ಗುರುವಾರ, ಆಗಸ್ಟ್ 5, 2010

ನಮ್ಮ ಕನ್ನಡಿಗ ವೆಂಕಿಗೆ ಹುಟ್ಟುಹಬ್ಬದ ಶುಭಾಶಯಗಳು.

ಅಮೀರ್‍ ಸೋಹೇಲ್ ಹಾಗೂ ಸಯೀದ್ ಅನ್ವರ್‍ ಅಂದಿನ ಸಮಕಾಲೀನ ಕ್ರಿಕೆಟ್ನ ಅತ್ಯುತ್ತಮ ಆರಂಭಿಕ ಜೋಡಿ ಎಂದು ಕರೆಸಿಕೊಂಡಿತ್ತು. ೯೮ರ ಕ್ರಿಕೆಟ್‌ ವಿಶ್ವಕಪ್‌ನ ಈ ಪಂದ್ಯದ ಆರಂಭದ ೧೦ ಓವರ್‍ಗಳಲ್ಲಿ ಪಾಕಿಸ್ತಾನದ ಈ ಜೋಡಿ ಭಾರತದ ಬೌಲರ್‍ಗಳನ್ನು ಹಿಗ್ಗಾಮುಗ್ಗಾ ತಣಿಸಿದ್ದರು. 


http://www.youtube.com/watch?v=-d5DBdlKl5Q

ಆ ಸಂಧರ್‍ಬದಲ್ಲಿ ಭಾರತದ ಮದ್ಯಮವೇಗಿ ವೆಂಕಟೀಶ್ ಪ್ರಸಾದ ತನ್ನ ದಾಳಿ ಮುಂದುವರಿಸುವಾಗ, ಆಮೀರ್‍ ಸೋಹೇಲ್ ಆ ಓವರ್‍ನ ೫ ನೇ ಎಸೆತವನ್ನು ಬೌಂಡರಿಗಟ್ಟಿ ವೆಂಕಟೇಶ ಪ್ರಸಾದರನ್ನ ಅಣಕಿಸಿ, ಬಾಲ್ ಅಲ್ಲಿದೆ ನೋಡು ಎಂಬಂತೆ ಸನ್ನೆ ಮಾಡುತ್ತಾನೆ... ಪಂದ್ಯವನ್ನು ವೀಕ್ಷಿಸುತ್ತಿದ್ದ ನಮಗೇ ಒಂದು ರೀತಿ ಆವೇಶ ಆವರಿಸಿಕೊಂಡಿತ್ತು. ಇನ್ನು ಸ್ವತಃ ಬೌಲರಾಗಿದ್ದ ವೆಂಕಿಗೆ ಹೇಗಾಗಿರ ಬೇಡ!!!. ಅಷ್ಟು ಪ್ರೇಕ್ಷಕರ ಮದ್ಯೆ ಈ ರೀತಿ ಅಣಕಕ್ಕೆ ತುತ್ತಾದ ವೆಂಕಿಯ ಮನಸ್ಸಿನಲ್ಲಿ ಆಗ ಯಾವ ಭಾವನೆಗಳು ಬಂದಿದ್ದವೋ...?

ಮುಂದಿನ ಎಸೆತದಲ್ಲಿ ಏನಾಯ್ತು ಎನ್ನುವುದು ಈಗ ಇತಿಹಾಸ.
ಸಂಪೂರ್ಣ ತನ್ ಹಿಡಿತದಲ್ಲಿದ್ದ ಪಂದ್ಯವನ್ನು ಪಾಕಿಸ್ತಾನ ಕಯ್ಚೆಲ್ಲಿತ್ತು. ನಂತರ ಅಮೀರ್‍ ಸೋಹೇಲ್‌ಗೆ ಪಾಕಿಸ್ತಾನದ ಮಾಜಿ ಆಟಗಾರರಿಂದ ಮಂಗಳಾರತಿ ಆಗಿತ್ತು.
ಎನಿವೇ, ಇಂದು ನಮ್ಮ ವೆಂಕಿಯ 41ನೇ ಹುಟ್ಟುಹಬ್ಬ.

ಭಾರತ ಕ್ರಿಕೆಟ್ ತಂಡದಿಂದ ನಿವೃತ್ತಿ ಹೊಂದಿದ ಬಳಿಕೆ, ಉತ್ತಮ ಬೌಲಿಂಗ್ ಕೋಚ್ ಆಗಿ ಕೂಡ ತಮ್ಮ ಕ್ರಿಕೆಟ್ ಪ್ರೀತಿಯನ್ನು ಮುಂದುವರೆಸಿದ್ದರು.
ನಮ್ಮ ಕನ್ನಡಿಗ ವೆಂಕಿಗೆ ಹುಟ್ಟುಹಬ್ಬದ ಶುಭಾಶಯಗಳು.

2 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

Happy Birthday Venki

we love you

Me, Myself & I ಹೇಳಿದರು...

ಗುರುಮೂರ್ತಿಯವರೇ, ನಿಮಗೆ ಜ್ಞಾಪಕ ಇದೆಯಾ?
ಆ ಸಂಧರ್ಭದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಕರ್ನಾಟಕದಿಂದಲೇ ಆರೇಳು ಕ್ರಿಕೇಟಿಗರಿರುತ್ತಿದ್ದರು.
ಶ್ರೀ, ಅನಿ, ವೆಂಕಿ, ಸುನಿ, ರಾಹುಲ್, ವಿಜಿ(ಭಾರಾದ್ವಾಜ್‌),ಗಣೇಶ್ ಹೀಗೇ ಎಲ್ಲರೂ ಒಟ್ಟೆಗೇ ಒಮ್ಮೊಮ್ಮೆ ಒಂದೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದರು.

blogspot add widget