ಸ್ಕೂಲು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ಕೂಲು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ನವೆಂಬರ್ 1, 2009

ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು

ಕನ್ನಡ ರಾಜ್ಯೋತ್ಸವಕ್ಕೆ ಅಂತೇಳಿ ಕನ್ನಡ ಭಾಷಾಭಿಮಾನದ ವಿಶೇಷ ಬರಹ ಇದು. ಹಾಗಂತ ಇದ್ರಲ್ಲಿ ಯಾವ್ದನ್ನೂ ಹೊಸ್ದಾಗಿ ಬೇಯಿಸಿ ತಂದು ನಿಂಗೆ ಬಡಿಸ್ತಿರೊದಲ್ಲಾ. ಹತ್ತನೇ ತರಗತಿವರ್ಗೆ ಕನ್ನಡ ಮಾದ್ಯಮದಲ್ಲಿಯೇ ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಓದ್ಕೊಂನ್ಡು ಬಂನ್ದೀರೊವ್ನು ನಾನು. ಹಾಗಾಗಿ ಅದ್ರ ಬಗ್ಗೆನೇ ಒಂನ್ದಿಷ್ಟು ಬರೀತಿದೀನಿ.

ಇಂಗ್ಳೀಷ್ ಮಾದ್ಯಮದಿಂದ ಬಂದಂತಹ ವಿದ್ಯಾರ್ಥಿಗಳು ಕನ್ನಡ ಮಾದ್ಯಮದಿಂದ ಬಂದಂತ ವಿದ್ಯಾರ್ಥಿಗಳು ಅಂದ್ರೆ ಅಥ್ವಾ ಗ್ರಾಮೀಣ ಮಟ್ಟದಿಂದ ಬಂದಂತಹ ಮಕ್ಳು ಅಂದ್ರೆ ಒಂದ್ರೀತಿ ಕೀಳರಿಮೆಯಿಂದ, ಸಂಕುಚಿತ ಭಾವದಿಂದ ನೋಡೊದಂತು ಸಾಮಾನ್ಯ ಸಂಗ್ತಿ. ಅದಕ್ಕೆ ವಿದ್ಯಾರ್ಥಿಗಳನ್ನ ಮಾತ್ರ ಧೂಷಿಸಿ ಏನೂ ಪ್ರಯೋಜ್ನ ಇಲ್ಲಾ. ಯಾಕಂದ್ರೆ ಬಾಲ್ಯದಿಂದ್ಲೆ ಆ ರೀತಿ ಭಾವ್ನೆಗಳನ್ನ ಅವ್ರ ಪೋಷಕರು ಮಕ್ಳ ತಲೆಗೆ ತುಂಬಿರ್ತಾರೆ. ಮೊದ್ಲು ನಮ್ಮ ಸಮಾಜದಲ್ಲಿರೋ ಇಂಗ್ಲೀಷ್ ಪ್ರಿಯರ ಮಡಿವಂತಿಗೆ ಕಡ್ಮೆ ಹಾಗ್ಬೇಕು. ಇಲ್ದೇ ಹೋದ್ರೆ ಇದೇ ಸಂಸ್ಕ್ರುತಿ ಮುಂದುವರ್ದು ಭವಿಷ್ಯದಲ್ಲಿ ಕನ್ನಡ ಭಾಷೆ ಕಂಣ್ಮರೆ ಆಗೋಕ್ಕೆ ಶತಮಾನಗಟ್ಲೆ ಕಾಯೋ ಅವಶ್ಯಕತೆ ಇಲ್ಲಾ ಅನ್ಸುತ್ತೆ.

ಇಷ್ಟಕ್ಕೂ ಇಂಗ್ಲೀಷೇ ಮಾತೃ ಭಾಷೆ ಆಗಿದ್ರೂ, ಇವತ್ತು ಅಮೇರಿಕದಲ್ಲಿ ಯಾಕೆ ಈ ರೀತಿ ನಿರುದ್ಯೋಗ ಸಮಸ್ಯೆ ಅಂತ ಪ್ರಶ್ನೆನೇ ಬರಲ್ವೇ? ಅದಕ್ಕೆ ಇತರೇ ಹಲ್ವಾರು ಕಾರಣಗಳು ಇರ್ಬೌದು. ಆದ್ರೆ ಕೇವ್ಲಾ ಇಂಗ್ಳೀಷ್ ಬರುತ್ತೆ ಅಂದ ಮಾತ್ರಕ್ಕೆ ಉದ್ಯೋಗ ಖಾತ್ರಿ ಅಂತೇನೂ ಇಲ್ವಲ್ಲಾ?

ನಮಗಿಷ್ಟ ಬಂದ ಯಾವ್ದೇ ವಿಷಯವನ್ನಾಗಲಿ ಮಾತೃ ಭಾಷೆಯಲ್ಲಿಯೇ ಕಲಿಯೋ ವ್ಯವಸ್ಥೆ ಖಂಡಿತ ಬರ್ಬೇಕು. ಕಲಿಕೆಗೆ ಮಾದ್ಯಮವಷ್ಟೇ ಮುಖ್ಯಾ ಅಲ್ಲ. ಕಲಿಯೋ ಭಾವ್ನೆ, ಛಲ, ಆಸಕ್ತಿ ಸೌಕರ್ಯ ಕೂಡ ಇರ್ಬೆಕು. ಸೌಕರ್ಯ ಅಂದಾಕ್ಷಣ ಅದು ಇಂಗ್ಳೀಷ್ ಮಾದ್ಯಮ ಅಂತಲ್ಲಾ. ಕಲಿಕೆಗೆ ಇಂಗ್ಲೀಷ್ ಮಾದ್ಯಮ ಒಂದು ಸೌಕರ್ಯ ಅಲ್ಲ. ಅದೊಂದು ನಮ್ಮನ್ನ ನಾವು ರಾತ್ರಿ ಕಂಡ ಬಾವಿಗೆ ಹಗಲಲ್ಲಿ ತಳ್ಳಿಕೊಂಡು ಬಿದ್ದ ಉದಾಹರಣೆಯಷ್ಟೇ. ಮೊದ್ಲು ಇಂಗ್ಲೀಷ್ ಬಗೆಗಿನ ಅನಗತ್ಯ ವ್ಯಾಮೋಹ ದೂರ್ವಾಗ್ಬೇಕು.

ಇತ್ತೀಚೆಗೆ ಒಂದಿನ ಯುರೋಪಿನಲ್ಲಿ ರೈಲಲ್ಲಿ ಸಂಚರಿಸ್ತಾ ಇದ್ದೆ. ಆಗ ನನ್ನ ಪಕ್ಕ ಕೂತಿದ್ದ ಹುಡ್ಗಿ ದಾರಿ ತುಂಬಾ ಓದ್ತಿದ್ದನ್ನ ಗಮನ್ಸಿ ಪರಿಚಯ ಮಾಡ್ಕಂಡೆ. ಆಕೆ ಫಾರ್ಮಸಿ ವಿದ್ಯಾರ್ಥಿನಿಯಂತೆ. ಅವ್ಳ ಕೈಲಿದ್ದಾ ಪುಸ್ತಕ ಅವ್ಳ ಮಾತೃ ಭಾಷೆಯಲ್ಲಿಯೇ ಇದ್ದದ್ದನ್ನ ಕಂಡು, ನಾನು ಇಂಗ್ಲೀಷ್ ಮಾದ್ಯಮಕ್ಕೆ ಸೇರಿದಾಗ (ಪಿ.ಯೂ.ಸಿ) ಮೊದ ಮೊದ್ಲು ಅನುಭವಿಸಿದ ಗೊಂದ್ಲದ ದಿನಗಳನ್ನ ಊಹಿಸ್ಕೊಂಡೆ. ಆದ್ರೆ ನಮ್ಮಲ್ಲಿ ವಿಪರ್ಯಾಸವೆಂಬಂತೆ ವಿಗ್ನಾನವನ್ನ ಕಲಿಯೊಕ್ಕೆ ಇಂಗ್ಲೀಷ್ ಗೊತ್ತಿರ್ಲೇ ಬೇಕು ಅನ್ನೋ ಕಡ್ಡಾಯ ಇದೆ. ಕಾಗುಣಿತ ಕಲಿಯೊಕ್ಕೆ ಮೊದ್ಲೇ ಅ, ಆ, ಇ, ಈ ... ಕಲಿಲೇ ಬೇಕು ಒಪ್ಕೋಳೋಣ. ಆದ್ರೆ ವಿಗ್ನಾನ, ಗಣಿತ ಇಂತದ್ದೆಲ್ಲಾ ಕಲಿಯೊಕ್ಕೆ ಇಂಗ್ಲೀಷ್ ಕಡ್ಡಾಯ ಏಕೆ?

ಇವತ್ತು ನಮ್ದೇಶದ ಗ್ರಾಮೀಣ ಮಟ್ಟದ ಪ್ರತಿಭೆಗಳು ಸಹ ಬೆಳಕಿಗೆ ಬರ್ಬೆಕು ಅಂದ್ರೆ ನಮ್ನಮ್ಮಾ ಮಾತೃ ಭಾಷೆಯಲ್ಲೇ ಎಲ್ಲವನ್ನೂ ಕಲಿಯೋ ವ್ಯವಸ್ಥೆ ಖಂಡಿತ ಸ್ವಾಗತಾರ್ಹ. ಹಾ!!! ಒಂದ್ಮಾತು, ಇಷ್ಟು ಮಾತ್ರಕ್ಕೆ ಇವತ್ತಿನವರ್ಗೆ ನಮ್ಮ ಸಮಾಜದಲ್ಲಿ ಆಗಿರೋ ಅಭಿವೃದ್ದಿ ಕಾರ್ಯಾಗಳೆಲ್ಲಾ ಕೆವ್ಲಾ ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳಿಂದ ಅಥ್ವಾ ನಗರ ಪ್ರದೇಶದಿಂದ ಬಂದಿರೋ ಮಕ್ಳಿಂದ ಮಾತ್ರ ಅನ್ನೋ ತೀರ್ಮಾನಕ್ಕೆ ಬಂದ್ಬಿಡ್ಬೇಡಿ. ಎಷ್ಟೇ ಅಸೌಕರ್ಯಗಳಿದ್ರೂ ಸಹ, ಗ್ರಾಮೀಣ ಮಟ್ಟದ ಹಾಗೂ ಕನ್ನಡ ಮಾದ್ಯಮದ ಮಕ್ಳು ಸಹ ಸಾಕಷ್ಟು ಸಾಧನೆಗಳನ್ನ ಮಾಡಿದ್ದಾರೆ. ಮಾಡ್ತಿದಾರೆ, ಮುಂದೆಯೂ ಮಾಡ್ತಾರೆ.

ಯಾವ್ದೇ ವಿಷ್ಯಾವನ್ನಾ ಮಾತೃ ಭಾಷೆಯಲ್ಲಿಯೇ ಕಲಿ ಬೇಕಾದ್ರೆ, ವಿದ್ಯಾರ್ಥಿಗಳಿಗೂ ಸಾಕಷ್ಟು ಸರಳ್ವಾಗಿ, ಸುಲಭ್ವಾಗಿ ಅರ್ಥ ಆಗುತ್ತೆ. ಆದ್ರೇ ಅಲ್ಲೊಮ್ಮೆ ಇಲ್ಲೊಮ್ಮೆ ಬರುವಾ
 * ಗಣಿತದ ಪ್ರಮೇಯಗಳ ನಿರೂಪಣೆಯೋ
 * ವಿಗ್ನಾನದಲ್ಲಿ ಬರೋ ನಾಮಪದಗಳೋ, ಕ್ರಿಯಾಪದಗಳೋ ಅಥ್ವಾ
 * ಇನ್ನೂ ಕೆಲ್ವು ಸಾಮಾನ್ಯ ಪದಗುಚ್ಚಗಳೋ
ಅಲ್ಪ ಸ್ವಲ್ಪ ಕಷ್ಟವಾಗ್ಬೌದು. ಅದಕ್ಕೇಂತ ಶಿಕ್ಷಣ ಮಾದ್ಯಮವನ್ನೇ ಬದಲ್ಸೋದು ಎಷ್ಟು ಸೂಕ್ತ ಹೆಜ್ಜೆ? ಕಲಿಕೆಯಲ್ಲಿ ಮೊದಮೊದ್ಲು ಎಲ್ಲವೂ ಕಷ್ಟವಾಗೋದು ಸಾಮಾನ್ಯ. ಅದಕ್ಕೇ ಅದನ್ನ ಕಲಿಕೆ, ಶಿಕ್ಷಣ ಅಂತ ಅನ್ನೋದು. ಇಲ್ದೇ ಹೊದ್ರೆ ಶಿಕ್ಶಣಿಕಿಂತ ಮೊದ್ಲೇ ಪರೀಕ್ಷೆಗಳನ್ನ ನಡೆಸ್ಬೌದಾಗಿತ್ತು.

ಇಂಗ್ಳೀಷ್ ಮಾದ್ಯಮದಲ್ಲಿ ಅಂದ್ಮಾತ್ರಕ್ಕೆ ವಿಘ್ನಾನ, ಗಣಿತ ಎಲ್ವೂ ಕಲಿಯಕ್ಕೇ ಸರಲ್ವಾಗುತ್ತೆ, ಸುಲಭ್ವಾಗುತ್ತೆ ಅಂತಾದ್ರೆ
 * ಇಂಗ್ಲೀಷ್ನಲ್ಲಿ ಈ ವಿಷ್ಯಗಳಿಗೆ ಸಂಬಂದಿಸಿದ ಕಠಿಣ ಪದಗಳೇ ಇಲ್ವೇ?
 * ಆಗಿದ್ರೆ, ಇಂಗ್ಲೀಷ್ನಲ್ಲಿ ನಿಘಂಟು ಅಂತಾನೇ ಇಲ್ವೇ? ಇದ್ರೂ ಅದನ್ಯಾರೂ ಬಳಸೊದೇ ಇಲ್ವೇ?
 * ಯಾವ್ದೇ ಇಂಗ್ಳೀಷ್ ಪುಸ್ತಕ ಓದಿದ ಕೂಡ್ಲೇ ಎಲ್ವೂ ಸರಳ್ವಾಗಿ ಅರ್ಥ ಆಗ್ಬೇಕು ತಾನೇ?
 * ಅಂಗಾದ್ರೇ, ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳೇಕೆ ಕಾಂನ್ವೆಟ್ಗೆ, ಶಾಲೆಗೆ, ಕಾಲೇಜ್ಗೆ ಹೋಗ್ತಾರೆ?
 * ವಿಶೇಷ ಮನೆಪಾಠಕ್ಕೆ (ಟ್ಯೂಷನ್) ಯಾಕೇ ಹೋಗ್ತಾರೆ?
 * ಮನೇಲೇ ಕೂತ್ಕಂಡು, ಸ್ವಂತ ಓದಿ ಎಲ್ಲಾ ಕಲ್ಕೋ ಬಹುದಲ್ವೇ?
 * ಕೊನೆಗೆ ಒಟ್ಟಿಗೇ ವರ್ಷದಲ್ಲಿ ಒಂದ್ಸಾರಿ ಪರೀಕ್ಷೆ ಬರಿಯೋಕ್ಕೆ ಮಾತ್ರ ಬಂದ್ರೆ ಸಾಕಾಗಲ್ವೇ?
 * ಇದ್ರಿಂದಾ ನಮ್ಮ ಸರ್ಕಾರಕ್ಕೂ ಹಾಗೂ ಎಲ್ಲಾ ಪೋಷಕರಿಗೂ ಸಾಕಷ್ಟು ಖರ್ಚು ಕಡ್ಮೆ ಹಾಗ್ತಿತ್ತಲ್ವೇ?
 * ಎಲ್ರೂ ತಮ್ತಮ್ಮಾ ಮನೇಲೇ ಒದ್ಕೊಂಡ್ರೆ ಸಾಕು ಅಂತಾದ್ರೆ ಕೆವ್ಲಾ ಆಸಕ್ತಿಯೊಂದಿದ್ರೆ ಸಾಕು, ಎಂತಹ ಬಡ ವಿದ್ಯಾರ್ಥಿ ಸಹ ಸಾಕಷ್ಟು ವಿದ್ಯಾಬ್ಯಾಸ ಮಾಡ್ಬೌದಾಗಿತ್ತಲ್ವೇ?
 * ಆಗ, ನಂದೇಶದ ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು ಇರ್ತಿದ್ದ್ರಲ್ವೇ?

ಆದ್ರೂ ಇವತ್ತು ಇಂಗ್ಲೇಂಡ್, ಅಮೇರಿಕ, ಆಸ್ಟ್ರೇಲಿಯಾ ಇಲ್ಲೇಲ್ಲಾ
 * ಕಾಂನ್ವೆನ್ಟ್ ಗಳು
 * ಕಾಲೇಜ್ಗಳು
 * ವಿವಿದ ವಿಶ್ವ ವಿದ್ಯಾನಿಲಯಗಳು
ಅಂತ ಯಾಕಿವೇ? ಅಲ್ಲೇಲ್ಲಾ ಜನರ ಮಾತೃ ಭಾಷೆನೇ ಇಂಗ್ಲೀಷ್ ಅಲ್ವೇ?

ಯುರೋಪ್ ರಾಷ್ಟ್ರಗಳಲ್ಲಿ, ರಷ್ಯಾದಲ್ಲಿ, ಜಪಾನ್ನಲ್ಲಿ, ಅಷ್ಟು ದೂರ ಏಕೆ? ಪಕ್ಕದ ಚೀನಾದಲ್ಲಿ, ಇಂದಿಗೂ ಇಂಗ್ಲೀಷ್ ಭಾಷೆ ಅಂದ್ರೆ ನಂಮ್ದೇಶ್ದಲ್ಲಿ ಸಿಗೋ ರೀತಿಲಿ ವಿಷೇಶ ಪ್ರತಿಷ್ಟೆ, ಘನತೆ, ಮಾರ್ಯಾದೇ ಯಾವ್ದೂ ಸಿಗಲ್ಲಾ. ಆದ್ರೂ ಈ ದೇಶಗಳು ನಂಮ್ದೇಶಕ್ಕಿಂತ ಯಾವುದ್ರಲ್ಲಿ ಹಿಂದೆ ಇದಾವೇ ಸ್ವಾಮಿ? ಆದ್ರೆ ನಮ್ಮ ಸಮಾಜ್ದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಳೀಷ್ ಭಾಷೇನ ಬಳ್ಸೋದು ಅಂದ್ರೆ ಅವ್ರ ಪ್ರತಿಷ್ಟೆ, ಘನತೆ, ಗೌರವ ಹೆಚ್ಚಾದಂತೆ ಮತ್ತೆ ಅದನ್ನ ತಮ್ಮ ಅಭಿವೃದ್ದಿ ಸಂಖ್ಯೇತವಾಗಿ ಭಾವಿಸ್ತಾರಲ್ಲಾ? ಅದು ಯಾಕೆ?

ಈ ಪ್ರಶ್ನೆಗೆ ಉತ್ತರ ಸರಳ. ಬ್ರಿಟೀಷರು ನಮ್ಮ ಮೇಲೆ ಇನ್ನೂರು ವರ್ಷ ಸತತ್ವಾಗಿ ದಬ್ಬಾಳಿಕೆ ಮತ್ತೆ ಅತ್ಯಾಚಾರ ಮಾಡಿದ್ದೇ ಇದಕ್ಕೆಲ್ಲಾ ಮೂಲ ಕಾರ್ಣ.
ಇಲ್ದೇ ಹೋಗಿದ್ರೆ?
 * ಕನ್ನಡನೂ ಇಲ್ಲಾ
 * ಇಂಗ್ಲೀಷ್ ಕೂಡ ಇಲ್ಲಾ.

ಕೆಲ್ವು ಮೂಲಗಳ ಪ್ರಕಾರ, ಪ್ರಪಂಚದಲ್ಲಿ ಸದ್ಯಕ್ಕೆ ಅತೀ ಹೆಚ್ಚು ಇಂಗ್ಲೀಷ್ ಮಾತಾಡೋವ್ರ ಜನಸಂಖ್ಯೆಯಲ್ಲಿ ನಮ್ದೇಶಕ್ಕೆ ತೃತೀಯ ಸ್ಥಾನ ಸಿಗುತ್ತಂತೆ. ತುಂಬಾ ಅದ್ಬುತ ಸಾಧನೆ ಅಲ್ವೇ? ನಮ್ದೇ ದೇಶದ ಪ್ರತಿಭೆಗಳನ್ನ ಬಲಸ್ಕೋಳ್ದೇ ಹೋದ್ರೂನೂ ಪರ್ವಾಗಿಲ್ಲಾ, ಪ್ರೋತ್ಸಾಸದೇ ಹೋದ್ರೂ ಪರ್ವಾಗಿಲ್ಲಾ, ನಮ್ಗೆ ಇಂಗ್ಲೀಷ್ ಮಾತಾಡಕ್ಕೆ ಮಾತ್ರ ಚೆನ್ನಾಗಿ ಬರುತ್ತೆ. ಶಬ್ಬಾಶ್!

ಇಂಗ್ಲೀಷ್ರು ಬಂದ್ರು ಮುಸಲ್ಮಾನ ದೊರೆಗಳು ಮಾಡ್ತಿದ್ದಾ ದಬ್ಬಾಳಿಕೆಯಿಂದ ನಮ್ಮ ಸಮಾಜನ ಬಚಾವ್ ಮಾಡಿದ್ರು, ಇಲ್ದೇ ಹೋಗಿದ್ರೆ? ಏನಾಗ್ತಿತ್ತು ಅಂತೇಳಿ ಕೊನೆಗೆ ಒಂದು ಹಾಸ್ಯ ಸಂಭಾಷಣೆಯೊಂದಿಗೆ ಈ ಬರಹನ ಮುಗಿಸ್ತೀನಿ

 "ಹೇಯ್, ನಿಂಬ್ದು ಬೇಟಾ, ಯಾವ್ದೂ ಭಾಷೇಲಿ ಓದ್ತದೆ?"

 "ಜಿ, ನಮ್ದುಗೆ ಬೇಟಾಗೆ, ಕನ್ನಡಾಗೆ ಓದ್ತದೆ."

 "ಹೇ! ನಿಂಮ್ದುಗೇ ಇನ್ನೂ ಯಾವ್ದೂಗೇ ಕಾಲ್ದಾಗೇ ಐತೆ? ಕನ್ನಡಾಗೆ ಕಲ್ತು ಏನು ಉಪ್ಯೊಗ ಆಯ್ತದೆ? ಅನ್ತ ಕಳೀಸ್ತೀರಿ?"

 "ಜಿ, ಯಾಕೇ? ಈಗ ನಂಮ್ದುಗೇ ಏನಾತು?"

 "ನಮ್ದುಗೆ ನವಾಬಂಗೆ ಹೇಳಿದ್ದು ನಿಮ್ಗೆ ಇನ್ನೂ ಗೊತ್ತಾಗಿಲ್ಲಾ? ಎಲ್ರೂ ಉರ್ದೂಗೆ ಭಾಷೇಲೀ ಕಲ್ಸಿ ಅಂತ ಹೇಳಿದಾರೆ! ಮುಂದೆ, ಮಕ್ಳಿಗೇ ಇಗ್ನಾನ, ಗಣಿತ ಕಲಿಯಕ್ಕೆ ಶಾನಾ ಸುಲ್ಬಾ ಆಯ್ತಾದಂತೆ!"

 "ಹೌದಾಜೀ, ಇದು ನಮ್ದುಗೇ ಗೊತ್ತೇ ಇರ್ಲಿಲ್ಲಾ. ಇಗೋ ಈಗ್ಲೇ ಹೋಗಿ, ನಂಮ್ದುಗೇ ಬೇಟಾಂದು, ಉರ್ದುಗೇ ಮಾದ್ಯಾಮಕ್ಕೆ  ಸೇರಿಸ್ತದೆ!, ಜೈ ನವಾಬ್"

ಜೈ ಹಿಂದ್ ,
ಜೈ ಕರ್ನಾಟಕ ಮಾತೆ.

ಗುರುವಾರ, ಜುಲೈ 30, 2009

ನನ್ನೇ ನಾ ಮರೆತಂತೆ... P.U.C.. Please U C

ಇಲ್ಲಿಗೆ ಸುಮಾರು ಒಂದೂವರೆ ಅಥವಾ ಎರಡು ವರ್ಷದ ಹಿಂದೆ ಬಿಡುಗಡೆ ಆಗಿದ್ದ "ಪಿ.ಯೂ.ಸಿ" ಅನ್ನೋ ಹೆಸರಿನ ಕನ್ನಡಚಲನಚಿತ್ರದ ಬಗ್ಗೆ ಈಗ ನಾನು ವಿಮರ್ಶೆ ಬರೀತಾ ಇದ್ದೀನಿ ಅಂತ ತಪ್ಪು ತಿಳಿ ಬೇಡಿ. ಈ ಸಬ್- ಟೈಟಲ್ ಈ ಬರಹಕ್ಕೆ ಒಂತರಾಸರಿಯಾಗಿ ಒಪ್ಪಿಕೊಳ್ತಾ ಇರೋದರಿಂದ ಅದನ್ನ ಬಳಸಿಕೊಂಡೆ ಅಷ್ಟೇ.

ಉಳಿದಂತೆ ಬರಹದಲ್ಲಿ ಏನಾದರು ತಪ್ಪು ಕಾಗುಣಿತಅಥವಾ ತಪ್ಪು ವ್ಯಾಕರಣ ಕಂಡರೆ ಓದುಹುದನ್ನು ನಿಲ್ಲಿಸ ಬೇಡಿ. ಪೂರ್ತಿ ಓದಿ ಕೊನೆಗೆ ಕಾಮೆಂಟ್(ಅನಿಸಿಕೆ) ಬರಿಯೋದನ್ನಮರೆಯ ಬೇಡಿ.

ಈಗ ಬರಹ ಆರಂಬ... ಒಂದು 15 ನಿಮಿಷದಲ್ಲಿ ಓದಿ ಮುಗಿಸಿ ಬಿಡ ಬಹುದು. ಓದಿಕೊಳ್ಳಿ .

ಒಳ್ಳೆ ಹುಡುಗ , ಸ್ವಲ್ಪ ಜಾಣ , ಶಾಲೆಯಲ್ಲಿ, ಆಟ-ಪಾಠದಲ್ಲಿ ಚುರುಕು. ಸ್ವಲ್ಪ ಜುಗ್ಗ. ಅಕ್ಕ-ಪಕ್ಕದಲ್ಲಿ ಗೌರವ ಮತ್ತು ಪ್ರೀತಿ.

ಹೆಚ್ಚು ಹೆಚ್ಚು ಆಟ, ಅಲ್ಪ-ಸ್ವಲ್ಪ ಓದು. ಆದರೂ ತರಗತಿಯಲ್ಲಿ ಮೊದಲು ಅಥವಾ ಎರಡು ಅಥವಾ ಮೂರನೆ ಸ್ಥಾನ ಖಾಯಂ. ಒಮ್ಮೊಮ್ಮೆ ತೀರ ಹೆಚ್ಚು ಅನ್ನಿಸುವಸ್ಟು ಆತ್ಮ ವಿಸ್ವಾಸ ಕೆಲವೊಮ್ಮೆ ತೀರ ಪೆದ್ದು ಪೆದ್ದು ಆಗಿ ಆಡೋ ಅಹಂಕಾರ. ಮನೆಯಲ್ಲಿ ಅಹಂಕಾರ ಇನ್ನೂ ಜಾಸ್ತಿ.

ಇಬ್ಬರು ಅಕ್ಕಂದಿರು... ಆಗಂತ ತೀರ ವಿಶೇಷ ಪ್ರೀತಿ ಏನೂ ಇರ್ತಿರ್ಲಿಲ್ಲ. ಆದರೆ ಮನೆಯಲ್ಲಿ ಕೆಲಸಮಾಡ್ತಿರಲಿಲ್ಲ ಅಷ್ಟೇ.

ಮುಂದೆ. ಹೀಗೇ ಒಂದು ದಿನ 10 ಕ್ಲಾಸ್ ಪರೀಕ್ಸ್ಷೆ ಮುಗಿಯಿತು... ಫಲಿತಾಂಶ ಬಂದಾಗ ಮನೆಯಲ್ಲಿ ಒಂದು ವಿಶೇಷ ಮರ್ಯಾದೆಕೂಡ ದಕ್ಕಿತು. ಅದಕ್ಕೆ ಕಾರಣ ನನ್ನ ಮಾರ್ಕ್ಸ್-ಶೀಟ್ ಆಗಿತ್ತು.

ಯಸ್, ನನಿಗೆ ಕೂಡ ತಿಳಿಯದೆ ನನ್ನ ಜವಾಬ್ದಾರಿನಾ ಅದು ಇನ್ನುಹೆಚ್ಚು ಮಾಡಿತ್ತು... ಅದಕ್ಕೆ ಕಾರಣ ಇದಕ್ಕಿಂತ ಇನ್ನು ಹೆಚ್ಚು challenging ಆಗಿದ್ದ ದಿನಗಳು ತೀರ ದೂರ ಉಳಿದಿರಲಿಲ್ಲ.

ಪಿ.ಯೂ.ಸಿ ಅಂತ ಶಿವಮೊಗ್ಗ ದಲ್ಲಿ ಒಂದು ಕಾಲೇಜ್ಗೆ ಸೇರಿಸಿ ವೀರಶೈವ ಹಾಸ್ಟೆಲ್ ನಲ್ಲಿ ಎರಡು ವರುಷ ಇರುಹುದು ಅಂತ ಮನೆಯಲ್ಲಿತಿಳಿಸಿದರು. ಮೊದ-ಮೊದಲು ಹಾಸ್ಟೆಲ್ ಅನುಭವ ತುಂಬಾ ಖುಷಿ ಕೊಟ್ಟಿತು.

ಸ್ನೇಹಿತರ ಜೊತೆ ಆಟ-ಊಟ-ತಿಂಡೀ, ಪ್ರತಿಭಾನುವಾರ ಸಾ~ಕು ಅನ್ನಿಸುವಸ್ಟು ಕ್ರಿಕೆಟ್, ಮತ್ತೆ ಫಿಸಿಕ್ಸ್ ಟೊಶನ್. ಜೊತೆಗೆ ಆ ಯರ್ರಾ-ಬಿರ್ರಿ ಸ್ಟ್ರಿಕ್ಟ್ ಕಾಲೇಜ್. ಆದರೆ ಹಾಸ್ಟೆಲ್ ಜೀವನಲ್ಲಿ ನನಿಗೆ ಏನೋ ಒಂದು ಕಳೆದು ಹೋಗಿದೆ ಅಂತ ಅನ್ನಿಸಲಿಕ್ಕೆ ಶುರುವಾಯ್ತು.

ಅದು ಏನು ಅಂತ ಯಾರಹತ್ತಿರಾನೂ ಹೇಳೋ ಆಗೂ ಇರಲಿಲ್ಲ-ಕೇಳೂ ಆಗೂ ಇರಲಿಲ್ಲ. ಯಾಕಂದ್ರೆ ಜೊತೆಗೆ ಇದ್ದವರೆಲ್ಲಾ ನನ್ನ ವಯಸ್ಸಿನ ಗೆಳೆಯರುಜೀವನದಲ್ಲಿ ನನಗಿಂತ ಏನೂ ವಿಶೇಷ ಅನುಭವ ಇಲ್ಲದವರು ಅನ್ನುವ ಸ್ವಯಂ ನಿರ್ಧಾರ.

ಅವರ ಹತ್ತಿರ ಹೀಗೆ-ಹೀಗೆ ಅಂತ ನಾನು ನನ್ನ ಕಥೆನ ಹೇಳಿದರೆ ಎಲ್ಲಿ ಅವರು ನನ್ನನ್ನ ದೂರ ಮಾಡ್ತಾರೋ ಅನ್ನೋ ಭಾವನೆ . ಅಥವಾ ಸ್ವಲ್ಪ ಸ್ವಾಭಿಮಾನ ಕೂಡ ಇರಬಹುದು.ಆದರೂ ಒಂದು ಇಬ್ಬರ ಹತ್ತಿರ ನನ್ನ ಅನುಭವವನ್ನು ಹೇಳಿ ನೋಡಿದೆ.

ಆಗ ನನಗೆ ಅನ್ನಿಸಿದ್ದೇ ಅದು ಆಗಿದ್ದು .

ಆಗ ನನಿಗೆ ಪದೇ-ಪದೇ ಅನ್ನಿಸ್ತಾ ಇದ್ದಿದ್ದು ಏನಪ್ಪಾ ಅಂದ್ರೆ. ಸ್ನೇಹಿತರಿಂದ ಏನನ್ನೂ ಊಹಿಸ (ಬಯಸ) ಬಾರದು. ಅಂದರೆಮನೆಯಲ್ಲಿ ಅಪ್ಪ - ಅಮ್ಮ -ಅಕ್ಕ ಇವರಿಂದ ಸಿಗ್ತಾ ಇದ್ದ ಒಂದು excuse ಅಲ್ಲಿ ಸಿಕ್ತಾ ಇರಲಿಲ್ಲ.

ಎಷ್ಟು ಜನ ಸ್ನೇಹಿತರು ಜೊತೆಗೆಇದ್ದರೂ ಸಹ ಊರಲ್ಲಿ ಇದ್ದ ನನ್ನ ಮನೆ, ಅಪ್ಪ, ಅಮ್ಮ, ಹೊಲ, ತೋಟ, ನಾಯಿ ಹೀಗೆ ಪ್ರತಿಯೊಂದು ಕೂಡ watermark ತರಾಕಾಣಿಸ್ಕೊಳ್ತಾ ಇತ್ತು.

ಸೆಕೆಂಡ್ ಪಿ.ಯೂ.ಸಿ ಪ್ರಾರಂಬ ಆಯಿತು ನೋಡಿ, ಅದು ಮೊದಲ ಅರ್ಧ ಹೇಗೆ ಮುಗಿಯಿತು ಅಂತ ಕೂಡ ಇವತ್ತಿನ ವರಿಗೆ ನಾನು ಯೋಚಿಸಿಲ್ಲ. ಆದ್ರೆ ಎರಡನೇ ಪಿ.ಯೂ.ಸಿ ಅರ್ಧದಲ್ಲೇ ಸಾ~ಕ~ಪ್ಪಾ ಇದು ಅಂತ ಅನ್ನಿಸಲಿಲ್ಲವಾದರೂ, ಅದು ಒಂದು ರೀತಿ ಬಾಯಿ ಬಿಟ್ಟು ಹೇಳೋಕ್ಕೆ ಆಗದೆ ಇರುವಷ್ಟು ಬೋರ್ ಆಗಿತ್ತು ಅಂತ ನನಿಗೆ ಈಗ ಅನ್ನಿಸ್ತಾ ಇದೆ.

ಅದಕ್ಕೆ ಸ್ವಲ್ಪ ಕಾರಣಗಳೂ ಕೂಡ ಇವೆ.

ಮೊದಲ ವರ್ಷದ ಪಿ.ಯೂ.ಸಿ ಪರೀಕ್ಷೆ ಬರೆದು ಊರಿಗೆ ಬಂದಾಗ, ಸ್ವಲ್ಪ ಸಮಾಧಾನ ಕೂಡ ಇರಲಿಲ್ಲ. ಯಾಕಂದ್ರೆನಮ್ಮ ಎರಡನೇ ವರ್ಷದ ಪಿ.ಯೂ.ಸಿ ಕ್ಲಾಸೆಸ್ ಪ್ರಾರಂಬ ಆಗಲಿಕ್ಕೆ ಇದ್ದದ್ದು 15 ದಿನದ ವಿಶ್ರಾಂತಿ ಮಾತ್ರ .

ಸರಿ, 15 ದಿನ ರಜೆ ಮುಗಿಸಿ ಹಾಸ್ಟೆಲ್ ಗೆ ವಾಪಾಸ್ ಬಂದದ್ದಾಯಿತು. ಮತ್ತೆ ಮುಂದ್ಯಾ ? ಇನ್ನೆನು ? ಟೊಶನ್-ಕಾಲೇಜ್ - ಹಾಸ್ಟೆಲ್-ಟೊಶನ್-ಕಾಲೇಜ್. ಆದರೆ ಹಾಸ್ಟೆಲ್ನಲ್ಲಿ ಇನ್ನೂ ಮೆಸ್ (ಅಡಿಗೆ ಮನೆ) ಓಪನ್ ಆಗಿರಲಿಲ್ಲ. ಯಾಕಪ್ಪ ಅಂದರೆ ನಾವು ಎರಡನೇ ಪಿ.ಯೂ.ಸಿ ವಿಧ್ಯಾರ್ಥಿಗಳು ಮಾತ್ರ ಹಾಸ್ಟೆಲ್ ನಲ್ಲಿ ಇದ್ದದ್ದು.

ಉಳಿದವರಿಗೆ ಅಂದರೆ 1 ಪಿ.ಯೂ.ಸಿ ಅಥವಾ B.A , B.Sc ಮೊದಲಾದವರಿಗೆ ಕಾಲೇಜ್ ಓಪನ್ ಆಗಲಿಕ್ಕೆ ಇನ್ನೂ 1 ತಿಂಗಳು ಟೈಮ್ ಇತ್ತಲ್ಲ ಅದಿಕ್ಕೆ ಹಾಸ್ಟೆಲ್ಗೆ ಅವರು ಇನ್ನೂ ಯಾರೂಬಂದಿರಲಿಲ್ಲ.

ಆಗಾಗಿ ಹಾಸ್ಟೆಲ್ ಅಡಿಗೆ ಭಟ್ಟ ತನ್ನ ಕೆಲಸಕ್ಕೆ ರಜೆ ತಗೊಂಡು ಓಡಿ ಹೋಗಿದ್ದ. ಇದು ನಮ್ಮ ಜೀವನದ ಒಂದುಮಹತ್ವದ ಹೆಜ್ಜೆ ಆದ್ದರಿಂದ ಸಿಕ್ಕಾಪಟ್ಟೆ ಪ್ರೆಪರೆಶನ್ ಬೇಕಿತ್ತು ಅಂತ ನಾವು ಒಂದು-ಒಂದುವರೆ ತಿಂಗಳು ಮೊದಲೇ ಹಾಸ್ಟೆಲ್ಗೆಹಾಜರ್ ಆಗಿದ್ದೆವು.

ಕನ್ನಡ ಮತ್ತೆ ಇಂಗ್ಲಿಷ್ ಬಿಟ್ಟರೆ ಉಳಿದ ನಾಲ್ಕು (P.C.M & B) ವಿಷಯಕ್ಕೂ ನಾನು ಟೊಶನ್ ಹೋಗ್ತಿದ್ದೆ. ಇಲ್ಲಿ "ನಾನು " ಅನ್ನೋದಕಿಂತ "ನಾವು" ಅನ್ನೋದೇ ಹೆಚ್ಚು ಸೂಕ್ತ, ಅದು ಟೊಶನ್ ಅನ್ನೋದು ಹೇಗೆ ಆಗಿತ್ತು ಅಂದರೆ ಉಪ್ಪಿನಕಾಯಿಯನ್ನೇ ಊಟವೆಂದು ತಿಳಿದು ಕೊಂಡ ಆಗೆ ಇತ್ತು ಆ ಪರಿಸ್ತಿತಿ.

ಬೆಳಗ್ಗೆ 5 ಗಂಟೆಗೆ ಎದ್ದರೆ ಮುಗಿಯಿತು, ರಾತ್ರಿ 9 ರ ವರೆಗೆ ಸರಿಯಾಗಿ ಸ್ನಾನ-ತಿಂಡಿ-ಊಟಕ್ಕೂ ಸಮಯ ಸಿಕ್ತಾ ಇರಲಿಲ್ಲ. ಅದಕ್ಕೆ ಕಾರಣ ಟೊಶನ್ ಮತ್ತೆ ಕಾಲೇಜ್ ನಡುವೆ ಇರುತ್ತಿದ್ದ ಅತಿ ಸ್ವಲ್ಪ ಸಮಯ ಮತ್ತು ಅಷ್ಟು ಅಲ್ಪ ಸಮಯದಲ್ಲಿ ಸೈಕಲ್ ತುಳಿಯ ಬೇಕಿದ್ದದೂರ.

9 ರಿಂದ 5 ರ ವರಿಗೆ ಕಾಲೇಜ್ ಮತ್ತೆ ಬೆಳಗ್ಗೆ 5 ರಿಂದ 8-45 ರವರೆಗೆ ಟೊಶನ್ ಮತ್ತೆ ಸಂಜೆ 5-30 ರಿಂದ ರಾತ್ರಿ 8-30 ಅಥವಾ 9 ರವರಿಗೆ ಟೊಶನ್. ಯಪ್ಪಾ -ಯಪ್ಪಾ -ಯಪ್ಪಾ .

ಇನ್ನು ನಮ್ಮ ಊಟ-ಸ್ನಾನ-ತಿಂಡಿ-ನಿದ್ದೆ ಇದೆಲ್ಲ ಯಾವಾಗ? ಸರಿ, ಇದು ಯಾಕೋ ನನ್ನಿಂದ ಆಗೋಲ್ಲ ಅಂತ ಅನ್ನಿಸಿ ಬೆಳಗ್ಗೆ ಮತ್ತೆ ರಾತ್ರಿ ಹೋಗುತ್ತಿದ್ದ ಒಂದು-ಒಂದು ಟೊಶನ್ ಕ್ಲಾಸೆಸ್ ಗೆ ಸ್ವಲ್ಪದಿನ(6 ತಿಂಗಳು?) ಗುಡ್ ಬೈ ಹೇಳಿದೆ.

ಏನಪ್ಪಾ ಅಂದ್ರೆ, ಕಾಲೇಜ್ ನಲ್ಲಿ ಪಾಠ, ಟೊಶನ್ ನಲ್ಲಿ ಪಾಠ. ಸರಿ ಪಾಠಗಳನ್ನ ಕಾಲೇಜ್ ನಲ್ಲಿ ಒಂದು ಸಾರಿ, ಟೊಶನ್ ನಲ್ಲಿ ಒಂದುಸಾರಿ, ಮತ್ತೆ ನಮ್ಮ ಹಾಸ್ಟೆಲ್ ರೂಮಲ್ಲಿ ನಮಗೆ ನಾವೇ ಒಂದು ಸಾರಿ.

ಹೀಗೇ ಒಟ್ಟಿಗೆ 3 ಸಾರಿ ಕಲಿತ್ತದ್ದಾಯಿತು. ಇದು ಒಂದು ತರಾಹಗಲು ಅಥವಾ ರಾತ್ರಿ ಮಲಗಿದಾಗ ಏನಾದ್ರು ಕನಸು ಬಿದ್ದರೆ, ಕನಸಲ್ಲೂ ಸಹ ಇದೆ ಪಾಠಗಳು ರಿಪೀಟ್ ಆಗ್ತಿರಬೇಕು ಆಗೆ ನಮ್ಮನ್ನನಾವು ಪ್ರಿಪೇರ್ ಮಾಡಿಕೊಳ್ತಾ ಇದ್ದೆವು.

ಮೊದಲ ಆರು ತಿಂಗಳಲ್ಲಿ ಎಲ್ಲ ವಿಷಯಗಳನ್ನೂ ಮೂರು-ಮೂರು ಬಾರಿ ಓದಿದ್ದ್ದೂ ಆಯಿತು. ಮುಂದ್ಯಾ ? ಇದು ಬರಿ, ಮೊದಲರ್ದಅಷ್ಟೇ ರೀ. ಮತ್ತೆ ? ಪ~ರೀ~ಕ್ಷೆ ಗೆ ಇನ್ನೂ 6 ತಿಂಗಳು ಬಾಕಿ ಇತ್ತಲ್ಲ.

ಆಗ ಏನು ಮಾಡುಹುದು? ಟೊಶನ್ ಮುಗೀತು ಬಿಡಿ. ಆದ್ರೆಕಾಲೇಜ್ಗೆ ರಜೆ ಕೊಡುವ ಆಗಿಲ್ಲ. ಯಾಕಂದ್ರೆ ನಾವು ಓದಿರುವುದು ಎಲ್ಲ ಮರೆತು ಹೋಗಿ ಬಿಡುತ್ತೇವೆ ಅನ್ನೋ ಭಯ ಇಬ್ಬರಲ್ಲೂ ಇತ್ತು, ನಮಗೆ ಮತ್ತೆ ನಮ್ಮ ಕಾಲೇಜ್ ಮೇಷ್ಟ್ರಿಗೆ !!!

ಮತ್ತೆ ಈ ಉಳಿದ 6 ತಿಂಗಳು ಏನು ಮಾಡುಹುದು?  ಮತ್ತೆ ಒಂದು ಸಾರಿ ಪಾಠ ಹೇಳಿ ಕೊಡುಹುದು!!! ಯಾರು? ಇನ್ನು ಯಾರು? ಕಾಲೇಜ್ ನಲ್ಲಿ ನಮ್ಮ ಮೇಸ್ಟ್ರು . ಇಷ್ಟರ ಮಧ್ಯೆ 2-3 ಪೂರ್ವ ಪರೀಕ್ಷೆ ಸಿದ್ದತೆಗಳು .

ಸರಿ, ಇಷ್ಟೂ ಆದ ಮೇಲೂ ನಮ್ಮ ಸೆಕೆಂಡ್ ಪಿ.ಯೂ.ಸಿ ಪರೀಕ್ಷೆ ಬರಲೇ ಇಲ್ಲ ಇನ್ನು 1 ತಿಂಗಳು ಆದಮೇಲೆ ನಮ್ಮ ಪರೀಕ್ಷೆ. ಈ ನಡುವೆ ಹಾಸ್ಟೆಲ್ ನಲ್ಲಿ ಮೆಸ್ (ಅಡಿಗೆ ಮನೆ) ನಿಲ್ಲಿಸಿದರು. ಕಾರಣ? ಹಾಸ್ಟೆಲ್ ನಲ್ಲಿ ಕೇವಲ ನಾವು ಅಂದರೆ ಸೆಕೆಂಡ್ ಪಿ.ಯೂ.ಸಿ ಓದುತಿದ್ದವರು ಮಾತ್ರ ಇದ್ದೆವು.

ಉಳಿದವರು ಪರೀಕ್ಷೆ ಮುಗಿಸಿ ಮನೆಗೆ ಹೋಗಿಯಾಗಿತ್ತು. ಇನ್ನೂ ಹಾಸ್ಟೆಲ್ ನಲ್ಲಿ ಉಳಿದವರ ಸಂಖ್ಯೆತೀರ ಕಡಿಮೆ ಆಗಿದ್ದ ಕಾರಣ ಅಡಿಗೆ ಭಟ್ಟ ರಜೆ ಹಾಕಿ ಮತ್ತೆ ಊರಿಗೆ ಹೋಗಿದ್ದ.

ಅರ್ಥಾತ್ ಊಟಕ್ಕೆ ಮತ್ತೆ ಹೋಟೆಲ್ಗೆ ಹೋಗುಹುದು ಅಥವಾ ರೂಮಿನಲ್ಲಿಯೇ ಸ್ವಂತ ಅಡಿಗೆ ಮಾಡಿಕೊಳ್ಳುಹುದು.

ಈಗ ಹೇಳಿ, ಎರಡನೇ ಪಿ.ಯೂ.ಸಿ ಅರ್ಧದಲ್ಲೇ ಸಾಕು ಅನ್ನಿಸಿದ್ದರೆ ಅದಕ್ಕೆ ತಪ್ಪು ಯಾರದು? ಕಾಲೇಜ್? ಟೊಶನ್? ಅಪ್ಪ-ಅಮ್ಮ? ಪರೀಕ್ಷೆ ಅಥವಾ ಭವಿಷ್ಯದ ಬಗ್ಗೆ ಭಯನ?

ಹೋಗ್ಲಿ ಬಿಡಿ ಇಷ್ಟರ ಮೇಲೆ.

ನಮಿಗೆ ಸ್ವಲ್ಪ ವಿರಾಮಗಳು ಸಿಗೋದು ಜಾಸ್ತಿ ಆಯಿತು ನೋಡೀ...ಶಿವಮೊಗ್ಗದಲ್ಲಿ ಬಿಡುಗಡೆ ಆದ ಎಲ್ಲಸಿನಿಮಾ ಗಳಿಗೂ ಹೋಗಿ-ಬರುವ ರೂಡಿ ಬೆಳಸಿ ಕೊಂಡೆವು. ಸಿನಿಮಾ ಬೋರ್ ಆದರೆ? ಆದರೆ ಇನ್ನೇನು, ಅರ್ಧದಲ್ಲೇ ಎದ್ದು ಬಂದುಹಾಸ್ಟೆಲ್ ರೂಮಲ್ಲಿ ಮತ್ತೆ ಸ್ವಲ್ಪ ಒತ್ತು ಟೈಮ್-ಪಾಸ್ ಮಾಡುಹುದು.

ಆದರೂ ಜೀವಶಾಸ್ತ್ರ ದ ಬಗ್ಗೆ ನನ್ನ ಅನುಭವ ಹೇಳಲೇ ಬೇಕು. ಏನಪ್ಪಾ ಅದು ಅಂದರೆ,  ಪ್ರತಿ ಸಾರಿ ಓದಿದ ಪಾಠ ಮತ್ತೆಓದುವಾಗ ಏನೋ ಒಂದು ಹೊಸ ಪಾಠ ಓದಿದ ಅನುಭವ. ಆ ಪಾಠಗಳನ್ನು ಎಷ್ಟು ಓದಿದರು ಇನ್ನು ಒಂದು ಸಾರಿ ಓದುವಾಗಮತ್ತೇನೋ ಹೊಸ ವಿಷಯ ತಲೆಗೆ ಬರುತ್ತಿತ್ತು.

ಆಗಂತ ಉಳಿದ ವಿಷಯಗಳಲ್ಲಿ ಆಸಕ್ತಿ ಇರಲಿಲ್ಲ ಅಥವಾ ಆಸಕ್ತಿ ಕಡಿಮೆ ಆಗಿತ್ತುಅಂತ ಅರ್ಥ ಅಲ್ಲ. ಆದರೆ ಏನಪ್ಪಾ ಅಂದ್ರೆ. ಪರೀಕ್ಷೆ ಇನ್ನು ಬೇಗ ಬಂದಿದ್ದರೆ ಇನ್ನೂ ಚೆನ್ನಾಗಿ ಇರುತಿತ್ತು ಅನ್ನಿಸ್ತಾ ಇತ್ತು. ಅಷ್ಟೇ.

ಪಿ.ಯೂ.ಸಿ ವಾರ್ಷಿಕ ಪರೀಕ್ಷೆ ಗೆ ನಡೆಸಿದ ತಯಾರಿ ಒಂದು ರೀತೀಲಿ ಸಿ, ಇ, ಟಿ ಪರೀಕ್ಷೆಗೆ ತುಂಬಾ ಅನುಕೂಲ ಮಾಡಿತು. ಏಕೆ ಅಂದರೆನಾನು ಸಿ, ಇ, ಟಿ ಪರೀಕ್ಷೆಗೆ ತಯಾರಿ ನಡೆಸಿದ್ದು ಅಷ್ಟಕ್ಕೆ ಅಷ್ಟೇ.

ಅಂತು ಸಿ, ಇ, ಟಿ  ಯಲ್ಲಿ, ನಾನು ಮತ್ತೆ ಅದೇ ಶಿವಮೊಗ್ಗ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಫ್ರೀ ಸೀಟ್ ಸಿಗುಹುದಕ್ಕೆ ಸಾಕಾಗುವಷ್ಟು ಮಾರ್ಕ್ಸ್ ಬಂದಿತ್ತು. ನಾನು ಸೇರಿಕೊಂಡೆ. ಇಲ್ಲಿಗೆ ನನ್ನ ಪಿ.ಯೂ.ಸಿ ಮುಗಿಯಿತು. ಮುಂದ್ಯಾ ? ಇನ್ನೊಮ್ಮೆ ಸಿಗೋಣ.

ಹೋಗಿ ಬನ್ನಿ .ಶರಣು.

blogspot add widget