೆ ಏನ್ಬಂತು?

ಹೌದು, ಆವತ್ತಿನ ದಿನಗಳಲ್ಲಿ ಆದಾಯನೂ ಕಡ್ಮೆ ಇತ್ತು ತಕ್ಕಂತೆ ಖರ್ಚೂ ಕಡ್ಮೆ ಇತ್ತು. ಇವತ್ತಿನ ದಿನಗಳಲ್ಲಿ ಉತ್ಪಾದನೆಯನ್ನ ಹೆಚ್ಚು ಮಾಡ್ಕಳ್ಳಕ್ಕೆ ಅನೇಕ ಹೊಸ ಹೊಸ ತಂತ್ರಜ್ಞಾನವನ್ನ ಅಳವಡಿಸ್ಕೊಳ್ತಾ ಇದೀವಿ. ಆದ್ರೆ ಹೆಚ್ಚುತ್ತಿರೋ ಜನಸಂಖ್ಯೆಗೆ ಸರ್ಯಾಗಿ ಉತ್ಪಾದನೆ ಜಾಸ್ತಿ ಹಾಗ್ದೆ ಹೋದ್ರೆ, ಎಲ್ವೂ ತಲೆ ಕೆಳಗಾಗುತ್ತೆ. ಹೀಗಾಗಿಯೇ ತಂತ್ರಜ್ಞಾನಕ್ಕೆ ಇವತ್ತು ಇಷ್ಟೋಂದು ಮಹತ್ವ ಬರೋಕ್ಕೆ ಕಾರಣ್ವಾಯ್ತು.

ಒಂದು ಉದಾಹರಣೆಗೆ, ಇಂದಿರಾಗ್ಯಾಂದಿಯವ್ರ ಕಾಲ್ದಲ್ಲಿ ಹಸಿರು ಕ್ರಾಂತಿ ಹಮ್ಮಿಕ್ಕೊಂಡಿದ್ರು. ಆಗ ನಮ್ಮ ಆಹಾರ ಉತ್ಪನ್ನಗಳ ಪ್ರಮಾಣವನ್ನ ಅನೇಕ ಪಟ್ಟು ಹೆಚ್ಚಿಸ್ಕೊಳ್ಳಿಕ್ಕಾಯ್ತು. ಅದು ನಮ್ಗೆ ತುಂಬಾನೇ ಅನಿವಾರ್ಯವಾಗಿತ್ತು. ನಮ್ಮ ಜನಸಂಖ್ಯೆಯ ಅವಶ್ಯಕತೆಗಿಂತ ಎಷ್ಟೋ ಪಟ್ಟು ಕಡ್ಮೆ ಪ್ರಮಾಣದಲ್ಲಿ ನಮ್ಮಲ್ಲಿ ಆಹಾರ ಉತ್ಪಾದನೆ ಇತ್ತು. ಅವತ್ತಿನ ದಿನಗಳಲ್ಲಿ ಆಮದು ಮಾಡ್ಕೋಳ್ಳೊದು ಸಹ ದುಬಾರಿಯಿತ್ತು. ಅಥ್ವ ಅದು ಸಾದ್ಯವಿತ್ತೊ ಇಲ್ವೊ ನಂಗೊತ್ತಿಲ್ಲ.

ಹಣದ ಮೌಲ್ಯ ಏರು-ಪೇರು ಹಾಗೋಕ್ಕೇ ಕಾರ್ಣಗಳು ಹಲ್ವಾರು ಇರ್ಬೌದು. ಅತೀ ಮುಖ್ಯವಾಗಿ ಉತ್ಪಾದನೆ ಹಾಗೂ ಭಕ್ಷಕರ ಪ್ರಮಾಣದ ಮೇಲೆ ಇದು ತುಂಬಾ ಅವಲಂಬಿತವಾಗಿರುತ್ತೆ.
 * ಮೊದಲ್ನೇದ್ರ ಪ್ರಮಾಣ ಎರಡ್ನೇದ್ರ ಪ್ರಮಾಣಕ್ಕಿಂತ ಹೆಚ್ಚಿದ್ದಾಗ ಹಣದ ಬೆಲೆ (ಮೌಲ್ಯ) ಯೂ ಹೆಚ್ಚಾಗುತ್ತೆ.
 * ಮೊದಲ್ನೇದ್ರ ಪ್ರಮಾಣ ಎರಡ್ನೇದ್ರ ಪ್ರಮಾಣಕ್ಕಿಂತ ಕಡ್ಮೆಯಾದಾಗ ಹಣದ ಬೆಲೆ (ಮೌಲ್ಯ) ನೂ ಕುಸಿಯುತ್ತೆ.

ಇದೇ ಕಾರಣಕ್ಕೇನೇ ಇಂದಿರಮ್ಮನ ಕಾಲ್ದಲ್ಲಿ ನಮ್ಮ ರೂಪಾಯಿಯ ಮೌಲ್ಯ ಡಾಲರ್ ಎದುರಿಗೆ ದಾಖಲೆ ಪ್ರಮಾಣ್ದಲ್ಲಿ ಕುಸಿದಿದ್ದು. ಇವತ್ತಿಗೂ ಕುಸಿತಿದೆ.

ಎಲ್ಲಿವರ್ಗೆ ನಮ್ಮ ಉತ್ಪನ್ನಗಳ ಮೇಲೆ ಬೇರೆಯವ್ರು ಅವಲಂಬಿತ್ವಾಗಿರ್ತಾರೋ ಅಲ್ಲಿವರ್ಗೆ ನಾವು ಸುರಕ್ಷಿತವಾಗಿರ್ತೀವಿ. ನಮ್ಮಲ್ಲಿ ಯಾವ್ದೂ ಉತ್ಪಾದನೆ ಇಲ್ಲಾಂದ್ರೆ ಅಥ್ವ ನಮ್ಮಲ್ಲಿರೋ ಉತ್ಪನ್ನಗಳಿಗೆ ಬೇಡಿಕೆ ಇಲ್ಲಾಂದ್ರೆ ಮುಂದಿನ ಕಷ್ಟದ ದಿನಗಳ ಬಗ್ಗೆ ಎಚ್ಚರಿಕೆ ವಹಿಸ್ಬೇಕಾಗುತ್ತೆ. ಉತ್ಪಾದನೆಗೆ ಕಚ್ಚಾವಸ್ತುಗಳು ಬೇಕು. ಇಂತಹ ಕಚ್ಚಾವಸ್ತುಗಳಿಗೆ ನಾವು ಪ್ರತ್ಯಕ್ಷವಾಗಿ ಅಥ್ವ ಪರೋಕ್ಷವಾಗಿ ನೈಸರ್ಗಿಕ ಸಂಪನ್ಮೂಲಗಳನ್ನ ಅವಲಂಬಿಸಿದಿವಿ. ಆದ್ರೆ ಇಂತಹ ಸಂಪನ್ಮೂಲಗಳು ತುಂಬ ನಿರ್ದಿಷ್ಠವಾಗಿ ಹಾಗೂ ಸೀಮಿತ್ವಾಗಿ ದೊರಿತವೆ. ಅವಕ್ಕೂ ಒಂದು ಅಂತ್ಯ ಅಂತ ಇರುತ್ತೆ. ಕಾಲ ಕ್ರಮೇಣ ಒಂದೊಂದೇ ಸಂಪನ್ಮೂಲಗಳು ಸಂಪೂರ್ಣವಾಗಿ ಖಾಲಿ ಹಾಗ್ತಾ ಬರುತ್ವೇ.

ಈಗ ಜಾಗತಿಕ ಮಟ್ಟದಲ್ಲಿ ಒಂದು ದೇಶದ ಹಣದ ಮೌಲ್ಯ ಹಾಗೂ ಆ ದೇಶದ ಪ್ರಗತಿ ಪರಸ್ಪರ ಒಂದಂಕ್ಕೊಂದು ಜೊತೆ ಜೊತೆಯಾಗಿ ಸಾಗ್ತಾವೆ. ನಾವು ನಮ್ಮ ಹಣವನ್ನ ಜಾಗತಿಕ ಮಾರುಕಟ್ಟೆಯಲ್ಲಿ ವ್ಯಯಿಸಿ, ಅದರ ಮೌಲ್ಯಕ್ಕೆ ತಕ್ಕಂತೆ ಇತರೆ ಅವಶ್ಯಕ ಉತ್ಪನ್ನಗಳನ್ನ ಖರೀದಿ ಮಾಡ್ಬೌದು. ಅದೇ ರೀತಿ, ಇತರೆ ದೇಶ್ದವ್ರು ಸಹ ತಮ್ಮ ಹಣವನ್ನ ಖರ್ಚ್ಮಾಡಿ, ಅವರಿಗೆ ಅಗತ್ಯವಾದ ಉತ್ಪನ್ನಗಳನ್ನ ಖರೀದಿಸ್ಬೌದು.

ಇವತ್ತು ಅಮೇರಿಕದ ಅರ್ಥ ವ್ಯವಸ್ಥೆ ದುಸ್ಥಿತಿಯಲ್ಲಿದ್ದಾಗ, ಬೇರೆ ಹಲವರು ಇದ್ರಿಂದ ನಷ್ಟಕ್ಕೆ ಒಳ್ಗಾಗಿದ್ದು ಸುಳ್ಳಲ್ಲ. ಅದಕ್ಕೆ ಕಾರಣ ಇಲ್ಲಿ ನಾವು ಒಬ್ಬರ ಮೇಲೆ ಇನ್ನೋಬ್ರು ಅವಲಂಬಿಗಳಾಗಿರೋದು. ಇದೇ ಸಂದರ್ಭದಲ್ಲಿ ಇನ್ನೂ ಕೆಲ್ವು ದೇಶಗಳು ತಮ್ಮ ಉತ್ಪನ್ನಗಳ ಮಾರುಕಟ್ಟೆಯನ್ನ ವಿಸ್ತರಿಸ್ಕೋಂಡ್ವು. ಜಾಗತಿಕ ಮಟ್ಟದಲ್ಲಿ ಹಣದ ಮೌಲ್ಯದಲ್ಲಿ ಆದ ಏರು.ಪೇರುಗಳನ್ನ ಚಿತ್ರದಲ್ಲಿ ಗಮನಿಸಿ. ಚಿತ್ರ ಕೃಪೆ ಗೂಗಲ್ ‍ಹಾಗೂ ಮಿಂಗ್ ಡಾಟ್ ಕಾಂ.

ಮಾಹಿತಿ ಸಂಗ್ರಹಣೆ, ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ಅಲ್ಪ ಸ್ವಲ್ಪ್ ಚರ್ಚೆ, ಗೂಗಲ್ ತಾಣಗಳು ಹಾಗೂ ನನ್ನ ಅರ್ದಾಂಗಿಯ ಸಲಹೆಗಳು.


~~~ ( * ) ~~~

ನಿಮ್ಗೆ ಇಷ್ಟ ವಾಯ್ತು ಅಂದ್ರೆ ತಿಳ್ಸಿ, ಇನ್ನೋಂದಿಷ್ಟು ಬರಿತೀನಿ.

18 ಕಾಮೆಂಟ್‌ಗಳು:

shivu.k ಹೇಳಿದರು...

ಲೋದ್ಯಾಶಿಯವರೆ,

ಹಣ, ವ್ಯಾಪಾರ, ಅವಶ್ಯಕತೆ ಇತ್ಯಾದಿಗಳ ವಿಚಾರಗಳ ತುಂಬಾ ಚೆನ್ನಾಗಿ ಬರೆದಿದ್ದೀರಿ. ನನಗೆಮತ್ತೊಮ್ಮೆ ಪ್ರಥಮ, ದ್ವಿತೀಯ ಪದವಿಯ Economics ಪಾಠಗಳ ನೆನಪಾಯ್ತು.

ನಿಮ್ಮ ವಿವರಣೆಯೂ ಸರಳವಾಗಿರುವುದರಿಂದ ಎಲ್ಲರಿಗೂ ಅರ್ಥವಾಗುವಂತಿದೆ.
ಅಂದ ಹಾಗೆ ನಾನು ಪದವಿ ಪಡೆದಿದ್ದು ವಾಣಿಜ್ಯದಲ್ಲಿ. ಆದ್ರೆ ಮಾಡುತ್ತಿರುವ ಕೆಲಸಗಳೆಲ್ಲಾ ಬೇರೆ ಬೇರೆ. ನೀವು ಹಾಗೆ ಬೇರೆ ವಿಭಾಗದಲ್ಲಿ ಓದಿದ್ರೂ...ಈ ವಿಚಾರವನ್ನು ಚೆನ್ನಾಗಿ ಬರೆದಿದ್ದೀರಿ..

Ittigecement ಹೇಳಿದರು...

ಲೋದ್ಯಾಶಿಯವರೆ...

ಅರ್ಥಿಕಕ್ಕೆ ಸಂಬಂಧ ಪಟ್ಟ ಈ ವಿಚಾರ ನನ್ನ ಓದಿನಲ್ಲಿ ನಾನು ಓದಿಲ್ಲವಾಗಿತ್ತು..
ತುಂಬ ಸರಳವಾಗಿ, ಆಡುಮಾತಿನಲ್ಲಿ ವಿವರಿಸಿದ್ದೀರಿ...

ನಮ್ಮ ದೇಶ ಆರ್ಥಿಕವಾಗಿ ಯಾವ ದೇಶದ ಮೇಲೂ ಅವಲಂಬಿತವಾಗಿಲ್ಲ
(ಸ್ವಲ್ಪ ಮಟ್ಟಿಗೆ ಐಟಿ ಒಂದನ್ನು ಬಿಟ್ಟು)
ಉದಾಹರಣೆಗೆ ಸಿಂಗಾಪುರ ೧೦೦% ಅದು ಇತರ ದೇಶಗಳ ಮೇಲೆ ಅವಲಂಬಿತವಾಗಿದೆ...

ನಮ್ಮ ದೇಶ ಆರ್ಥಿಕವಾಗಿ ಬೇರೆ ದೇಶವನ್ನು ಅವಲಂಬಿಸುವ ಅಗತ್ಯವೂ ಅಷ್ಟಾಗಿ ಇಲ್ಲ...
ನಮ್ಮ ಉತ್ಪಾದನೆಗೆ ನಮ್ಮದೇ ಮಾರುಕಟ್ಟೆಯಿದೆ..
ನೂರು ಕೋಟಿ ಜನಸಂಖ್ಯೆ...!

ಹಾಗಿದ್ದಾಗಿಯೂ ಈ ಆರ್ಥಿಕ ಹಿಂಜರಿತ ನಮ್ಮ ಮೇಲೆ ಏಕಾಗಿದೆ...?

ಒಂದು ಒಳ್ಳೆಯ ಬರಹ ಕೊಟ್ಟಿದ್ದಕ್ಕೆ ಅಭಿನಂದನೆಗಳು...

ಸವಿಗನಸು ಹೇಳಿದರು...

ಲೋಹಿತ್,
ಹಣದ ಮೌಲ್ಯ, ಏರು-ಪೇರು, ಸ್ವಾವಲಂಬನೆ ಎಲ್ಲವನ್ನು ಬಹಳ ವಿವರವಾಗಿ ತಿಳಿಸಿದ್ದೀರ......
ಬಹಳ ಚೆನ್ನಾಗಿತ್ತು....
ಮತ್ತಷ್ಟು ಬರಲಿ.....
ಮಹೇಶ್!

Me, Myself & I ಹೇಳಿದರು...

ಆತ್ಮೀಯ ಶಿವೂಜಿ

ನಾವು ಎಷ್ಟೋ ವಿಷ್ಯಾಗಳನ್ನ ವಿದ್ಯಾರ್ಥಿ ಜೀವನದಲ್ಲಿ ಕಲಿತಿರ್ತೀವಿ. ಆದ್ರೆ ಅನೇಕ ಕಾರ್ಣಗಳಿಂದ ವಿಷ್ಯದ ಪ್ರಾಯೋಗಿಕ ಜ್ಞಾನ ನಮ್ಗೆ ಅಷ್ಟು ಸರ್ಯಾಗಿ ತಿಳಿದಿರೋಲ್ಲ. ಅದಕ್ಕೆ ನಮ್ಮ
* ಶಿಕ್ಷಣದ ವ್ಯವಸ್ಥೆ
* ಪೋಷಕರ ಒತ್ತಡ
* ಪರೀಕ್ಷೆಗಳ ಒತ್ತಡ
ಹೀಗೇ ಹಲ್ವಾರು ಕಾರ್ಣಗಳಿರ್ಬೌದು. ಅದು ನನ್ನ ಐಶ್ಚಿಕ ವಿಶ್ಯನೇ ಇರ್ಬೌದು ಅಥ್ವ ಈ ತರಹದ ಆಸಕ್ತಿ ಇರ‍ೋ ವಿಷ್ಯಾಗಳೇ ಇರ್ಬೌದು.

ಆದ್ರೆ ಕಲ್ತ್ಕೋಳ್ಳೊಕ್ಕೆ ವಿದ್ಯಾರ್ಥಿಗಳೇ ಆಗ್ಬೇಕಾಗಿಲ್ವಲ್ಲ? ಅದಕ್ಕೇ ಈ ಪ್ರಯತ್ನ.

ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ವಂದನೆಗಳು

Me, Myself & I ಹೇಳಿದರು...

ಆತ್ಮೀಯ ಪ್ರಕಾಶ್ಜಿ

ಹೌದು, ನಮ್ಮಲ್ಲಿ ಸಾಕಷ್ಟು ಬೇಡಿಕೆ(ಮಾರುಕಟ್ಟೆ) ಇದೆ. ಆದ್ರೂ
* ನಾವು ಪ್ರಗತಿಯ ದಿಕ್ಕಿನಲ್ಲಿ ಆಲೋಚಿಸಿದ್ರೆ ತುಂಬಾ ಕುಂಟ್ತಾ ಸಾಗ್ತಾ ಇದೀವಿ ಅನ್ಸುತ್ತೆ.
* ನಾವು ಸಾಕಷ್ಟು ವಿಭಾಗದಲ್ಲಿ ಸ್ವಾವಲಂಬಿಗಳಾಗಿದ್ರೂ ಅಮೇರಿಕಾದ ಹಿಂಜರಿತದ ಒತ್ತಡ ನಮ್ಮೇಲೆ ಏಕೆ ಅನ್ನೋದೂ ಒಂದು ಗೊಂದಲವಾಗ್ಬಿಟ್ಟಿದೆ.
* ಇಷ್ಟೋಂದು ಜನಸಂಖ್ಯೆ ಇದ್ರೂನೂ ಜಾಗತಿಕ ಮಟ್ಟದಲ್ಲಿ ನಮ್ಮದೇ ಆದ ಒಂದು ವಿಶೇಷ "ಛಾಪ" ನ್ನ ನಾವಿನ್ನೂ ಏಕೆ ಮೂಡಿಸಿಲ್ಲ? ಅಥ್ವ
* ನಮ್ಮನ್ನ ಇನ್ನೂ ಬಡ ರಾಷ್ಟ್ರ ಅಂತ್ಯಾಕೆ ಬಿಂಬಿಸ್ತಾರೆ?
ಹೀಗೇ ಹಲ್ವಾರು ಪ್ರಶ್ನೆಗಳು ಕಾಡ್ತಾವೆ.

ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗೆ ವಂದನೆಗಳು.

Me, Myself & I ಹೇಳಿದರು...

ಆತ್ಮೀಯ ಮಹೇಶ್ಜಿ

ನಾನು ಸರಳ್ವಾಗಿ, ಕುತೂಹಲ್ವಾಗಿ ಬರ್ದಿಯೋ ಪ್ರಯತ್ನದಿಂದ ಹೆಚ್ಚಿನ ಓದುಗರು ಓದಲಿ ಅನ್ನೋದೆ ನನ್ನ ಆಸೆ. ಹೊಸ ಬೆಳವಣಿಗೆಗಳು ನಮ್ಮ ಕನ್ನಡಿಗರಿಂದಲೇ ಆಗುತ್ತೆ ಅಂತಾದ್ರೆ ಅದ್ರಲ್ಲಿ ನಾವೂ ಒಂದಿಷ್ಟು ವಿಜಯೋತ್ಸವ ಆಚರಿಸ್ಬೌದಲ್ವೇ?

ಈ ಬರಹದ ಮುಂದಿನ ಕಂತಿಗೆ ಪ್ರಾಮಾಣಿಕ ಪ್ರಯತ್ನವನ್ನ ಮಾಡುವೆ, ಈ ನಿಮ್ಮ ಪ್ರೋತ್ಸಾಹ ನನ್ನ ಬರಹದ ಹುರುಪನ್ನ ಮತ್ತಷ್ಟು ಚಿಗುರಿಸುತ್ತೆ. ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗೆ ಧನ್ಯವಾದಗಳು.

ಶಿವಪ್ರಕಾಶ್ ಹೇಳಿದರು...

ಒಳ್ಳೆ ಸಂಗ್ರಹ ಮಾಡಿ ಬರೆದಿದ್ದೀರಿ...
Good Work :)

ಸಾಗರದಾಚೆಯ ಇಂಚರ ಹೇಳಿದರು...

ಲೋದ್ಯಾಶಿ ಸರ್,
ತುಂಬಾ ಸರಳವಾಗಿ ಜಟಿಲ ವಿಷಯವನ್ನು ತಿಳಿಸಿದ್ದಿರಿ,
ಹಣದುಬ್ಬರ ದೊಡ್ಡ ಸಮಸ್ಯೆ ಹೌದು
ಜನಸಂಖ್ಯೆ ಹೆಚ್ಚಿದ್ದರಿಂದ ನಮಗೆ ಯಾವುದೇ ಸಮಸ್ಯೆ ಎದುರಾಗಬಾರದಿತ್ತು ಇಂಥಹ ಸಂದರ್ಭದಲ್ಲಿ
ಆದರೆ ಏನಾಗುತ್ತಿದೆ ತಿಳಿಯುತ್ತಿಲ್ಲ

Me, Myself & I ಹೇಳಿದರು...

ಆತ್ಮೀಯ ಶಿವುಪ್ರಕಾಶ್
ನಿಮ್ಮ ಪ್ರೊತ್ಸಾಹಕ್ಕೆ ಧನ್ಯವಾದಗಳು

Me, Myself & I ಹೇಳಿದರು...

ಆತ್ಮೀಯ ಗುರುಮೂರ್ತಿಜಿ
ನಿಜ ಇದೊಂತರಾ ಜಟಿಲ ವಿಷ್ಯ. ಅದಕ್ಕೆ ಸರಳ್ವಾಗ್ಸಿ ಬರಿಯೋ ಕೆಲ್ಸಕ್ಕೆ ಕೈ ಹಾಕಿದ್ದು.
ಇನ್ನೂ ಹೆಚ್ಚು ಆಳ್ವಾಗಿ ಬರೆದ್ರೆ, ನಿಮ್ಮ ಪ್ರಶ್ನೆಗೆ ಉತ್ರ ಖಂಡಿತ ಸಿಗುತ್ತೆ ಅನ್ನೋ ನಂಬಿಕೆ ಇದೆ.
ನಿಮ್ಮ ಪ್ರೊತ್ಸಾಹಕ್ಕೆ ಧನ್ಯವಾದಗಳು

ಚುಕ್ಕಿಚಿತ್ತಾರ ಹೇಳಿದರು...

ಲೋದ್ಯಾಶಿಯವರೆ.....

ನನಗೆ ವಾಣಿಜ್ಯ ವಿಷಯಗಳು ಅ೦ದ್ರೆ ಯಾವಾಗಲೂ ಸ್ವಲ್ಪ ಗೊ೦ದಲವೇ...

ನೀವು ಸರಿಯಾಗಿ ಅರ್ಥ ಮಾಡಿಸಿದ್ದೀರ .

ಧನ್ಯವಾದಗಳು.

ಗೋಪಾಲ್ ಮಾ ಕುಲಕರ್ಣಿ ಹೇಳಿದರು...

ತುಂಬಾ ಸರಳವಾಗಿ ಚೆನ್ನಾಗಿ ವಿವರಿಸಿದ್ದಿರ...ಧನ್ಯವಾದಗಳು.

ಸುಪ್ತವರ್ಣ ಹೇಳಿದರು...

ಲೋದ್ಯಾಶಿಯವರೇ,

ನಿಮ್ಮ ಬರಹಗಳನ್ನು ಒಂದೊಂದಾಗಿ ಈಗ ಓದುತ್ತಿದ್ದೇನೆ. ತುಂಬಾ ಇಷ್ಟವಾದವು!

Me, Myself & I ಹೇಳಿದರು...

ಆತ್ಮೀಯ ಚಿತ್ರಾರವ್ರೆ (ಚುಕ್ಕಿಚಿತ್ತಾರ)
ವಾಣಿಜ್ಯ ವಿಷಯಗಳು ಅನ್ನೋ ತರ ಇದನ್ನ ಬರೀ ಬಾರ್ದು ಅಂತಾನೆ, ಈ ರೀತಿ ಕುತೂಹಲ್ವಾಗಿ ಇರ್ಲಿ ಅಂತ ಬರಿಯೋ ಯೋಜ್ನೆ ಮನಸ್ಸಿಗೆ ಬಂದದ್ದು.

ನಿಮಗೆ ಇಷ್ಟ ಆದ್ರೆ ಅದು ನಂಗೆ ಬೊನಸ್ ಇದ್ದ ಹಾಗೆ. ಪ್ರೋತ್ಸಾಹದ ಮಾತುಗಳಿಗೆ ವಂದನೆಗಳು

Me, Myself & I ಹೇಳಿದರು...

ಆತ್ಮೀಯ ಗೋಪಾಲ್ಜಿ

ತುಂಬಾ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರ್ಲಿ.

Me, Myself & I ಹೇಳಿದರು...

ಆತ್ಮೀಯ ಸುಪ್ತವರ್ಣರವ್ರೆ.
ಬರಹಗಳನ್ನ ತುಂಬಾ ಇಷ್ಟಪಟ್ಟದ್ದಕ್ಕೆ ವಂದನೆಗಳು.
ಪ್ರೋತ್ಸಾಹದ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೇ ಬರುತ್ತಿರಿ. ಸದಾ ಸ್ವಾಗತ.

ಬಾಲು ಹೇಳಿದರು...

ತಲೆಗೆ ಸ್ವಲ್ಪ ಸ್ವಲ್ಪ ನುಗ್ಗುತ್ತಾ ಇದೆ. ಕಂಟಿನ್ಯೂ ಮಾಡಿ.

Me, Myself & I ಹೇಳಿದರು...

ಆತ್ಮೀಯ ಬಾಲುರವ್ರೆ

ನಿಮ್ಮ ಪ್ರೊತ್ಸಾಹದ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ಸಿಕ್ಕಿದೆ. ಮುಂದಿನ ಕಂತಿನ ಸಂಪಾದನೆ (ಎಡಿಟಿಂಗ್) ನಡಿತಾ ಇದೇ. :)

blogspot add widget